ಮಗಳಿಗೂ ಮೊಮ್ಮಗಳಿಗೂ ಒಟ್ಟಿಗೆ ಹಾಲುಣಿಸ್ತಾಳೆ ಈ ಮಹಿಳೆ..ಏನಿದರ ಮರ್ಮ?

Published : May 05, 2023, 02:28 PM ISTUpdated : May 05, 2023, 02:49 PM IST
ಮಗಳಿಗೂ ಮೊಮ್ಮಗಳಿಗೂ ಒಟ್ಟಿಗೆ ಹಾಲುಣಿಸ್ತಾಳೆ ಈ ಮಹಿಳೆ..ಏನಿದರ ಮರ್ಮ?

ಸಾರಾಂಶ

ವಯಸ್ಸಾದವರಿಗೆ ಮೊಮ್ಮಕ್ಕಳನ್ನು ಆಡಿಸಬೇಕೆಂಬ ಆಸೆ ಖಂಡಿತವಾಗಿಯೂ ಇರುತ್ತದೆ. ಆದರೆ ಇಲ್ಲೊಬ್ಬ ಮಹಿಳೆ ಮಗುವಿನ ಜೊತೆ ತನ್ನ ಮಗುವನ್ನೂ ನೋಡಿಕೊಳ್ಳುತ್ತಿದ್ದಾರೆ. ಈ ಮಹಿಳೆಯ ಮಗ ಮೊಮ್ಮಗಳಿಗಿಂತ ಚಿಕ್ಕವನು. ಈಕೆ ಇಬ್ಬರಿಗೂ ಹಾಲುಣಿಸುತ್ತಾಳೆ. ಅರೆ ಇದೇನ್ ಕನ್‌ಫ್ಯೂಶನ್ ಅನ್ಬೇಡಿ. ಈ ಸ್ಟೋರಿ ಓದಿ. 

ಮಹಿಳೆಯೊಬ್ಬರು ತಮ್ಮ ಮಗಳು ಮಗುವಿಗೆ ಜನ್ಮ ನೀಡಿದ ಕೆಲವೇ ದಿನಗಳಲ್ಲಿ ಮಗುವಿಗೆ ಜನ್ಮ ನೀಡಿರುವ ಘಟನೆ ಇಂಗ್ಲೆಂಡ್‌ನಲ್ಲಿ ನಡೆದಿದೆ. ತಮ್ಮ ಮಗ ತನ್ನ ಮೊಮ್ಮಗನಿಗಿಂತ ಚಿಕ್ಕವನಾಗಿದ್ದಾನೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ. ನನ್ನ ಮಗಳು ಚಿಕ್ಕ ವಯಸ್ಸಿನಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಮಹಿಳೆ ಹೇಳಿದ್ದಾರೆ. ಇಂಗ್ಲೆಂಡ್‌ನ ಡಾನ್‌ಕಾಸ್ಟರ್‌ನ 47 ವರ್ಷದ ಜೇನ್ ಮೆಕ್‌ನೀಸ್‌ಗೆ ಒಂಬತ್ತು ವರ್ಷದ ಗಂಡು ಮತ್ತು ಅವಳ ಮಗಳು 27 ವರ್ಷದ ಲಾರಾ 11 ವರ್ಷದ ಮಗುವನ್ನು ಹೊಂದಿದ್ದಾರೆ.

15ನೇ ವಯಸ್ಸಿನಲ್ಲಿ ಲಾರಾ ಗರ್ಭಿಣಿಯಾದಾಗ ಜೇನ್  ಅಜ್ಜಿಯಾದರು ಮತ್ತು ಈಗ 11 ವರ್ಷ ವಯಸ್ಸಿನ ಮಗು ಎವಿಯನ್ನು ಹೊಂದಿದ್ದಾರೆ. ಜೇನ್ ಸೋದರ ಸೊಸೆ ಎವಿಗಿಂತ ಎರಡು ವರ್ಷ ಚಿಕ್ಕವಳು. ಒಂದೆರಡು ವರ್ಷಗಳ ನಂತರ ಜೇನ್ ಮತ್ತು ಲಾರಾ ಮತ್ತೆ ಅದೇ ಸಮಯದಲ್ಲಿ ಗರ್ಭಿಣಿಯಾದಾಗ ಕುಟುಂಬ ಸದಸ್ಯರು ಹೆಚ್ಚು ಖುಷಿಗೊಂಡರು. ಜೇನ್ ಬೆನ್ ಎಂಬ ಹುಡುಗನಿಗೆ ಜನ್ಮ ನೀಡಿದಳು ಮತ್ತು ಲಾರಾ ಬೆಲ್ಲಾಳನ್ನು ಸ್ವಾಗತಿಸಿದರು. ಬೆನ್ ಮತ್ತು ಬೆಲ್ಲಾ ಈಗ ಏಳು ವರ್ಷ ವಯಸ್ಸಿನವರು.

ಎದೆ ಹಾಲು ಗಂಟಲಿಗೆ ಸಿಕ್ಕು ಅಸುನೀಗಿದ ಮಗು, ಹಾಲು ಕುಡಿಯುವಾಗಲೂ ನಿದ್ರಿಸಿದರೆ?

ಜೇನ್ ಈ ಬಗ್ಗೆ ಮಗಳು ಮತ್ತು ನಾನು ಒಂದೇ ಸಮಯದಲ್ಲಿ ಗರ್ಭಿಣಿಯಾಗಿರುವ ಬಗ್ಗೆ ಹಲವರು ಮಾತನಾಡಿಕೊಂಡರು. ಆದರೆ ನಾನು ಇದರಿಂದ ಖುಷಿಪಡುತ್ತೇನೆ. ಎಲ್ಲರ ಜೀವನದಲ್ಲಿ ಹೀಗಾಗುವುದಿಲ್ಲ ಎನ್ನುತ್ತಾರೆ. ಆದರೆ ಏಕಕಾಲದಲ್ಲಿ ಅಜ್ಜಿ ಮತ್ತು ತಾಯಿಯಾಗಿರುವ ಕಾರಣ, ಮೊಮ್ಮಕ್ಕಳೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಲಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಮದ್ವೆ ಮಂಟಪಕ್ಕೆ ಬರೋ ಮೊದ್ಲು ತಾಯಿ ಹಾಲು ಕುಡೀತಿದ್ದ ವರ, ಬೆಚ್ಚಿಬಿದ್ದ ವಧು!
ಮದುವೆಗೆ ಕೆಲವೇ ಕ್ಷಣಗಳ ಮೊದಲು ವರ, ತನ್ನ ತಾಯಿಯ ಎದೆಹಾಲು (Breastmilk) ಕುಡಿಯುತ್ತಿದ್ದ ಘಟನೆ ಈ ಹಿಂದೆ ವರದಿಯಾಗಿತ್ತು. ವೆಡ್ಡಿಂಗ್ ಪ್ಲಾನರ್ ಇದನ್ನು ಗಮನಿಸಿದರು. ಮೇಕಪ್ ಆರ್ಟಿಸ್ಟ್ ಆಗಿರುವ ಜೆನ್ನಿ ವಧುವಿನ ಮೇಕಪ್‌, ಹೇರ್‌ ಸ್ಟೈಲ್‌ ಮಾಡಿಯಾದ ಬಳಿಕ ವಾಶ್‌ರೂಮ್‌ಗೆ ತೆರಳಿದ್ದರು. ಈ ಸಂದರ್ಭದಲ್ಲಿ ವರ, ತಾಯಿಯ ಹಾಲನ್ನು ಕುಡಿಯುತ್ತಿರುವುದನ್ನು ಗಮನಿಸಿ ಬೆಚ್ಚಿಬಿದ್ದರು. ಆ ನಂತರ ವಧು ಹಾಗೂ ಇತರರು ಈ ಬಗ್ಗೆ ತಿಳಿದು ಗಾಬರಿಗೊಂಡರು. ತಕ್ಷಣವೇ ಮದುವೆಯನ್ನು ನಿಲ್ಲಿಸಲಾಗಿತ್ತು.

ಹೆರಿಗೆಯ ನಂತರ ವಿಪರೀತ ಮದ್ಯ ಸೇವಿಸ್ತಿದ್ದ ಮಹಿಳೆ, ಎದೆಹಾಲು ಕುಡಿದ ಎರಡು ತಿಂಗಳ ಮಗು ಸಾವು!

ಮದುವೆಯಾಗುವ ವಯಸ್ಸಿನಲ್ಲಿ ತಾಯಿಯ ಹಾಲು ಕುಡಿಯುವುದೇ ಎಂದು ಹಲವರು ಅಸಹ್ಯಪಟ್ಟುಕೊಂಡಿದ್ದರು. ಇನ್ನು ಕೆಲವರು 'ಇದಕ್ಕಿಂತ ವರನಿಗೆ ಬೇರೆ ಹುಡುಗಿಯ ಜೊತೆ ಸಂಬಂಧವಿದ್ದರೂ ಪರವಾಗಿರಲ್ಲಿಲ್ಲ' ಎಂದಿದ್ದರು. ಮತ್ತೆ ಕೆಲವರು 'ಆ ತಾಯಿಯ ಎದೆಯಲ್ಲಿ ಯಾಕೆ ಇನ್ನೂ ಹಾಲಿದೆ' ಎಂದು ಪ್ರಶ್ನಿಸಿದ್ದರು. ಮತ್ತೊಬ್ಬ ಬಳಕೆದಾರರು 'ನಾನಾದರೆ ತಕ್ಷಣ ಮದುವೆ ಮಂಟಪದಿಂದ ಓಡಿ ಹೋಗುತ್ತಿದೆ' ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವೆಡ್ಡಿಂಗ್ ಪ್ಲಾನರ್‌ ಒಬ್ಬರು ಸೋಷಿಯಲ್ ಮೀಡಿಯಾದಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಯುಕೆಯಲ್ಲಿ ವೃತ್ತಿಪರ ವೆಡ್ಡಿಂಗ್ ಪ್ಲಾನರ್ ಆಗಿರುವ ಜಾರ್ಜಿ ಮಿಚೆಲ್, ತನ್ನ ಕೊಲೀಗ್ ಜೆನ್ನಿ ಎಂಬವರು ಹಂಚಿಕೊಂಡಿರುವ ಅನುಭವದ (Experience) ಬಗ್ಗೆ ಹೇಳಿಕೊಂಡಿದ್ದಾರೆ. ಈ ವಿಷಯ ಕೇವಲ ವಧುವಿಗೆ (Bride) ಮಾತ್ರವಲ್ಲ ಮನೆ ಮಂದಿ, ಸಂಬಂಧಿಕರನ್ನೂ ಯಾವ ರೀತಿ ದಿಗ್ಭ್ರಮೆಗೊಳಿಸಿತು ಎಂಬುದನ್ನು ವಿವರಿಸಿದ್ದಾರೆ.

ಕಿಡ್ನಾಪ್‌ ಆದ 12 ದಿನದ ಮಗುವಿಗೆ ಎದೆಹಾಲು ಕುಡಿಸಿ ರಕ್ಷಿಸಿದ ಪೊಲೀಸ್‌

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಈ ದ್ರಾವಣದಿಂದ ತಿಂಗಳಾದ್ರೂ ಕೊಳಕಾಗದೆ ಕ್ಲೀನ್ ಆಗಿರುತ್ತೆ ಟಾಯ್ಲೆಟ್ ಕಮೋಡ್, ವಾಸನೆಯೂ ಇರಲ್ಲ
ನಿಮ್ರತ್ ಕೌರ್ ಜೊತೆಗಿನ ವಿವಾಹೇತರ ಸಂಬಂಧ, ಐಶ್ವರ್ಯಾ ರೈ ಜೊತೆ ಡಿವೋರ್ಸ್; ಉತ್ತರಿಸಿದ ಅಭಿಷೇಕ್ ಬಚ್ಚನ್!