Aug 28, 2020, 12:31 PM IST
ಬೆಂಗಳೂರು (ಆ. 28): ಚೀನಾ ಮಾಡುವ ಕುತಂತ್ರ ಬುದ್ದಿ ಒಂದೆರಡಲ್ಲ. ಗಡಿಯಲ್ಲಿಯೂ ಕ್ಯಾತೆ ತೆಗೆಯುತ್ತದೆ. ಗಡಿಯ ಒಳಗೂ ಇನ್ನೊಂದು ರೀತಿ ಕಿರಿಕ್ ಮಾಡುತ್ತಿದೆ.
ಕೊರೋನಾ ಸೃಷ್ಟಿಸಿರುವ ಆತಂಕದ ನಡುವೆಯೇ, ಅತಿಯಾದ ಮಳೆಯಿಂದಾಗಿ ರೈತರು ಬೆಳೆಗಳು ಕೊಳೆಯುತ್ತಿದ್ದು, ಅದನ್ನು ರಕ್ಷಣೆ ಮಾಡಿಕೊಳ್ಳಲು ರೈತರು ಯೂರಿಯಾ ಮೊರೆ ಹೋಗಿದ್ದಾರೆ. ಯೂರಿಯಾ ಸಮರ್ಪಕವಾಗಿ ಸಿಗದೇ ರೈತರು ತತ್ತರಿಸಿ ಹೋಗಿರುವ ಈ ಸಂದರ್ಭದಲ್ಲಿ ಅನಾಮಧೇಯ ಮೂಲದಿಂದ ಬರುತ್ತವೆ ಎಂದು ಹೇಳಲಾದ ಜೈವಿಕ ಪ್ಯಾಕೆಟ್‌ಗಳು ದೊಡ್ಡ ಭಯ ಸೃಷ್ಟಿಸಿದೆ.
ಅನಾಮಧೇಯ ಮೂಲದಿಂದ ರೈತರ ಮನೆ ಬಾಗಿಲಿಗೆ ಬೀಜದ ಪಾರ್ಸೆಲ್‌ಗಳು ಬರುತ್ತಿದ್ದು, ಇದು ರೈತರಲ್ಲಿ ಭಯ ಮೂಡಿಸಿದೆ. ಚೀನಾ ಮೂಲದಿಂದ ಈ ಪಾರ್ಸೆಲ್‌ಗಳು ಬರುತ್ತಿವೆ ಎಂದು ಹೇಳಲಾಗುತ್ತಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!