ಇವನೆಂಥಾ ಲಕ್ಕಿ ಗುರೂ..ಬೈಕಿನ ಹಿಂದೆ ಕುಳಿತು ಸ್ಮೋಕ್ ಮಾಡೋಕೆ ಹೆಲ್ಪ್ ಮಾಡ್ತಾಳೆ ಹೆಂಡ್ತಿ!

Published : May 24, 2023, 03:42 PM IST
ಇವನೆಂಥಾ ಲಕ್ಕಿ ಗುರೂ..ಬೈಕಿನ ಹಿಂದೆ ಕುಳಿತು ಸ್ಮೋಕ್ ಮಾಡೋಕೆ ಹೆಲ್ಪ್ ಮಾಡ್ತಾಳೆ ಹೆಂಡ್ತಿ!

ಸಾರಾಂಶ

ಯಾವುದೇ ಹೆಂಡತಿ ತನ್ನ ಪತಿಗೆ ಧೂಮಪಾನ ಮಾಡಲು ಸಹಾಯ ಮಾಡುವುದನ್ನು ನೀವು ನೋಡಿದ್ದೀರಾ? ನೋ ಛಾನ್ಸ್‌, ಗಂಡ ಸ್ಮೋಕ್ ಮಾಡ್ತಿದ್ದಾನೆ ಅಂತ ಗೊತ್ತಾದ್ರೇನೆ ಸಿಡಿಮಿಡಿಗೊಂಡು ಮಾರು ದೂರ ಓಡ್ತಾರೆ. ಆದ್ರೆ ಇಲ್ಲಿ ಮಾತ್ರ ಕಂಪ್ಲೀಟ್ ಅಪೊಸಿಟ್. ಹೆಂಡ್ತೀನೆ ಗಂಡ ಸ್ಮೋಕ್ ಮಾಡೋಕೆ ಹೆಲ್ಪ್ ಮಾಡ್ತಿದ್ದಾಳೆ.

ಧೂಮಪಾನ ಆರೋಗ್ಯಕ್ಕೆ ಹಾನಿಕರ. ಇದು ಎಲ್ಲರಿಗೂ ಗೊತ್ತಿರೋ ವಿಷ್ಯ. ಹಾಗಿದ್ರೂ ಸ್ಟೈಲ್‌, ಟ್ರೆಂಡ್‌, ಅಡಿಕ್ಟ್ ಆಗಿದ್ದೀವಿ, ಟೆನ್ಶನ್, ರಿಲೀಫ್ ಆಗ್ಬೇಕು ಹೀಗೆ ನಾನಾ ಕಾರಣಗಳನ್ನೊಡ್ಡಿ ಜನ್ರು ಸ್ಮೋಕ್ ಮಾಡೋದು ಮಾತ್ರ ಬಿಡಲ್ಲ. ಆದ್ರೆ ಬಹುತೇಕ ಹುಡುಗಿಯರು ಸ್ಮೋಕ್ ಮಾಡೋ ಹುಡುಗರನ್ನು ಹೇಟ್ ಮಾಡ್ತಾರೆ. ಸಿಗರೇಟ್ ಸ್ಮೆಲ್ ಕೇಳಿದ್ರೆ ಸಿಟ್ಟಾಗ್ತಾರೆ. ಸ್ಮೋಕ್ ಮಾಡೋದನ್ನು ನೋಡಿದ್ರೆ ಸಿಗರೇಟ್ ಬಾಯಿಂದ ಕಿತ್ತು ಎಸೀತಾರೆ. ಹೆಂಡ್ತಿರು ಗಂಡಂದಿರ ಪಾಕೆಟ್‌ನಲ್ಲಿ ಸಿಗರೇಟ್‌ ಪ್ಯಾಕ್ ಇದ್ಯೇನೋ ಅಂತ ಆಗಾಗ ಚೆಕ್‌ ಮಾಡ್ತಾನೆ ಇರ್ತಾರೆ. ಹಾಗಿರುವಾಗ ಇಲ್ಲೊಬ್ಬ ಪತ್ನಿ ಮಾತ್ರ ಕಂಪ್ಲೀಟ್ ಅಪೊಸಿಟ್ ಆಗಿ ಬಿಹೇವ್ ಮಾಡ್ತಾಳೆ. 

ಧೂಮಪಾನವು (Smoking) ಜೀವನವನ್ನು ಹಾಳುಮಾಡುವ ಒಂದು ಅಭ್ಯಾಸವಾಗಿ (Habit) ಧೂಮಪಾನವು ಆರೋಗ್ಯಕ್ಕೆ (Health) ಹಾನಿಕಾರಕವಾಗಿದೆ ಮತ್ತು ಬಹುತೇಕ ಎಲ್ಲರೂ ಅಪಾಯಗಳ (Danger) ಬಗ್ಗೆ ಚೆನ್ನಾಗಿ ತಿಳಿದಿದ್ದಾರೆ.ಹೀಗಿದ್ದೂ, ಧೂಮಪಾನದ ಇಂತಹ ಕೆಟ್ಟ ಅಭ್ಯಾಸಗಳನ್ನು ಬೆಳೆಸಿಕೊಳ್ಳುವ ಜನರು ಅದನ್ನು ತೊರೆಯಲು ಸಾಕಷ್ಟು ಕಷ್ಟಪಡುತ್ತಾರೆ. ಈತನೂ ಅಂಥವನೇ ಅನ್ಸುತ್ತೆ. ಎಂಥಾ ಸಂದರ್ಭದಲ್ಲೂ ಸ್ಮೋಕ್ ಮಾಡೋದನ್ನು ಬಿಡಲಾರೆ ಅನ್ನೋದನು. ಹೀಗಾಗಿ ಬೈಕ್ ರೈಡ್ ಮಾಡ್ತಿದ್ರೂ ಸ್ಮೋಕ್ ಮಾಡಲು ಹೆಂಡ್ತಿಯ (Wife) ಸಹಾಯ ಪಡೆದಿದ್ದಾನೆ.

ಸಿಗರೇಟ್ ಬಿಡಲೇ ಬೇಕಾ? ಗಟ್ಟಿ ಮನಸ್ಸು ಮಾಡಿ, ಈ ಟಿಪ್ಸ್ ಫಾಲೋ ಮಾಡಿ, ಶುಭವಾಗಲಿ

ಬೈಕಿನ ಹಿಂದೆ ಕುಳಿತು ಗಂಡನಿಗೆ ಸಿಗರೇಟ್ ಸೇದಲು ಹೆಲ್ಪ್ ಮಾಡ್ತಿರೋ ಹೆಂಡ್ತಿ
ಹೆಂಡ್ತೀನೆ ಗಂಡ ಸ್ಮೋಕ್ ಮಾಡೋಕೆ ಹೆಲ್ಪ್ ಮಾಡ್ತಿದ್ದಾಳೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಬೈಕ್‌ನಲ್ಲಿ ಗಂಡ-ಹೆಂಡತಿ ಹಾಗೂ ಮಗು ಹೋಗ್ತಿರ್ತಾರೆ. ಈ ಸಂದರ್ಭದಲ್ಲಿ ಗಂಡ ಬೈಕ್ ರೈಡ್ ಮಾಡ್ತಿದ್ರೆ ಹಿಂದೆ ಕುಳಿತ ಹೆಂಡ್ತಿ, ತುಟಿಗೆ ಸಿಗರೇಟ್ ಇಟ್ಟು ಸ್ಮೋಕ್ ಮಾಡಲು ಹೆಲ್ಪ್ ಮಾಡ್ತಾಳೆ. ಹೀಗೆ ಪತ್ನಿಯ ಸಹಾಯದಿಂದ ಪತಿ (Husband) ಪಫ್ ತೆಗೆದುಕೊಳ್ಳುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು. ದಂಪತಿಗಳು (Couple) ಸ್ಕೂಟರ್‌ನಲ್ಲಿ ಸವಾರಿ ಮಾಡುತ್ತಿದ್ದಾರೆ. ಸೀರೆಯುಟ್ಟ ಮಹಿಳೆ ಒಂದು ಕೈಯಲ್ಲಿ ಯಾವುದೋ ಚೀಲವನ್ನು ಹಿಡಿದಿದ್ದು, ಅವಳು ಇನ್ನೊಂದು ಕೈಯಲ್ಲಿ ಉರಿಯುತ್ತಿರುವ ಸಿಗರೇಟನ್ನು ಹಿಡಿದಿದ್ದಾಳೆ. ಒಂದು ಮಗು ಕೂಡ ಸ್ಕೂಟರ್ ಮುಂದೆ ಕುಳಿತಿರುವುದು ಕಂಡುಬರುತ್ತದೆ.

ಇದ್ದಕ್ಕಿದ್ದಂತೆ, ಆ ವ್ಯಕ್ತಿ ತನ್ನ ಮುಖವನ್ನು ಬದಿಗೆ ತಿರುಗಿಸುತ್ತಾನೆ ಮತ್ತು ಅವನ ಹೆಂಡತಿ ಸಿಗರೇಟನ್ನು ಅವನ ಬಾಯಿಯ ಹತ್ತಿರ ತಂದು ಪಫ್ ತೆಗೆದುಕೊಳ್ಳಲು ಸಹಾಯ ಮಾಡುತ್ತಾಳೆ. ಪತಿ ಬೈಕ್ ರೈಡ್ ಮಾಡುವುದರತ್ತ ಗಮನಹರಿಸುತ್ತಿರುವಾಗ ಅವಳು ಮತ್ತೆ ಸಿಗರೇಟ್ ಬಾಯಿಗಿಡುತ್ತಾಳೆ. 'ಹಸ್ನಾ ಜರೂರಿ ಹೈ' ಎಂಬ ಹೆಸರಿನ ಬಳಕೆದಾರರು ಟ್ವಿಟರ್‌ನಲ್ಲಿ ಈ ವೀಡಿಯೋ ಹಂಚಿಕೊಂಡಿದ್ದಾರೆ. ಅವರು ಟ್ವಿಟರ್‌ನಲ್ಲಿ ಹಂಚಿಕೊಂಡ ವೀಡಿಯೊ ನೆಟಿಜನ್‌ಗಳಿಂದ ಹಲವಾರು ಕಾಮೆಂಟ್‌ಗಳನ್ನು ಗಳಿಸಿದೆ. ಹಲವಾರು ಬಳಕೆದಾರರು ದಂಪತಿಗಳ ಅನ್ಯೋನ್ಯತೆಯನ್ನು ಶ್ಲಾಘಿಸಿದ್ದಾರೆ. ಇನ್ನು ಕೆಲವರು ಮಹಿಳೆ ತನ್ನ ಗಂಡನ ಧೂಮಪಾನವನ್ನು ಬೆಂಬಲಿಸಿದ್ದಕ್ಕಾಗಿ ಅಚ್ಚರಿಪಟ್ಟಿದ್ದಾರೆ. 

Health Tips : ಧೂಮಪಾನದಷ್ಟೇ ಖತರ್ನಾಕ್ ಈ ವ್ಯಾಪಿಂಗ್.. ಹೊಗೆ ಬಿಡೋದನ್ನು ಇಂದೇ ಬಿಟ್ಬಿಡಿ

ಒಬ್ಬ ಬಳಕೆದಾರರು, 'ವಾವ್, ಕ್ಯಾ ಸೀನ್ ಹೈ' (ವಾವ್‌ ಎಂಥಾ ದೃಶ್ಯ) ಎಂದು ಬರೆದಿದ್ದಾರೆ. ಮತ್ತೊಬ್ಬರು 'ಕೋಯಿ ಸಪ್ನಾ ಲಗ್ತಾ ಹೈ' (ಯಾವುದೋ ಕನಸಿನಂತೆ ಭಾಷವಾಗುತ್ತಿದೆ" ಎಂದು ಬರೆದಿದ್ದಾರೆ. ಇನ್ನೊಬರು, 'ಐಸಿ ವೈವ್ಸ್ ಭಿ ಹೋತಿ ಹ್ ಕ್ಯಾ' (ಇಂಥಾ ಪತ್ನಿಯರೂ ಇದ್ದಾರೆಯೇ? ಎಂದು ಅಚ್ಚರಿವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಈ ವೀಡಿಯೋ ಫುಲ್ ವೈರಲ್ ಆಗಿರೋದಂತೂ ನಿಜ. ಆದ್ರೆ ನೀವಂತೂ ಮರೀಬೇಡಿ, ಧೂಮಪಾನ ಆರೋಗ್ಯಕ್ಕೆ ಹಾನಿಕರ.

ಸ್ಮೋಕ್ ಮಾಡ್ಬೇಡಿ, ಕೂದಲು ಉದುರುತ್ತೆ ! ಮಧ್ಯೆಯಿರೋ ಲಿಂಕ್ ಏನು ?

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!