ಮಹಿಳೆಯರು ಅಚ್ಚುಕಟ್ಟಿನ ಜೀವನ ನಡೆಸ್ತಾರೆ ಎಂಬುದಕ್ಕೆ ಈ ಗ್ರಾಮ ಉತ್ತಮ ನಿದರ್ಶನ. ಈ ಗ್ರಾಮದಲ್ಲಿ ಮಹಿಳೆಗೆ ಆರ್ಥಿಕ ಸ್ವಾತಂತ್ರ್ಯ ಸಿಕ್ಕಿದೆ. ಹಾಗಾಗಿಯೇ ಗ್ರಾಮದ ಪ್ರತಿಯೊಬ್ಬರೂ ನೆಮ್ಮದಿ ಜೀವನ ನಡೆಸ್ತಿದ್ದಾರೆ.
ನಮ್ಮ ದೇಶ ಎಷ್ಟೇ ಅಭಿವೃದ್ಧಿ ಹೊಂದುತ್ತಿದ್ದರೂ ಅನೇಕ ವಿಷ್ಯದಲ್ಲಿ ಇನ್ನೂ ಹಿಂದುಳಿದಿದೆ. ಲಿಂಗ ಅಸಮಾನತೆ ಈಗ್ಲೂ ನಮ್ಮಲ್ಲಿದೆ. ಮನೆ, ಆಸ್ತಿ ಸೇರಿದಂತೆ ಹಣಕಾಸಿನ ವಿಷ್ಯಗಳಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳುವವರು ಪುರುಷರೇ ಆಗಿರ್ತಾರೆ. ಮನೆ, ಆಸ್ತಿಯನ್ನು ಬಹುತೇಕ ಪುರುಷರು ತಮ್ಮ ಹೆಸರಿಗೆ ಮಾಡಿಕೊಂಡಿರ್ತಾರೆ. ಇದ್ರಿಂದ ಮನೆಯಲ್ಲಿರುವ ಮಹಿಳೆಯರಿಗೆ ಭದ್ರತೆ ಇರೋದಿಲ್ಲ. ಕೆಲ ಪುರುಷರು, ಪತ್ನಿ, ಕುಟುಂಬಸ್ಥರಿಗೆ ತಿಳಿಯದೆ ಮನೆ ಮಾರಾಟ ಮಾಡಿ ಇಡೀ ಕುಟುಂಬವನ್ನೇ ಬೀದಿಗೆ ತಂದ ಘಟನೆಗಳಿವೆ. ಈಗ ನಾವು ಹೇಳ ಹೊರಟಿರುವ ಈ ಪುಟ್ಟ ಹಳ್ಳಿಯಲ್ಲಿ ಪುರುಷರಿಗೆ ಇಂಥ ನಿರ್ಧಾರ ತೆಗೆದುಕೊಳ್ಳುವ ಯಾವುದೇ ಅಧಿಕಾರ ಇಲ್ಲ. ಮಹಿಳೆಯರು ಸುರಕ್ಷಿತ ಹಾಗೂ ಸ್ವಾತಂತ್ರ ಜೀವನ ನಡೆಸುತ್ತಿದ್ದಾರೆ. ಎಲ್ಲ ಮನೆ ಮಹಿಳೆಯರ ಹೆಸರಿನಲ್ಲಿರೋದೇ ಇದಕ್ಕೆ ಕಾರಣ.
ಮಹಿಳೆ ಹೆಸರಿನಲ್ಲಿದೆ ಮನೆ : ಮಹಾರಾಷ್ಟ್ರ (Maharashtra) ದ ಔರಂಗಾಬಾದ್ ಜಿಲ್ಲೆಯ ಬಕಾಪುರ್ ನಲ್ಲಿ ಲಿಂಗ ಸಮಾನತೆಯನ್ನು ಉತ್ತೇಜಿಸಲು ಶ್ಲಾಘನೀಯ ಹೆಜ್ಜೆಯನ್ನು ಇಡಲಾಗಿದೆ. ಇಲ್ಲಿನ ಮಹಿಳೆಯರು ಸುರಕ್ಷತೆಯಿಂದ ಜೀವನ ನಡೆಸ್ತಿದ್ದಾರೆ. ಕಡಿಮೆ ಜನಸಂಖ್ಯೆ ಇದ್ರೂ ಈ ಹಳ್ಳಿಯ ಕೆಲ ನಿಯಮ ವಿಶ್ವದಾದ್ಯಂತ ಸುದ್ದಿಯಲ್ಲಿದೆ.
ಎಚ್‌ಐವಿ ಪಾಸಿಟಿವ್ ಅಂತ ಗೊತ್ತಾದ್ರೂ 200 ಜನರ ಜೊತೆ ಮಲಗಿದ ಮಹಿಳೆ!
ಬಕಾಪುರ್ ನಲ್ಲಿ ಸುಮಾರು 2,000 ಜನಸಂಖ್ಯೆ ಇದೆ. ಈ ಗ್ರಾಮದಲ್ಲಿ ಪ್ರತಿ ಮನೆ ಮಹಿಳೆಯರ ಹೆಸರಿನಲ್ಲಿದೆ. 2008ರಲ್ಲಿ ಗ್ರಾಮ ಪಂಚಾಯಿತಿ (Gram Panchayat) ಮಾಡಿದ ವಿಶೇಷ ನಿಬಂಧನೆಯಿಂದ ಇದು ಸಾಧ್ಯವಾಗಿದೆ.
ಪ್ರತಿ ಮನೆಯ ಮುಂದಿರುವ ನಾಮಫಲಕದಲ್ಲಿ ನೀವು ಮಹಿಳೆಯರ ಹೆಸರನ್ನು ನೋಡ್ಬಹುದು. ಮಾಲೀಕ ಅಥವಾ ಸಹ ಮಾಲೀಕನ ಹೆಸರು ಮಹಿಳೆಯದ್ದಾಗಿರುತ್ತದೆ. ಇದು ಅಲ್ಲಿನ ಮಹಿಳೆಯರಿಗೆ ಹೆಮ್ಮೆಯ ವಿಷ್ಯ. ನಾಮಫಲಕದಲ್ಲಿ ಪುರುಷನ ಹೆಸರಿರುವ ಒಂದೇ ಒಂದು ಮನೆ (House) ಯನ್ನು ನೀವು ನೋಡಲು ಸಾಧ್ಯವಿಲ್ಲ.
ಸುದಮ್ರಾವ್ ಪಾಲಸ್ಕರ್ ಅವರು ಗ್ರಾಮದ ಸರಪಂಚಾಗಿದ್ದಾಗ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮೊದಲ ಕೆಲವು ಅನುಭವಗಳ ಆಧಾರದ ಮೇಲೆ, ಪ್ರತಿ ಕುಟುಂಬದ ಮಹಿಳೆಯನ್ನು ತನ್ನ ಮನೆಯ ಮಾಲೀಕರನ್ನಾಗಿ ಮಾಡಬೇಕು ಎಂದು ನಿರ್ಧರಿಸಲಾಯಿತು ಎಂದು ಪಾಲಸ್ಕರ್ ಹೇಳಿದ್ದಾರೆ. ಗ್ರಾಮ ಪಂಚಾಯತಿ ಸದಸ್ಯರ ಮುಂದೆ ಈ ಯೋಜನೆಯಿಟ್ಟಾಗ ಯಾರೊಬ್ಬರೂ ಇದನ್ನು ಅಲ್ಲಗಳೆಯಲಿಲ್ಲ ಎಂದು ಪಾಲಸ್ಕರ್ ಹೇಳಿದ್ದಾರೆ. ಬಾಕಾಪುರದ ಸರಪಂಚ್ ಗ್ರಾಮ ಮುಖ್ಯಸ್ಥೆ ಕವಿತಾ ಸಾಳ್ವೆ, ಈ ನಿರ್ಧಾರವು ನನ್ನ ಗ್ರಾಮದ ಮಹಿಳೆಯರಿಗೆ ಮನೆಯ ವಿಷಯಗಳಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅವಕಾಶ ಮಾಡಿಕೊಟ್ಟಿದೆ ಎನ್ನುತ್ತಾರೆ.
ಸಾಳ್ವೆ ಕಳೆದ 21 ವರ್ಷಗಳಿಂದ ಬಾಕಾಪುರದಲ್ಲಿ ವಾಸಿಸುತ್ತಿದ್ದಾರೆ. ಮೊದಲು ಮನೆಯ ಮಹಿಳೆಯ ಒಪ್ಪಿಗೆ ಇಲ್ಲದೇ ಗಂಡಸರು ಮನೆ ಮಾರುತ್ತಿದ್ದರು. ಇದರಿಂದ ಕುಟುಂಬಗಳಿಗೆ ಆರ್ಥಿಕ ನಷ್ಟ ಉಂಟಾಗುತ್ತಿತ್ತು. ಮದ್ಯಪಾನ ಮಾಡುತ್ತಿದ್ದ ಪುರುಷರು, ಮನೆ ಮಾರಾಟ ಮಾಡ್ತಾರೆ ಎಂಬ ಭಯದಲ್ಲಿಯೇ ಮಹಿಳೆಯರು ಬದುಕುತ್ತಿದ್ದರು. ಈಗ ಮಹಿಳೆಯನ್ನು ಮನೆಯ ಮಾಲೀಕರನ್ನಾಗಿ ಮಾಡಿರುವುದು ಇಲ್ಲಿನ ಮಹಿಳೆಯರಲ್ಲಿ ಸಬಲೀಕರಣ ಮತ್ತು ಭದ್ರತೆಯ ಭಾವನೆ ಮೂಡಿಸಿದೆ. ಅವರು ಮನೆಯ ಆರ್ಥಿಕ ಸಮಸ್ಯೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಆರ್ಥಿಕ ಸ್ಥಿತಿ ಹಾಗೂ ಮನೆಯ ವಿಷ್ಯದಲ್ಲಿ ನಿರ್ಧಾರ ತೆಗೆದುಕೊಳ್ಳುವ ಹಕ್ಕನ್ನು ಮಹಿಳೆಯರು ಪಡೆದಿದ್ದಾರೆ.
ತಾಜ್ ಮಹಲ್ ಖ್ಯಾತಿ ಕುಂದಿಸುತ್ತಿದೆಯೇ ಆಗ್ರಾದ ಹೊಸ ಅಮೃತಶಿಲೆಯ ಆಕರ್ಷಣೆ ಸೋಮಿ ಭಾಗ್?
ಈ ಗ್ರಾಮದಲ್ಲಿ ಕೆಲವೊಂದು ಕಟ್ಟುನಿಟ್ಟಿನ ನಿರ್ಧಾರ ಕೈಗೊಳ್ಳಲಾಗಿದೆ. ಈ ಗ್ರಾಮದಲ್ಲಿ ಧೂಮಪಾನ, ತಂಬಾಕು ಸೇವನೆ ಮತ್ತು ಮದ್ಯಪಾನವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ವಿಶೇಷವೆಂದ್ರೆ ಈ ಗ್ರಾಮದಲ್ಲಿ ಕಳೆದ 15 ವರ್ಷಗಳಿಂದ ಯಾವುದೇ ಕ್ರೈಂ ನಡೆದಿಲ್ಲ. ಎಲ್ಲರೂ ಒಂದಾಗಿ ಮಹಿಳೆಯರು ಕೆಲಸ ಮಾಡುವ ಕಾರಣ ಈ ಗ್ರಾಮ ವೇಗವಾಗಿ ಬೆಳವಣಿಗೆ ಹೊಂದುತ್ತಿದೆ.