ಬರೀ ಪಾದದ ಫೋಟೋ ಹಾಕಿ ಈಕೆ ಗಳಿಸೋದೆಷ್ಟು ಗೊತ್ತಾ?

By Suvarna News  |  First Published May 4, 2023, 3:33 PM IST

ಸಾಮಾಜಿಕ ಜಾಲತಾಣ, ಆನ್ಲೈನ್ ವೆಬ್ಸೈಟ್ ಗಳು ನಮ್ಮ ಗಳಿಕೆಗೆ ಸಾಕಷ್ಟು ಅವಕಾಶ ನೀಡಿವೆ. ಅವುಗಳನ್ನು ಬಳಸಿಕೊಳ್ಳುವ ವಿಧಾನ ನಮಗೆ ತಿಳಿದಿರಬೇಕು. ಸುಂದರ ಪಾದ, ಹಸ್ತದ ವಿಡಿಯೋ, ಫೋಟೋಕ್ಕೂ ಈಗ ಬೇಡಿಕೆಯಿದೆ. 
 


ಆನ್ಲೈನ್  ನಲ್ಲಿ ಹಣ ಗಳಿಕೆಗೆ ಸಾಕಷ್ಟು ವಿಧಾನವಿದೆ. ಜನರು ನಾನಾ ರೀತಿಯಲ್ಲಿ ಹಣ ಗಳಿಕೆ ಮಾಡ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಒಂದು ಸುಂದರ ಫೋಟೋವನ್ನು ಪೋಸ್ಟ್ ಮಾಡಿ ಲಕ್ಷಾಂತರ   ರೂಪಾಯಿ ಆದಾಯ ಪಡೆಯುವವರಿದ್ದಾರೆ. ಅವರಲ್ಲಿ ಈ ಮಹಿಳೆ ಕೂಡ ಸೇರಿದ್ದಾಳೆ. ಬರೀ ಪಾದದ ಫೋಟೋ, ವಿಡಿಯೋ ಮಾರಾಟ ಮಾಡಿ ಆಕೆ ಗಳಿಸುವ ಹಣ ಕೇಳಿದ್ರೆ ನೀವು ದಂಗಾಗ್ತೀರಿ. 

ಫನ್ ವಿತ್ ಫೀಟ್ (Fun With Feet) ಎಂಬ ಕಾಮಪ್ರಚೋದಕ ವೆಬ್‌ಸೈಟ್‌ನ ಸೃಷ್ಟಿಕರ್ತೆ ಕ್ರಿಸ್ಸಿ (Chrissy) ಪಾದದ ಫೋಟೋಗಳನ್ನು ಮಾರಾಟ ಮಾಡುವ ಮೂಲಕ ಆದಾಯ (Income) ಗಳಿಸ್ತಿದ್ದಾಳೆ. ಐಪೋನ್ ಹಾಗೂ ಆನ್ಲೈನ್ ನಲ್ಲಿ ಕ್ಲೈಂಟ್ ಜೊತೆ ಚಾಟ್ ಮಾಡ್ತಾ ವ್ಯವಹಾರ ಶುರು ಮಾಡಿದ ಕ್ರಿಸ್ಸಿ, ಇದನ್ನು ಪಾರ್ಟ್ ಟೈಂ ಆಗಿ ಮಾಡ್ತಿದ್ದಳು. ಆದ್ರೀಗ ಕೆಲಸ ಬಿಟ್ಟು, ಫುಲ್ ಟೈಂ ತನ್ನ ಪಾದದ ಸುಂದರ ಫೋಟೋಗಳನ್ನು ಮಾರಾಟ ಮಾಡೋದ್ರಲ್ಲಿ ನಿರತವಾಗಿದ್ದಾಳೆ. ಕ್ರಿಸ್ಸಿ, ಮೊದಲು ತನ್ನ ಶೂ ತೆಗೆದಳು, ನಂತ್ರ ಸಾಕ್ಸ್ ತೆಗೆದು, ಐಫೋನ್ ಸೆಟ್ ಮಾಡಿ, ತನ್ನ ಕಾಲು ಹಾಗೂ ಪಾದಗಳು ಮಾತ್ರ ಶೂಟ್ ಆಗುವಂತೆ ಐ ಫೋನ್ ಸೆಟ್ ಮಾಡಿದಳು. ನಂತ್ರ ಒದ್ದೆಯಾದ ನೆಲದಲ್ಲಿ ನಡೆದು, ಮಣ್ಣಿನಲ್ಲಿ ಓಡಾಡಿ, ನಂತ್ರ ಕಾಲುಗಳನ್ನು ಕ್ಲೀನ್ ಮಾಡುವ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಳು. 

Tap to resize

Latest Videos

ಮನೆ ಕೆಲಸದ ಜೊತೆ ಇದನ್ನೂ ಮಾಡಿದ್ರೆ ಹಣ ಗಳಿಸ್ಬಹುದು ಗೃಹಣಿಯರು!

ಫನ್ ವಿತ್ ಫೀಟ್ ವೆಬ್ಸೈಟ್ ನಲ್ಲಿ ಇದನ್ನು ಪೋಸ್ಟ್ ಮಾಡಿದ್ದಳು. ಆಕೆ ಕ್ಲೈಂಟ್ ಒಬ್ಬರು ಈ ವಿಡಿಯೋವನ್ನು ಖರೀದಿಸಲು ಮುಂದಾಗಿದ್ದರು. 300 ಡಾಲರ್ ಗೆ ಈ ವಿಡಿಯೋ ನೀಡುವಂತೆ ಅವರು ಕೇಳಿದ್ದರು. ಇದನ್ನು ಕೇಳಿದ ಕ್ರಿಸ್ಸಿಗೆ ವಿಚಿತ್ರವೆನ್ನಿಸಿತ್ತು. ಕ್ಲೈಂಟ್ ಲಾರ್ಡ್ ಆಫ್ ದಿ ರಿಂಗ್ಸ್  ಅಭಿಮಾನಿಯಾಗಿದ್ದರಂತೆ. ಕ್ರಿಸ್ಸಿ ಕ್ಲೈಂಟ್ ಗೆ ಬೇಸರ ಮಾಡಲಿಲ್ಲ. ಕ್ರಿಸ್ಸಿ ಮೂರು ವರ್ಷಗಳಿಂದ ತನ್ನ ಪಾದದ ಫೋಟೋ, ವಿಡಿಯೋಗಳನ್ನು ಮಾರಾಟ ಮಾಡ್ತಾ ಬಂದಿದ್ದಾಳೆ. ಹವ್ಯಾಸ ಹಾಗೂ ಹೆಚ್ಚುವರಿ ಹಣಕ್ಕಾಗಿ ಕ್ರಿಸ್ಸಿ ಫನ್ ವಿತ್ ಫೀಟ್ ವೆಬ್ಸೈಟ್ ಗೆ ಸೇರಿದ್ದಳಂತೆ. ಆದ್ರೆ ಈಗ ಪ್ರತಿ ತಿಂಗಳು 5000 ಡಾಲರ್ ಬೆಲೆಯ ಫೋಟೋ, ವಿಡಿಯೋವನ್ನು ಮಾರಾಟ ಮಾಡ್ತಿದ್ದಾಳೆ. ಇದ್ರ ಲಾಭವನ್ನು ಅರಿತ ಕ್ರಿಸ್ಸಿ ತನ್ನ ಕೆಲಸ ಬಿಟ್ಟು ಇದನ್ನೇ ಫುಲ್ ಟೈಂ ಕೆಲಸ ಮಾಡಿಕೊಂಡಿದ್ದಾಳೆ. ಕಳೆದ ಆರು ತಿಂಗಳಿಂದ ಸಂಪೂರ್ಣವಾಗಿ ಈ ಕೆಲಸದಲ್ಲಿ ಕ್ರಿಸ್ಸಿ ನಿರತವಾಗಿದ್ದಾಳೆ.

ಫನ್ ವಿತ್ ಫೀಟ್‌ಗೆ ಸೇರಿದ ಆರು ತಿಂಗಳು ಕ್ರಿಸ್ಸಿ,  ಕ್ಲೈಂಟ್ ಆಸಕ್ತಿಗೆ ಹೆಚ್ಚು ಗಮನ ಹರಿಸಿದ್ದಳಂತೆ. ಅವಳು ತನ್ನ ಸ್ವಂತ ಪಾದಗಳ ವಿಡಿಯೋ, ಫೋಟೋ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಳಂತೆ. ಕೇಶ ವಿನ್ಯಾಸಕಿ ಮತ್ತು ಬಾರ್ಟೆಂಡರ್ ಆಗಿ ಕೆಲಸ ಮಾಡ್ತಿದ್ದ ಕ್ರಿಸ್ಸಿ ಜೀವನ ಬದಲಿಸಿದ್ದು ಕೊರೊನಾ. ಈ ಸಮಯದಲ್ಲಿ ಸಾಮಾಜಿಕ ಅಂತರದಿಂದಾಗಿ ಕ್ಲೈಂಟ್ ಸಂಖ್ಯೆ ಕಡಿಮೆಯಾಗಿತ್ತು. ಹಾಗೆಯೇ ಆಕೆ ಕೆಲಸ ಕಮ್ಮಿಯಾಗಿತ್ತು. ಈ ಸಂದರ್ಭದಲ್ಲಿ ಕ್ರಿಸ್ಸಿ ಫನ್ ವಿತ್ ಫೀಟ್ ಗೆ ಸೇರಿದ್ದಳು. ಆಕೆ ತನ್ನ ಬೇರೆ ಕೆಲಸಕ್ಕೆ ತೊಂದರೆಯಾಗದಿರಲಿ ಎನ್ನುವ ಕಾರಣಕ್ಕೆ ಈ ಫೋಟೋ ಹಾಗೂ ವಿಡಿಯೋದಲ್ಲಿ ಮುಖ ತೋರಿಸ್ತಿರಲಿಲ್ಲವಂತೆ.

Kitchen Tips : ಸೌತೆಕಾಯಿ ಕಹಿ ಹೋಗಲಾಡಿಸಲು ಇಲ್ಲಿದೆ ಸುಲಭದ ಪರಿಹಾರ

ಫನ್ ವಿತ್ ಫೀಟ್‌ನಲ್ಲಿ, (Fun with Feet) ಗ್ರಾಹಕರು ಇನ್ಸ್ಟಾಗ್ರಾಮ್ (Instagram) ನಂತೆಯೇ ಕ್ರಿಸ್ಸಿಯ ಉಚಿತ ಫೋಟೋಗಳನ್ನು ಸ್ಕ್ರಾಲ್ ಮಾಡಬಹುದು. ನಂತರ ಕಸ್ಟಮ್ ವಿಷಯವನ್ನು ವಿನಂತಿಸಬಹುದು. ಆರಂಭದಲ್ಲಿ ಗ್ರಾಹಕರ ಜೊತೆ ಲೈಂಗಿಕ ವಿಷ್ಯದ ಬಗ್ಗೆ ಚಾಟ್ ಮಾಡ್ತಾ ಅವರ ವಿಶ್ವಾಸ ಗಳಿಸಿದಳಂತೆ ಕ್ರಿಸ್ಸಿ. ಈಗ ಕ್ರಿಸ್ಸಿ ದಿನಕ್ಕೆ ಮೂರರಿಂದ ಐದು ಗಂಟೆಗಳವರೆಗೆ, ವಾರಕ್ಕೆ ಐದರಿಂದ ಆರು ದಿನವನ್ನು ಈ ಕೆಲಸದಲ್ಲಿ ಕಳೆಯುತ್ತಾಳೆ. ಇದಲ್ಲದೆ ಕ್ರಿಸ್ಸಿ ಕೊಳಕು ಸಾಕ್ಸ್ ಫೋಟೋಗಳಿಂದಲೂ ಹಣ ಗಳಿಸ್ತಾಳೆ. ಕ್ರಿಸ್ಸಿ ಇದಕ್ಕೆ 300ರಿಂದ 500 ಡಾಲರ್ ಶುಲ್ಕ ವಿಧಿಸ್ತಾಳೆ. ಗ್ರಾಹಕರ ವಿನಂತಿಯ ಮೇರೆಗೆ ಕ್ರಿಸ್ಸಿ ವಿಡಿಯೋ ಮಾಡ್ತಾಳೆ.
 

click me!