ಬಟ್ಟೆ ಧರಿಸಿದ್ರೆ ಈ ಬೀಚ್ಗೆ ಪ್ರವೇಶ ಕೊಡಲ್ಲ. 'ಎಲ್ಲಾ ಬಿಚ್ಚಿ ಬನ್ನಿ ಪ್ಲೀಸ್' ಬೋರ್ಡ್ ನಿಮ್ಮನ್ನು ಸ್ವಾಗತಿಸುತ್ತದೆ. ಏನಿದು ಹೊಸ ರೂಲ್ಸ್? ಇದ್ಯಾವ ಬೀಚ್?
ಅರ್ಧಂಬರ್ಧ ಬಟ್ಟೆ ಧರಿಸೋ ಕಾರಣಕ್ಕೆ ಸೋಷಿಯಲ್ ಮೀಡಿಯಾಗಳಲ್ಲಿ ಇನ್ನಿಲ್ಲದಂತೆ ಟ್ರೋಲ್ಗೆ ಒಳಗಾಗುವವರ ಸಂಖ್ಯೆ ಹೆಚ್ಚಿದೆ. ಇಂದಿನ ಸಿನಿಮಾ ತಾರೆಯರನ್ನು ನೋಡಿ ಇಂಪ್ರೆಸ್ ಆದವರು ಹಾಕುವ ಬಟ್ಟೆಗಳ ಬಗ್ಗೆ ಹೇಳುವುದೇ ಬೇಡ ಬಿಡಿ. ಹಲವು ಕಡೆಗಳಲ್ಲಿ ಭಾರತೀಯ ಸಂಪ್ರದಾಯವನ್ನು ಪಾಲಿಸಿ, ಪೂರ್ತಿ ಡ್ರೆಸ್ ತೊಟ್ಟು ಬನ್ನಿ ಎನ್ನುವುದೂ ಇದೆ. ಫುಲ್ ಡ್ರೆಸ್, ಮೈ ಪೂರ್ತಿ ಮುಚ್ಚಿಕೊಳ್ಳಿ ಎಂದು ಪದೇ ಪದೇ ಹೇಳುವ ನಡುವೆಯೇ ಬಟ್ಟೆ ಧರಿಸಿ ಬಂದ್ರೆ ನೋ ಎಂಟ್ರಿ ಎಂದರೆ ಹೇಗಿರುತ್ತೆ? ನಿಜ ನಿಜ. ನೀವು ಕೇಳಿಸಿಕೊಳ್ತಿರೋದು ಸರಿಯಾಗಿಯೇ ಇದೆ. ಇಲ್ಲಿ ಫುಲ್ ಅಲ್ಲ, ಅರ್ಧಂಬರ್ಧ ಬಟ್ಟೆಯನ್ನೂ ಧರಿಸಿ ಬರುವಂತೆ ಇಲ್ಲ. ಇದು ಹೊಸ ರೂಲ್ಸ್. ಬಟ್ಟೆ ಧರಿಸಿ ಬಂದರೆ ಎಂಟ್ರಿ ಕೊಡುವುದಿಲ್ಲ. ಎಲ್ಲಾ ಬಟ್ಟೆ ಕಳಚಿ ಬನ್ನಿ ಎನ್ನುವ ದೊಡ್ಡ ಬೋರ್ಡ್ನೊಂದಿಗೇ ನಿಮ್ಮನ್ನು ಸ್ವಾಗತಿಸಲಾಗುತ್ತದೆ. ಅಂಜಿಕೆ- ಗಿಂಜಿಕೆ ಮಾಡಿದ್ರೆ ವಾಪಸ್ ಬರಬೇಕಾಗುತ್ತೆ!
ಇಂಥದ್ದೊಂದು ಹೊಸ ರೂಲ್ಸ್ ಮಾಡಿರುವುದು ಬೀಚ್‌ನಲ್ಲಿ. ಅಂದಹಾಗೆ ನಮ್ಮ ಭಾರತದಲ್ಲಿ ಇಂಥ ರೂಲ್ಸ್ ಬರಲು ಸಾಧ್ಯವೇ ಇಲ್ಲ ಬಿಡಿ. ಇದು ಜರ್ಮನಿಯ ಬೀಚ್ಗಳಿಗೆ ಮಾಡಿರುವ ಹೊಸ ರೂಲ್ಸ್. ಉತ್ತರ ಜರ್ಮನ್‌ನ ಬಾಲ್ಟಿಕ್ ಸಮುದ್ರ ತೀರದ ರೋಸ್ಟಾಕ್‌ನಲ್ಲಿರುವ ಬೀಚ್‌ನಲ್ಲಿ ಈ ನಿಯಮ ಜಾರಿಗೆ ತರಲಾಗಿದೆ. ಇಲ್ಲಿ ಬಟ್ಟೆಗಳನ್ನು ಈಗ ಸಂಪೂರ್ಣವಾಗಿ ನಿಷೇಧಿಸಲಾಗಿದೆ! ಬೀಚ್‌ನ ಆನಂದವನ್ನು ಸವಿಯಬೇಕು ಎಂದರೆ ಹುಟ್ಟುಡುಗೆಯಲ್ಲಿಯೇ ಬರಬೇಕು. ನಗ್ನರಾಗಿಯೇ ಕಡಲತೀರದ ಪ್ರಕೃತಿ ಸೌಂದರ್ಯ ಸವಿಯಬೇಕು. ಬರುವಾಗಲೂ ನಗ್ನ, ಹೋಗುವಾಗಲೂ ನಗ್ನ, ಮಧ್ಯೆ ಯಾಕೆ ಇಷ್ಟೆಲ್ಲಾ ಬಟ್ಟೆಯ ಪ್ರೀತಿ ಎನ್ನುವುದುದ ಇವರ ಮಾತು. ಪ್ರಕೃತಿಗೆ ಸಮೀಪ ಆಗಬೇಕು ಎಂದರೆ, ಬೆತ್ತಲಾಗಿರಬೇಕು ಎನ್ನುವ ವಾದವನ್ನು ಇಲ್ಲಿ ಮುಂದಿಡಲಾಗಿದೆ.
ಸ್ಯಾಂಡ್ವಿಚ್ ಕದ್ದು ಸಿಕ್ಕಿಬಿದ್ದ ಇಲಿಗಳ ನೆನಪಿಗೆ ಮೂರ್ತಿ ನಿರ್ಮಾಣ! ಈ ವಿಚಿತ್ರ ಸ್ಟೋರಿ ಕೇಳಿ...
ಅಷ್ಟಕ್ಕೂ ಭಾರತ ಸೇರಿದಂತೆ ವಿದೇಶಗಳ ಹಲವು ಬೀಚ್ಗಳಲ್ಲಿ ಅರೆನಗ್ನ, 90% ಬೆತ್ತಲು ಇರುವುದು ಸಹಜವೇ. ಬೀಚ್ ಅಷ್ಟೇ ಏಕೆ, ನಮ್ಮ ಬಾಲಿವುಡ್ನ ಕೆಲವು ನಟಿಯರೂ ಇದೇ ಸಾಲಿಗೆ ಬರುತ್ತಾರೆ ಅನ್ನಿ. ಅವರ ಮಾತು ಬೇಡ. ಆದರೆ ಇಲ್ಲಿ ಮಾತ್ರ ಈ ನಟಿಮಣಿಗಳನ್ನೂ ಸೈಡ್ ಹೊಡೆದು ಪೂರ್ತಿ ನಗ್ನವಾಗಬೇಕಿದೆ. ಅಂದಹಾಗೆ ಪರಿಸರವಾದಿಗಳ ಗುಂಪು ಕೂಡ ಅಲ್ಲಿ ಇದನ್ನೇ ಹೇಳುತ್ತಿದೆ. ಪ್ರಕೃತಿಯ ಜೊತೆ ನಾವು ಬೆಸೆಯಬೇಕು. ಅದರೊಂದಿಗೆ ಸಂಪೂರ್ಣ ಆನಂದವನ್ನು ಸವಿಯಬೇಕು ಎಂದರೆ ಹೀಗೆಯೇ ಬರಬೇಕು ಎನ್ನುವುದು ಅವರ ಮಾತು. ಇದೇ ಕಾರಣಕ್ಕೆ, ವಾರ್ಡನ್‌ಗಳು, ನ್ಯಾಚುರಿಸ್ಟ್‌ಗಳನ್ನು ನೇಮಿಸಲಾಗಿರುತ್ತದೆ. ಯಾರಾದರೂ ಬಟ್ಟೆ ಧರಿಸಿ ಬಂದರೆ ಅವರನ್ನು ತಡೆಯಲಾಗುತ್ತದೆ. ಸಂಪೂರ್ಣ ಬಟ್ಟೆ ಕಳಚಿದರೆ ಮಾತ್ರ ಪ್ರವೇಶ.
ಇದಕ್ಕಾಗಿ ಸ್ಥಳೀಯ ಪುರಸಭೆ ಕೌನ್ಸಿಲ್ 23 ಪುಟಗಳ ನಿಯಮಗಳನ್ನು ಕೂಡ ಹೊರಡಿಸಿದೆ. ಕೆಲವು ಕಂಡೀಷನ್ ಇವೆ. ಅದೇನೆಂದರೆ ಇಲ್ಲಿ .ಚಿತ್ರೀಕರಣ ಮಾಡುವಂತಿಲ್ಲ, ಫೋಟೋ ಹೊಡೆಯುವಂತಿಲ್ಲ. ಹಾಗೆಂದು ಅನುಮತಿ ಕೊಟ್ಟರೆ ಫೋಟೋ ತೆಗೆಯಬಹುದಂತೆ! ಇದೇ ಕಾರಣಕ್ಕೆ ಇಲ್ಲಿ ಭದ್ರತಾ ಸಿಬ್ಬಂದಿಯನ್ನೂ ನಿಯೋಜಿಸಲಾಗಿರುತ್ತದೆ. ಮಾತ್ರವಲ್ಲದೇ ಕೆಲವರು ಬಟ್ಟೆ ಧರಿಸಿ ಬೀಚ್ ಒಳಗೆ ಹೋಗಿದ್ದರಿಂದ ಸಂಪೂರ್ಣ ನಗ್ನರಾದವರಿಗೆ ತೊಂದರೆಯಾದ ಕಾರಣ, ಅವರ ಮೇಲ್ವಿಚಾರಣೆಯನ್ನೂ ಈ ಸಿಬ್ಬಂದಿ ನೋಡಿಕೊಳ್ಳುತ್ತಾರೆ! ಆದರೆ ಅಲ್ಲಿ ಯಾರನ್ನೂ ದಿಟ್ಟಿಸಿ ನೋಡುವಂತಿಲ್ಲ. ಕೆಟ್ಟ ಕಮೆಂಟ್ ಮಾಡುವಂತಿಲ್ಲ ಎಂಬ ರೂಲ್ಸ್ ಕೂಡ ಇದೆ. ಹಾಗೆಂದ ಮಾತ್ರಕ್ಕೆ ಈ ಬೀಚ್‌ನ ಸೌಂದರ್ಯವನ್ನು ಬೇರೆಯವರು ಸವಿಯುಂತಿಲ್ಲವೇ ಎಂದು ನಿರಾಶರಾಗಬೇಕಿಲ್ಲ. ಈ ಬೀಚ್‌ನಲ್ಲಿ ಮೂರು ಭಾಗ ಮಾಡಲಾಗಿದೆ. ಮೊದಲನೆಯದ್ದುಉ ನ್ಯಾಚುರಿಸ್ಟ್ಗಳು ಅಂದರೆ ಸಂಪೂರ್ಣ ಬೆತ್ತಲು ಆಗುವವರಿಗೆ, ಮತ್ತೊಂದು ಅರ್ಧಂಬರ್ಧ ಡ್ರೆಸ್ ಹಾಕಿಕೊಂಡು ಬರುವವರಿಗೆ ಇನ್ನೊಂದು ಫುಲ್ ಡ್ರೆಸ್ ಹಾಕಿಕೊಂಡು ಬರುವವರಿಗೆ. 2 ಮತ್ತು 3ನೇಯದ್ದರಲ್ಲಿ ಎಷ್ಟು ಡ್ರೆಸ್ ಹಾಕಿ ಬರಬೇಕು ಎನ್ನುವ ಆಯ್ಕೆ ನಿಮಗೆ ಬಿಟ್ಟಿದ್ದು. ಆದರೆ ಮೊದಲನೆಯ ವಿಭಾಗದಲ್ಲಿ ಮಾತ್ರ ಸಂಪೂರ್ಣ ಬಟ್ಟೆ ಬ್ಯಾನ್!