ಭಾರತದ ಹಳ್ಳಿಯೊಂದರಲ್ಲಿ ಪಿಂಕ್ ಇ ಆಟೋ ಚಾಲಕರಾಗಿ ಕೆಲಸ ಮಾಡುವ 18 ವರ್ಷದ ಆಟೋ ಚಾಲಕಿಯೊಬ್ಬರು ಲಂಡನ್‌ನ ಪ್ರತಿಷ್ಠಿತ ಮಹಿಳಾ ಸಬಲೀಕರಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಲಂಡನ್: ಭಾರತದ ಹಳ್ಳಿಯೊಂದರಲ್ಲಿ ಪಿಂಕ್ ಇ ಆಟೋ ಚಾಲಕರಾಗಿ ಕೆಲಸ ಮಾಡುವ 18 ವರ್ಷದ ಆಟೋ ಚಾಲಕಿಯೊಬ್ಬರು ಲಂಡನ್‌ನ ಪ್ರತಿಷ್ಠಿತ ಮಹಿಳಾ ಸಬಲೀಕರಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಲಂಡನ್‌ನಲ್ಲಿ ಪ್ರಶಸ್ತಿ ಸ್ವೀಕರಿಸಿದ ಅವರು ಬಳಿಕ ಬ್ರಿಟನ್ ರಾಜ ಕುಟುಂಬದ ಅರಮನೆ ಬಕಿಂಗ್‌ಹ್ಯಾಮ್ ಪ್ಯಾಲೇಸ್‌ನಲ್ಲಿ ಕಿಂಗ್ ಚಾರ್ಲ್ಸ್ III ಅವರನ್ನು ಭೇಟಿಯಾಗಿದ್ದಾರೆ. ಮೂಲತಃ ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಹಳ್ಳಿಯವರಾದ ಆರತಿ ಎಂಬುವವರೇ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾದ ಭಾರತೀಯ ಆಟೋ ಚಾಲಕಿಯಾಗಿದ್ದಾರೆ.
ವಿಶ್ವಪ್ರಸಿದ್ಧ ಮಾನವ ಹಕ್ಕುಗಳ ನ್ಯಾಯವಾದಿ ಅಮಲ್ ಕ್ಲೂನಿ ಅವರ ಸ್ಮರಣಾರ್ಥ ಸ್ಥಾಪಿಸಲಾಗಿರುವ ಈ ಮಹಿಳಾ ಸಬಲೀಕರಣ ಪ್ರಶಸ್ತಿಯನ್ನು ಲಂಡನ್‌ನಲ್ಲಿ ನಡೆದ ಪ್ರಿನ್ಸ್ ಟ್ರಸ್ಟ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಆರತಿ ಸ್ವೀಕರಿಸಿದ್ದು, ಬಳಿಕ ಬ್ರಿಟನ್ ರಾಜನ ಜೊತೆ ಕೆಲ ಸಮಯ ಕಳೆಯುವ ಅವಕಾಶ ಅವರಿಗೆ ಸಿಕ್ಕಿದೆ. ಸರ್ಕಾರದ ಪಿಂಕ್ ಇ-ರಿಕ್ಷಾ ಚಾಲನೆ ಮಾಡುವ ಮೂಲಕ ಇತರ ಯುವತಿಯರಿಗೆ ಸ್ಫೂರ್ತಿ ನೀಡಿದ್ದಕ್ಕಾಗಿ ಆರತಿ ಅವರನ್ನು ಗೌರವಿಸಲಾಗಿದೆ. ಸಮಾಜದಲ್ಲಿ ಬದಲಾವಣೆ ತರುವ ಗುರಿ ಹೊಂದಿರುವ ಪಿಂಕ್ ಇ ರಿಕ್ಷಾವೂ ಮಹಿಳೆಯರಿಗೆ ಸುರಕ್ಷಿತ ಸಾರಿಗೆಯನ್ನು ಒದಗಿಸುತ್ತದೆ.
ಅಕೌಂಟಲ್ಲಿ ಕೇವಲ 500 ರೂ. ಇದ್ರೂ ಒಂದೇ ವರ್ಷದಲ್ಲಿ 11 ಲಕ್ಷ ಸಾಲ ತೀರಿಸಿದ ದಂಪತಿ!
ನನ್ನಂತೆ ಸವಾಲುಗಳನ್ನು ಎದುರಿಸುವ ಇತರ ಹೆಣ್ಣುಮಕ್ಕಳಿಗೆ ಸ್ಪೂರ್ತಿಯಾಗುವುದಕ್ಕೆ ನಾನು ಹೆಮ್ಮೆಪಡುತ್ತೇನೆ. ಈ ಹೊಸತನವೂ ನನಗೆ ಜಗತ್ತನ್ನು ವಿಭಿನ್ನವಾಗಿ ನೋಡಲು ಅವಕಾಶ ಮಾಡಿಕೊಟ್ಟಿದೆ. ಈಗ, ನಾನು ನನ್ನ ಕನಸುಗಳನ್ನು ಮಾತ್ರವಲ್ಲದೆ ನನ್ನ ಮಗಳ ಕನಸುಗಳನ್ನೂ ಪೂರೈಸಲು ಶಕ್ತಳಾಗಿದ್ದೇನೆ ಎಂದು ಐದು ವರ್ಷದ ಮಗಳನ್ನು ಹೊಂದಿರುವ ಆರತಿ ಅವರು ಹೇಳಿದ್ದಾರೆ. ಜೊತೆಗೆ ಮೊದಲ ಬಾರಿ ಲಂಡನ್‌ಗೆ ಭೇಟಿ ನೀಡಿದ ಅವರು ಒಂದು ಜೊತೆ ಶೂ ಹಾಗೂ ಕೇಕ್‌ಗಳನ್ನು ಮಗಳಿಗಾಗಿ ಖರೀದಿಸಿದ್ದಾರೆ.
ಇದನ್ನು ನಂಬಲಾಗುತ್ತಿಲ್ಲ, ರಾಜನನ್ನು ಭೇಟಿ ಮಾಡಿದೆ ಅವರು ನನ್ನ ಜೊತೆಗೆ ಚೆನ್ನಾಗಿ ಮಾತನಾಡಿದರು. ಒಳ್ಳೆ ಮನುಷ್ಯ, ನಾನು ನನ್ನ ಇ-ರಿಕ್ಷಾ ಚಾಲನೆಯನ್ನು ಎಷ್ಟು ಇಷ್ಟಪಡುತ್ತೇನೆ ಎಂದು ಮಾತನಾಡುವ ವೇಳೆ ಅವರು ತುಂಬಾ ಗಮನ ಇರಿಸಿ ಕೇಳಿಸಿಕೊಳ್ಳುತ್ತಿದ್ದರು. ಇ ರಿಕ್ಷಾ ಡಿಸೇಲ್ ಪೆಟ್ರೋಲ್‌ನಂತೆ ಪರಿಸರ ಮಾಲಿನ್ಯ ಮಾಡುವುದಿಲ್ಲ, ಇ ರಿಕ್ಷಾಗೆ ನಾನು ಮನೆಯಲ್ಲಿ ದಿನವೂ ರಾತ್ರಿ ಚಾರ್ಜ್ ಮಾಡುತ್ತೇನೆ ಎಂದು ಅವರು ಮಾಹಿತಿ ನೀಡಿದರು. ಕಿಂಗ್ ಚಾರ್ಲ್ಸ್ ಅವರು ಪ್ರಿನ್ಸ್ ಆಫ್ ವೇಲ್ಸ್ ಆಗಿದ್ದಾಗ ಈ ಪ್ರಶಸ್ತಿಯನ್ನು ಸ್ಥಾಪಿಸಿದರು. ಈ ಪ್ರಿನ್ಸ್ ಟ್ರಸ್ಟ್ ಇಂಟರ್‌ನ್ಯಾಶನಲ್ ಈಗ ಕಿಂಗ್ಸ್ ಟ್ರಸ್ಟ್ ಇಂಟರ್‌ನ್ಯಾಶನಲ್ ಆಗಿ ರೂಪಾಂತರಗೊಂಡಿದೆ. ಅದು ಉದ್ಯೋಗ, ಶಿಕ್ಷಣ ಮತ್ತು ಉದ್ಯಮ ಕಾರ್ಯಕ್ರಮಗಳ ಮೂಲಕ 20 ದೇಶಗಳಲ್ಲಿ ಯುವಕರನ್ನು ಬೆಂಬಲಿಸುವ ಕೆಲಸವನ್ನು ಮುಂದುವರೆಸಿದೆ.
ದೇಶದ ಚಾಣಾಕ್ಷ ಮಹಿಳಾ ಡಿಟೆಕ್ಟಿವ್ ಕೊಲೆಗಾರನ ಮನೆಯಲ್ಲಿ 6ತಿಂಗಳು ಕೆಲಸದಾಳು, 80ಸಾವಿರ ಪ್ರಕರಣ ಬೇಧಿಸಿದ ನಾರಿಶಕ್ತಿ