ವೈದ್ಯೋ ನಾರಾಯಣೋ ಹರಿ ಅಂತಾರೆ. ಎಂಥಾ ಕಷ್ಟಕರ ಸಂದರ್ಭದಲ್ಲೂ ಜೀವವನ್ನು ಉಳಿಸಲು ಯತ್ನಿಸುವ ವೈದ್ಯರನ್ನು ದೇವರಿಗೆ ಸಮಾನವಾಗಿ ಕಾಣಲಾಗುತ್ತದೆ. ಆದರೆ ಇದೆಲ್ಲವನ್ನೂ ಮೀರಿ ಕೆಲವೊಮ್ಮೆ ಪವಾಡಗಳು ನಡೆದು ಬಿಡುತ್ತವೆ. ಬ್ರಿಟನ್‌ನಲ್ಲಿಯೂ ಇಂಥಹದ್ದೇ ಘಟನೆಯೊಂದು ನಡ್ದಿದೆ.
ಮನುಷ್ಯನ ಜೀವ ಅತ್ಯಮೂಲ್ಯವಾದುದು. ಆದರೆ ಕಾಯಿಲೆಗಳು, ಅಪಘಾತಗಳು ಸುಲಭವಾಗಿ ಒಬ್ಬನ ಜೀವವನ್ನು ಕಿತ್ತುಕೊಂಡು ಬಿಡುತ್ತವೆ. ಇಂಥಾ ಸಂದರ್ಭದಲ್ಲಿ ವೈದ್ಯರು ವ್ಯಕ್ತಿಯ ಜೀವವನ್ನು ಉಳಿಸಲು ಶತಾಯತಾಯ ಪ್ರಯತ್ನಿಸುತ್ತಾರೆ. ಆದರೆ ಕೆಲವೊಮ್ಮೆ ಇಂಥಾ ಪ್ರಯತ್ನಗಳು ಸಹ ವಿಫಲವಾಗುತ್ತವೆ. ವೈದ್ಯರು ಸಹ ಅಸಹಾಯಕತೆಯಿಂದ ಕೈ ಚೆಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. ರೋಗಿಗೇ ಇನ್ನು ಕಿವಿಯೇ ಕೇಳುವುದಿಲ್ಲ, ಮಾತನಾಡಲು ಸಾಧ್ಯವಿಲ್ಲ, ಎದ್ದು ಓಡಾಡಲು ಸಾಧ್ಯವಿಲ್ಲ ಎಂದು ಹೇಳಿ ಬಿಡುತ್ತಾರೆ. ಆದರೆ ಇದನ್ನು ಮೀರಿಯೂ ಕೆಲವೊಮ್ಮೆ ಪವಾಡಗಳು ನಡೆಯೋದಿದೆ. ಅಂಥಾ ಘಟನೆಯೊಂದು ಬ್ರಿಟನ್‌ನಲ್ಲಿ ನಡೆದಿದೆ.
ಬ್ರಿಟನ್‌ನ ಮಹಿಳೆಯೊಬ್ಬರು 4ನೇ ಹಂತದ ಕ್ಯಾನ್ಸರ್ ಬಗ್ಗೆ ಮಹಿಳೆಗೆ ತಿಳಿದಾಗ ಆಕೆ ವೈದ್ಯರ ಬಳಿ ಹೋಗಿದ್ದಳು. ಶಸ್ತ್ರಚಿಕಿತ್ಸೆ ನಡೆಸುವಾಗ ವೈದ್ಯರು 90ರಷ್ಟು ನಾಲಿಗೆಯನ್ನು ಕತ್ತರಿಸಿದರು. ಮಾತ್ರವಲ್ಲ ಆಕೆ ಮತ್ತೆ ಮಾತನಾಡಲು ಸಾಧ್ಯವಾಗುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದರು. ಆದರೆ ಈಗ ವ್ಯಕ್ತಿ ಮಾತನಾಡಲು ಸಮರ್ಥರಾಗಿದ್ದಾರೆ.
ಅಬ್ಬಬ್ಬಾ..ಎಷ್ಟುದ್ದದ ನಾಲಿಗೆ, ಬ್ರಷ್‌ನಂತೆ ಬಳಸ್ಕೊಂಡು ಪೇಂಟಿಂಗ್ ಮಾಡ್ತಾನೆ!
ಕ್ಯಾನ್ಸರ್ ಕಾರಣದಿಂದ ಮಹಿಳೆಯ ನಾಲಿಗೆ ಕತ್ತರಿಸಿದ ವೈದ್ಯರು
37 ವರ್ಷದ ಗೆಮ್ಮಾ ವೀಕ್ಸ್‌ನ ನಾಲಿಗೆಯಲ್ಲಿ ಬಿಳಿ ತೇಪೆಗಳು ಕಾಣಿಸಿಕೊಂಡಿದ್ದವು. ಮಹಿಳೆ ಕಳೆದ ಆರು ವರ್ಷಗಳಿಂದ ಈ ಸಮಸ್ಯೆಯನ್ನು ಎದುರಿಸುತ್ತಿದ್ದರು. ಫೆಬ್ರವರಿ 2023 ರಲ್ಲಿ ನಾಲಿಗೆಯ ಮೇಲೆ ದೊಡ್ಡ ರಂಧ್ರ ಕಾಣಿಸಿಕೊಂಡಿತು. ಇದು ತುಂಬಾ ನೋವುಂಟು ಮಾಡುತ್ತಿದ್ದ ಕಾರಣ ಆಕೆಗೆ ಆಹಾರವನ್ನು ತಿನ್ನಲು ಸಾಧ್ಯವಾಗುತ್ತಿರಲ್ಲಿಲ್ಲ. ಈಕೆ ಅದನ್ನು ವೈದ್ಯರ ಬಳಿ ತೋರಿಸಿ ಪರಿಶೀಲನೆ ನಡೆಸಿದಾಗ ಕ್ಯಾನ್ಸರ್ ನಾಲ್ಕನೇ ಘಟ್ಟದಲ್ಲಿರುವುದು ತಿಳಿದುಬಂತು. ಕ್ಯಾನ್ಸರ್ ಬಾಯಿ ಮತ್ತು ಕುತ್ತಿಗೆಗೆ ಸಹ ಹರಡಿತ್ತು. ಆ ನಂತರ ಅವರಿಗೆ ಆಪರೇಷನ್ ಮಾಡಲು ವೈದ್ಯರ ತಂಡ ಸಿದ್ಧತೆ ಮಾಡಿಕೊಂಡಿತ್ತು.
ವೈದ್ಯರು ಗೆಮ್ಮಾ ಅವರ ನಾಲಿಗೆಯನ್ನು ಕತ್ತರಿಸಬೇಕಾಗುತ್ತದೆ ಎಂದು ಹೇಳಿದರು. ಇದರಿಂದ ಆಕೆಗೆ ಮಾತನಾಡಲು ಸಾಧ್ಯವಾಗುವುದಿಲ್ಲ ಎಂದು ಸಹ ತಿಳಿಸಿದರು. ರೋಗಿಯ ಅನುಮೋದನೆಯ ನಂತರ, ಆಕೆ 90 ಪ್ರತಿಶತ ನಾಲಿಗೆಯನ್ನು ತೆಗೆದುಹಾಕಲಾಯಿತು. ಇದರ ನಂತರ, ಮಹಿಳೆಯ ಕೈಯ ಅಂಗಾಂಶ ಕಸಿ ಬಳಸಿ, ಅವಳ ಎರಡನೇ ನಾಲಿಗೆಯನ್ನು ತಯಾರಿಸಲಾಯಿತು ಮತ್ತು ಸರ್ಜರಿಯ ಮೂಲಕ ಜೋಡಿಸಲಾಯಿತು. ಹೀಗಿದ್ದೂ ಆಕೆಗೆ ಮಾತನಾಡಲು ಸಾಧ್ಯವಿಲ್ಲವೆಂದೇ ವೈದ್ಯರು ತಿಳಿಸಿದರು. ಆದರೆ ನಂತರದ ದಿನಗಳಲ್ಲಿ ವೈದ್ಯರ ಭವಿಷ್ಯ ಸುಳ್ಳಾಯಿತು.
Ballari : ದೇವರು ಕೇಳಿದನೆಂದು ನಾಲಿಗೆಯನ್ನೇ ಕೊಯ್ದುಕೊಟ್ಟ ಭೂಪ
ಶಸ್ತ್ರಚಿಕಿತ್ಸೆಯ ಕೆಲವು ದಿನಗಳ ನಂತರ ವೈದ್ಯರು ಮಹಿಳೆಯನ್ನು ಭೇಟಿ ಮಾಡಿದಾಗ ಆಕೆ ಮಾತನಾಡುವಲ್ಲಿ ಯಶಸ್ವಿಯಾದರು. ಆದರೆ ಶಸ್ತ್ರಚಿಕಿತ್ಸೆಯ ನಂತರ ಕೆಲವು ದಿನಗಳ ನಂತರ, ನನ್ನ ಮಗಳು ನನ್ನನ್ನು ಭೇಟಿ ಮಾಡಲು ಬಂದಾಗ, ನಾನು ಹಲೋ ಎಂದು ಹೇಳಿದೆ ಎಂದು ಮಹಿಳೆ ತಿಳಿಸಿದ್ದಾರೆ. ಆದರೆ 'ಧ್ವನಿ ನನ್ನಂತೆ ಇರಲ್ಲಿಲ್ಲ. ತುಂಬಾ ಬದಲಾವಣೆಗೊಂಡಿತ್ತು. ಹೀಗಾಗಿ ನಾನು ಅಂದಿನಿಂದ ಹೆಚ್ಚು ಮಾತನಾಡಿಸಲು ಯತ್ನಿಸುತ್ತೇನೆ' ಎಂದು ಮಹಿಳೆ ತಿಳಿಸಿದ್ದಾರೆ.
ಅನ್ಯಗ್ರಹ ಜೀವಿಯಂತೆ ಕಾಣಿಸಲು ತೋರು ಬೆರಳ ಕತ್ತರಿಸಿಕೊಂಡ ಭೂಪ!
ಇಲ್ಲೊಬ್ಬ ಮನುಷ್ಯನಿದ್ದಾನೆ. ಇವನು ವಿಶ್ವದ ಅತ್ಯಧಿಕ ಪ್ರಮಾಣದಲ್ಲಿ “ಮಾಡಿಫೈಡ್ ಮ್ಯಾನ್’ ಎನಿಸಿಕೊಂಡಿದ್ದಾರೆ. ಇವನಷ್ಟು ದೇಹವನ್ನು ಮಾರ್ಪಡಿಸಿಕೊಂಡವರು ಬೇರೆ ಯಾರೂ ಇಲ್ಲ. ದೇಹದ ಮೇಲಿರುವ ಬಹುತೇಕ ಎಲ್ಲ ಅಂಗಾಂಗಳನ್ನೂ ಒಂದಲ್ಲ ಒಂದು ರೀತಿಯಲ್ಲಿ ಮಾರ್ಪಡಿಸಿಕೊಂಡಿದ್ದಾನೆ. ಇವನನ್ನು ನೋಡಿದರೆ ಏನನ್ನುತ್ತೀರೋ ಗೊತ್ತಿಲ್ಲ, ಆದರೆ ವಿಚಿತ್ರ ಅನಿಸುವುದಂತೂ ಖರೆ. ಇತ್ತೀಚಿಗೆ ಇವನ ಹೊಸ ಸಾಹಸ ಎಂದರೆ, ಕೈ ತೋರುಬೆರಳನ್ನು ಕತ್ತರಿಸಿಕೊಂಡಿರುವುದು. ಅದಕ್ಕೆ ಕಾರಣ ಕೇಳಿದರೆ ತಲೆತಿರುಗಿ ಬರಬಹುದು! ಏಲಿಯನ್ ಗಳ ದೆವ್ವದ ಹಾಗೆ ಕಾಣಲು ಈತ ತನ್ನ ತೋರು ಬೆರಳನ್ನು ಕತ್ತರಿಸಿಕೊಂಡು ಬೆರಳುಗಳ ಸಂಖ್ಯೆಯನ್ನು ನಾಲ್ಕಕ್ಕೆ ಇಳಿಸಿಕೊಂಡಿದ್ದಾನೆ.