
ಜಾರ್ಖಂಡ್: ತಾಯಿಯಾಗುವುದು ಮಹಿಳೆಯ ಜೀವನದಲ್ಲಿ ಮರೆಯಲಾಗದ ಅನುಭವಗಳಲ್ಲಿ ಒಂದಾಗಿದೆ. ಮಹಿಳೆಯ ಗರ್ಭದಲ್ಲಿ ಹುಟ್ಟುವ ಭ್ರೂಣವೊಂದು ತಿಂಗಳುಗಳ ಕಾಲ ಬೆಳೆದು ಪುಟ್ಟ ಜೀವವಾಗಿ ಹೊರಹೊಮ್ಮುವುದು ಅಚ್ಚರಿಯ ವಿಚಾರವೇ ಸರಿ. ಗರ್ಭಾವಸ್ಥೆಯಲ್ಲೂ ಹಲವು ಅಚ್ಚರಿಯ ಘಟನೆಗಳು ಸಂಭವಿಸುತ್ತವೆ. ಕೆಲವೊಬ್ಬರು ಅವಳಿ, ತ್ರಿವಳಿ ಮಕ್ಕಳಿಗೆ ಜನ್ಮ ನೀಡುತ್ತಾರೆ. ಇನ್ನೂ ಅಪರೂಪದಲ್ಲಿ ಕೆಲವರು ನಾಲ್ವರು, ಐವರು ಮಕ್ಕಳಿಗೆ ಜನ್ಮ ನೀಡಿರುವುದೂ ಇದೆ. ಹೀಗೆಯೇ ಜಾರ್ಖಂಡ್‌ನಲ್ಲೊಬ್ಬ ಗರ್ಭಿಣಿ ಐದು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಜಾರ್ಖಂಡ್‌ನ ರಾಂಚಿಯ RIMS (ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆ) ನಲ್ಲಿ ಮಹಿಳೆಯೊಬ್ಬರಿಗೆ ಐದು ಅಕಾಲಿಕ ಹೆಣ್ಣು ಶಿಶುಗಳು ಜನಿಸಿದವು. ತಾಯಿ (Mother) ಮತ್ತು ಶಿಶುಗಳು (Infants) ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ನಮ್ಮ ಆಸ್ಪತ್ರೆಯಲ್ಲಿ (Hospital) ಕ್ವಿಂಟಪ್ಲೆಟ್‌ಗಳು ಜನಿಸುತ್ತಿರುವುದು ಇದೇ ಮೊದಲು ಎಂದು ಆಡಳಿತ ಮಂಡಳಿ ಹೇಳಿದೆ. ಶಿಶುಗಳ ತೂಕವು ಸಾಮಾನ್ಯಕ್ಕಿಂತ ಕಡಿಮೆ ಇರುವುದರಿಂದ NICU (ನವಜಾತ ಶಿಶುಗಳ ತೀವ್ರ ನಿಗಾ ಘಟಕ) ದಲ್ಲಿ ಇರಿಸಲಾಗಿದೆ.
14 ವರ್ಷದ ಮಗಳಿಗೆ ಮರುಜನ್ಮ ನೀಡಿದ ಮಹಾತಾಯಿ
ಗರ್ಭಿಣಿಯಾದ ಏಳು ತಿಂಗಳೊಳಗೆ ಐದು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ
ಜಾರ್ಖಂಡ್‌ನ ಛತ್ರದ ಇತ್ಖೋರಿ ಬ್ಲಾಕ್‌ನ ನಿವಾಸಿ ಅನಿತಾ ಎಂದು ಗುರುತಿಸಲಾದ ಮಹಿಳೆ ಸೋಮವಾರ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (RIMS) ಯಶಸ್ವಿಯಾಗಿ ಐದು ಹೆಣ್ಣು ಶಿಶುಗಳಿಗೆ ಜನ್ಮ ನೀಡಿದ್ದಾರೆ. ದಂಪತಿಗೆ (Couple) ಮದುವೆಯಾಗಿ ಹಲವು ವರ್ಷಗಳಾಗಿದ್ದರೂ ಮಕ್ಕಳಾಗಿರಲ್ಲಿಲ್ಲ. ಅನಿತಾ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಹೀಗಾಗಿ ಗರ್ಭ ಧರಿಸಲು ತೊಂದರೆಯಾಗಿತ್ತು. ಹೀಗಾಗಿ ಆಕೆ ನಿರಂತರವಾಗಿ ಚಿಕಿತ್ಸೆ (Treatment) ಪಡೆಯುತ್ತಿದ್ದರು. ಇದಾದ ಬಳಿಕ ಆಕೆ ಗರ್ಭಿಣಿಯಾಗಿದ್ದರು. ಸೋಮವಾರದಂದು ತೀವ್ರ ಹೊಟ್ಟೆನೋವು (Stomach pain) ಕಾಣಿಸಿಕೊಂಡ ಹಿನ್ನಲೆ ಕುಟುಂಬಸ್ಥರು ಆಕೆಯನ್ನು ರಿಮ್ಸ್ ಆಸ್ಪತ್ರೆಗೆ ಕರೆತಂದಿದ್ದರು. ಇಲ್ಲಿ ಅನಿತಾ ಐವರು ಮಕ್ಕಳಿಗೆ ಜನ್ಮ ನೀಡಿದರು.
ಐದು ಶಿಶುಗಳ ತಂದೆ ಪ್ರಕಾಶ್ ಸೌ ಮಾತನಾಡಿ, 'ಅನಿತಾ ಈ ಹಿಂದೆ ಚತ್ರಾ ಜಿಲ್ಲೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೆಲವು ದೈಹಿಕ ಸಮಸ್ಯೆಗಳಿಂದಾಗಿ ಆಕೆಯನ್ನು ಹೆರಿಗೆಗಾಗಿ RIMS ಗೆ ದಾಖಲಿಸಲಾಗಿತ್ತು. ವೈದ್ಯರ ಮೇಲ್ವಿಚಾರಣೆಯಲ್ಲಿ ಸಾಮಾನ್ಯ ಹೆರಿಗೆ ಮಾಡಲಾಯಿತು. ರಿಮ್ಸ್‌ನಲ್ಲಿ ನಿಯೋಜನೆಗೊಂಡಿರುವ ಡಾ.ಶಶಿಬಾಲಾ ಸಿಂಗ್ ಅವರ ಮೇಲ್ವಿಚಾರಣೆಯಲ್ಲಿ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದರು' ಎಂದು ತಿಳಿಸಿದ್ದಾರೆ.
ರಿಮ್ಸ್‌ನ ಅಧಿಕಾರಿಯೊಬ್ಬರು ಮಾತನಾಡಿ, 'ಮಹಿಳೆ ಗರ್ಭಿಣಿಯಾದ ಏಳು ತಿಂಗಳೊಳಗೆ ಎಲ್ಲಾ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ತಾಯಿ-ಮಗು ಆರೋಗ್ಯವಾಗಿದ್ದಾರೆ. ಹೀಗಾಗಿ ಶಿಶುಗಳು ಕಡಿಮೆ ತೂಕವನ್ನು ಹೊಂದಿರುತ್ತವೆ. ಪರಿಣಾಮವಾಗಿ, ಕ್ವಿಂಟಪ್ಲೆಟ್‌ಗಳನ್ನು ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ (ಎನ್ಐಸಿಯು) ಇರಿಸಲಾಗುತ್ತಿದೆ' ಎಂದರು.
ವಯಸ್ಸು 23, ಮಕ್ಕಳು 11,105 ಮಕ್ಕಳು ಬೇಕಂತೆ ಈ ಮಹಾತಾಯಿಗೆ!
40ನೇ ವಯಸ್ಸಿಗೆ 44 ಮಕ್ಕಳನ್ನು ಹೆತ್ತ ಮಹಾತಾಯಿ!
ಆಫ್ರಿಕಾದ ಮಹಿಳೆಯೊಬ್ಬರು 40 ವರ್ಷ ವಯಸ್ಸಿನೊಳಗೆ 44 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಉಗಾಂಡಾ ಮೂಲದ ಮರಿಯಮ್ ನಬಟಾಂಜಿ ಎಂಬ ಮಹಿಳೆ ಮಮ ಉಗಾಂಡಾ ( ಉಗಾಂಡಾದ ತಾಯಿ) ಎಂದೇ ಖ್ಯಾತರು. 12 ನೇ ವಯಸ್ಸಿನಲ್ಲಿ ಅವಳು ಮದುವೆಯಾದ ನಂತರ ಅವರು ಮಕ್ಕಳಿಗೆ ಜನ್ಮ ನೀಡಲು ಆರಂಭಿಸಿದರು. ನಬಟಾಂಜಿ ಕೇವಲ 13 ವರ್ಷ ವಯಸ್ಸಿನವರಾಗಿದ್ದಾಗ ಅವಳಿ ಮಕ್ಕಳಿಗೆ ಜನ್ಮ ನೀಡಿದರು. ಆಕೆಯನ್ನು ವಿಶ್ವದ ಅತ್ಯಂತ ಫಲವತ್ತಾದ ಮಹಿಳೆ ಎಂದು ಪರಿಗಣಿಸಲಾಗಿದೆ. ಪೂರ್ವ ಆಫ್ರಿಕಾದ ಉಗಾಂಡಾದಲ್ಲಿರುವ ತನ್ನ ಜನರಲ್ಲಿ ಮಹಿಳೆಯನ್ನು ಮಾಮಾ ಉಗಾಂಡಾ ಎಂದು ಕರೆಯಲಾಗುತ್ತದೆ. ಆಕೆಯ ಪೋಷಕರು ಅವಳನ್ನು ಮಾರಾಟ ಮಾಡಿದರು ಮತ್ತು ಕೇವಲ ಒಂದು ವರ್ಷದ ನಂತರ ಅವಳು ತಾಯಿಯಾದಳು.
ಮರಿಯಮ್ ಕೇವಲ 12 ವರ್ಷದವಳಿದ್ದಾಗ ಆಕೆಯ ಪೋಷಕರು ಅವಳನ್ನು ಮಾರಾಟ ಮಾಡಿದಾಗ ಮದುವೆಯಾದರು. 13 ನೇ ವಯಸ್ಸಿಗೇ ಆಕೆ ಮೊದಲ ಮಗುವಿಗೆ ಜನ್ಮ ನೀಡಿದರು. 36 ವರ್ಷಕ್ಕೆ ಕಾಲಿಡುವ ಹೊತ್ತಿಗೆ, ಮರಿಯಮ್ 42 ಶಿಶುಗಳಿಗೆ ಜನ್ಮ ನೀಡಿದ್ದರು
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.