
ಜೀವನ ಅನ್ನೋದು ಏಳು-ಬೀಳುಗಳ ಹಾದಿ. ಕೆಲವೊಮ್ಮೆ ಖುಷಿಯ ಕ್ಷಣಗಳೇ ಬರಬಹುದು. ಇನ್ನು ಕೆಲವೊಮ್ಮೆ ಕಷ್ಟಗಳೇ ಕಾಡಬಹುದು. ಎಲ್ಲವನ್ನೂ ಸಮಚಿತ್ತದಿಂದ ಎದುರಿಸಬೇಕು ಅಷ್ಟೆ. ಯಶಸ್ಸು ಅನ್ನೋದು ಜೀವನದಲ್ಲಿ ಎಲ್ಲರಿಗೂ ಬೇಕು. ಅದು ಸಿಗಬೇಕಾದರೆ ಸರಿಯಾದ ದಾರಿಯಲ್ಲಿ ನಡೆಯಬೇಕಾದುದು ಮುಖ್ಯ. ಜೀವನದಲ್ಲಿ ಯಶಸ್ಸು ಸಾಧಿಸ್ಬೇಕು ಅಂತ ಯಾರು ತಾನೇ ಬಯಸೋದಿಲ್ಲ ಹೇಳಿ. ಸಕ್ಸಸ್ ಎಲ್ಲರಿಗೂ ಬೇಕು. ಆದರೆ ಈ ಗೆಲುವು ಎಲ್ಲರಿಗೂ ಸುಲಭವಾಗಿ ಸಿಗುವುದಿಲ್ಲ. ಹಾಗಿದ್ರೆ ಲೈಫ್‌ಲ್ಲಿ ಸಕ್ಸಸ್ ಆಗಲು ಏನು ಮಾಡಬೇಕು. ಇಲ್ಲಿದೆ ಡಿ.ಕೆ ಶಿವಕುಮಾರ್ ಮಗಳು ಐಶ್ವರ್ಯಾ ಜೀವನ ಪಾಠ.
ಐ ಕಾನ್ ಡು ಇಟ್ ಅನ್ನೋ ಮನಸ್ಥಿತಿಯೊಂದಿಗೆ ಮುನ್ನಡೆಯಿರಿ
ನಮ್ಮ ಜೀವನದ ಗುರಿಗಳನ್ನು (Life goals) ಸಾಧಿಸಲು ಮೊದಲ ಹೆಜ್ಜೆ ಇಡಲು 'ನಾನು ಅದನ್ನು ಮಾಡಬಲ್ಲೆ' ಎಂಬ ಮನಸ್ಥಿತಿಯೊಂದಿಗೆ ಯಾವುದೇ ಪ್ರಯತ್ನವನ್ನು ಪ್ರಾರಂಭಿಸುವುದು ಬಹಳ ಮುಖ್ಯ ಎಂದು ಡಿ.ಕೆ ಶಿವಕುಮಾರ್ ಅವರ ಮಗಳು ಐಶ್ವರ್ಯಾ ಹೇಳುತ್ತಾರೆ 'ನಾನು ಅದನ್ನು ಮಾಡಲು ಪ್ರಯತ್ನಿಸುತ್ತೇನೆ' ಎಂಬ ಪದವು ಅಪೇಕ್ಷಿತ ಫಲಿತಾಂಶವನ್ನು ಸಾಧಿಸುವ ನಮ್ಮ ಸಾಮರ್ಥ್ಯದಲ್ಲಿ ಅನಿಶ್ಚಿತತೆಯ ಮಟ್ಟವನ್ನು ಸೂಚಿಸುತ್ತದೆ. ನಾವು ಕೇವಲ ಪ್ರಯತ್ನಿಸಲು (Trying) ಅವಕಾಶ ಪಡುತ್ತೇವೆ ಅಷ್ಟೆ. ಅಲ್ಲಿ ಸೋಲು (Failure) ಸಹ ಉಂಟಾಗಬಹುದು.
ನಡೆ ಮುಂದೆ ನಡೆ ಮುಂದೆ ಎಂದು ಹುರಿದುಂಬಿಸುವ ಕೋಟ್ಸ್!
ಪ್ರಯತ್ನಿಸುತ್ತೇನೆ ಎನ್ನಬೇಡಿ ಮಾಡುತ್ತೇನೆ ಎನ್ನಿ: ಪ್ರಯತ್ನಿಸುತ್ತೇನೆ ಎಂಬ ಪದವು ನಾವು ಗೆಲ್ಲುವುದರಿಂದ ನಮ್ಮನ್ನು ದೂರವಿಡಬಹುದು. ನಮ್ಮ ಗುರಿಗಳನ್ನು ತಲುಪುವ ಬಗ್ಗೆ ನಮ್ಮಲ್ಲಿಯೂ ಅನುಮಾನ ಕಾಡಬಹುದು. ಹೀಗಾಗಿ ಪ್ರಯತ್ನಿಸುತ್ತೇನೆ ಎನ್ನುವುದಲ್ಲ ಬದಲಾಗಿ, ನಮ್ಮ ಗುರಿಗಳ ಕಡೆಗೆ ಕೆಲಸ ಮಾಡಲು, ಕ್ರೀಡಾ ಮನೋಭಾವದಿಂದ ಅವರನ್ನು ಸಮೀಪಿಸಲು ನಾವು ಪೂರ್ಣ ಹೃದಯದಿಂದ ಬದ್ಧರಾಗಿರುವುದು ಮುಖ್ಯ. ಸಂದೇಹವನ್ನು (Doubt) ತೊಡೆದುಹಾಕುವ ಮೂಲಕ ಮತ್ತು ಅದನ್ನು ಅಚಲವಾದ ಪ್ರಯತ್ನ ಮತ್ತು ನಂಬಿಕೆಯಿಂದ ಬದಲಾಯಿಸುವ ಮೂಲಕ, ನಾವು ನಮ್ಮ ಯಶಸ್ಸಿನ ಸಾಧ್ಯತೆಗಳನ್ನು ಹೆಚ್ಚಿಸುತ್ತೇವೆ ಮತ್ತು ಹೆಚ್ಚು ಪೂರೈಸುವ ಪ್ರಯಾಣಕ್ಕಾಗಿ ನಮ್ಮನ್ನು ಹೊಂದಿಸುತ್ತೇವೆ ಎಂದು ಐಶ್ವರ್ಯ ತಿಳಿಸುತ್ತಾರೆ.
ಡಿ.ಕೆ ಶಿವಕುಮಾರ್ ಮಗಳ ಪರಿಚಯ
ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆಯೂ ಆಗಿರುವ ಐಶ್ವರ್ಯಾ ನೂರಾರು ಕೋಟಿ ಆಸ್ತಿಯ ಒಡತಿ. ಡಿ.ಕೆ ಶಿವಕುಮಾರ್ ನಡೆಸುತ್ತಿರುವ ಹಲವಾರು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ಹೊತ್ತಿದ್ದಾರೆ ಐಶ್ವರ್ಯಾ ಶಿವಕುಮಾರ್. ಶಾಲಾ ಕಾರ್ಯಕ್ರಮದಲ್ಲಿ ಮೋಟಿವೇಷನಲ್ ಸ್ಪೀಕರ್ ಕೂಡಾ ಆಗಿದ್ದಾರೆ. ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಅವರ ಮಗ ಅಮರ್ಥ್ಯರನ್ನು ವರಿಸಿದ್ದಾರೆ.
ಡಿಸಿಎಂ ಆಗಿ ಪ್ರಮಾಣವಚನ ಸ್ವೀಕಾರ, ಮಗಳ ಮದುವೆ ಶರ್ಟ್ ಧರಿಸಿ ಬಂದ ಡಿಕೆಶಿ,
ರಾಜ್ಯದ 16ನೇ ವಿಧಾನಸಭಾ ಉಪಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಗಂಗಾಧರ ಅಜ್ಜನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಡಿ.ಕೆ. ಶಿವಕುಮಾರ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಡಿ.ಕೆ. ಶಿವಕುಮಾರ್ ಅವರು ತಮ್ಮ ಮಗಳ ಮದುವೆಯಲ್ಲಿ ಧರಿಸಿದ್ದ ರೇಷ್ಮೆ ಅಂಗಿಯನ್ನು ಹಾಗೂ ಪಂಚೆಯನ್ನು ಧರಿಸಿ ಬಂದಿದ್ದರು.
ಖುಷಿಯಾಗಿ ಬದುಕೋದು ಹೇಗೆ?: ಪರಮ ಪೋಲಿ ಗುರು ಖುಷ್ವಂತ್ ಸಿಂಗ್ ಹೇಳಿದ 10 ಸೂತ್ರ
ಇನ್ನು ಕಳೆದೊಂದು ವಾರದಿಂದ ಕಾಂಗ್ರೆಸ್‌ನ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ನಡೆಸಿದ್ದ ಅವರು ಹೈಕಮಾಂಡ್ ಒತ್ತಡಕ್ಕೆ ಮಣಿದು ಉಪಮುಖ್ಯಮಂತ್ರಿ ಆಗಲು ಒಪ್ಪಿಕೊಂಡಿದ್ದರು. ನಂತರ, ಕಳೆದ ಎರಡು ದಿನಗಳಿಂದ ಸಚಿವ ಸಂಪುಟದ ಸದಸ್ಯರ ಆಯ್ಕೆ ವಿಚಾರದಲ್ಲಿ ತೊಡಗಿಕೊಂಡಿದ್ದ ಅವರಿಗೆ ಹೊಸ ಶರ್ಟ್ ಖರೀದಿಗೆ ಕೂಡ ಸಮಯ ಸಿಗಲಿಲ್ಲ ಎಂದು ಕೇಳಿಬರುತ್ತಿದೆ. ಆದರೆ, ಮಗಳ ಮದುವೆಯಲ್ಲಿ ಮಿಂಚಿದ್ದ ಶರ್ಟ್ ಧರಿಸಿ ಉಪಮುಖ್ಯಮಂತ್ರಿಯಾಗಿಯೂ ರಾಜ್ಯದ ಜನತೆಯ ಮುಂದೆ ಮಿಂಚಿದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.