ಆಫೀಸ್‌ಗೆ ಹೋಗಲ್ಲ ಎಂದು ಅಳ್ತಿದ್ದ ಅಮ್ಮನಿಗೆ ಮಗು ನೀಡಿದ ರಿಫ್ಲೈ ಕೇಳಿದ್ರೆ ನಗ್ದೇ ಇರಲ್ಲ

By Anusha KbFirst Published May 8, 2023, 6:22 PM IST
Highlights

ಇಲ್ಲೊಂದು ಕಡೆ ಪುಟ್ಟ ಮಗುವಿರುವ ತಾಯಿ ತನಗೆ ಕಚೇರಿಗೆ ಹೋಗುವುದಕ್ಕೆ ಇಷ್ಟವಿಲ್ಲವೆಂದು ಮಗುವಿನ ಮುಂದೆ ಅಳುತ್ತಿದ್ದರೆ, ಪುಟ್ಟ ಮಗು ಅಮ್ಮನನ್ನು ಸಮಾಧಾನ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

ಬೆಂಗಳೂರು: ಕೋವಿಡ್ ನಂತರ ಜಾರಿಗೆ ಬಂದ ವರ್ಕ್‌ ಫ್ರಮ್‌ ಹೋಮ್ ಅಥವಾ ಮನೆಯಿಂದಲೇ ಕೆಲಸ ಮಾಡುವ ಕಾರ್ಯವಿಧಾನವು ಕೆಲಸದ ಗತಿಯನ್ನೇ ಇಂದು ಬದಲಿಸಿದೆ. ಅನೇಕರು ತಾವಿದ್ದಲ್ಲಿಂದಲೇ ಕೆಲಸ ಮಾಡುತ್ತಾ ಮನೆ ಹಾಗೂ ಕಚೇರಿಯ ಕೆಲಸವನ್ನು ಚೆನ್ನಾಗಿ ಖುಷಿ ಖುಷಿಯಾಗಿ ನಿಭಾಯಿಸುತ್ತಿದ್ದಾರೆ. ಪುಟ್ಟ ಪುಟ್ಟ ಮಕ್ಕಳಿರುವವರ ಪಾಲಿಗಂತೂ ಅದರಲ್ಲೂ ಮಹಿಳೆಯರಿಗೆ ಈ ವರ್ಕ್‌ ಫ್ರಮ್ ಹೋಮ್ ಹೊಸ ಅವಕಾಶವನ್ನೇ ನೀಡಿದೆ. ಆದರೆ ಕೋವಿಡ್ ಬಹುತೇಕ ಕಡಿಮೆ ಆಗಿದ್ದು, ಬಹುತೇಕ ಕಂಪನಿಗಳು ವರ್ಕ್‌ ಫ್ರಮ್ ಹೋಮ್‌ ಕಾರ್ಯ ವಿಧಾನವನ್ನು ರದ್ದುಗೊಳಿಸಿದ್ದು, ಉದ್ಯೋಗಿಗಳನ್ನು ಕಚೇರಿಗೆ ಕರೆಸಿಕೊಳ್ಳುತ್ತಿದೆ.

ಆದರೆ ಮನೆಯಲ್ಲೇ ಕೆಲಸ ಮಾಡಿ ಆ ವಿಧಾನಕ್ಕೆ ಒಗ್ಗಿಕೊಂಡ ಅನೇಕರಿಗೆ ಅದೇ ಕೆಲಸವನ್ನು ಕಚೇರಿಗೆ ಬಂದು ಮಾಡುವುದಕ್ಕೆ ಇಷ್ಟವಾಗುತ್ತಿಲ್ಲ. ಪುಟ್ಟ ಮಕ್ಕಳಿರುವ ಅನೇಕರು ಮಕ್ಕಳನ್ನು ಬಿಟ್ಟು ಕಚೇರಿಗೆ ಬರುವುದಕ್ಕೆ ಬಹಳ ಸಂಕಟ ಪಡುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಪುಟ್ಟ ಮಗುವಿರುವ ತಾಯಿ ತನಗೆ ಕಚೇರಿಗೆ ಹೋಗುವುದಕ್ಕೆ ಇಷ್ಟವಿಲ್ಲವೆಂದು ಮಗುವಿನ ಮುಂದೆ ಅಳುತ್ತಿದ್ದರೆ, ಪುಟ್ಟ ಮಗು ಅಮ್ಮನನ್ನು ಸಮಾಧಾನ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಅನೇಕರು ಅಮ್ಮನ ಸಮಾಧಾನ ಮಾಡುತ್ತಿರುವ ಮಗುವಿನ ಪ್ರಬುದ್ಧತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು 7 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. 

 
 
 
 
 
 
 
 
 
 
 
 
 
 
 

Latest Videos

A post shared by Yuvansh Bhardwaj (@yuvi_bhardwaj23)

ವರ್ಕ್‌ ಫ್ರಂ ಹೋಂಗೆ ಫಿದಾ, ಉದ್ಯೋಗಿಗಳ ಕಚೇರಿಗೆ ಕರೆತರಲು ಐಟಿ ಕಂಪನಿಗಳ ಹರಸಾಹಸ!

ಯುವಿ ಭಾರದ್ವಾಜ್ ಎಂಬುವವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, 2 ವರ್ಷದ ಮಗು ಅಮ್ಮನನ್ನು ಕಚೇರಿಗೆ ಹೋಗಲು ಪ್ರೇರೆಪಿಸುತ್ತಿದೆ ಎಂದು ಬರೆದುಕೊಂಡಿದ್ದಾರೆ. ಅಮ್ಮ ಮುಜೆ ಆಫೀಸ್ ನಹಿ ಜಾನಾ (ನನಗೆ ಆಫೀಸ್‌ಗೆ ಹೋಗಲು ಇಷ್ಟ ಇಲ್ಲ) ಎಂದರೆ ಮಗು ಅಮ್ಮನ ತಲೆ ಸವರುತ್ತಾ, ಆಫೀಸ್ ಜಾನಾ ಹೀ ಪಡ್ತಾ( ಆಫೀಸಿಗೆ ಹೋಗಲೇ ಬೇಕಾಗುತ್ತದೆ ) ಎಂದು ಹೇಳುತ್ತಿದೆ. ಇದನ್ನು ಕೇಳಿದ ಮಗುವಿನ ತಾಯಿಗೆ ಅಳಬೇಕೋ ನಗಬೇಕೋ ಎಂಬಂತಾಗಿದೆ. 

ವೀಡಿಯೋ ನೋಡಿದ ಅನೇಕರು ಹಲವು ತಮಾಷೆಯ ಕಾಮೆಂಟ್‌ಗಳನ್ನು ಮಾಡಿದ್ದು, ನಿನ್ನೆ ಮಗು ಶಾಲೆಗೆ ಹೋಗಲ್ಲ ಎಂದಿದ್ದ, ಆಗ ಅಮ್ಮ ಮಗೂ ಶಾಲೆಗೆ ಹೋಗಲೇಬೇಕು ಎಂದಿದ್ದರು, ಈಗ ಮಗುವಿನ ಸರದಿ, ಮಗು ಈಗ ಅಮ್ಮನಿಗೆ ಅದನ್ನೇ ಹೇಳುತ್ತಿದೆ ಎಂದು ಒಬ್ಬರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.  ಮತ್ತೊಬ್ಬರು ಈ ಮಗು ನೀಡುವಂತಹ ಭಾವನಾತ್ಮಕ ಬೆಂಬಲ ನನಗೂ ಬೇಕು ಎಂದು ಕಾಮೆಂಟ್ ಮಾಡಿದ್ದಾರೆ. 

Work From Home: ಕಂಪನಿಗೆ ಲಾಭ ನೀಡ್ತಿರೋದು ಯಾವುದು ಗೊತ್ತಾ?

ಇನ್ನೊಬ್ಬರು ಆಫೀಸ್ ಹೋಗಿಲ್ಲ ಎಂದರೆ ನನ್ನ ಶಾಲೆಯ ಫೀಸ್ ಹೇಗೆ ಕಟ್ಟುವೇ ಹೋಗು ಹೋಗು ಆಫೀಸ್‌ಗೆ ಹೋಗು ಎಂದು ಮಗು ಹೇಳುತ್ತಿರುವಂತೆ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಹೋ ಭವಿಷ್ಯದ ಹೆಚ್‌ ಆರ್‌ನ ಜನನವಾಗಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮಗು ಶಾಲೆಗೆ ಕಳುಹಿಸುವ ಅಮ್ಮನ ಮೇಲೆ ರೀವೆಂಜ್ ತೆಗೆದುಕೊಂಡಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ವರ್ಕ್‌ ಫ್ರಮ್‌ ಹೋಮ್‌ಗೆ ಒಗ್ಗಿಕೊಂಡ ಅನೇಕರ ಪಾಲಿನ ನಿಜಾನುಭವವಾಗಿದೆ ಎಂಬುದಂತೂ ಸುಳ್ಳಲ್ಲ. 

 

click me!