ಯಾದಗಿರಿ: ಲೇಟಾಗಿ ಬರುವ ಶಿಕ್ಷಕರು, ಮಕ್ಕಳೇ ಪ್ರತಿಭಟನೆಗೆ ಇಳಿದ್ರು!

Jul 15, 2019, 10:24 PM IST

ಪ್ರತಿಭಟನೆ ಸುದ್ದಿಗಳಿಗೆ ಈ ರಾಜ್ಯದಲ್ಲಿ, ದೇಶದಲ್ಲಿ ಬರವಿಲ್ಲ. ಆದರೆ ಈ ಪ್ರತಿಭಟನೆ ಮಾತ್ರ ಕೊಂಚ ಭಿನ್ನ. ಶಾಲೆಗೆ ಶಿಕ್ಷಕರು ಸರಿಯಾಗಿ ಬರುತ್ತಿಲ್ಲ ಎಂದು ಆರೋಪಿಸಿ ಯಾದಗಿರಿ ತಾಲೂಕಿನ ಅಲಿಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ತರಗತಿ ಬಹಿಷ್ಕರಿಸಿ ಧರಣಿ ನಡೆಸಿದರು. ಶಾಲೆ ಆವರಣದಲ್ಲೆ ಕೂತು ಮಕ್ಕಳೊಂದಿಗೆ ಧರಣಿ ನಡೆಸಿದ ಪಾಲಕರು,  ಶಾಲೆಯಲ್ಲಿ 290 ವಿದ್ಯಾರ್ಥಿಗಳಿದ್ದು ಶಿಕ್ಷಕರು ಸರಿಯಾಗಿ ಶಾಲೆಗೆ ಬರುತ್ತಿಲ್ಲ. 10 ಗಂಟೆಗೆ ಶಾಲೆ ಆರಂಭವಾದರೆ ಶಿಕ್ಷಕರಾದ ರಮೇಶ್, ಸಿದ್ದಲಿಂಗಪ್ಪ ಪಾಟೀಲ 12 ಗಂಟೆಗೆ ಬರ್ತಿದ್ದಾರಂತೆ. ಇದು ಮಕ್ಕಳ ಶೈಕ್ಷಣಿಕ ಪ್ರಗತಿ ಮೇಲೆ ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿದರು.  ಈ ಶಿಕ್ಷಕರನ್ನು ಇಲ್ಲಿಂದ ವರ್ಗಾವಣೆ ಮಾಡಿ ಎಂದು ಆಗ್ರಹಿಸಿದರು.