Women's day: ಮಹಿಳಾ ದಿನದ ಸಂದೇಶವನ್ನು ಹಗುರ ಮಾಡ್ತಿದೇವಾ ನಾವು?

By Suvarna News  |  First Published Mar 8, 2022, 4:42 PM IST

ಮಹಿಳಾ ದಿನದ ನಿಜವಾದ ಆಶಯ ಇಲ್ಲಿದೆ, ನೀವು ಬಲ್ಲಿರಾ?
 


ಮಾರ್ಚ್ 8 ಬಂದಾಗ ಅದರ ಬಗ್ಗೆ ಅರಿವು ಇರೋ ಮಹಿಳೆಯರು ಸಂಭ್ರಮಿಸೋದು ಸಹಜ. ಆದರೆ ಮಹಿಳೆಯರ ದಿನದ (women's day) ಸಂದೇಶ (Message) ನಿಜಕ್ಕೂ ಏನು? ನಾವು ನಮ್ಮ ಸುತ್ತ ಮುತ್ತ ನೂರಾರು ಮಹಿಳೆಯರನ್ನು ಗಮನಿಸಬಹುದು. ನೀವು ಎಂಜಾಯ್ (Enjoy) ಮಾಡ್ತಿರೋ ಸ್ವಾತಂತ್ರ್ಯ (Liberty), ಸಂತೋಷ (Happiness), ಆನಂದವನ್ನು ಎಲ್ಲ ಮಹಿಳೆಯರೂ ಕಾಣ್ತಾ ಇದಾರಾ? ಅವರ ಲೈಫು ಹೇಗಿದೆ ಎಂಬುದನ್ನೂ ನೋಡಬೇಕಲ್ವಾ? ಸ್ವಾತಂತ್ರ್ಯ ಸಿಕ್ಕಾಗಲೇ ಅಂಬೇಡ್ಕರ್ (Dr.B.R.Ambedkar) ಅವರು ಹೇಳಿದ್ದರು- ಈ ಸ್ವಾತಂತ್ರ್ಯದ ಅರ್ಥವೇನು? ನಮ್ಮ ನಡುವೆ ಎಷ್ಟೊಂದು ಮಂದಿ ಅನ್ಯಾಯ (Injustice), ಅಸಮಾನತೆಯಿಂದ ಬಳಲುತ್ತಿರುವಾಗ ನಾವು ಅಂಥ ಸಾಮಾಜಿಕ ವ್ಯವಸ್ಥೆಯನ್ನು ಸರಿಪಡಿಸುವುದಕ್ಕೆ ಪ್ರಯತ್ನಿಸಬೇಕು. ಅದರಲ್ಲೇ ಸ್ವಾತಂತ್ರ್ಯದ ನಿಜವಾದ ಸಾರ್ಥಕತೆ ಇದೆ ಅಂತ. ಮಹಿಳಾ ದಿನದಂದು ನಾವು ಈ ಮಾತನ್ನ ಮರೆಯಬಾರದು.

ಅದರಲ್ಲೂ ಕಳೆದ ಎರಡು ವರ್ಷಗಳ ಕೊರೋನಾ ವೈರಸ್‌ (Corona Virus) ನ ಹಾವಳಿ, ಅದರಿಂದ ಸೃಷ್ಟಿಯಾದ ಲಾಕ್‌ಡೌನ್ (Lockdown) ಮತ್ತು ಕೆಲಸಗಳೆಲ್ಲ ಇಲ್ಲವಾಗಿ ನಿರುದ್ಯೋಗ ಸೃಷ್ಟಿಯಾದದ್ದು- ಇದರಿಂದ ದೊಡ್ಡ ಪ್ರಮಾಣದಲ್ಲಿ ಮಹಿಳೆಯರು ಕೆಲಸ ಕಳೆದುಕೊಂಡಿದ್ದಾರೆ. ಇದರಿಂದಾಗಿ ದುಡಿಯುವ ಜಾಗದಲ್ಲಿ ಇನ್ನಷ್ಟು ಅಸಮಾನತೆ ಸೃಷ್ಟಿಯಾಗಿದೆ. ಸಮೀಕ್ಷೆಗಳ ಪ್ರಕಾರ ಸುಮಾರು ನಾಲ್ಕನೇ ಒಂದರಷ್ಟು ಜನತೆ ತಮ್ಮ ಉದ್ಯೋಗ (Jobs)  ಕಳೆದುಕೊಂಡಿದ್ದಾರೆ. ಆದರೆ ಇದರಲ್ಲಿ ಮಹಿಳೆಯರ ಪಾಲೇ ಹೆಚ್ಚು. ಅದರಲ್ಲೂ ಪುಟ್ಟ ಮಕ್ಕಳನ್ನು ಹೊಂದಿರುವ, ಈಗಷ್ಟೇ ಹೆರಿಗೆಯಾಗಿರುವ ಮಹಿಳೆಯರು. ಒಮ್ಮೆ ಇವರು ಕೆಲಸ ಬಿಟ್ಟರೆ ಮತ್ತೆ ಹೋಗಲು ಸಾಧ್ಯವಾಗಲ್ಲ. ಹಾಗಂತ ಮಹಿಳೆಯ ಕೆಲಸವೇನೂ ಕಡಿಮೆಯಾಗಿಲ್ಲ. ಕೆಲಸ ಕಳೆದುಕೊಂಡ ಪುರುಷರು ಮನೆಯಲ್ಲಿದ್ದರೆ, ಮನೆಯ ಆಂತರಿಕ ಕೆಲಸವನ್ನು ಮಾಡುತ್ತಾರೆ ಎಂದೇನಿಲ್ಲ. ಆದರೆ ಮಹಿಳೆಯರು ತಮ್ಮ ವೃತ್ತಿಯ ಜೊತೆಗೆ ಮನೆಕೆಲಸವನ್ನೂ ಮಾಡಬೇಕಿದೆ; ವರ್ಕ್ ಫ್ರಂ ಹೋಮ್ ಇದ್ದಾಗಲೂ ಅವರು ಮನೆಗೆಲಸವನ್ನೂ ಮಾಡುತ್ತ, ಜತೆಗೇ ವೃತ್ತಿಯನ್ನೂ ನಿಭಾಯಿಸಬೇಕಿದೆ. ಒಂದು ಆಕೆಗೆ ಒಉಟ್ಟ ಮಗು ಇದ್ದರಂತೂ ಆ ಫಜೀತಿ ಇನ್ನಷ್ಟು ಬಿಗಡಾಯಿಸುತ್ತದೆ. ಇದು ಭಾರತ ಮಾತ್ರವಲ್ಲ, ಎಲ್ಲ ಕಡೆಯ ಚಿತ್ರಣವೂ ಹೀಗೇ.

Tap to resize

Latest Videos

International Womens Day: ಸ್ತ್ರೀ ಎಂದರೆ ಅಷ್ಟೇ ಸಾಕೆ

ಮೇ ಡೇ (May Day)- ಕಾರ್ಮಿಕ (Labour) ಹಕ್ಕುಗಳ ದಿನದ ಹಾಗೇ ಮಹಿಳಾ ದಿನ ಕೂಡ. ಆದರೆ ಮಹಿಳಾ ದಿನ ತುಂಬ ಪಾಪ್ಯುಲರ್ ಆಗಿದೆ. ಅದು ಈಗ ದೊಡ್ಡ ದೊಡ್ಡ ಕಾರ್ಪೊರೇಟ್ (Corporates) ಕಂಪನಿಗಳಿಗೆ ತಮ್ಮ ಪ್ರಾಡಕ್ಟುಗಳನ್ನು ಮಾರಲಿಕ್ಕೆ ಒಂದು ಅವಕಾಶವೂ ಆಗಿದೆ. ''ನಿಮ್ಮನ್ನು ತುಂಬಾ ಸುದರವಾಗಿಸ್ತದೆ'' ''ನಿಮ್ಮ ಕೆಲಸದ ಹೊರೆ ಕಡಿಮೆ ಮಾಡುತ್ತೆ'' ಎಂಬೆಲ್ಲಾ ಸ್ಲೋಗನ್‌ಗಳ ಅಡಿಯಲ್ಲಿ ನಾನಾ ಥರದ ಪ್ರಾಡಕ್ಟುಗಳನ್ನು ಎಲ್ಲರೂ ಮಾರುವುದನ್ನು ಕಾಣಬಹುದು. ಜೊತೆಗೆ ಸರಕಾರಗಳ ಕೆಲವು ಹೊಸ ಹೊಸ ಯೋಜನೆಗಳು. ಅವು ನೋಡುವುದಕ್ಕೆ, ಪೇಪರ್ ಮೇಲೆ ಚೆನ್ನಾಗಿರ್ತವೆ. ಹೊರತು, ಈಗಾಗಲೇ ಬಿಗಡಾಯಿಸಿರೋ ಮಹಿಳೆಯರ ಸ್ಥಿತಿಗತಿಯನ್ನು ಇಂಪ್ರೂವ್ ಮಾಡುವುದಕ್ಕೆ ಅವು ನೆರವಾಗ್ತಾ ಇಲ್ಲ. 

ಹಾಗಾದ್ರೆ ಮಹಿಳಾ ದಿನ ಯಾಕೆ ಆಚರಣೆಗೆ ಬಂತು? 1910ರಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಮಹಿಳಾವಾದಿ ಕ್ಲಾರಾ ಜೆಟ್ಕಿನ್ ಮತ್ತಿತರರು ಸಮಾಜವಾದಿ ಮಹಿಳೆಯರ ಸಮಾವೇಶ ಸಂಘಟಿಸಿದರು. ಅಲ್ಲಿ, ಮಹಿಳೆಯರ ಸಾಮಾಜಿಕ ಮತ್ತು ರಾಜಕೀಯ ಹಕ್ಕುಗಳನ್ನು ಒತ್ತಿ ಹೇಳುವುದಕ್ಕಾಗಿ ಪ್ರತಿವರ್ಷ ಒಂದು ಮಹಿಳಾ ದಿನ ಆಚರಿಸಬೇಕು ಎಂದು ತೀರ್ಮಾನವಾಯಿತು. ಆಗಿನ್ನೂ ಎಲ್ಲ ದೇಶಗಳು ಮಹಿಳೆಯರಿಗೆ ಮತದಾನದ ಹಕ್ಕನ್ನೂ ನೀಡಿರಲಿಲ್ಲ! ಮಹಾಯುದ್ಧದ ಸಮಯದಲ್ಲಿ ಮಹಿಳೆಯರು ವಿಶ್ವ ಶಾಂತಿಗಾಗಿಯೂ ಒತ್ತಾಯಿಸಿದರು. ಇಂದು ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾವೇ ಅಂದು ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಮೊದಲ ಬಾರಿಗೆ ಮಾರ್ಚ್ 8ರಂದು ಮಹಿಳಾ ದಿನ ಆಚರಿಸಿದ್ದು. ಅಂದಿನಿಂದ ಇದು ಲೋಕದ ರೂಢಿಯಾಯಿತು. ಮಹಿಳಾ ದಿನ, ಮಹಿಳೆಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ಅನ್ಯಾಯ ಅಸಮಾನತೆಗಳನ್ನು ಪ್ರಶ್ನಿಸುವ ದಿನವಾಗಿ ಬೆಳೆದುಬಂತು.

Nykaa ಸ್ಥಾಪಕಿ ಫಲ್ಗುಣಿ ನಾಯರ್: ಬಿಲಿಯನೇರ್ ಉದ್ಯಮಿಯ ಯಶೋಗಾಥೆ

ಭಾರತದಲ್ಲಿ ಇದು ಇನ್ನೂ ಜಟಿಲ. ಇಲ್ಲಿ ಹೆಣ್ಣುಮಕ್ಕಳ ಮೇಲೆ ಸದಾ ನಡೆಯುವ ರೇಪ್ ಜೊತೆಗೆ ಆ ರೇಪ್‌ಗೆ ಆ ಸ್ತ್ರೀಯೇ ಕಾರಣ ಎಂದು ದೂಷಿಸುವ ಕೆಟ್ಟ ಮನಸ್ಸೂ ಇದೆ. ಜೊತೆಗೆ ಅಮಾನವೀಯ ಮರ್ಯಾದಾ ಹತ್ಯೆಗಳು. ದಲಿತ ಮಹಿಳೆಯರ ಮೇಲೆ ಜಾತಿ (Caste) ಕಾರಣದ ಹಲ್ಲೆಗಳು ಮತ್ತು ಶ್ರೀಮಂತ ಮನೆತನದ ಹೆಣ್ಣುಗಳ ಮೇಲೂ ಮನೆಯೊಳಗಿನ ದೌರ್ಜನ್ಯಗಳು. ಮಹಿಳೆಗೆ ಪುರುಷನ ಸಮಾನವಾದ ವೇತನ ಸಿಗಬೇಕು ಎಂಬ ಕೂಗಿಗೆ ಇನ್ನೂ ಮನ್ನಣೆ ಸಿಕ್ಕಿಲ್ಲ. ಆದರೆ 8 ಗಂಟೆಗಳಿಗಿಂತ ಹೆಚ್ಚು ದುಡಿಸಿಕೊಳ್ಳಲಾಗುತ್ತದೆ. ಮಹಿಳೆಗೆ ಮತ ಹಾಕುವ ಹಕ್ಕೇನೋ ಇದೆ, ಆದರೆ ಸಾಕಷ್ಟು ರಾಜಕೀಯ (Political) ಪ್ರಾತಿನಿಧ್ಯ ಇಲ್ಲ. ಲೈಂಗಿಕ (Sexual) ದೌರ್ಜನ್ಯ(Rape)  ಸಂತ್ರಸ್ತೆ, ನಟಿ ಭಾವನಾ (Bhavna) ಇತ್ತೀಚೆಗೆ ನಾನು ಈಗ 'ಬಲಿಪಶು'ವಿನಿಂದ (Victim) 'ಪಾರಾಗಿ ಬಂದವಳ' (Survivor) ಪಾತ್ರಕ್ಕೆ ಬಂದಿದ್ದೇನೆ ಎಂದಿದ್ದರು. ನಾವು ಇನ್ನೂ ಒಂದು ಹೆಜ್ಜೆ ಮುಂಧೆ ಹೋಗಿ ಪಾರಾಗಿ ಬಂದವಳ ಪಾತ್ರದಿಂದ "ಹೋರಾಟಗಾರ್ತಿ'ಯ (Fighter) ಪಾತ್ರಕ್ಕೆ ಬದಲಾಗಬೇಕಿದೆ.

Women's Day: ಆತ್ಮರಕ್ಷಣೆಗಾಗಿ ಮಹಿಳೆಯರು ಮಾಡ್ಲೇಬೇಕು ಈ ಕೆಲಸ

ಇದಲ್ಲವೇ ಮಹಿಳಾ ದಿನದ ನೈಜ ಆಶಯ, ನೈಜ ಸಂದೇಶ?


 

click me!