ಬ್ಯಾಕ್‌ಲೆಸ್‌ ಫೋಟೋ ಹಾಕಿ ಪೋಸ್‌ ಕೊಟ್ಟ ನಿವೇದಿತಾ ಗೌಡ!

By Gowthami K  |  First Published Nov 24, 2024, 9:54 PM IST

ವಿಚ್ಛೇದನದ ನಂತರ ನಿವೇದಿತಾ ಗೌಡ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು, ಬೋಲ್ಡ್ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹೊಸದಾಗಿ ಹಂಚಿಕೊಂಡಿರುವ ಬ್ಯಾಕ್‌ಲೆಸ್ ಮತ್ತು ಟು ಪೀಸ್ ಫೋಟೋಗಳು ಸಾಕಷ್ಟು ಚರ್ಚೆಗೆ ಗ್ರಾಸವಾಗಿವೆ. 'ಮನಸಾರೆ ನಿನ್ನೆ..' ಆಲ್ಬಂ ಹಾಡಿನಲ್ಲೂ ಕಾಣಿಸಿಕೊಂಡಿದ್ದಾರೆ.


ವಿಚ್ಛೇದನದ ಬಳಿಕ ನಿವೇದಿತಾ ಗೌಡ ಮತ್ತೆ ಸಿಂಗಲ್‌ ಆಗಿದ್ದಾರೆ. ತಮ್ಮಿಷ್ಟದಂತೆ ಬದುಕುತ್ತಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಅವರು ಸಾಲು ಸಾಲು ರೀಲ್ಸ್‌ಗಳನ್ನು ಹಂಚಿಕೊಳ್ಳುವ ಮೂಲಕ ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಿರುವುದಂತೂ ಸುಳ್ಳಲ್ಲ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್‌ ಆಗಿರುವ ನಿವೇದಿತಾ ಗೌಡ ಬೋಲ್ಡ್‌ ಫೋಟೋ, ವಿಡಿಯೋಗಳು, ರೀಲ್ಸ್ ಗಳನ್ನು ಆಗಾಗ ಶೇರ್ ಮಾಡುತ್ತಿರುತ್ತಾರೆ. ಇವೆಲ್ಲವುಗಳಿಗೆ ಅದೆಷ್ಟೇ ನೆಗೆಟಿವ್ ಕಮೆಂಟ್‌ ಬಂದರೆ ತಲೆಕೆಡಿಸಿಕೊಳ್ಳುವುದಿಲ್ಲ.

ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ರಹಸ್ಯ ಡೇಟಿಂಗ್, ಡಿನ್ನರ್‌ ನಲ್ಲಿರುವ ಫೋಟೋ ವೈರಲ್!

Tap to resize

Latest Videos

ಇದೀಗ ನಿವೇದಿತಾ ಗೌಡ ಹೊಸದಾಗಿ ಎರಡು ಬೋಲ್ಡ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬ್ಯಾಕ್‌ ಲೆಸ್‌ ಫೋಟೋ ಹಾಕಿದ್ದು, ಸ್ವಿಮ್ಮಿಂಗ್ ಪೂಲ್‌ ಎದುರುಗಡೆ ನಿಂತುಕೊಂಡು ಟು ಪೀಸ್‌ ನಲ್ಲಿ ಕಾಣಿಸಿಕೊಂಡಿದ್ದಾರೆ. ನಿವೇದಿತಾ ಅವರ ಈ ಫೋಟೋಗೆ ತರಹೇವಾರಿ ಕಮೆಂಟ್‌ ಗಳು ಬಂದಿದೆ. ಇನ್ನು ನಿವೇದಿತಾ ಅವರ ಈ ಫೋಟೋಗೆ ನೆಗೆಟಿವ್‌ ಕಮೆಂಟ್‌ಗಳು ಎಷ್ಟು ಬಂದಿದೆಯೀ ಅಷ್ಟೇ ಅವರನ್ನು ಇಷ್ಟಪಡವವರು ಪಾಸಿಟಿವ್ ಕಮೆಂಟ್‌ ಹಾಕಿದ್ದಾರೆ.

12 ವಾರಗಳಿಗೆ ತೆಲುಗು ಬಿಗ್‌ಬಾಸ್‌ನಿಂದ ಕನ್ನಡತಿ ಯಶ್ಮಿ ಗೌಡ ಪಡೆದ ಸಂಭಾವನೆ ಬರೋಬ್ಬರಿ 24 ಲಕ್ಷ ರೂ!

ಇತ್ತೀಚೆಗೆ 'ಮನಸಾರೆ ನಿನ್ನೆ..' ಮೂಲಕ ತಮ್ಮ ಮೊದಲ ಆಲ್ಬಂ ಹಾಡಿನಲ್ಲಿ ನಿವೇದಿತಾ ಕಾಣಿಸಿಕೊಂಡಿದ್ದರು. ಕನ್ನಡ ಹಾಗೂ ತೆಲುಗಿನಲ್ಲಿ ಈ ಹಾಡು ರಿಲೀಸ್‌ ಆಗಿದ್ದು, ನಿವೇದಿತಾ ಗೌಡ ಅವರೊಂದಿಗೆ ತೆಲುಗಿನ ಗೌರಿ ನಾಯ್ಡು ರೊಮಾನ್ಸ್‌ ಮಾಡಿದ್ದರು. ಮಳೆಯಲ್ಲಿ ನೆನೆಯುತ್ತಾ ನಿವೇದಿತಾ ಮಾಡಿದ ಡಾನ್ಸ್‌ಗೆ ಪಡ್ಡೆ ಹೈಕಳು ಫಿದಾ ಆಗಿದ್ದರು. ನ.13 ರಂದು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದ ಈ ಸಾಂಗ್‌, 60 ಸಾವಿರ ವೀವ್ಸ್‌ ಪಡೆದಿದೆ. ಆದರೆ ಹಾಡಿಗೆ ಸಂಬಂಧಿಸಿ ಹಂಚಿಕೊಂಡಿರುವ ರೀಲ್ಸ್ 4.8 ಮಿಲಿಯನ್‌ ವೀವ್ಸ್ ಪಡೆದಿದೆ.

Kannada Rapper ಚಂದನ್ ಶೆಟ್ಟಿ ಜೊತೆ ಮದುವೆ ಮುರಿದುಕೊಂಡ ನಂತರ ನಿವೇದಿತಾ ಗೌಡ ಏನೇ ಪೋಸ್ಟ್ ಮಾಡಿದರೂ, ಜನರು ಮಾಜಿ ಪತಿಯನ್ನು ಎಳೆದು ತಂದು ಕಮೆಂಟ್ ಮಾಡುತ್ತಾರೆ. ಅದಕ್ಕೆ ಇತ್ತೀಚೆಗೆ ಠಕ್ಕರ್ ಸಹ ಕೊಟ್ಟಿದ್ದರು. ಅಲ್ಲದೇ ಸೋಷಿಯಲ್ ಮೀಡಿಯಾ ಪ್ರಮೋಷನ್ ಮೂಲವೇ ಹೆಚ್ಚು ಗಳಿಸುವ ನಿವೇದಿತಾ ಗೌಡ, ಸಾಕಷ್ಟು ಬ್ರ್ಯಾಂಡ್‌ಗಳನ್ನು ತಮ್ಮ ಪೇಜಿನಲ್ಲಿ ಪ್ರಮೋಟ್ ಮಾಡುತ್ತಿದ್ದು, ಸೋಷಿಯಲ್ ಮೀಡಿಯಾ ಚಟುವಟಿಕೆಗಳನ್ನು ಹೆಚ್ಚಿಸುತ್ತಿದ್ದಾರೆ. ಆ ನಿಟ್ಟಿನಲ್ಲಿ ತುಸು ಕಡಿಮೆ ಮೈ ಮುಚ್ಚುವ ತೊಡುಗೆ ಧರಿಸುವುದೂ ಹೆಚ್ಚಾಗಿದ್ದು, ಕಮೆಂಟ್ಸ್ ಹೆಚ್ಚಾಗಿರುವ ಜೊತೆಗೆ, ಪ್ರಮೋಷನ್ ಸಹ ಜೋರಾಗಿಯೇ ಮಾಡಿ ಕೊಳ್ಳುತ್ತಿದ್ದಾರೆ. 

ಸೋಷಿಯಲ್ ಮೀಡಿಯಾ ಮೂಲಕವೇ ಮೈನ್ ಸ್ಟ್ರೀಮ್‌ಗೆ ಬಂದ ನಿವೇದಿತಾ ಗೌಡ ತಮ್ಮ ಬಾಡಿ ಲ್ಯಾಂಗ್ಜೇಜ್ ಹಾಗೂ ಸೌಂದರ್ಯದಿಂದಲೇ ಜನರ ಪ್ರೀತಿಗೆ ಪಾತ್ರರಾದವರು. ಅಲ್ಲದೇ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಅವರು, ಅಲ್ಲಿಯೇ ಚಂದನ್ ಶೆಟ್ಟಿ ಜೊತೆ ಪ್ರೀತಿಯಲ್ಲಿ ಬಿದ್ದು, ದಾಂಪತ್ಯ ಜೀವನಕ್ಕೆ ಕಾಲಿಟ್ಟವರು. ಮೈಸೂರು ಯುವ ದಸರೆಯಲ್ಲಿ ವೇದಿಕೆ ಮೇಲೆಯೇ ಚಂದನ್ ನಿವೇದಿತಾ ಗೌಡಗೆ ಪ್ರಪೋಸ್ ಮಾಡಿದ್ದು ದೊಡ್ಡ ವಿವಾದವಾಗಿತ್ತು. ಆ ನಂತರ ಕೆಲವೇ ದಿನಗಳಲ್ಲಿ ಈ ಜೋಡಿ ಮೈಸೂರಲ್ಲಿ ಅದ್ಧೂರಿಯಾಗಿಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ಎಲ್ಲವೂ ಸರಿಯಾಗಿಯೇ ಇತ್ತು. ಆದರೆ, ಏಕಾಏಕಿ ಒಂದು ದಿನ ಕೋರ್ಟಿಗೆ ಬಂದ ಈ ಜೋಡಿ, ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿ, ತಕ್ಷಣವೇ ಬೇರೆ ಸಹ ಆಗಿದ್ದು, ಅಭಿಮಾನಿಗಳಗೆ ನುಂಗಲಾರದ ತುತ್ತಾಗಿತ್ತು. ಒಟ್ಟಿನಲ್ಲಿ ನಿವೇದಿತಾ ಗೌಡ ಸದಾ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿರುವುದು ಸಹಜ. 

click me!