Health

ಮಣಿಕರಣ್, ಹಿಮಾಚಲ ಪ್ರದೇಶ

೧೮೨೯ ಮೀ ಎತ್ತರದಲ್ಲಿರುವ ಮಣಿಕರಣ್ ತನ್ನ ಬಿಸಿನೀರಿನ ಚಿಲುಮೆಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ನೀರಿನಲ್ಲಿ ಯುರೇನಿಯಂ ಮತ್ತು ಗಂಧಕದ ಜೊತೆಗೆ ವಿಕಿರಣಶೀಲ ಖನಿಜಗಳಿವೆ ಎನ್ನಲಾಗಿದೆ.

Image credits: google

ವಜ್ರೇಶ್ವರಿ, ಮಹಾರಾಷ್ಟ್ರ

ಮಂದಾಕಿನಿ ಬೆಟ್ಟದ ತಪ್ಪಲಿನಲ್ಲಿರುವ ವಜ್ರೇಶ್ವರಿ ಗ್ರಾಮದಲ್ಲಿ ಹಲವಾರು ಬಿಸಿನೀರಿನ ಚಿಲುಮೆಗಳಿವೆ. ಇಲ್ಲಿನ ನೀರಿನ ತಾಪಮಾನ ೪೩ ರಿಂದ ೪೯ ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ.

Image credits: google

ಬಕ್ರೇಶ್ವರ್, ಪಶ್ಚಿಮ ಬಂಗಾಳ

ಬಕ್ರೇಶ್ವರ್ ಒಂದು ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ. ಇದು ೧೦ ಬಿಸಿನೀರಿನ ಚಿಲುಮೆಗಳನ್ನು ಹೊಂದಿದೆ. ಇದರಲ್ಲಿ ನೈಸರ್ಗಿಕವಾಗಿ ಚಿಕಿತ್ಸಕ ಖನಿಜಗಳಿವೆ.

Image credits: Google

ತಪ್ತಪಾನಿ, ಒಡಿಶಾ

ಬೆರ್ಹಾಂಪುರದಿಂದ ಸುಮಾರು ೫೦ ಕಿ.ಮೀ ದೂರದಲ್ಲಿ ತಪ್ತಪಾನಿ ಬಿಸಿನೀರಿನ ಚಿಲುಮೆ ಇದೆ. ಈ ನೈಸರ್ಗಿಕ ಚಿಲುಮೆಯ ನೀರು ಚರ್ಮ ರೋಗಗಳನ್ನು ಗುಣಪಡಿಸುವ ಔಷಧೀಯ ಗುಣಗಳನ್ನು ಹೊಂದಿದೆ.

Image credits: Google

ತಿಂಗ್ಬು ಮತ್ತು ಸಾಚು, ಅರುಣಾಚಲ ಪ್ರದೇಶ

ತವಾಂಗ್ ಜಿಲ್ಲೆಯ ತವಾಂಗ್ - ಜಾಂಗ್ ರಸ್ತೆಯಲ್ಲಿ ತಿಂಗ್ಬು ಮತ್ತು ಸಾಚು ಬಿಸಿನೀರಿನ ಚಿಲುಮೆಗಳಿವೆ. ಇಲ್ಲಿನ ಗಂಧಕಯುಕ್ತ ನೀರು ಚರ್ಮ ರೋಗಗಳನ್ನು ಗುಣಪಡಿಸುತ್ತದೆ ಎಂದು ನಂಬಲಾಗಿದೆ.

Image credits: Pixabay

ಯುಮೆಸಮ್ಡಾಂಗ್, ಸಿಕ್ಕಿಂ

ಸುಂದರವಾದ ಉತ್ತರ ಸಿಕ್ಕಿಂನಲ್ಲಿ, ಚೀನಾ ಗಡಿಯ ಬಳಿ ಇರುವ ಯುಮೆಸಮ್ಡಾಂಗ್ ಪ್ರದೇಶದಲ್ಲಿ ೧೪ ಗಂಧಕದ ಬಿಸಿನೀರಿನ ಚಿಲುಮೆಗಳಿವೆ.

Image credits: social media

ಗೌರಿಕುಂಡ್, ಉತ್ತರಾಖಂಡ

೧೯೮೨ ಮೀಟರ್ ಎತ್ತರದಲ್ಲಿರುವ ಗೌರಿಕುಂಡ್‌ನಲ್ಲಿ ಪವಿತ್ರ ಸ್ನಾನವು ಶುಭವೆಂದು ಪರಿಗಣಿಸಲಾಗಿದೆ.

Image credits: social media

ಪನಾಮಿಕ್, ಲಡಾಖ್

ಸಿಯಾಚಿನ್ ಹಿಮನದಿಯ ಆರಂಭದಿಂದ ಸುಮಾರು ೯ ಕಿ.ಮೀ ದೂರದಲ್ಲಿ ಲಡಾಖ್‌ನಲ್ಲಿರುವ ಪನಾಮಿಕ್ ಇದೆ. ಈ ನೀರು ಹಲವು ಔಷಧೀಯ ಗುಣಗಳನ್ನು ಹೊಂದಿದೆ ಎಂದು ನಂಬಲಾಗಿದೆ.

Image credits: social media

ದಕ್ಷಿಣ ಕನ್ನಡ , ಕರ್ನಾಟಕ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೇಂದ್ರ್‌ತೀರ್ಥ ಮತ್ತು ಬೆಳ್ತಂಗಡಿ ತಾಲೂಕಿನ ಬಂದಾರು ಅಂಕರಮಜಲು ಎಂಬಲ್ಲಿರುವ ಬಿಸಿನೀರ ಚಿಲುಮೆ ದಕ್ಷಿಣ ಭಾರತದಲ್ಲಿರುವ ಎರಡು ಬಿಸಿನೀರ ಬುಗ್ಗೆಯಾಗಿದೆ.

Image credits: our own
Find Next One