ಪ್ಲಾಸ್ಟಿಕ್ ಸರ್ಜರಿ ಎಫೆಕ್ಟ್ : ಹೇಗಿದ್ದೋಳು ಹೇಗಾದ್ಲು ನೋಡಿ...

Published : May 08, 2023, 12:43 PM IST
ಪ್ಲಾಸ್ಟಿಕ್ ಸರ್ಜರಿ ಎಫೆಕ್ಟ್ : ಹೇಗಿದ್ದೋಳು ಹೇಗಾದ್ಲು ನೋಡಿ...

ಸಾರಾಂಶ

ಉಕ್ರೇನ್‌ನ ಮಾಡೆಲ್ ಒಬ್ಬರು ಪ್ಲಾಸ್ಟಿಕ್ ಸರ್ಜರಿಗೂ ಮೊದಲು ಹಾಗೂ ನಂತರ ಫೋಟೋವನ್ನು ಶೇರ್ ಮಾಡಿದ್ದು, ಇದನ್ನು ನೋಡಿದ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. 

ಸಿನಿಮಾ ರಂಗದಲ್ಲಿರುವ ಅನೇಕರ ತಾರೆಯರು ಮಾಡೆಲ್‌ಗಳು ತಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಲು ಪ್ಲಾಸ್ಟಿಕ್ ಸರ್ಜರಿ ಮೊರೆ ಹೋಗುತ್ತಾರೆ. ಬಣ್ಣದ ಲೋಕದಲ್ಲಿ ಬಹುಕಾಲ ನೆಲೆ ನಿಲ್ಲಲು ಅವರಿಗೆ ಇದು ಅಗತ್ಯ ಆಗಿದೆ. ಆದರೆ ಈ ಪ್ಲಾಸ್ಟಿಕ್ ಸರ್ಜರಿಗಳಲ್ಲಿ ಸ್ವಲ್ಪ ಎಡವಟ್ಟಾದರೂ ಇನ್ನೇನೋ ದೊಡ್ಡ ಅನಾಹುತವಾಗುತ್ತದೆ. ಪ್ಲಾಸ್ಟಿಕ್ ಸರ್ಜರಿಗೊಳಗಾಗಿ ಇರುವ ಸೌಂದರ್ಯವನ್ನು ವಿರೂಪವಾಗಿಸಿಕೊಂಡ ಅನೇಕರಿದ್ದಾರೆ. ಈ ಮಧ್ಯೆ ಉಕ್ರೇನ್‌ನ ಮಾಡೆಲ್ ಒಬ್ಬರು ಪ್ಲಾಸ್ಟಿಕ್ ಸರ್ಜರಿಗೂ ಮೊದಲು ಹಾಗೂ ನಂತರ ಫೋಟೋವನ್ನು ಶೇರ್ ಮಾಡಿದ್ದು, ಇದನ್ನು ನೋಡಿದ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. 

ಉಕ್ರೇನ್‌ನ ಕೀವ್ಸ್ ನಿವಾಸಿ ಅನಸ್ತಾಸಿಯಾ ಪೊಕ್ರೆಶ್ಚುಕ್ (Anastasia Pokreshchuk) ಎಂಬಾಕೆ ತನ್ನ  ಮುಖಕ್ಕೆ ಶಸ್ತ್ರಚಿಕಿತ್ಸೆ (ಪ್ಲಾಸ್ಟಿಕ್ ಸರ್ಜರಿ )ಮಾಡಿಸಿಕೊಂಡಿದ್ದು, ಆ ಮೂಲಕ ವಿಶ್ವದ ಅತ್ಯಂತ ದೊಡ್ಡ ಕೆನ್ನೆ ಹೊಂದಿರುವ ಮಹಿಳೆ ತಾನು ಎಂದು ಹೇಳಿಕೊಂಡಿದ್ದಳು. ಮುಖಕ್ಕೆ ಫೇಸ್‌ಫಿಲ್ಲರ್ ತುಂಬಿಸಿದ ನಂತರ ಆಕೆ ತಾನು ವಿಶ್ವದಲ್ಲೇ ಅತೀ ದೊಡ್ಡ ಕೆನ್ನೆ ಹೊಂದಿರುವುದಾಗಿ ಹೇಳಿಕೊಂಡಿದ್ದಳು. ಆದರೆ ಈಗ ಆಕೆ ತಾನು ಫೇಸ್ ಫಿಲ್ಲರ್‌ ಮಾಡಿಸಿಕೊಳ್ಳುವ ಮೊದಲು ಹೇಗಿದೆ ಎಂಬುದನ್ನು ಫೋಟೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಮೊದಲು ಹಾಗೂ ನಂತರದ ಫೋಟೋ ನೋಡಿದ ಜನ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. 

ಮೂಗನ್ನು ಅಂದಗೊಳಿಸಲು ಹೋಗಿ ಖಿನ್ನತೆಗೆ ಜಾರಿದ್ದ ಪ್ರಿಯಾಂಕಾ ಚೋಪ್ರಾ!

ಈಕೆ ಕೇವಲ ಫೇಸ್‌ ಫಿಲ್ಲರ್ ಮಾಡಿಸಿಕೊಂಡಿದ್ದು, ಮಾತ್ರವಲ್ಲ,  ಆಕೆ ತನ್ನ ತುಟಿಗಳಿಗೂ ಫಿಲ್ಲಿಂಗ್ ಮಾಡಿಸಿದ್ದು, ಕೂದಲಿಗೆ ಪಿಂಕ್ ಬಣ್ಣ ಬಳಿದಿದ್ದಾಳೆ.  ಅಲ್ಲದೇ ತನ್ನ ದೇಹಕ್ಕೂ ಆಕೆ ಹಲವು ಕಾಸ್ಮೆಟಿಕ್‌ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಂಡಿದ್ದು,  ತನ್ನ ಎದೆ (boob) ಹಾಗೂ ದೇಹದ ಹಿಂಭಾಗದ (bum) ಆಕಾರವನ್ನು ಕೂಡ ಆಕೆ ಹೆಚ್ಚಿಸಿಕೊಂಡಿದ್ದಾಳೆ. ಆದರೆ ಹೀಗೆ ಹಲವು ಶಸ್ತ್ರಚಿಕಿತ್ಸೆಗೆ ಒಳಗಾಗುವ ಮೊದಲು ಆಕೆ  ಸಾಮಾನ್ಯಳಾಗಿದ್ದು,  ಗೋಧಿ ಮೈಬಣ್ಣ ಹೊಂದಿದ್ದಳು, ತೆಳ್ಳಗಿನ ಹುಬ್ಬಿನ ಜೊತೆ  ಸಾಮಾನ್ಯವೆನಿಸಿದ ನೈಸರ್ಗಿಕ ಕೆನ್ನೆಗಳನ್ನು ಹೊಂದಿದ್ದಳು. 

ಈಗ ಆಕೆಯ ಶಸ್ತ್ರಚಿಕಿತ್ಸೆಗೆ ಮೊದಲು ಹಾಗೂ ನಂತರದ ಫೋಟೋ ನೋಡಿದ  ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದು, ಅವರು ಏನ್‌ ಹೇಳಿದ್ದಾರೆ ಅನ್ನೋದು ಇಲ್ಲಿದೆ ನೋಡಿ,  ಒಬ್ಬರು, ನಾನು ನಿಮ್ಮ ನೋಟವನ್ನು ಬದಲಿಸಲು ಬಯಸುತ್ತೇನೆ ಏಕೆಂದರೆ ನಾವು ಒಮ್ಮೆ ಮಾತ್ರ ಬಯಸುತ್ತೇವೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ಮತ್ತೊಬ್ಬರು ಮೊದಲಿಗಿಂತ ಈಗ ಚೆನ್ನಾಗಿ ಕಾಣುತ್ತೀರಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಮತ್ತೊಬ್ಬರು ಸರ್ಜರಿಗೂ ಮೊದಲು ಅವರು ಎಷ್ಟು ಚೆಂದದ ಹುಡುಗಿಯಾಗಿ ಕಾಣಿಸುತ್ತಿದ್ದರು.  ಏನನ್ನೂ ಬದಲಿಸಬೇಕಾಗಿರಲಿಲ್ಲ,  ಅವರು ಸುಂದರವಾದ ಮುಖ ಲಕ್ಷಣಗಳನ್ನು ಹೊಂದಿದ್ದರು.  ಆದರೆ ಈಗ ಅವರು ಪ್ಲಾಸ್ಟಿಕ್ ಸರ್ಜರಿಯ (victim of plastic surgerie) ಸಂತ್ರಸ್ತೆಯಂತೆ ಕಾಣಿಸುತ್ತಿದ್ದಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ನೀವು ಈಗಿಗಿಂತ ಮೊದಲೇ ಚೆನ್ನಾಗಿದ್ದೀರಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ನೀವು ಯಾಕೆ ನಿಮ್ಮನ್ನು ಈ ರೀತಿ ಅಂಗವೈಕ್ಯಲ್ಯಕ್ಕೊಳಗಾದವರಂತೆ ಮಾಡಿಸಿಕೊಂಡಿದ್ದೀರಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

BTS Band ಜಿಮಿನ್ ತರ ಕಾಣಲು 12 ಸರ್ಜರಿ ಮಾಡಿಸಿಕೊಂಡ ಕೆನಡಿಯನ್‌ ನಟ ಸಾವು

ಇನ್ನು ತಮ್ಮ ಈ ಸರ್ಜರಿ ಬಗ್ಗೆ ಅನಸ್ತಾಸಿಯಾ ಮಾತನಾಡಿದ್ದು, ಶಸ್ತ್ರಚಿಕಿತ್ಸೆಗೆ ಮೊದಲು ನಾನು ನನ್ನ ಧ್ವನಿ ನನ್ನ ನೋಟ ಸೇರಿ, ವ್ಯಕ್ತಿತ್ವ ಎಲ್ಲದರ ಬಗ್ಗೆ ನಾನು ಬೇಸರಗೊಂಡಿದ್ದೆ. ಇದು ನನಗೆ ನಿಜವಾಗಿಯೂ ಕಷ್ಟದ ಕೆಲಸವಾಗಿತ್ತು. ಆದರೆ ನನ್ನ ತಾಯಿ ಮಾತ್ರ ನನ್ನನ್ನು ನೀನು ಶಸ್ತ್ರಚಿಕಿತ್ಸೆಗಿಂತ ನೈಸರ್ಗಿಕವಾಗಿಯೇ ಚೆನ್ನಾಗಿ ಕಾಣುತ್ತಿದ್ದೀಯಾ ಎಂದಿದ್ದರು. ಆದರೆ ನನ್ನ ಸ್ನೇಹಿತರು ನೀನು ವಿಲಕ್ಷಣವಾಗಿ ಕಾಣುತ್ತಿದ್ದೀಯಾ ಎಂದಿದ್ದರು. ಆದರೆ ಈಗ ಶಸ್ತ್ರಚಿಕಿತ್ಸೆಯ ನಂತರ ನಾನು ಖುಷಿಯಾಗಿದ್ದೇನೆ. ಇದಕ್ಕೂ ಮೊದಲು ನಾನು ಬೂದು ಬಣ್ಣದ ಇಲಿಯಂತೆ (grey mouse) ಕಾಣುತ್ತಿದ್ದೇನೆ ಎಂದು ನನಗೆ ಅನಿಸುತ್ತಿತ್ತು ಎಂದು ಆಕೆ ಹೇಳಿಕೊಂಡಿದ್ದಾರೆ. 

ಕಾಸ್ಮೆಟಿಕ್ ಇಂಜೆಕ್ಷನ್ (injections) ಬಳಿಕ ನನ್ನ ಕೆನ್ನೆಗಳಲ್ಲಿ ಬದಲಾವಣೆ ಆಯ್ತು,  ನನಗೆ ಅವುಗಳ ಮೇಲೆ ಪ್ರೀತಿ ಹೆಚ್ಚಾಯ್ತು,  ಆದರೆ ಇದು ಬೇರೆಯವರಿಗೆ ವಿಲಕ್ಷಣವಾಗಿ ಕಾಣಿಸಬಹುದು. ಆದರೆ ಅದರ ಬಗ್ಗೆ ನಾನು ಚಿಂತಿಸುವುದಿಲ್ಲ ಎಂದು ಆಕೆ ಹೇಳಿಕೊಂಡಿದ್ದಾಳೆ.  

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಟಿಹಾರ್ ಜಂಕ್ಷನ್‌ನಲ್ಲಿ ಮಹಿಳೆಯ ಭಯಾನಕ ಅನುಭವ: 30-40 ಪುರುಷರು ನುಗ್ಗಲು ಯತ್ನ, ಶೌಚಾಲಯದಲ್ಲಿ ಸಿಲುಕಿದ ಮಹಿಳೆ!
ಈಕೆಯ ಮನೆ ಮುಖೇಶ್‌ ಅಂಬಾನಿ ಮನೆಗಿಂತ 62 ಪಟ್ಟು ದೊಡ್ಡದು! ಆದ್ರೂ ಬಸ್‌ನಲ್ಲಿ ಓಡಾಟ!