ಗರ್ಭಾವಸ್ಥೆಯಲ್ಲಿ ಹೆಚ್ಚು ಅಲ್ಟ್ರಾಸೌಂಡ್ ಪರೀಕ್ಷೆ ಮಾಡಿಸಿಕೊಂಡ್ರೆ ಏನಾಗುತ್ತೆ?

By Suvarna News  |  First Published Oct 2, 2023, 3:23 PM IST

ಗರ್ಭಾವಸ್ಥೆಯಲ್ಲಿ ಮಗುವಿನ ಆರೋಗ್ಯದ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ಮಗು ಸರಿಯಾಗಿ ಬೆಳವಣಿಗೆ ಹೊಂದುತ್ತಿದೆಯಾ ಎಂಬುದನ್ನು ಪರೀಕ್ಷಿಸಲು ಅಲ್ಟ್ರಾಸೌಂಡ್ ಸ್ಕ್ಯಾನರ್ ಬಳಸ್ತಾರೆ. ಇದರ ಕೆಲಸ ಹಾಗೂ ನಷ್ಟದ ಬಗ್ಗೆ ಮಾಹಿತಿ ಇಲ್ಲಿದೆ.
 


ಗರ್ಭಾವಸ್ಥೆ ತುಂಬಾ ಸೂಕ್ಷ್ಮವಾಗಿರುತ್ತದೆ. ತಾಯಿಯಾಗುವವಳು ತನ್ನ ಆರೋಗ್ಯ ಹಾಗೂ ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸ್ಬೇಕು. ಪ್ರತಿಯೊಂದು ನಿರ್ಧಾರ ತೆಗೆದುಕೊಳ್ಳುವಾಗ್ಲೂ ಹೊಟ್ಟೆಯಲ್ಲಿರುವ ಭ್ರೂಣವನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಆಹಾರ ಸೇವನೆ, ಪ್ರಯಾಣ, ಮಾತ್ರೆ ಸೇವನೆ ಹೀಗೆ ಪ್ರತಿಯೊಂದು ಕೆಲಸವೂ ಮಗುವಿನ ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಗರ್ಭಿಣಿ ಹೊಟ್ಟೆಯಲ್ಲಿರುವ ಮಗು ಆರೋಗ್ಯವಾಗಿದೆಯೇ ಇಲ್ಲವೇ ಎಂಬುದನ್ನು ಪರೀಕ್ಷೆ ನಡೆಸಬೇಕು. ಅಲ್ಟ್ರಾಸೌಂಡ್ ಮಾಡುವ ಮೂಲಕ ಮಗುವಿನ ಆರೋಗ್ಯದ ಪರೀಕ್ಷೆ ನಡೆಯುತ್ತದೆ. 

ಅಲ್ಟ್ರಾಸೌಂಡ್ (Ultrasound) ಅಂದ್ರೇನು? : ಅಲ್ಟ್ರಾಸೌಂಡ್ ನಲ್ಲಿ ಧ್ವನಿ ತರಂಗಗಳನ್ನು ಬಳಸಲಾಗುತ್ತದೆ. ಯಾವುದೇ ಹಾನಿಕಾರಕ ವಿಕಿರಣವನ್ನು ಬಳಸಲಾಗುವುದಿಲ್ಲ. ಇದು ಗರ್ಭಿಣಿ (Pregnant) ಯರಿಗೆ ಮತ್ತು ಗರ್ಭದಲ್ಲಿರುವ ಅವರ ಶಿಶುಗಳಿಗೆ ಸಂಪೂರ್ಣವಾಗಿ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ತರಬೇತಿ ಪಡೆದ ಅಲ್ಟ್ರಾಸೌಂಡ್ ವೈದ್ಯ (Doctor) ರು ಮತ್ತು ನಿಗದಿತ ವೈದ್ಯಕೀಯ ಮಾರ್ಗಸೂಚಿಗಳ ಅಡಿಯಲ್ಲಿ ಮಾತ್ರ ಇದನ್ನು ಮಾಡಬೇಕು. ಹೊಟ್ಟೆಯ ವಿವಿಧ ಭಾಗಗಳ ಚಿತ್ರಗಳನ್ನು ಪಡೆಯಲು ಸಂಜ್ಞಾಪರಿವರ್ತಕ ಎಂಬ ಸಾಧನವನ್ನು ಹೊಟ್ಟೆಯ ಮೇಲೆ ಇರಿಸಲಾಗುತ್ತದೆ. 
ಅಲ್ಟ್ರಾಸೌಂಡ್ ಪ್ರೋಬ್ ಹೆಚ್ಚಿನ ಆವರ್ತನದ ಧ್ವನಿ ತರಂಗಗಳನ್ನು ಹೊರಸೂಸುತ್ತದೆ. ಈ ಅಲೆಗಳು ಮಗುವನ್ನು ಸ್ಪರ್ಶಿಸುತ್ತವೆ ಮತ್ತು ಮಗುವಿನ ಚಿತ್ರವನ್ನು ಉತ್ಪಾದಿಸುತ್ತವೆ. ಅಲ್ಟ್ರಾಸೌಂಡ್ ಸ್ಕ್ಯಾನ್ ಸಮಯದಲ್ಲಿ ಉಪಕರಣವು ಸಣ್ಣ ಪ್ರಮಾಣದ ಶಾಖವನ್ನು ಸಹ ಉತ್ಪಾದಿಸುತ್ತದೆ. ಇದು ಸ್ಕ್ಯಾನ್ ಮಾಡಲಾದ ದೇಹದ ಭಾಗದಿಂದ ಹೀರಲ್ಪಡುತ್ತದೆ. ಅಲ್ಟ್ರಾಸೌಂಡ್ ಶಾಖ ಹೆಚ್ಚಾದಲ್ಲಿ ಅದು ಮಗುವಿನ ಮೇಲೆ ಪರಿಣಾಮ ಬೀರುತ್ತದೆ.   

Latest Videos

undefined

ಮಕ್ಕಳ ಆಹಾರ ಕ್ರಮ ಹೇಗಿರಬೇಕು? ಅವರ ಬುದ್ಧಿಶಕ್ತಿಗೆ ಅಗತ್ಯವಾದ ಆಹಾರ ಪದ್ಧತಿ ಯಾವುದು ?

ಅದಾಗ್ಯೂ ಆಮ್ನಿಯೋಟಿಕ್ ದ್ರವ ಮಗುವನ್ನು ಶಾಖದಿಂದ ರಕ್ಷಿಸುತ್ತದೆ. ಆಮ್ನಿಯೋಟಿಕ್ ದ್ರವವು ಸ್ಕ್ಯಾನ್‌ನಿಂದ ಉತ್ಪತ್ತಿಯಾಗುವ ಯಾವುದೇ ಶಾಖವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದರಿಂದಾಗಿ ಶಾಖವು ಮಗುವಿನ ದೇಹದ ಯಾವುದೇ ಭಾಗವನ್ನು ತಲುಪುವುದಿಲ್ಲ.  ಮಗು ಒಂದೇ ಕಡೆ ಸ್ಥಿರವಾಗಿರದೆ ಚಲಿಸುತ್ತಲೇ ಇರುವ ಕಾರಣ ಅದರ ಒಂದೇ ಭಾಗಕ್ಕೆ ಶಾಖ ತಗಲುವುದಿಲ್ಲ. ಹಾಗೇ ಇದು 30 ನಿಮಿಷದೊಳಗೆ ಮುಗಿಯುವುದ್ರಿಂದ ಹೆಚ್ಚು ಅಪಾಯವಿಲ್ಲ ಎಂದು ನಂಬಲಾಗಿದೆ.

ಅಲ್ಟ್ರಾಸೌಂಡ್ ಯಾವಾಗ ಮಾಡಬೇಕು ? : ಗರ್ಭಾವಸ್ಥೆಯಲ್ಲಿ ಅಲ್ಟ್ರಾಸೌಂಡ್ ಮಾಡುವುದು ಬಹಳ ಮುಖ್ಯ. ಅಲ್ಟ್ರಾಸೌಂಡ್ ಮೂಲಕ ಗರ್ಭ ಮತ್ತು ಮಗುವಿನ ಬೆಳವಣಿಗೆ ಮೇಲ್ವಿಚಾರಣೆ ಮಾಡಬಹುದು. ಗರ್ಭಧಾರಣೆಯ ಮೊದಲ ತ್ರೈಮಾಸಿಕದಲ್ಲಿ  ಅಂದ್ರೆ 12-14ನೇ ವಾರದಲ್ಲಿ ಅಲ್ಟ್ರಾಸೌಂಡ್ ಮಾಡಬೇಕು. ಈ ಸಮಯದಲ್ಲಿ ಅಲ್ಟ್ರಾಸೌಂಡ್ ಮಾಡೋದ್ರಿಂದ ಗರ್ಭಧಾರಣೆಯನ್ನು ದೃಢೀಕರಿಸಲಾಗುತ್ತದೆ. ಭ್ರೂಣ ಸರಿಯಾಗಿ ಬೆಳವಣಿಗೆ ಹೊಂದುತ್ತಿದೆಯಾ ಎಂಬುದನ್ನು ಪತ್ತೆ ಮಾಡ್ಬಹುದು. 

ಮಕ್ಕಳಲ್ಲಿ ಹೆಚ್ಚುತ್ತಿರುವ ಹೃದ್ರೋಗ; ಆರಂಭದಲ್ಲಿ ಹೀಗೆ ಪತ್ತೆ ಹಚ್ಚಿ!

ಇನ್ನು ಎರಡನೇ ಅಲ್ಟ್ರಾಸೌಂಡನ್ನು ಎರಡನೇ ತ್ರೈಮಾಸಿಕದಲ್ಲಿ  ಅಂದ್ರೆ 18-20ನೇ ವಾರದಲ್ಲಿ ಮಾಡಬೇಕು. ಈ ವೇಳೆ ವೈದ್ಯರು ಮಗುವಿನ ಲಿಂಗ ಮತ್ತು ಬೆಳವಣಿಗೆಯನ್ನು ಪರಿಶೀಲಿಸುತ್ತಾರೆ. 
28 ಮತ್ತು 32 ವಾರದ ಮಧ್ಯೆ ಮೂರನೇ ಅಲ್ಟ್ರಾಸೌಂಡ್ ನಡೆಯುತ್ತದೆ. ಮಗುವಿನ ಬೆಳವಣಿಗೆ ಮತ್ತು ಆರೋಗ್ಯವನ್ನು ಇಲ್ಲಿ ಪರಿಶೀಲಿಸಲಾಗುತ್ತದೆ. ಮೂರನೇ ತ್ರೈಮಾಸಿಕದ ಕೊನೆಯಲ್ಲಿ ಅಂದ್ರೆ 36ನೇ ವಾರದಲ್ಲಿ ಮಗುವಿನ ಸ್ಥಿತಿ, ಹೆರಿಗೆ ಸಂಭವದ ಬಗ್ಗೆ ಪತ್ತೆ ಮಾಡಲು ನಾಲ್ಕನೇ ಅಲ್ಟ್ರಾಸೌಂಡ್ ನಡೆಯುತ್ತದೆ. ಕೊನೆಯಲ್ಲಿ ಒಂದು ಅಲ್ಟ್ರಾಸೌಂಡ್ ಪರೀಕ್ಷೆ ನಡೆಯುತ್ತದೆ.  ಪ್ರತಿಯೊಬ್ಬ ಗರ್ಭಿಣಿಗೂ ಐದು ಅಲ್ಟ್ರಾಸೌಂಡ್ ಪರೀಕ್ಷೆ ಮಾಡುವುದು ಸಾಮಾನ್ಯ. ಅಗತ್ಯವಿದ್ದಾಗ ಮಾತ್ರ ಇದಕ್ಕಿಂತ ಹೆಚ್ಚು ಅಲ್ಟ್ರಾಸೌಂಡ್ ಪರೀಕ್ಷೆ ನಡೆಯುತ್ತದೆ.  

ಅತಿಯಾದ ಅಲ್ಟ್ರಾಸೌಂಡ್ ನಿಂದ ಆಗುವ ನಷ್ಟವೇನು? : ನಿಗದಿಯಷ್ಟೇ ಅಲ್ಟ್ರಾಸೌಂಡ್ ನಡೆದ್ರೆ ಯಾವುದೇ ಅಡ್ಡಪರಿಣಾಮವಿಲ್ಲ. ಬೇರೆ ಬೇರೆ ಕಾರಣಕ್ಕೆ ಪ್ರತಿ ತಿಂಗಳೂ ಅಲ್ಟ್ರಾಸೌಂಡ್ ಪರೀಕ್ಷೆಗೆ ಒಳಗಾದ್ರೆ ಗರ್ಭದಲ್ಲಿರುವ ಮಗುವಿಗೆ ಹಾನಿಯಾಗುತ್ತದೆ. ಮಗುವಿನ ಮೂಳೆ ಮತ್ತು ಮೆದುಳಿನ ಮೇಲೆ ಇದು ಪರಿಣಾಮ ಬೀರುತ್ತದೆ.
 

click me!