
ಈ ಪ್ರಪಂಚದಲ್ಲಿ ನೋವಿನ ಅನುಭವ ಆಗದ ಮನುಷ್ಯರೇ ಇಲ್ಲ. ಒಂದು ಸಣ್ಣ ಮುಳ್ಳು ಚುಚ್ಚಿದರೂ ನೋವಿನಿಂದ ನಾವು ಚೀರುತ್ತೇವೆ. ದವಡೆ ಮೂರಿದರೆ ಕೈಕಾಲು ಮೂರಿದರೆ ನೋವಿನ ಯಾತನೆಯನ್ನು ಹೇಳಿಕೊಳ್ಳಲಾಗದು, ಇನ್ನು ಹೆಣ್ಣಿನ ಹೆರಿಗೆ ನೋವನ್ನು ಪದಗಳಲ್ಲಿ ಬಣ್ಣಿಸಲಾಗದು. ಅಷ್ಟೊಂದು ನೋವನ್ನುಭವಿಸಿ ಜನ್ಮ ನೀಡುವ ಕಾರಣಕ್ಕೆ ಹೆಣ್ಣಿಗೆ ಹೆರಿಗೆ ಎಂಬುದು ಪುನರ್ಜನ್ಮ ಎಂದೇ ಹೇಳಲಾಗುತ್ತದೆ. ಆದರೆ ಇಲ್ಲೊಬ್ಬರು ಮಹಿಳೆಗೆ ಏನೇ ಆದರೂ ನೋವಾಗುತ್ತಿಲ್ಲವಂತೆ, ಹೊಡೆದರು ಬಡೆದರು ಹೆತ್ತರು ದವಡೆ ಮುರಿದರು ತನಗೆ ನೋವಿನ ಅನುಭವ ಆಗುತ್ತಿಲ್ಲ ಎಂದು ಆಕೆ ಹೇಳಿಕೊಂಡಿದ್ದಾರೆ. ಹೀಗಾಗಿ ತಲೆಕೆಡಿಸಿಕೊಂಡ ವೈದ್ಯರು ಈ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಿದ್ದು, ಅಪರೂಪದ ಅನುವಂಶಿಕ ರೂಪಾಂತರದಿಂದಾಗಿ ಹೀಗೆ ಆಗಿದೆ ಎಂಬುದನ್ನು ಅವರು ಕಂಡು ಕೊಂಡಿದ್ದಾರೆ
ಮಾನಸಿಕ ಬಾಧೆ ಬೇರೆ ದೈಹಿಕ ನೋವು ಬೇರೆ ಮಾನಸಿಕ ನೋವಿಗೆ ನಾವೇ ಪರಿಹಾರ ಕಂಡುಕೊಳ್ಳಬೇಕು. ಆದರೆ ದೈಹಿಕ ಬಾಧೆಗೆ ವೈದ್ಯರು ಪರಿಹಾರ ನೀಡುತ್ತಾರೆ. ಆದರೆ ಇಲ್ಲೊಬ್ಬರು ಮಹಿಳೆ ನೋವೆಂಬ ಬಾಧೆಯೇ ಇಲ್ಲವಾಗಿದೆ. ಹೀಗಾಗಿ ಅವರು ಜೀವನಪೂರ್ತಿ ಅಕ್ಷರಶಃ ನೋವಿಲ್ಲದೇ ಕಳೆಯಬಹುದಾಗಿದೆ. ಇದರಿಂದ ವೈದ್ಯರಿಗೆ ಅಚ್ಚರಿ ಆಗಿದ್ದು, ಅವರು ಇದೇಕೆ ಹೀಗೆ ನೋವಿಲ್ಲದ ಬದುಕಿದೆಯೇ ಎಂದು ಮಹಿಳೆಯ ಬಗ್ಗೆ ಸಂಶೋಧನೆಯಲ್ಲಿ ತೊಡಗಿದ್ದಾರೆ.
ಈಗಿನ ಹುಡುಗೀರೇಕೆ ಬೇಗ ಋತುಮತಿಯಾಗ್ತಾರೆ? ಇದು ಆರೋಗ್ಯವೋ, ಅನಾರೋಗ್ಯವೋ?
ಜೋ ಕ್ಯಾಮರೂನ್ (Jo Cameron) ಎಂಬ ಮಹಿಳೆಯ ನೋವಿನ ಅನುಭವ ಆಗದ ಮಹಿಳೆ. ಅವರಿಗೆ ವೈದ್ಯರು ಗಂಭೀರವಾದ ಅಪರೇಷನ್ ಮಾಡಿದ್ದು, ಈ ವೇಳೆ ಆಕೆಗೆ ನೋವು ನಿವಾರಕದ ಅಗತ್ಯವಿಲ್ಲ ಎಂಬುದನ್ನು ಕಂಡುಕೊಂಡರು. ಈಕೆಯ ಬಗ್ಗೆ ಸಂಶೋಧನೆಗೆ ಇಳಿದ ಲಂಡನ್‌ನ ಯುನಿವರ್ಸಿಟಿ ಕಾಲೇಜು ಹೇಗೆ ಈ ಅನುವಶಿಂಕ ರೂಪಾಂತರವೂ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಪತ್ತೆ ಮಾಡಿದರು. ಈ ಅಧ್ಯಯನವೂ ಹೊಸ ಚಿಕಿತ್ಸೆಗಳ ಅಭಿವೃದ್ಧಿಗೆ ಕಾರಣವಾಗಬಹುದು ಎಂದು ಅವರು ಹೇಳಿದ್ದಾರೆ.
ಲೋಚ್ ನೆಸ್ ನಿವಾಸಿಯಾಗಿರುವ ಕ್ಯಾಮರೂನ್ ಅವರಿಗೀಗಾ, 75 ವರ್ಷ. ಅಡುಗೆ ಮಾಡುವ ವೇಳೆ ಅವರಿಗೆ ಹಲವು ಬಾರಿ ಸುಟ್ಟು ಗಾಯಗಳಾಗಿವೆ. ಆದರೆ ಯಾವುದೇ ನೋವಾಗಿಲ್ಲ. ಅವರಿಗ್ಯಾವತ್ತೂ ಭಯವಾಗಿಲ್ಲ. FAAH-OUT ಜೀನ್ ಎಂದು ಕರೆಯಲ್ಪಡುವ ಜೆನೆಟಿಕ್ ರೂಪಾಂತರಗಳನ್ನು ಹೊಂದಿರುವ ವಿಶ್ವದ ಕೆಲವೇ ಜನರಲ್ಲಿಕ್ಯಾಮರೂನ್ ಒಬ್ಬರು ಎಂದು ವೈದ್ಯಲೋಕ ಭಾವಿಸಲಾಗಿದೆ. ಲಂಡನ್ ಯುನಿವರ್ಸಿಟಿಯ ವಿಜ್ಞಾನಿಗಳು 2019ರಲ್ಲಿ ಮೊದಲ ಬಾರಿಗೆ ಕ್ಯಾಮರೂನ್ ಅವರ ರೂಪಾಂತರವನ್ನು ಗುರುತಿಸಿದ್ದರು.
ಮಹಿಳೆಯರಲ್ಲಿ ಹೆಚ್ಚುತ್ತಿದೆ ಬೊಕ್ಕ ತಲೆ, ಕಾರಣಗಳು ಬಿಡಿ ನೂರಾರು!
ಇತ್ತೀಚಿನ ವಿಶ್ಲೇಷಣೆಯ ನಂತರ, ವಿಜ್ಞಾನಿಗಳು (scientists) ರೂಪಾಂತರವು ಅದೇ ಜೈವಿಕ ಕಾರ್ಯವಿಧಾನಗಳನ್ನು ಹೊಂದಿದ್ದು, ಗಾಯಗಳು ಹೆಚ್ಚು ವೇಗವಾಗಿ ಗುಣವಾಗಲು ಅವಕಾಶ ನೀಡುತ್ತದೆ ಎಂದು ಭಾವಿಸಲಾಗಿದೆ. ಸಂಶೋಧಕರ ಸಂಶೋಧನೆಗಳನ್ನು ಬ್ರೈನ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ಯುಸಿಎಲ್ ಮೆಡಿಸಿನ್‌ನ ಪ್ರೊಫೆಸರ್ ಜೇಮ್ಸ್ ಕಾಕ್ಸ್ ಹೇಳುವಂತೆ ಆಣ್ವಿಕ ಮಟ್ಟದಲ್ಲಿ ಏನಾಗುತ್ತಿದೆ ಎಂಬುದನ್ನು ನಿಖರವಾಗಿ ಅರ್ಥಮಾಡಿಕೊಳ್ಳುವ ಮೂಲಕ, ನಾವು ಒಳಗೊಂಡಿರುವ ಜೀವಶಾಸ್ತ್ರವನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸಬಹುದು ಮತ್ತು ಇದು ಔಷಧಿ ಆವಿಷ್ಕಾರದ ಸಾಧ್ಯತೆಗಳನ್ನು ತೆರೆಯಲಿದೆ. ಅದು ಒಂದು ದಿನ ರೋಗಿಗಳಿಗೆ ದೂರಗಾಮಿ ಧನಾತ್ಮಕ ಪರಿಣಾಮಗಳನ್ನು ಬೀರುತ್ತದೆ ಎಂದು ಭಾವಿಸಲಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.