Womens day: ಹೆಣ್ಣುಮಗುವನ್ನು ಬೆಳೆಸುವ ಖುಷಿಯೇ ಬೇರೆ, ನೀವಿದನ್ನು ಗಮನಿಸಿದ್ದೀರಾ?

By Suvarna News  |  First Published Mar 8, 2022, 2:51 PM IST

ಮಗಳು ಅಂದರೆ ಅಪ್ಪನ ಕಿರು ಬೆರಳು ಹಿಡಿದು ನಡೆಯುವ ಪುಟ್ಟ ಪೋರಿಯ ಚಿತ್ರವೇ ಮನಸ್ಸಲ್ಲಿ ಬರೋದು. ಮಗಳನ್ನು ಬೆಳೆಸೋ ರೀತಿಯೂ ಹಾಗೆ, ಸದಾ ಬೆರಗುಗಣ್ಣಿನ ಪುಟ್ಟಿಗೆ ಜಗತ್ತನ್ನು ಪರಿಚಯಿಸುತ್ತಾ ಬೆಳೆಸುವುದು ಮಗಳಿಗಷ್ಟೇ ಅಲ್ಲ ಹೆತ್ತವರಿಗೂ ಖುಷಿಯೇ.


ಇಂದು ವಿಶ್ವ ಮಹಿಳಾ ದಿನ (world Women's day). ಹೆಣ್ತನವನ್ನು ಅಮ್ಮ (Mother), ಮಗಳು (Daughter), ಮೊಮ್ಮಗಳ ರೂಪದಲ್ಲಿ ಸಂಭ್ರಮಿಸುವ ದಿನ. ವಿಶ್ವಾದ್ಯಂತ ಈ ಖುಷಿ ಎಲ್ಲೆಲ್ಲೂ ಹಬ್ಬಿದೆ. ಅದರ ಜೊತೆಗೆ ಇತ್ತೀಚೆಗೆ ಒಂದು ಸಮೀಕ್ಷೆ ನಡೆಯಿತು. ಅದರಲ್ಲಿ ಹೆಣ್ಣು ಮಗುವನ್ನು ಬೆಳೆಸುವುದು ಪೋಷಕರಿಗೆ ಹೆಚ್ಚು ಖುಷಿ ಕೊಡುತ್ತೆ ಅನ್ನೋದು ಮತ್ತೊಮ್ಮೆ ಸಾಬೀತಾಯ್ತು. ಇದ್ಯಾಕಿರಬಹುದು ಅಂತ ಹುಡುಕುತ್ತಾ ಹೋದಾಗ ಕಂಡ ಅಪರೂಪದ ವಿಚಾರಗಳಿವು.

ಕೆಲವು ದಿನಗಳ ಹಿಂದೆ ಎರಡು ಜಾಹೀರಾತುಗಳು ಬಂದವು. ಒಂದು ಜಾಹೀರಾತು (Advertisement) ಸಿಂಗಲ್‌ ಫಾದರ್‌ (Single father) ಮತ್ತು ಮಗಳದು. ಮಗಳಿಗೆ ತನ್ನ ಬಡತನದ ಬಿಸಿ ತಟ್ಟದ ಹಾಗೆ ಬೆಳೆಸಲು ಅಪ್ಪ ಮಾಡುವ ಸರ್ಕಸ್ಸೇ ಜಾಹೀರಾತಿನ ಮುಖ್ಯ ವಸ್ತು. ನಿದ್ದೆಯ ಜೊಂಪಿನಿಂದ ಪುಟ್ಟ ಮಗಳನ್ನು ಎಬ್ಬಿಸಿ ಅವಳನ್ನ ಸ್ನಾನ ಮಾಡಿಸಿ ತಿಂಡಿ ತಿನ್ನಿಸಿ ಸ್ಕೂಲಿಗೆ ಕಳಿಸಿ ಅಪ್ಪ ತನ್ನ ಹೊಟೇಲ್ ಕೆಲಸಕ್ಕೆ ಹೋಗಬೇಕು. ಮಗಳ ಎದುರಿಗೆ ಅವನದು ದೊಡ್ಡ ಆಫೀಸರ್ ಥರ ಪೋಸು. ಅವಳು ಕಣ್ಣಿಂದ ಮರೆಯಾದ ಮೇಲೆ ಅವನು ಸಾಮಾನ್ಯ ಹೊಟೇಲ್ ನೌಕರ. ಒಮ್ಮೆ ಮಾತ್ರ ಮಗಳ ಗೆಳತಿಯ ಹುಟ್ಟುಹಬ್ಬಕ್ಕೆ ಬೊಂಬೆ ವೇಷ ತೊಟ್ಟ ಕೂಲಿಯಾಗಿ ಬರಬೇಕಾಗುತ್ತದೆ. ಆಗ ಮಗಳ ಕೈಯಲ್ಲಿ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಹಾಕಿಕೊಳ್ಳುತ್ತಾನೆ. ಮಗಳ ಕಣ್ಣಲ್ಲಿ ಸಣ್ಣವನಾಗುತ್ತಾನೆ. ಆ ಪುಟಾಣಿಗೆ ಅಪ್ಪನ ಬಡತನದ ಬಗ್ಗೆ ಬೇಜಾರಲ್ಲ, ತನ್ನ ಹತ್ರ ಸುಳ್ಳು ಹೇಳಿದ್ದಕ್ಕೆ ಕೋಪ. ಆಮೇಲೆ ಅವಳೇ ಅಪ್ಪನಿಗೆ ಹೊಟೇಲ್ ಸಮವಸ್ತ್ರ ತೊಡಿಸೋದರೊಂದಿಗೆ ಹ್ಯಾಪಿ ಎಂಡಿಂಗ್‌.

Tap to resize

Latest Videos

International Womens Day: ಸ್ತ್ರೀ ಎಂದರೆ ಅಷ್ಟೇ ಸಾಕೆ

ಇನ್ನೊಂದು ದೃಶ್ಯ. ಅದರಲ್ಲೂ ಅಪ್ಪ ಮಗಳು ಇಬ್ಬರೇ ಇರ್ತಾರೆ. ಅವನು ಸಿಂಗಲ್ ಪೇರೆಂಟ್‌. ಆದರೆ ಇಲ್ಲಿರೋದು ಹದಿ ಹರೆಯದ ಮಗಳು. ಅವಳಿಗೆ ಪೀರಿಯೆಡ್ಸ್ ಆಗಿ ಹೊಟ್ಟೆ ನೋವು, ಮೂಡ್ ಸ್ವಿಂಗ್. ಇದನ್ನು ಸೂಕ್ಷ್ಮವಾಗಿ ಕನ್ವೇ ಮಾಡುತ್ತಾಳೆ ಮಗಳು. ಆದರೆ ಅಪ್ಪನಿಗೆ ಅರ್ಥವೇ ಆಗಲ್ಲ. ಮಗಳನ್ನು ಬಹಳ ಪ್ರೀತಿಸುವ ಆತನಿಗೆ ಮಗಳಿಗೆ ಹೊಟ್ಟೆನೋವು, ಆಯಾಸ ಅಂದಾಗ ಗಾಬರಿ. ಇಂಥಾ ಅಸೂಕ್ಷ್ಮ ಅಪ್ಪನಿಗೆ ತನ್ನ ಸ್ಥಿತಿಯನ್ನು ಹೇಗೆ ತಿಳಿಸೋದು ಅಂತ ಗೊತ್ತಾಗದೇ ಅವಳು ಒದ್ದಾಡುತ್ತಾಳೆ. ಕೊನೆಗೆ ಅದು ಮತ್ತೆಲ್ಲೋ ಟರ್ನ್ ತಗೊಳುತ್ತೆ. ಒಂದು ಹಂತದಲ್ಲಿ ಅಪ್ಪನಿಗೆ ಮಗಳಿಗೆ ಏನಾಗ್ತಿದೆ ಅನ್ನೋ ವಿಚಾರವೂ, ಇದನ್ನು ಅರ್ಥ ಮಾಡಿಕೊಳ್ಳದ ತನ್ನ ಮೂರ್ಖತನವೂ ಹೊಳೆಯುತ್ತದೆ.

Nykaa ಸ್ಥಾಪಕಿ ಫಲ್ಗುಣಿ ನಾಯರ್: ಬಿಲಿಯನೇರ್ ಉದ್ಯಮಿಯ ಯಶೋಗಾಥೆ

ಈ ಎರಡು ಜಾಹೀರಾತುಗಳೂ ಮಗಳನ್ನು ಬೆಳೆಸುವ ಖುಷಿ ಮತ್ತು ಕಷ್ಟ ಎರಡನ್ನೂ ಹೇಳುತ್ತದೆ. ಹೆಣ್ಣು ಮಗು ಹೆಚ್ಚು ಸೂಕ್ಷ್ಮ. ಅವಳಿಗೆ ಪ್ರಕೃತಿಯ ಬಗ್ಗೆ ಹೆಚ್ಚಿನ ಕುತೂಹಲ, ಆಸಕ್ತಿ. ಹೀಗಾಗಿ ಅವಳಿಗೆ ಸೂಕ್ಷ್ಮ ವಿಚಾರಗಳನ್ನು ತಿಳಿಸಿಕೊಡುತ್ತಾ, ಅದಕ್ಕೆ ಅವಳು ಬೆರಗಾಗುವುದನ್ನು ನೋಡಿ ಹೆತ್ತವರೂ ಬೆರಗಾಗುತ್ತಾ ಅವಳನ್ನು ಬೆಳೆಸುತ್ತಾರೆ. ಆದರೆ ಇಂದಿನ ಸಿಟಿ ಲೈಫಲ್ಲಿ ಹೆಣ್ಣು ಮಗವಿನ ಬೆರಗನ್ನು ನೋಡಲು ಪೋಷಕರಿಗೆ ಪುರುಸೊತ್ತಿಲ್ಲ. ಎಳೆ ವಯಸ್ಸಲ್ಲೇ ಗ್ಯಾಜೆಟ್‌ ಫ್ರೀಕ್‌ ಆಗಿ ಬೆಳೆಯೋ ಅವಳಿಗೆ ಕುತೂಹಲವೂ ಕಡಿಮೆಯೇ. ಹಾಗಂತ ಅವಳ ಸೂಕ್ಷ್ಮ ಸ್ವಭಾವ ಹಾಗೇ ಇರುತ್ತದೆ. ಅವಳು ಕಷ್ಟಕ್ಕೆ ಕರಗೋದು ಬೇಗ. ಮನೆಯಲ್ಲಿ ಯಾರಿಗೋ ಆರಾಮಿಲ್ಲ ಅಂದರೆ ದೊಡ್ಡವರ ಹಾಗೇ ಅವರ ಸೇವೆಗೆ ರೆಡಿಯಾಗ್ತಾಳೆ, ಅದನ್ನು ನೋಡುವಾಗ ಹೆತ್ತವರಿಗೆ ಮನಸ್ಸು ತುಂಬಿ ಬರುತ್ತದೆ. ಅವಳು ಸ್ವತಂತ್ರವಾಗಿ ತನಗಿಂತ ಎತ್ತರ ಬೆಳೆಯುವಾಗ ಹೆಮ್ಮೆ ಎನಿಸುತ್ತದೆ. ಇನ್ನೊಂದು ವಿಶೇಷ ಅಂದರೆ ಅಷ್ಟೆತ್ತರಕ್ಕೆ ಬೆಳೆದ ಮೇಲೂ ಅಪ್ಪ ಅಮ್ಮ ಅಥವಾ ಅಜ್ಜಿ ಅಜ್ಜನಿಗೆ ಅವಳಿನ್ನೂ ಚಿಕ್ಕ ಮಗುವೇ. ಆ ಟೆಂಡರ್‌ನೆಸ್‌ ಅವಳಲ್ಲಿ ಮಾಯವಾಗಲ್ಲ. ಬಹುಶಃ ಈ ಗುಣಗಳೆಲ್ಲ ಹೆಣ್ಣುಮಕ್ಕಳಿರುವ ಪೋಷಕರಿಗೆ ಮಾತ್ರ ಸಿಗುವ ಖುಷಿಗಳು. ಇಂದಿನ ಬ್ಯುಸಿ ಲೈಫಲ್ಲಿ ಇದಕ್ಕೂ ಒಂದಿಷ್ಟು ಸಮಯ ಮೀಸಲಿಟ್ಟರೆ ಈ ಸಣ್ಣ ಪುಟ್ಟ ಖುಷಿಗಳಲ್ಲಿ ಬದುಕು ಹಗುರವಾಗುತ್ತದೆ.

Women's Day: ಆತ್ಮರಕ್ಷಣೆಗಾಗಿ ಮಹಿಳೆಯರು ಮಾಡ್ಲೇಬೇಕು ಈ ಕೆಲಸ

 

click me!