ನೀರಲ್ಲಿ ಮುಳುಗಿ 18 ನಿಮಿಷವಾದ್ರೂ ಜೀವಂತವಾಗಿದ್ದ ಮಹಿಳೆ..!

Published : Apr 14, 2023, 03:26 PM ISTUpdated : Apr 14, 2023, 03:27 PM IST
ನೀರಲ್ಲಿ ಮುಳುಗಿ 18 ನಿಮಿಷವಾದ್ರೂ ಜೀವಂತವಾಗಿದ್ದ ಮಹಿಳೆ..!

ಸಾರಾಂಶ

ಮಹಿಳೆಯೊಬ್ಬರು ಇರುವ ಜೀಪೊಂದು ಕೆರೆಯಲ್ಲಿ ಮುಳುಗಿತ್ತು. ಪೊಲೀಸರು ತಕ್ಷಣ ಅಲರ್ಟ್‌ ಆದರೂ ಸ್ಥಳಕ್ಕೆ ಬರಲು 18 ನಿಮಿಷ ಬೇಕಿತ್ತು. ಎಲ್ಲರೂ ಆಕೆ ಬದುಕಿರೋ ಛಾನ್ಸೇ ಇಲ್ಲ ಅಂದ್ಕೊಂಡಿದ್ರು. ಆದ್ರೆ ಎಲ್ಲರಿಗೂ ಅಚ್ಚರಿಯಾಗುವಂತೆ ಆ ಮಹಿಳೆ ಬದುಕಿ ಬಂದಿದ್ದಾಳೆ.

ಕೆಲವರ ಜೀವ ಬಹಳ ಗಟ್ಟಿ. ಯಮನೇ ನಿರ್ಧಾರ ಮಾಡಿ ಇವರನ್ನು ಕರೆದುಕೊಂಡು ಹೋಗಬೇಕು ಅಂತ ಡಿಸೈಡ್ ಮಾಡಿದ್ರೂ ಕೆಲವರು ಬದುಕುಳಿದು ಬಿಡ್ತಾರೆ. ಅಂತದ್ದೇ ಒಂದು ಘಟನೆ ಅಮೆರಿಕದ ಟೆಕ್ಸಾಸ್‌ನಲ್ಲಿ ನಡೆದಿದೆ. ಕಳೆದ ಶುಕ್ರವಾರ ಟೆಕ್ಸಾಸ್ ಬಳಿ ಇರೋ ಲೇಕ್ ಓ ಪೈನ್ಸ್ ಅನ್ನೋ ಕೆರೆಯಲ್ಲಿ ವಾಹನವೊಂದು ಮುಳುಗಿದೆ ಅಂಥ ಸುದ್ದಿ ಬರುತ್ತೆ. ಸುತ್ತಮುತ್ತಲ ತುರ್ತು ಕಾರ್ಯಾಚರಣೆ ತಂಡ, ಪೊಲೀಸರು ಅಲರ್ಟ್ ಆಗ್ತಾರೆ. ಜೀಪನ್ನು ಕೆರೆಯಿಂದ ಹೊರತೆಗೆಯೋಕೆ ಎಲ್ಲಾ ಸಿದ್ದತೆಗಳೂ ಆಗುತ್ತೆ... 

ಕೆರೆಯ ದಡದಿಂದ 40 ಮೀಟರ್ ದೂರದವರೆಗೆ ಜೀಪ್ ಹೋಗಿದ್ರಿಂದ ಜೀಪ್ ಹೊರತೆಗೆಯೋದು ಸುಲಭವಾಗಿರಲಿಲ್ಲ. ಅಲ್ಲಿಂದ ಹತ್ತಿರದಿಂದ ಟೋಯಿಂಗ್ ಟ್ರಕ್ ಬರೋಕೆ 18 ನಿಮಿಷ ತೆಗೆದುಕೊಳ್ಳುತ್ತೆ. ಜೀಪಲ್ಲಿ ಇರೋರು ತಪ್ಪಿಸಿಕೊಂಡಿದ್ರೆ ಓಕೆ, ಅಪ್ಪಿ ತಪ್ಪಿ ಜೀಪಲ್ಲೇ ಇದ್ರೆ ಬದುಕುಳಿದಿರೋಕೇ ಚಾನ್ಸೇ ಇಲಲ್ಲ ಅನ್ನೋ ಕಾರಣಕ್ಕೆ ಕಾರ್ಯಾಚರಣೆ (Operation) ಹಂತಹಂತವಾಗಿ ಶುರು ಮಾಡ್ತಾರೆ. ಮೀನುಗಾರರ ಬೋಟ್ ಸಹಾಯ ಪಡೆದು ಜೀಪ್‌ವರೆಗೂ ಹಗ್ಗ ಮತ್ತು ಹುಕ್ ಕೊಂಡೊಯ್ತು ಜೀಪಿನ ಹಿಂಬಾಗಕ್ಕೆ ಹಗ್ಗವನ್ನು ಹುಕ್ ಮಾಡ್ತಾರೆ.. ಇತ್ತ ಟೋಯಿಂಗ್ ಟ್ರಕ್ ನಿಧಾನವಾಗಿ ಜೀಪನ್ನು ದಡಕ್ಕೆ ಎಳೆಯುವ ಕಾರ್ಯ ಶುರು ಮಾಡುತ್ತೆ.

ಅಬ್ಬಬ್ಬಾ..ಈಕೆ 40ನೇ ವಯಸ್ಸಿಗೆ 44 ಮಕ್ಕಳನ್ನು ಹೆತ್ತ ಮಹಾತಾಯಿ!

ಜೀಪ್ ನಿಧಾನವಾಗಿ ಕೆರೆಯಿಂದ ಮೇಲೆ ಬರುತ್ತೆ. ಯಾವಾಗ ಡ್ರೈವಿಂಗ್ ಸೀಟ್ ಕೆರೆಯ ಒಳಗಿಂದ ಹೊರಬಂದಾಗ ಅಲ್ಲಿದ್ದವರು ಒಂದು ಕ್ಷಣ ದಿಗ್ಬ್ರಾಂತರಾದರು. ಯಾಕಂದ್ರೆ ಜೀಪಿನ ಮುಂದಿನ ಸೀಟಲ್ಲಿ ಮಹಿಳೆ (Women)ಯೊಬ್ಬಳು ಕಾಣಿಸಿಕೊಂಡಿದ್ದಳು. ಅದಕ್ಕಿಂತ ವಿಶೇಷ ಅಂದ್ರೆ, ಅವಳು ಜೀವಂತವಾಗಿದ್ದಳು. ಈಗ ಕಾರ್ಯಾಚರಣೆಯ ವೇಗ ಜಾಸ್ತಿ ಆಯ್ತು. ಈಗಾಗ್ಲೇ ದಡಕ್ಕೆ ಬಂದ ಮೀನುಗಾರರ ಬೋಟ್ ಮತ್ತೆ ಜೀಪಿನ ಕಡೆಗೆ ಧಾವಿಸಿತ್ತು. ಜೀಪಿನ ಡೋರ್ ತೆಗೆದು ಆ ಮಹಿಳೆಯನ್ನು ದೋಣಿಗೆ ಶಿಫ್ಟ್ ಮಾಡಿ, ದಡದ ತನಕ ತಂದು ಪೊಲೀಸ್ ಜೀಪಿನಲ್ಲೇ ಬೆಚ್ಚಗೆ ಇರಿಸಲಾಯ್ತು. ತಕ್ಷಣವೇ ಆಂಬುಲೆನ್ಸ್ ತರಿಸಿ ಹತ್ತಿರದ ಆಸ್ಪತ್ರೆಗೂ (Hospital) ದಾಖಲಿಸಿದ್ರು. ಈಗ ಆ ಮಹಿಳೆ ಯಾವ ಅಪಾಯವಿಲ್ಲದೇ ಆರಾಮಾಗಿದ್ದಾರೆ. ಅಪಘಾತದ ಆಘಾತದಿಂದ ಚೇತರಿಸಿಕೊಳ್ತಿದ್ದಾರೆ.

ಇಲ್ಲಿ ಆಶ್ಚರ್ಯವಾಗೋ ಹಲವು ವಿಷಯಗಳಿವೆ. ಆಕ್ಸಿಡೆಂಟ್ ಆದ ಜೀಪ್ 40 ಮೀಟರ್‌ವರೆಗೆ ಕೆರೆಯಲ್ಲಿ ಸಾಗಿದ್ದು ಹೇಗೆ..? ಅದ್ರಲ್ಲೂ 18 ನಿಮಿಷಗಳ ನೀರಲ್ಲಿ ಮುಳುಗಿದ್ರೂ ಸಹ ಆ ಮಹಿಳೆ ಜೀವಂತವಾಗಿ ಇದ್ದದ್ದು ಹೇಗೆ? ಯಾವುದೇ ವ್ಯಕ್ತಿ ನೀರಿನಲ್ಲಿ ಮುಳುಗಿದ ಮೇಲೆ ಆಮ್ಲಜನಕ ಕೊರತೆ ಆದ್ರೆ ಹೆಚ್ಚೆಂದರೆ 2 ರಿಂದ ಮೂರು ನಿಮಿಷಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ಮೇಲೆ ಪ್ರಾಣ ಪಕ್ಷಿ ಹಾರಿ ಹೋಗುತ್ತೆ.. ಆದ್ರೆ ಇಲ್ಲಿ ಈ ಮಹಿಳೆಯ ಜೀವ ಗಟ್ಟಿಯಾಗಿತ್ತು. ಮುಳುಗಿ 18-19 ನಿಮಿಷಗಳ ನಂತರವೂ ಆ ಮಹಿಳೆ ಜೀವಂತವಾಗಿ ಎದ್ದು ಬಂದಿದ್ದು ಪವಾಡವೇ ಸರಿ.

ಉತ್ತರಕನ್ನಡದ ಹಾಲಕ್ಕಿ ಮಹಿಳೆಯ ಸಮಾಜಮುಖಿ ಕಾರ್ಯಕ್ಕೆ ಮನಸೋತ ಉದ್ಯಮಿ ಆನಂದ್ ಮಹೀಂದ್ರಾ

ಯಾರು ಈ ಮಹಿಳೆ ಅಂತ ಪತ್ತೆ ಹಚ್ಚೋಕೆ ಮಾಧ್ಯಮದವರು ಎಷ್ಟೇ ಪ್ರಯತ್ನ ಪಟ್ಟರೂ ಆಕೆಯ ಗುರುತನ್ನು ಪೊಲೀಸರು ಬಹಿರಂಗಗೊಳಿಸಿಲ್ಲ. ಕಾರಣ ಈ ಮಹಿಳೆ ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ಲಂತೆ. ಮಹಿಳೆ ಕಾಣೆಯಾದ ವಿಚಾರದಲ್ಲಿ ಟೆಕ್ಸಾಸ್ ಪೊಲೀಸ್ ಠಾಣೆಯೊಂದರಲ್ಲಿ ದೂರು (Complaint) ಸಹ ದಾಖಲಾಗಿತ್ತಂತೆ. ಹಾಗಾಗಿ ಪೊಲೀಸರು ಇದರ ಹಿಂದೆ ಬೇರೆಯದ್ದೇ ಕಾರಣಗಳಿರಬಹುದು ಅಂತ ಆಕೆಯ ಗುರುತು ಬಿಟ್ಟುಕೊಟ್ಟಿಲ್ಲ.

ಅರೆರೆ..ನೀರಿನ ಮೇಲೆ ನಡೆದಳಾ ನಾರಿ..ದೇವಿಯೆಂದು ಕೊಂಡಾಡಿದ ಜನ, ಅಸಲಿಯತ್ತೇನು?

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ನಾವ್ಯಾರಿಗೂ ಕಮ್ಮಿ ಇಲ್ಲ ಬ್ರೋ... ಆಹಾ ಭಾರತೀಯ ನಾರಿ ಕುಡಿದು ರಾಪಿಡೋ ಏರಿ ಬಿದ್ದಳು ಕೆಳಗೆ ಜಾರಿ: ವೀಡಿಯೋ