ಉದ್ಯೋಗ ಸಿಗುತ್ತಿಲ್ಲವೇ? ಇಚ್ಚೆಯಂತೆ ಕೆಲಸ ಆಗದಿದ್ರೆ ನಾಳೆ ಮಂಗಳವಾರ ಈ ಮಂತ್ರ ಪಠಿಸಿ!

Published : Nov 25, 2024, 09:12 PM IST

Tomorrow Astrology ನೀವು ಉದ್ಯೋಗವನ್ನು ಹುಡುಕುತ್ತಿದ್ದರೆ ಮತ್ತು ನಿಮ್ಮ ಆಯ್ಕೆಯ ಪ್ರಕಾರ ಕೆಲಸ ಸಿಗದಿದ್ದರೆ ಅಥವಾ ಉದ್ಯೋಗ ಪಡೆಯುವಲ್ಲಿ ಅಡೆತಡೆಗಳನ್ನು ಎದುರಿಸುತ್ತಿದ್ದರೆ ಪ್ರತಿನಿತ್ಯ ಹನುಮಾನ್ ಚಾಲೀಸಾ ಪಠಿಸಿ

PREV
14
ಉದ್ಯೋಗ ಸಿಗುತ್ತಿಲ್ಲವೇ? ಇಚ್ಚೆಯಂತೆ ಕೆಲಸ ಆಗದಿದ್ರೆ ನಾಳೆ ಮಂಗಳವಾರ ಈ ಮಂತ್ರ ಪಠಿಸಿ!

ಯುವಕರು ಶಿಕ್ಷಣ ಮುಗಿಸಿದ ಬಳಿಕ ತಮ್ಮ ಅರ್ಹತೆಗೆ ಸೂಕ್ತವಾದ ಉದ್ಯೋಗವನ್ನು ಹುಡುಕುವುದೇ ಇಂದಿನ ದಿನಗಳಲ್ಲಿ ಅತ್ಯಂತ ಕಷ್ಟ. ಎಲ್ಲೆಡೆ ಸ್ಪರ್ಧೆ, ಇನ್ನೊಂದೆಡೆ ನಿರುದ್ಯೋಗ. ಹೀಗಾಗಿ ಇಂಜಿನಿಯರ್, ವೈದ್ಯಕೀಯ.. ಹೀಗೆ ಯುವಕರು ತಾವು ಓದಿದ್ದಕ್ಕೆ ಸಂಬಂಧವಿಲ್ಲದ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತಿರುವುದು ಸಾಮಾನ್ಯವಾಗಿದೆ.

24

ಅದರಲ್ಲೂ ಇಂದಿನ ದಿನಗಳಲ್ಲಿ ಉದ್ಯೋಗ ಹುಡುಕುವುದು ಯುವಕರಿಗೆ ದೊಡ್ಡ ಸಮಸ್ಯೆಯಾಗಿದೆ. ಹಲವು ಸಲ ತುಂಬಾ ಕಷ್ಟಪಟ್ಟು  ಓದಿ ರಾಂಕ್ ಗಳಿಸಿದ ಒಬ್ಬ ವ್ಯಕ್ತಿಯು ಎಲ್ಲೆಡೆ ಸಂದರ್ಶನಗಳಲ್ಲಿ ಆಯ್ಕೆಯಾಗದೆ ವಿಫಲವಾಗಲು ಪ್ರಾರಂಭಿಸಿದಾಗ,ಅಂಥ ವ್ಯಕ್ತಿಯು ಖಿನ್ನತೆಗೆ ಜಾರುತ್ತಾನೆ. ಬದುಕಿನ ಬಗ್ಗೆ ನಿರಾಶೆಗೊಳ್ಳುತ್ತಾನೆ. ಎಷ್ಟೇ ಕಷ್ಟಪಟ್ಟರೂ ಜೀವನದಲ್ಲಿ ಒಂದು ಉದ್ಯೋಗ ಹಿಡಿದು ನೆಲೆ ನಿಲ್ಲಲಾಗುತ್ತಿಲ್ಲವೆಂದು ಕೊರಗುತ್ತಾನೆ.ಎಷ್ಟು ಕಷ್ಟಪಟ್ಟರೂ ಏಕೆ ಯಶಸ್ಸು ಸಿಗುತ್ತಿಲ್ಲ ಎಂದು ಅರ್ಥವಾಗುವುದಿಲ್ಲ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಮ್ಮ ಕೆಲಸವನ್ನು ಮಾಡುವುದು ಎಷ್ಟು ಮುಖ್ಯವೋ, ಹಾಗೆಯೇ ಅದೃಷ್ಟ ನಿಮ್ಮ ಕಡೆ ಇರುವುದು ಅಷ್ಟೇ ಮುಖ್ಯ ಎಂದು ಹೇಳುತ್ತಾರೆ. ನಿಮ್ಮ ಕೆಲಸದಲ್ಲಿ ನೀವು ಪದೇ ಪದೇ ಅಡೆತಡೆಗಳನ್ನು ಎದುರಿಸುತ್ತಿದ್ದರೆ ಮತ್ತು ಸರಿಯಾದ ಕೆಲಸವನ್ನು ಹುಡುಕಲು ಸಾಧ್ಯವಾಗದಿದ್ದರೆ, ನೀವು ಕೆಲವು ಬದಲಾವಣೆಗಳನ್ನ, ಕ್ರಮಗಳನ್ನ ತೆಗೆದುಕೊಳ್ಳಬಹುದು. ಸರಿಯಾದ ದಿಕ್ಕಿನಲ್ಲಿ ಪ್ರಯತ್ನಗಳ ಜೊತೆಗೆ ಈ ಕ್ರಮಗಳನ್ನು ತೆಗೆದುಕೊಂಡರೆ, ನಿಮ್ಮ ಉದ್ಯೋಗ ಸಂಬಂಧಿತ ಸಮಸ್ಯೆಗಳು ಕೊನೆಗೊಳ್ಳುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
 

34

ಸಂದರ್ಶನಕ್ಕೆ ಹೋಗುವ ಮುನ್ನ ಹನುಮಾನ್ ಚಾಲೀಸಾ ಪಠಿಸಿ:

 ಪ್ರತಿಸಲ ಸಂದರ್ಶನಕ್ಕೆ ಹೋದಾಗಲೂ ವಿಫಲರಾಗುತ್ತಿದ್ದಾರೆ ನೀವು ಹನುಮಾನ ಚಾಲೀಸಾವನ್ನು ಪಠಿಸಬೇಕು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿಸಲ ಸಂದರ್ಶನದಲ್ಲಿ ವಿಫಲರಾಗುತ್ತಿದ್ದರೆ,  ಅಂಥವರಿಗೆ ಈ ಪರಿಹಾರವು ಪ್ರಯೋಜನಕಾರಿಯಾಗಿದೆ ಎಂದು ಹೇಳುತ್ತಾರೆ. ನೀವು ಸಂದರ್ಶನಕ್ಕೆ ಹೋಗಬೇಕಾದ ದಿನದ ಮೊದಲು, ಒಂದು ನಿಂಬೆ ಮತ್ತು ಲವಂಗದೊಂದಿಗೆ ಹನುಮಾನ್ ದೇವಸ್ಥಾನಕ್ಕೆ ಹೋಗಿ. ಈಗ ನಾಲ್ಕು ಲವಂಗವನ್ನು ತೆಗೆದುಕೊಂಡು ಅವುಗಳನ್ನು ನಿಂಬೆಹಣ್ಣಿನಲ್ಲಿ ಹೂತುಹಾಕಿ. ಇದರ ನಂತರ, ಈ ನಿಂಬೆಯನ್ನು ನಿಮ್ಮ ಕೈಯಲ್ಲಿ ತೆಗೆದುಕೊಂಡು ಹನುಮಾನ್ ಜಿ ಪ್ರತಿಮೆಯ ಮುಂದೆ 108 ಬಾರಿ 'ಓಂ ಶ್ರೀ ಹನುಮಂತೇ ನಮಃ' ಮಂತ್ರವನ್ನು ಜಪಿಸಿ. ಇದರ ನಂತರ, ಹನುಮಂತನ ಪಾದಗಳಿಗೆ ಈ ನಿಂಬೆಯನ್ನು ಸ್ಪರ್ಶಿಸಿ ಮತ್ತು ಅದನ್ನು ನಿಮ್ಮೊಂದಿಗೆ ಇಟ್ಟುಕೊಂಡು ಅಲ್ಲಿಂದ ಹಿಂತಿರುಗಿ ಮತ್ತು ನೀವು ಸಂದರ್ಶನಕ್ಕೆ ಹೋಗಬೇಕಾದಾಗ ಅದನ್ನು ನಿಮ್ಮೊಂದಿಗೆ ಕೊಂಡೊಯ್ಯಿರಿ. 

ಉದ್ಯೋಗವನ್ನು ಪಡೆಯಲು ಈ ಪರಿಹಾರವನ್ನು ಪರಿಪೂರ್ಣವೆಂದು ಪರಿಗಣಿಸಲಾಗಿದೆ. ಕೆಲಸದಲ್ಲಿ ಅಡೆತಡೆಗಳಿದ್ದರೆ, ಪ್ರತಿದಿನ ಹನುಮಾನ್ ಚಾಲೀಸಾವನ್ನು ಪಠಿಸುವುದು ಪ್ರಯೋಜನಕಾರಿಯಾಗಿದೆ, ಇದು ನಿಮ್ಮ ಕೆಲಸದಲ್ಲಿನ ಎಲ್ಲಾ ಅಡೆತಡೆಗಳನ್ನು ನಿವಾರಿಸುತ್ತದೆ.

ನೀವು ಉದ್ಯೋಗವನ್ನು ಹುಡುಕುತ್ತಿದ್ದರೆ ಮತ್ತು ನಿಮ್ಮ ಆಯ್ಕೆಯ ಪ್ರಕಾರ ಕೆಲಸ ಸಿಗದಿದ್ದರೆ ಅಥವಾ ಉದ್ಯೋಗ ಪಡೆಯುವಲ್ಲಿ ಅಡೆತಡೆಗಳನ್ನು ಎದುರಿಸುತ್ತಿದ್ದರೆ, ನೀವು ಶಿವನಿಗೆ ಅಕ್ಷತ (ಶಿವಪೂಜೆ) ಅರ್ಪಿಸಿ. ಶಿವನ ದೇವಸ್ಥಾನ ಮತ್ತು ಶಿವಲಿಂಗವನ್ನು ಪೂಜಿಸಿ ಆದರೆ ಅಭಿಷೇಕ, ಅಕ್ಷತವನ್ನು ಅರ್ಪಿಸಬೇಕು ಆದರೆ ಅನ್ನವನ್ನು ಒಡೆಯಬಾರದು. ಈ ಪರಿಹಾರವು ಕೆಲಸಕ್ಕೆ ಬಹಳ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ.
 

44

ಶನಿ ದೇವರ ಆರಾಧನೆ (ಶನಿ ಪೂಜೆ)

ಜೋತಿಷ್ಯ ಶಾಸ್ತ್ರದ ಪ್ರಕಾರ,ನಿಮ್ಮ ಕೆಲಸ ಮತ್ತು ಉದ್ಯೋಗದಲ್ಲಿ ಅಡೆತಡೆಗಳು ಮತ್ತು ಸತತ ಪ್ರಯತ್ನಗಳ ಹೊರತಾಗಿಯೂ ನೀವು ಮತ್ತೆ ಮತ್ತೆ ವೈಫಲ್ಯವನ್ನು ಎದುರಿಸುತ್ತಿದ್ದರೆ, ನೀವು ಶನಿ ದೇವರನ್ನು ಆರಾಧಿಸಬೇಕು ಎಂದು  ಹೇಳುತ್ತದೆ. ಪ್ರತಿ ಶನಿವಾರದಂದು, ಶನಿ ದೇವರಿಗೆ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಬೇಕು ಮತ್ತು 'ಓಂ ಶಂ ಶನೈಶ್ಚರಾಯ ನಮಃ' ಎಂದು ಕನಿಷ್ಠ 108 ಬಾರಿ ಜಪಿಸಬೇಕು. ಶನಿದೇವನ ಕೃಪೆಯಿಂದ ನಿಮ್ಮ ಜೀವನ ಮತ್ತು ಉದ್ಯೋಗದಲ್ಲಿನ ಎಲ್ಲಾ ಅಡೆತಡೆಗಳು ನಿವಾರಣೆಯಾಗುತ್ತವೆ ಎಂದು ನಂಬಲಾಗಿದೆ.

ಗಮನಿಸಿ: ಈ ಲೇಖನ ಜ್ಯೋತಿಷ್ಯಶಾಸ್ತ್ರ ಲೇಖನಗಳನ್ನು ಆಧಾರಿಸಿದ್ದು, ನಿಮ್ಮ ಸಮಸ್ಯೆಗಳಿಗೆ ಸಂಬಂಧಿತ ಪರಿಣತರನ್ನು ಸಂಪರ್ಕಿಸಿ

Read more Photos on
click me!

Recommended Stories