
ಹಿಂದಿ ಕಿರುತೆರೆಯ ಪ್ರಸಿದ್ಧ ನಟಿ ದೀಪಿಕಾ ಕಕ್ಕರ್ ತುಂಬು ಗರ್ಭಿಣಿ. ಆದರೆ ಆಕೆ ಗರ್ಭಾವಸ್ಥೆಯಲ್ಲಿ ಕಾಡುವ ಮಧುಮೇಹದಿಂದ ಬಳಲುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ನಟಿ ದೀಪಿಕಾ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ದೀಪಿಕಾ ತಮ್ಮ ಸಮಸ್ಯೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ದೀಪಿಕಾ ಗರ್ಭಧಾರಣೆಯ ಮೂರನೇ ತ್ರೈಮಾಸಿಕದಲ್ಲಿ ಗರ್ಭಾವಸ್ಥೆಯ ಮಧುಮೇಹವನ್ನು ಹೊಂದಿದ್ದರು. ಈ ಬಗ್ಗೆ ಮಾಹಿತಿ ನೀಡಿದ ಅವರು, ಗರ್ಭಿಣಿಯರು ಈ ರೋಗದ ಬಗ್ಗೆ ಎಚ್ಚರದಿಂದಿರಿ. ಈ ರೋಗದ ಬಗ್ಗೆ ಭಯಪಡುವ ಬದಲು ವೈದ್ಯರ ಸಲಹೆಯನ್ನು ಪಾಲಿಸಿ ನಿಮ್ಮ ಗರ್ಭಾವಸ್ಥೆಯನ್ನು ಸುರಕ್ಷಿತವಾಗಿಟ್ಟುಕೊಳ್ಳಿ ಎಂದಿದ್ದಾರೆ. ಹಾಗಿದ್ರೆ ಗರ್ಭಾವಸ್ಥೆಯ ಮಧುಮೇಹ ಅಂದರೇನು? ಈ ಕಾಯಿಲೆಯ ಗುಣಲಕ್ಷಣಗಳೇನು? ಗರ್ಭಿಣಿ ಮಹಿಳೆಯರಿಗೆ ಅದರ ಅಪಾಯ ಏನು? ಅನ್ನೋ ಮಾಹಿತಿ ಇಲ್ಲಿದೆ.
ಗರ್ಭಾವಸ್ಥೆಯ ಮಧುಮೇಹ ಎಂದರೇನು?
ಹೆಸರೇ ಸೂಚಿಸುವಂತೆ, ಗರ್ಭಾವಸ್ಥೆಯ ಮಧುಮೇಹವು (Gestational Diabetes), ಗರ್ಭಾವಸ್ಥೆಯಲ್ಲಿ ಕಾಣಿಸಿಕೊಳ್ಳುವ ಮಧುಮೇಹವಾಗಿದೆ. ಸಾಮಾನ್ಯವಾಗಿ ಇದು ಗರ್ಭಧಾರಣೆಯ 24 ರಿಂದ 28 ವಾರಗಳ ಅವಧಿಯಲ್ಲಿ ಕಂಡುಬರುತ್ತದೆ. ಈ ಕಾರಣದಿಂದಾಗಿ, ಗರ್ಭಿಣಿ ಮಹಿಳೆಯ (Woman) ದೇಹವು ಅಗತ್ಯವಾದ ಇನ್ಸುಲಿನ್ ಅನ್ನು ಮಾಡಲು ಸಾಧ್ಯವಾಗುವುದಿಲ್ಲ. ಇನ್ಸುಲಿನ್ ಮೇದೋಜ್ಜೀರಕ ಗ್ರಂಥಿಯಿಂದ ಉತ್ಪತ್ತಿಯಾಗುವ ಹಾರ್ಮೋನ್ ಆಗೊದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (Sugar level) ನಿಯಂತ್ರಣದಲ್ಲಿಡುತ್ತದೆ. ಈ ಶಕ್ತಿಯನ್ನು ಬಳಸಿಕೊಂಡು ನಮ್ಮ ದೇಹವು (Body) ಅನೇಕ ಕೆಲಸಗಳನ್ನು ಮಾಡುತ್ತದೆ.
ನೋವು ತಿನ್ನೋದ್ಯಾರು ಅಂತ ಸೀಸೇರಿಯನ್ ಮಾಡ್ಸಿ ಕೊಂಡ್ರೆ, ಅಡ್ಡ ಪರಿಣಾವೇನಾಗುತ್ತೆ ಗೊತ್ತಾ?
ಗರ್ಭಾವಸ್ಥೆಯ ಮಧುಮೇಹಕ್ಕೆ ಪ್ರಮುಖ ಕಾರಣ
ಈ ರೋಗದ ಬಗ್ಗೆ ಪ್ರಪಂಚದಾದ್ಯಂತ ನಿರಂತರ ಸಂಶೋಧನೆಗಳು ನಡೆಯುತ್ತಿವೆ, ಆದರೆ ಇಲ್ಲಿಯವರೆಗೆ ಗರ್ಭಿಣಿ ಮಹಿಳೆಯರಿಗೆ ಇದು ಏಕೆ ಸಂಭವಿಸುತ್ತದೆ ಎಂದು ತಿಳಿದು ಬಂದಿದಿಲ್ಲ. ಸಂಶೋಧನೆಯಿಂದ ತಿಳಿದು ಬಂದಿರುವ ಅಂಶಗಳ ಪ್ರಕಾರ, ಗರ್ಭಾವಸ್ಥೆಯಲ್ಲಿ ಮಹಿಳೆಯ ದೇಹದಲ್ಲಿ ಅನೇಕ ಪ್ರಮುಖ ಹಾರ್ಮೋನ್ ಬದಲಾವಣೆಗಳು ಕಂಡುಬರುತ್ತವೆ. ಈ ಕಾರಣದಿಂದಾಗಿ, ರಕ್ತದಲ್ಲಿನ ಸಕ್ಕರೆಯನ್ನು ಸರಿಯಾಗಿ ನಿಯಂತ್ರಿಸಲಾಗುವುದಿಲ್ಲ ಮತ್ತು ಗ್ಲೂಕೋಸ್ ಮಟ್ಟವು ಹೆಚ್ಚಾಗುತ್ತದೆ. ಹೆರಿಗೆಯ ನಂತರ ಮಹಿಳೆ ಚೇತರಿಸಿಕೊಂಡರೂ, ನಂತರ ಟೈಪ್ -2 ಮಧುಮೇಹದ ಅಪಾಯವು ಹೆಚ್ಚಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಇನ್ಸುಲಿನ್ ಇಂಜೆಕ್ಷನ್ ಕೂಡ ತೆಗೆದುಕೊಳ್ಳಬೇಕಾಗಬಹುದು.
ಗರ್ಭಾವಸ್ಥೆಯ ಮಧುಮೇಹ ಹೇಗೆ ಗುರುತಿಸುವುದು?
ಆರಂಭದಲ್ಲಿ, ಈ ರೋಗವನ್ನು ಗುರುತಿಸಲಾಗುವುದಿಲ್ಲ, ಏಕೆಂದರೆ ಯಾವುದೇ ಪ್ರಮುಖ ರೋಗಲಕ್ಷಣಗಳು ಗೋಚರಿಸುವುದಿಲ್ಲ. ಆದರೆ ಕಾಲಾನಂತರದಲ್ಲಿ, ಈ ರೋಗವು ಅದರ ಪರಿಣಾಮವನ್ನು ತೋರಿಸಲು ಪ್ರಾರಂಭಿಸುತ್ತದೆ. ಗರ್ಭಿಣಿಗೆ ಮತ್ತೆ ಮತ್ತೆ ಬಾಯಾರಿಕೆಯಾಗುತ್ತಿದೆ. ಇದಲ್ಲದೆ, ಮೂತ್ರವು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ. ಅತಿಯಾದ ದಣಿವು ಮತ್ತು ದುರ್ಬಲ ಭಾವನೆ ಅಥವಾ ಸಾಮಾನ್ಯಕ್ಕಿಂತ ಹೆಚ್ಚು ಹಸಿದ ಭಾವನೆ ಕೂಡ ಒಂದು ಲಕ್ಷಣ (Symptoms)ವಾಗಿರಬಹುದು. ಗರ್ಭಾವಸ್ಥೆಯಲ್ಲಿ ನೀವು ಅಂತಹ ಯಾವುದೇ ಲಕ್ಷಣಗಳನ್ನು ಹೊಂದಿದ್ದರೆ, ತಕ್ಷಣವೇ ಅದನ್ನು ಪರೀಕ್ಷಿಸಿ ಮತ್ತು ವೈದ್ಯರ ಸಲಹೆಯನ್ನು ಅನುಸರಿಸಿ.
ಅರೆ..ಇದ್ಹೇಗಾಯ್ತು..ಒಂದೇ ಸಮಯದಲ್ಲಿ ಗರ್ಭಿಣಿಯರಾದ ನಾಲ್ವರು ಸಹೋದರಿಯರು!
ಗರ್ಭಾವಸ್ಥೆಯ ಮಧುಮೇಹ ತಡೆಯುವುದು ಹೇಗೆ?
ಗರ್ಭಿಣಿ ಮಹಿಳೆ ವಾರಕ್ಕೊಮ್ಮೆಯಾದರೂ ತನ್ನ ಸಕ್ಕರೆ ಮಟ್ಟವನ್ನು ಪರೀಕ್ಷಿಸುತ್ತಿರಬೇಕು. ಈ ರೋಗದ ರೋಗನಿರ್ಣಯದ ನಂತರ, ಚಿಕಿತ್ಸೆಯ ಜೊತೆಗೆ, ಆಹಾರ ಮತ್ತು ಪಾನೀಯದ ಬಗ್ಗೆ ಸಂಪೂರ್ಣ ಗಮನ ಹರಿಸುವುದು ಅವಶ್ಯಕ. ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳುವುದು ಮತ್ತು ನಿಯಮಿತವಾಗಿ ವ್ಯಾಯಾಮ ಮಾಡುವುದು ಬಹಳ ಮುಖ್ಯ. ವೈದ್ಯರ ಸಲಹೆಯಂತೆ ನಿಯಮಿತವಾಗಿ ಔಷಧಿ ತೆಗೆದುಕೊಳ್ಳುತ್ತಿರಿ. ಇದಕ್ಕಾಗಿ ಯಾವುದೇ ಔಷಧಿಯನ್ನು ನೀವೇ ತೆಗೆದುಕೊಳ್ಳಬಾರದು ಎಂಬುದನ್ನು ನೆನಪಿನಲ್ಲಿಡಿ, ಇಲ್ಲದಿದ್ದರೆ ಗರ್ಭಧಾರಣೆಯ ಮೇಲೆ ಕೆಟ್ಟದಾಗಿ ಪರಿಣಾಮ ಬೀರಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.