Seetharama: ನೋವನ್ನು ಸಹಿಸೋಕೆ ಹೆಣ್ಣಾದ್ರೆ ಸಾಕು! ಮನಮುಟ್ಟುವಂಥಾ ಮಾತು ಹೇಳಿದ ಸೀತಾ

Published : Oct 03, 2023, 03:57 PM ISTUpdated : Oct 03, 2023, 04:03 PM IST
Seetharama: ನೋವನ್ನು ಸಹಿಸೋಕೆ ಹೆಣ್ಣಾದ್ರೆ ಸಾಕು! ಮನಮುಟ್ಟುವಂಥಾ ಮಾತು ಹೇಳಿದ ಸೀತಾ

ಸಾರಾಂಶ

ಕನ್ನಡ ಕಿರುತೆರೆಯ ಅತಿಹೆಚ್ಚು ಟಿಆರ್‌ಪಿ ಬರೋ ಧಾರಾವಾಹಿಯಲ್ಲಿ ಒಂದು, ಸೀತಾರಾಮ. ಇದರಲ್ಲಿ ಸಮಾಜಕ್ಕೆ ಹಲವಾರು ಉತ್ತಮ ಸಂದೇಶಗಳನ್ನು ನೀಡುತ್ತಿರುತ್ತಾರೆ. ಸದ್ಯ ಈ ಸೀರಿಯಲ್‌ನಲ್ಲಿ ಹೆಣ್ಣಿನ ಜೀವನದ ಬಗ್ಗೆ ಸೀತಾ ಆಡಿದ ಮಾತುಗಳು ಎಲ್ಲರ ಮನ ಮುಟ್ಟುವಂತಿದೆ. 

ಕನ್ನಡ ಕಿರುತೆರೆಯ ಅತಿ ಹೆಚ್ಚು ಟಿಆರ್‌ಪಿ ಪಡೆದ ಧಾರಾವಾಹಿಗಳಲ್ಲಿ ಒಂದಾಗಿರುವ ಸೀತಾ ರಾಮ ಧಾರಾವಾಹಿ ಜನಮೆಚ್ಚುಗೆಗೆ ಪಾತ್ರವಾಗಿದೆ. ಒಂಟಿಯಾಗಿ ಮಗಳೊಂದಿಗೆ ಸ್ವಾಭಿಮಾನದಿಂದ ಜೀವನ ನಡೆಸ್ತಿರೋ ಸೀತಾ, ಶ್ರೀಮಂತನಾದ್ರೂ ಸರಳ ಬದುಕನ್ನು ಇಷ್ಟಪಡುವ ರಾಮನ ಸ್ಟೋರಿ ಎಲ್ಲರಿಗೂ ಇಷ್ಟವಾಗ್ತಿದೆ. ಮಾತ್ರವಲ್ಲದೆ, ಈ ಧಾರಾವಾಹಿಯಲ್ಲಿ ಸಮಾಜಕ್ಕೆ ಹಲವಾರು ಉತ್ತಮ ಸಂದೇಶಗಳನ್ನು ನೀಡುತ್ತಿರುತ್ತಾರೆ. ಮಾತ್ರವಲ್ಲ ಕೆಲವೊಂದು ಅರ್ಥಗರ್ಭಿತ ಮಾತುಗಳು ಮನಮುಟ್ಟುವಂತಿರುತ್ತದೆ. ಸದ್ಯ ಸೀತಾರಾಮ ಸೀರಿಯಲ್‌ನಲ್ಲಿ ನಾಯಕಿ ಸೀತಾ ಹೆಣ್ಣಿನ ಜೀವನದ ಬಗ್ಗೆ ಹೇಳಿರೋ ಮಾತು ಎಲ್ಲರ ಮನ ಮುಟ್ಟುವಂತಿದೆ.

ಇತ್ತೀಚಿಗೆ 'ಇಂಜೆಕ್ಷನ್‌ ತಗೊಳ್ತಾ ಇರೋದು ಮಗಳು ಸಿಹಿ, ಆದರೆ ನೋವು ಅನುಭವಿಸ್ತಾ ಇರೋದು ಮಾತ್ರ ಅಪ್ಪ ರಾಮ' ಎಂಬ ಲೈನ್‌ನ ಪ್ರೋಮೋ ಭಾರೀ ಕುತೂಹಲ ಮೂಡಿಸಿತ್ತು. ಈ ಸಂಚಿಕೆಯು ಕುತೂಹಲಕ್ಕೆ ಕಾರಣವಾಗಿತ್ತು. ಮಗಳು ಸಿಹಿಯನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಅಪ್ಪ ರಾಮನ ಪಾತ್ರದಲ್ಲಿ ಸಂಕಷ್ಟ ಅನುಭವಿಸುವುದನ್ನು ಧಾರಾವಾಹಿಯಲ್ಲಿ ತೋರಿಸಲಾಗಿತ್ತು. ಧಾರಾವಾಹಿಯಲ್ಲಿ ಜ್ವರದಿಂದ ಬಳಲ್ತಿರೋ ಸೀತಾ ಮನೆಯಲ್ಲೇ ಇರುತ್ತಾಳೆ. ಈ ಸಂದರ್ಭದಲ್ಲಿ ರಾಮ ಮನೆಗೆ ಬಂದು ಸೀತಾಗೆ ರೆಸ್ಟ್‌ ಮಾಡುವಂತೆ ಸೂಚಿಸುತ್ತಾನೆ. ರಾಮ, ಸಿಹಿ ಇಬ್ಬರೂ ಸೇರಿ ಅಡುಗೆ ಮಾಡುತ್ತಾರೆ.

ಕೆಜಿಎಫ್‌ನಲ್ಲೂ ಅನ್ಯಾಯ, ಈಗ ಸೀತಾರಾಮದಲ್ಲೂ ಅವಮಾನ! ಅಶೋಕ ಶರ್ಮಾ ಬೆಂಬಲಕ್ಕೆ ನಿಂತ ಫ್ಯಾನ್ಸ್‌

ಕಷ್ಟವನ್ನು ಸಹಿಸೋ ಶಕ್ತಿ ಹೆಣ್ಣಿಗೆ ಚಿಕ್ಕಂದಿನಲ್ಲೇ ಬರುತ್ತೆ
ಈ ಸಂದರ್ಭದಲ್ಲಿ ಸಿಹಿಗೆ ಯಾವತ್ತಿನಂತೆ ಡಯಾಬಿಟಿಸ್ ಇಂಜೆಕ್ಷನ್ ಹಾಕಬೇಕಿದ್ದು, ಸೀತಾ ಮಲಗಿದ್ದಲ್ಲಿಂದ ಎದ್ದು ಇಂಜೆಕ್ಷನ್‌ ಹಾಕಲು ಬರುತ್ತಾಳೆ. ಈ ಸಂದರ್ಭದಲ್ಲಿ ರಾಮ, ಯಾಕೆ ಎದ್ದು ಬರೋಕೆ ಹೋದ್ರಿ. ನಾನೇ ಇಂಜೆಕ್ಷನ್ ಹಾಕ್ತೀನಿ ಎಂದು ಹೇಳುತ್ತಾನೆ. ಅದಕ್ಕೆ ಸೀತೆ ನಿಮ್ ಕೈಯಲ್ಲಿ ಆಗಲ್ಲ ಎನ್ನುತ್ತಾಳೆ. ಪ್ರತಿಯಾಗಿ ರಾಮ, ಅದೇನ್ ದೊಡ್ಡ ಕೆಲಸ ಜಸ್ಟ್ ಒಂದು ಇಂಜೆಕ್ಷನ್ ಕೊಡೋಕೆ ನನಗೆ ಆಗಲ್ವಾ ಎಂದು ಸಿಹಿ ಬಳಿ ಇಂಜೆಕ್ಷನ್ ಕಿಟ್ ತರಲು ಹೇಳುತ್ತಾನೆ. ಇಂಜೆಕ್ಷನ್‌ಗೆ ಎಲ್ಲಾ ರೆಡಿ ಮಾಡಿಕೊಂಡರೂ ರಾಮ್‌ಗೆ ಸಿಹಿಗೆ ಇಂಜೆಕ್ಷನ್‌ ಕೊಡಲು ಸಾಧ್ಯವಾಗುವುದಿಲ್ಲ. ಕೈ ನಡುಗುತ್ತಿರುತ್ತದೆ. ಸಿಹಿ ಇಂಜೆಕ್ಷನ್ ಚುಚ್ಚು ಫ್ರೆಂಡ್ ಎಂದು ಹೇಳಿದರೂ ರಾಮನಿಗೆ ಕೈ ತಡಬಡಾಯಿಸುತ್ತದೆ. ಆಗ ಸೀತಾ ಎದ್ದು ಬರುತ್ತಾಳೆ.

ನಿಮ್ ಕೈಯಿಂದ ಆಗಲ್ಲ ಎಂದು ಹೇಳಿ ಸೀತಾ, ಸಿಹಿಗೆ ಇಂಜೆಕ್ಷನ್ ನೀಡುತ್ತಾಳೆ. ಅದಕ್ಕೆ ರಾಮ್‌, 'ನೋವನ್ನು ಸಹಿಸಿಕೊಳ್ಳೋಕೆ ತಾಯಾಗ್ಬೇಕು ಅನ್ಸುತ್ತೆ' ಎನ್ನುತ್ತಾನೆ. ಇದಕ್ಕೆ ಪ್ರತಿಯಾಗಿ ಸೀತಾ ನಕ್ಕು, 'ಹೆಣ್ಣಾದ್ರೆ ಸಾಕು' ಅನ್ನೋ ಮಾತನ್ನು ಹೇಳುತ್ತಾಳೆ. ಇದು ಜೀವನದಲ್ಲಿ ಹೆಣ್ಣು ಎಷ್ಟು ಕಷ್ಟವನ್ನು ಸಹಿಸಿಕೊಂಡು, ತ್ಯಾಗವನ್ನು ಮಾಡಿಕೊಂಡು ಬಾಳುತ್ತಾಳೆ ಎಂಬುದನ್ನು ಸಾರುತ್ತದೆ. ಸೀತಾರಾಮ ಸೀರಿಯಲ್‌ನಲ್ಲಿ ರಾಮನಾಗಿ ಗಗನ್‌ ಚಿನ್ನಪ್ಪ, ಸೀತಾ ಪಾತ್ರದಲ್ಲಿ ವೈಷ್ಣವಿ ಗೌಡ, ಸಿಹಿ ಪಾತ್ರದಲ್ಲಿ ರಿತು ಸಿಂಗ್ ನಟಿಸಿದ್ದಾರೆ.

ರೀಲ್‌ನಲ್ಲಿ ಮಾತ್ರವಲ್ಲ ರಿಯಲ್‌ ಲೈಫ್‌ಲ್ಲೂ ಸೀತಮ್ಮ-ಸಿಹಿ ಬಾಂಡಿಂಗ್‌ ಸಖತ್ ಕ್ಯೂಟ್‌

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಟಿಹಾರ್ ಜಂಕ್ಷನ್‌ನಲ್ಲಿ ಮಹಿಳೆಯ ಭಯಾನಕ ಅನುಭವ: 30-40 ಪುರುಷರು ನುಗ್ಗಲು ಯತ್ನ, ಶೌಚಾಲಯದಲ್ಲಿ ಸಿಲುಕಿದ ಮಹಿಳೆ!
ಈಕೆಯ ಮನೆ ಮುಖೇಶ್‌ ಅಂಬಾನಿ ಮನೆಗಿಂತ 62 ಪಟ್ಟು ದೊಡ್ಡದು! ಆದ್ರೂ ಬಸ್‌ನಲ್ಲಿ ಓಡಾಟ!