ಡಿವೋರ್ಸ್‌ ಆಯ್ತೆಂದು ಫೋಟೋಗ್ರಾಫರ್‌ಗೆ ಹಣ ವಾಪಸ್ ನೀಡುವಂತೆ ಕೇಳಿದ ಮಹಿಳೆ

By Anusha Kb  |  First Published May 9, 2023, 10:25 AM IST

ವಿಚ್ಛೇದನಕ್ಕೆ ಒಳಗಾದ ಮಹಿಳೆಯೊಬ್ಬರು ಫೋಟೋಗ್ರಾಫರ್ ಬಳಿ ತಾನೂ ಫೋಟೋಶೂಟ್‌ಗೆ ವೆಚ್ಚ ಮಾಡಿದ ಹಣವನ್ನು ಮರಳಿ ಕೊಡುವಂತೆ ಕೇಳಿದ್ದು, ಈ ವಿಚಾರವೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.


ಮದುವೆಗಾಗಿ ಲಕ್ಷಾಂತರ ರೂಪಾಯಿಗಳನ್ನು ವೆಚ್ಚ ಮಾಡಲಾಗುತ್ತದೆ. ಅದರಲ್ಲೂ ಮದುವೆಯ ಫೋಟೋಶೂಟ್ ಪ್ರೀವೆಡ್ಡಿಂಗ್ ಫೋಟೋಶೂಟ್‌ಗೆ ಲಕ್ಷ ಲಕ್ಷ ಸುರಿಯುವ ಜೋಡಿಗಳಿದ್ದಾರೆ. ನೆನಪುಗಳನ್ನು ಚಿರಕಾಲ ಸಿಹಿಯಾಗಿಡಲು ಜನ ಫೋಟೋಗ್ರಾಫರ್ ಮೊರೆ ಹೋಗುತ್ತಿದ್ದು, ತಮಗೆ ಬೇಕಾದಂತೆ ಬೇಕಾದ ಸ್ಟೈಲ್‌ಗಳಲ್ಲಿ ಫೋಟೋಶೂಟ್ ಮಾಡಿಸುತ್ತಾರೆ. ಆದರೆ ಜೀವನ ಯಾವಾಗಲೂ ಅನೀರಿಕ್ಷಿತವಾಗಿರುತ್ತದೆ.  ಮುಂದೆ ಏನಾಗುತ್ತದೆ ಎಂಬುದು ಯಾರಿಗೂ ತಿಳಿದಿರುವುದಿಲ್ಲ. ವಿವಾಹವಾದವರೆಲ್ಲಾ ಜೀವನ ಪೂರ್ತಿ ಸುಖವಾಗಿ ಒಟ್ಟಿಗೆ ಜೀವಿಸುತ್ತಾರೆ ಎಂದು ಹೇಳಲಾಗದು. ಕಾರಣಾಂತರಗಳಿಂದ ಅನೇಕರು ಹೊಂದಿಕೊಂಡು ಬಾಳಲಾಗದೇ ವಿಚ್ಛೇದನದ ದಾರಿ ಹಿಡಿಯುತ್ತಾರೆ. ಇತ್ತೀಚೆಗಂತೂ ವಿಚ್ಛೇದನದ ಸಂಖ್ಯೆ ಹೆಚ್ಚುತ್ತಿದೆ. ಅದೇ ರೀತಿ ಇಲ್ಲೊಂದು ಜೋಡಿ ಭರ್ಜರಿ ಫೋಟೋ ಶೂಟ್ ನಡೆಸಿ ಮದ್ವೆಯಾಗಿದ್ದರು. ಚಿರಕಾಲ ಸುಖ ದಾಂಪತ್ಯದ ಕನಸು ಕಂಡು ಫೋಟೋಶೂಟ್‌ಗೆ ಲಕ್ಷಾಂತರ ರೂ ವೆಚ್ಚ ಮಾಡಿದ್ದರು.  ಆದರೆ ಅವರು ಮಾಡಿದ್ದೆಲ್ಲವೂ ನೀರ ಮೇಲಿನ ಹೋಮದಂತೆ ವೇಸ್ಟ್ ಆಗಿತ್ತು. ಏಕೆಂದರೆ ಇಬ್ಬರೂ ಹೊಂದಿ ಬಾಳಲಾಗದೇ ವಿಚ್ಛೇದನ ಮೊರೆ ಹೋಗಿದ್ದರು. 

ಆದರೆ ಹೀಗೆ ವಿಚ್ಛೇದನಕ್ಕೆ ಒಳಗಾದ ಮಹಿಳೆಯೊಬ್ಬರು ಫೋಟೋಗ್ರಾಫರ್ ಬಳಿ ತಾನೂ ಫೋಟೋಶೂಟ್‌ಗೆ ವೆಚ್ಚ ಮಾಡಿದ ಹಣವನ್ನು ಮರಳಿ ಕೊಡುವಂತೆ ಕೇಳಿದ್ದು, ಈ ವಿಚಾರವೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರವನ್ನು ಸ್ವತಃ ಫೋಟೋಗ್ರಾಫರ್‌ರೇ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.  LanceRomeoPhotography (@LanceRomeo) ಎಂಬ ಹೆಸರಿನ ಖಾತೆ ಹೊಂದಿರುವ ಫೋಟೋಗ್ರಾಫರ್ ಮಹಿಳೆ ಹಣ ರೀಫಂಡ್ ಮಾಡುವಂತೆ ಕೇಳಿ ಮಾಡಿದ್ದ ಮೆಸೇಜ್‌ನ್ನ ಸ್ಕ್ರೀನ್‌ಶಾಟ್ ತೆಗೆದು ಹಾಕಿದ್ದು, ಇದನ್ನು ನೋಡಿದ ನೆಟ್ಟಿಗರು ಅಚ್ಚರಿಯ ಜೊತೆ ಹಾಸ್ಯದ ಕಾಮೆಂಟ್ ಮಾಡಿದ್ದಾರೆ. 

Tap to resize

Latest Videos

Niharika Konidela: 'ಬದುಕಲು ಬಿಡಿ' ಹೊಸ ಪೋಸ್ಟ್ ಮೂಲಕ ವಿಚ್ಛೇದನ ದೃಢ ಪಡಿಸಿದ್ರಾ 'ಮೆಗಾ' ಕುಟಂಬದ ಮಗಳು?

ಫೋಟೋಗ್ರಾಫರ್‌,  ಲಾನ್ಸ್ ರೋಮಿಯೋ ಎಂಬುವವರಿಗೆ ಅವರ ಗ್ರಾಹಕರೊಬ್ಬರು ರೀಫಂಡ್ ಮಾಡುವಂತೆ ಮೆಸೇಜ್ ಮಾಡಿದ್ದು, ಅವರ ಸಂಭಾಷಣೆಯ ಸಾರಾಂಶ ಹೀಗಿದೆ. "ಹಾಯ್ ರೋಮಿಯೋ ಹೇಗಿದ್ದೀರಿ? ನೀವು ನನ್ನನ್ನು ಇನ್ನೂ ನೆನಪಿಟ್ಟುಕೊಂಡಿದ್ದೀರೋ ಇಲ್ಲವೋ ಎಂಬುದು ನನಗೆ ಗೊತ್ತಿಲ್ಲ, ನೀವು 2019ರಲ್ಲಿ ಡರ್ಬನ್‌ನಲ್ಲಿ ನನ್ನ ಮದುವೆಯ ಫೋಟೋಶೂಟ್ ಮಾಡಿದ್ದೀರಿ" ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಛಾಯಾಗ್ರಾಹಕ ಲಾನ್ಸ್ ರೋಮಿಯೋ, "ನಾನು ಚೆನ್ನಾಗಿದ್ದೇನೆ, ಧನ್ಯವಾದಗಳು, ನೀವು ಚೆನ್ನಾಗಿದ್ದೀರಿ ಎಂದು ಭಾವಿಸುತ್ತೇನೆ, ಹೌದು ನನಗೆ ನೆನಪಿದೆ. ಹೇಗೆ ನಾನು ನಿಮಗೆ ಸೇವೆ ನೀಡಲಿ" ಎಂದು ಅವರು ಮರು ಪ್ರಶ್ನಿಸಿದ್ದಾರೆ.  

ಇದಕ್ಕೆ ಪ್ರತಿಕ್ರಿಯಿಸಿದ ಆ ಗ್ರಾಹಕಿ, "ಒಳ್ಳೆಯದು ಈಗ ನಾನು ವಿಚ್ಛೇದನ ಪಡೆದಿದ್ದೇನೆ ಹಾಗೂ ನಾನು ಮತ್ತು ನನ್ನ ಮಾಜಿ ಪತಿಗೆ ಆ ಫೋಟೋಗಳು ಇನ್ನೂ ಎಂದೆಂದಿಗೂ ಬೇಕಾಗಿಯೇ ಇಲ್ಲ, ನೀವು ಆ ಫೋಟೋಶೂಟ್ ಬಹಳ ಚೆನ್ನಾಗಿ ಮಾಡಿದ್ದೀರಿ, ಆದರೆ ನಾನು ಹಾಗೂ ನನ್ನ ಪತಿ ವಿಚ್ಛೇದಿತರಾಗಿರುವುದರಿಂದ ಆ ಫೋಟೋ ಶೂಟ್ ವೇಸ್ಟ್ ಆಗಿದೆ. ಹಾಗಾಗಿ ನಾನು ನಿಮಗೆ ಫೋಟೋಶೂಟ್‌ ಮಾಡಲು ಕೊಟ್ಟ ಹಣವನ್ನು ವಾಪಸ್ ನನಗೆ ಮರಳಿಸಿ ಏಕೆಂದರೆ ಆ ಫೋಟೋ ಆಲ್ಬಮ್ ನಮಗಿನ್ನು ಬೇಕಾಗಿಲ್ಲ" ಎಂದು ಆಕೆ ಸಂದೇಶ ಕಳುಹಿಸಿದ್ದಾಳೆ. 

ಇದನ್ನು ನೋಡಿದ ಫೋಟೋಗ್ರಾಫರ್‌ಗೆ ಶಾಕ್ ಆಗಿದ್ದು, "ಕ್ಷಮಿಸಿ, ಇದು ಜೋಕ್ ತಾನೆ" ಎಂದು ಫೋಟೋಗ್ರಾಫರ್ ಕೇಳಿದ್ದಾರೆ. ಈ ವೇಳೆ ಆಕೆ, " ಇಲ್ಲ ಡಿಯರ್, ನಾನು ತುಂಬಾ ಗಂಭೀರವಾಗಿ ಹೇಳ್ತಿದ್ದೇನೆ" ಎಂದು ಆಕೆ ಪ್ರತಿಕ್ರಿಯಿಸಿದ್ದಾರೆ. 

ಸಂಬಂಧ ಉಳಿಸಿಕೊಳ್ಳುವಲ್ಲಿ ಭಾರತಕ್ಕೆ ಅಗ್ರಸ್ಥಾನ, ಹೆಚ್ಚು ಡಿವೋರ್ಸ್ ಆಗೋದು ಯಾವ ದೇಶದಲ್ಲಿ?

ಇದಕ್ಕೆ ಪ್ರತಿಕ್ರಿಯಿಸಿದ ಫೋಟೋಗ್ರಾಫರ್ (photographer), "ನೀವು ಹಾಗೂ ನಿಮ್ಮ ಪತಿ ವಿಚ್ಛೇದಿತರಾಗಿರುವುದನ್ನು ಕೇಳಿ ನನಗೆ ಬಹಳ ಬೇಸರವಾಯ್ತು, ನಿಮ್ಮ ಬದುಕಿನಲ್ಲಿಈ ರೀತಿ ಆಗಬಾರದಿತ್ತು. ಫೋಟೋಗ್ರಾಫಿ ರೀಫಂಡ್ (refund) ಮಾಡುವಂತಹ ಸರ್ವೀಸ್ ಅಲ್ಲ, ನಾನು ಒಂದು ಸಲ ನಿಮಗೆ ಸೇವೆ ನೀಡಿಯಾಗಿದೆ, ಫೋಟೋವನ್ನು ನೀಡಿಯಾಗಿದೆ. ಹೀಗಾಗಿ ನಾನು ನಿಮಗೆ ರೀಫಂಡ್ ಮಾಡಲು ಸಾಧ್ಯವಿಲ್ಲ, ಹಾಗೂ ನಿಮ್ಮ ಫೋಟೋವನ್ನು ನಾನು ಇಟ್ಟುಕೊಳ್ಳಲು ಸಾಧ್ಯವಿಲ್ಲ, ನಿಮ್ಮ ಬಗ್ಗೆ ಕಾಳಜಿ ತೆಗೆದುಕೊಳ್ಳಿ" ( ಟೇಕ್ ಕೇರ್) ಎಂದು ಹೇಳಿದ್ದಾರೆ.

ಆದರೆ ಅಷ್ಟಕ್ಕೆ ಸುಮ್ಮನಾಗದ ಆಕೆ, " ಓಕೆ ಒಳ್ಳೆದು ಈ ಬಗ್ಗೆ ನಮ್ಮ ವಕೀಲರು (lawyers) ನಿಮ್ಮ ಜೊತೆ ಡೀಲ್ ಮಾಡ್ತಾರೆ, ಕನಿಷ್ಟ 70ರಷ್ಟು ರೀಫಂಡ್ ಮಾಡಿ, ಆಗ ಹಣದೊಂದಿಗೆ ನಾನು ಚೇತರಿಸಿಕೊಳ್ಳುವೆ, ನೀವು ಎಲ್ಲಿದ್ದೀರಿ, ನಾನು ನಿಮ್ಮನ್ನು ಭೇಟಿ ಮಾಡಬಹುದೇ ಎಂದೂ ಕೇಳಿದ್ದಾರೆ. ಆದರೆ ಇದಕ್ಕೆ ಫೋಟೋಗ್ರಾಫರ್ ನೋ ಎಂದಿದ್ದು, ನಿಮ್ಮ ವಕೀಲರಿಗೆ ನನಗೆ ಕಾಲ್ ಮಾಡುವಂತೆ ತಿಳಿಸಿ ಎಂದು ಹೇಳಿ ಸಂಭಾಷಣೆಯನ್ನು ಕೊನೆಗೊಳಿಸಿದ್ದಾರೆ. 

ಈ ಸಂಭಾಷಣೆಯನ್ನು 4 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದು ಅನೇಕ ಕಾಮೆಂಟ್‌ಗಳನ್ನು ಮಾಡಿದ್ದಾರೆ. 

click me!