ಎಚ್‌ಐವಿ ಪಾಸಿಟಿವ್‌ ಅಂತ ಗೊತ್ತಾದ್ರೂ 200 ಜನರ ಜೊತೆ ಮಲಗಿದ ಮಹಿಳೆ!

By Roopa Hegde  |  First Published May 21, 2024, 4:47 PM IST

HIV Infected ಜನರಿಂದ ದೂರವಿರೋದು ಸುರಕ್ಷಿತ. ಒಬ್ಬರಿಂದ ಒಬ್ಬರಿಗೆ ದೈಹಿಕವಾಗಿ ಹರಡುವ ರೋಗ ಇದು. ಈ ವಿಷ್ಯ ಗೊತ್ತಿದ್ರೂ ಲೈಂಗಿಕ ಕಾರ್ಯಕರ್ತೆಯೊಬ್ಬಳು ಯಡವಟ್ಟು ಮಾಡಿದ್ದಾಳೆ. ಒಂದಲ್ಲ ಎರಡಲ್ಲ 200 ಜನರ ಜೊತೆ ಸಂಪರ್ಕ ಬೆಳೆಸಿದ್ದಾಳೆ. 
 


ಸಂಗಾತಿ ಜೊತೆ ಲೈಂಗಿಕ ಸಂಪರ್ಕ ಬೆಳೆಸುವ ಸಂದರ್ಭದಲ್ಲೇ ಎಚ್ಚರಿಕೆ ವಹಿಸಬೇಕು. ಇನ್ನು ಸೆಕ್ಸ್ ವರ್ಕರ್ಸ್ (Sex Workers) ಬಳಿ ಹೋಗುವಾಗ ಲೈಂಗಿಕ ರೋಗಕ್ಕೆ ತುತ್ತಾಗದಂತೆ ಕಾಂಡೋಮ್ (Condom) ಕಡ್ಡಾಯವಾಗಿ ಬಳಸಬೇಕು ಎಂದು ತಜ್ಞರು ಸಲಹೆ ನೀಡ್ತಾನೆ ಇರ್ತಾರೆ. ಆದ್ರೆ ಅನೇಕರು ಈ ವಿಷ್ಯವನ್ನು ನಿರ್ಲಕ್ಷ್ಯಿಸಿ, ಭಯಾನಕ ರೋಗವನ್ನು ಮೈಮೇಲೆ ಎಳೆದುಕೊಳ್ತಾರೆ. ಅಮೆರಿಕದಲ್ಲಿ ಈಗ 200ಕ್ಕೂ ಹೆಚ್ಚು ಮಂದಿ ಆತಂಕದಲ್ಲಿ ಜೀವನ ನಡೆಸುವ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆಲ್ಲ ಕಾರಣವಾಗಿದ್ದು ಒಬ್ಬ ಸೆಕ್ಸ್ ವರ್ಕರ್. ಲೈಂಗಿಕ ಕಾರ್ಯಕರ್ತೆಗೆ HIV ರೋಗ ಇರೋದು ದೃಢಪಟ್ಟಿದೆ. ಆದ್ರೂ ಆಕೆ ಮುನ್ನೆಚ್ಚರಿಕೆ ತೆಗೆದುಕೊಳ್ಳಲಿಲ್ಲ. 200ಕ್ಕೂ ಹೆಚ್ಚು ಪುರುಷರ ಜೊತೆ ಸಂಬಂಧ ಬೆಳೆಸಿದ್ದು, ಈಗ ಅವರೆಲ್ಲ ಉಸಿರು ಬಿಗಿಹಿಡಿದು ಜೀವನ ನಡೆಸುವಂತಾಗಿದೆ.

ನ್ಯೂಯಾರ್ಕ್ ಪೋಸ್ಟ್‌ ವರದಿ ಪ್ರಕಾರ, ಅಮೆರಿಕ (America) ದ ಓಹಿಯೋದಲ್ಲಿ ಘಟನೆ ನಡೆದಿದೆ. HIV Positive ಆದ ಮಹಿಳೆ ಹೆಸರು ಲಿಂಡಾ ಲೆಕ್ಸೆಸೆ. 30 ವರ್ಷದ ಲಿಂಡಾ ಜನವರಿ 1, 2022 ರಿಂದ ಎರಡು ವರ್ಷಗಳ ಕಾಲ ಹಲವಾರು ರಾಜ್ಯಗಳ ಕನಿಷ್ಠ 200 ಜನರೊಂದಿಗೆ ಲೈಂಗಿಕ ಸಂಬಂಧವನ್ನು (Sexual Relationship) ಹೊಂದಿದ್ದಳು.  ಆದ್ರೂ ಆಕೆ ಈ ಬಗ್ಗೆ ನಿರ್ಲಕ್ಷ್ಯವಹಿಸಿದ್ದಳು. ಎರಡು ನೂರಕ್ಕೂ ಹೆಚ್ಚು ಮಂದಿ ಜೊತೆ ದೈಹಿಕ (Physical) ಸಂಪರ್ಕ ಬೆಳೆಸಿದ್ದಳು. ಈ ಸಂಬಂಧ ಸ್ಥಳೀಯ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. 

Latest Videos

ಬಾಲಿವುಡ್‌ಗೆ ಬಂತು ಬಂಗಾರದ ಬೊಂಬೆ; ಕೋಮಲ್ ಝಾ ಗ್ಲಾಮರ್‌ಗೆ ಗಂಡ್‌ಹೈಕ್ಳ ಗುಂಡಿಗೆ ಗಡಗಡ!

ಲಿಂಡಾ ಲೆಕ್ಸೆಸ್ ಬಂಧನದ ನಂತ್ರ ರಾಜ್ಯ ಅಧಿಕಾರಿಗಳು ಎಚ್ಚರಿಸಿದ್ದಾರೆ. ಮಹಿಳೆಯೊಂದಿಗೆ ಸಂಪರ್ಕಕ್ಕೆ ಬಂದ ಜನರಿಗೆ ಪರೀಕ್ಷೆಗೆ ಒಳಗಾಗುವಂತೆ ಮನವಿ ಮಾಡಿದ್ದಾರೆ. ಮಹಿಳೆಯೊಂದಿಗೆ ಸಂಪರ್ಕಕ್ಕೆ ಬಂದ ಎಲ್ಲರೂ ಮುಂದೆ ಬಂದು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಅಧಿಕಾರಿಗಳು ಒತ್ತಾಯಿಸಿದ್ದಾರೆ.

ಫ್ಲೋರಿಡಾದಿಂದ ಇಡೀ ಪೂರ್ವ ಕರಾವಳಿಯವರೆಗಿನ ಜನರು ಲಿಂಡಾ ಲೆಕ್ಸೆಸ್ ಸಂಪರ್ಕಕ್ಕೆ ಬಂದಿರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಯಾವುದೇ ಕಾರಣಕ್ಕೂ ಭಯಭೀತರಾಗ್ಬೇಡಿ, ಧೈರ್ಯವಾಗಿ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಎಚ್ ಐವಿ ಪಾಸಿಟಿವ್ ಎಂಬುದು ತಿಳಿದ ನಂತ್ರವೂ ಆಕೆ ಸಂಪರ್ಕ ಬೆಳೆಸಿದ್ದು ಅಪರಾಧ. ಆಕೆ ಜೊತೆ ಲೈಂಗಿಕ ಸಂಪರ್ಕ ಬೆಳೆಸಿದ ಪುರುಷರ ಜೊತೆ ದೈಹಿಕ ಸಂಪರ್ಕಕ್ಕೆ ಬಂದ ಇತರರಿಗೂ ಈ ಖಾಯಿಲೆ ಹರಡುವ ಸಾಧ್ಯತೆ ಇದೆ.

ಎಚ್ ಐವಿಗೆ ಯಾವುದೇ ಸೂಕ್ತ ಚಿಕಿತ್ಸೆ ಇಲ್ಲ. ಇದನ್ನು ಭಯಾನಕ ರೋಗ ಎಂದೇ ಪರಿಗಣಿಸಲಾಗುತ್ತದೆ. ದೈಹಿಕ ಸಂಪರ್ಕ ಮಾತ್ರವಲ್ಲದೆ ಒಬ್ಬರಿಗೆ ಬಳಸಿದ ಸೂಜಿಯನ್ನೇ ಇನ್ನೊಬ್ಬರಿಗೆ ಬಳಸಿದ್ರೂ ಈ ಖಾಯಿಲೆ ಹರಡುತ್ತದೆ. ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್, ದೇಹದ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ದಾಳಿ ಮಾಡುವ ಒಂದು ರೀತಿಯ ವೈರಸ್ ಆಗಿದೆ.  ಎಚ್ಐವಿ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸಿದಾಗ, ಯಾವುದೇ ಸೋಂಕಿನ ವಿರುದ್ಧ ಹೋರಾಡಲು ದೇಹಕ್ಕೆ ಕಷ್ಟವಾಗುತ್ತದೆ. ಎಚ್ಐವಿ ಸೋಂಕಿನ ಮುಂದುವರಿದ ಹಂತಗಳಲ್ಲಿ, ಇದು ಸ್ವಾಧೀನಪಡಿಸಿಕೊಂಡ ಇಮ್ಯುನೊ ಡಿಫಿಷಿಯನ್ಸಿ ಸಿಂಡ್ರೋಮ್ (ಏಡ್ಸ್) ಗೆ ಕಾರಣವಾಗಬಹುದು. 

ಸಂಗಾತಿಗೆ ಗರ್ಭ ನಿರೋಧಕ ಮಾತ್ರೆ ನೀಡುವ ಮೊದಲು ಈ ವಿಷ್ಯ ತಿಳ್ಕೊಳಿ

ರಕ್ತ (Blood), ವೀರ್ಯ (Sperm), ಯೋನಿ ಡಿಸ್ಚಾರ್ಜ್ (Vaginal Discharge) ಮತ್ತು ಎದೆ ಹಾಲು (Breast Milk) ಸೇರಿದಂತೆ ಕೆಲವು ದೇಹದ ದ್ರವಗಳ ಮೂಲಕ HIV  ಹರಡಬಹುದು. ಅಂದ್ರೆ ಅಸುರಕ್ಷಿತ ಲೈಂಗಿಕತೆ, ಸೂಜಿ ಅಥವಾ ಸಿರಿಂಜ್ ಮರುಬಳಕೆ, ಸೋಂಕಿತ ತಾಯಿಯಿಂದ ಮಗುವಿಗೆ, ರಕ್ತ ವರ್ಗಾವಣೆ ಅಥವಾ ಅಂಗಾಂಗ ಕಸಿ, ಎಚ್ ಐವಿ ಸೋಂಕಿತ ಜನರ ರಕ್ತ ಅಥವಾ ಇತರ ದ್ರವಗಳೊಂದಿಗೆ ಸಂಪರ್ಕಕ್ಕೆ ಬರುವ ಜನರು ಈ ಖಾಯಿಲೆಗೆ ಒಳಗಾಗ್ತಾರೆ. 

click me!