ಕಳೆದ ವರ್ಷ ಅಮೆರಿಕದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದ್ದ, ಪೊಲೀಸ್ ದೌರ್ಜನ್ಯಕ್ಕೆ ಬಲಿಯಾದ ಕಪ್ಪು ವರ್ಣೀಯ| ಕಪ್ಪುವರ್ಣೀಯ ಜಾರ್ಜ್ ಫ್ಲಾಯ್ಡ್ ಹತ್ಯೆ: 196 ಕೋಟಿ ರೂ. ಪರಿಹಾರ!
ಮಿನ್ನೆಯಾಪೋಲಿಸ್(ಮಾ.14): ಕಳೆದ ವರ್ಷ ಅಮೆರಿಕದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದ್ದ, ಪೊಲೀಸ್ ದೌರ್ಜನ್ಯಕ್ಕೆ ಬಲಿಯಾದ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಪ್ರಕರಣ ಸಂಬಂಧ ಫ್ಲಾಯ್ಡ್ ಕುಟುಂಬಕ್ಕೆ 2.7 ಲಕ್ಷ ಡಾಲರ್ (196 ಕೋಟಿ ರು.) ಪರಿಹಾರ ನೀಡಲು ಮಿನ್ನೇಪೊಲೀಸ್ ನಗರಾಡಳಿತ ನಿರ್ಧರಿಸಿದೆ.
ಪಾಲಿಕೆ ಸದಸ್ಯರು ಈ ಬಗ್ಗೆ ಕುಟುಂಬದವರೊಂದಿಗೆ ಖಾಸಗಿ ಮಾತುಕತೆ ನಡೆಸಿ ಒಪ್ಪಂದಕ್ಕೆ ಬಂದು ಬಳಿಕ ಅಧಿವೇಶನದಲ್ಲಿ ನಿರ್ಣಯಕ್ಕೆ ಅವಿರೋಧವಾಗಿ ಅಂಗೀಕಾರ ಪಡೆಯಲಾಗಿದೆ.
ಮೇ 2020ರಲ್ಲಿ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಕುತ್ತಿಗೆಯ ಮೇಲೆ ಶ್ವೇತ ವರ್ಣೀಯ ಪೊಲೀಸ್ ಅಧಿಕಾರಿ 7 ನಿಮಿಷಗಳ ಮಂಡಿಯೂರಿ ಅದುಮಿದ ಪರಿಣಾಮ ಫ್ಲಾಯ್ಡ್ ಮೃತಪಟ್ಟಿದ್ದರು. ಈ ಜನಾಂಗೀಯ ದಾಳಿ ವಿರುದ್ಧ ಅಮೆರಿಕದಲ್ಲಿ ಭಾರೀ ಪ್ರಮಾಣದ ಹಿಂಸಾತ್ಮಕ ಪ್ರತಿಭಟನೆ ನಡೆದಿತ್ತು.