ಮೋದಿ ಪಟ್ಟಿಗೆ ಪತರುಗುಟ್ಟಿದೆ ಚೀನಾ; ಬಿದ್ದು ಹೋಗುತ್ತಾ ಚೀನಾ ಆರ್ಥಿಕತೆ?

Jul 1, 2020, 10:50 AM IST

ಬೆಂಗಳೂರು (ಜು. 01): ಗಲ್ವಾನ್‌ ಕಣಿವೆಯಲ್ಲಿ ತನ್ನ 20 ಯೋಧರ ಹತ್ಯೆ ಮಾಡಿದ ಚೀನಾ ಯೋಧರಿಗೆ ಸ್ಥಳದಲ್ಲೇ ಪಾಠ ಕಲಿಸಿದ್ದ ಭಾರತ, ಇದೀಗ ಚೀನಾದ ಟಿಕ್‌ ಟಾಕ್‌, ಶೇರ್‌ ಇಟ್‌ನಂತಹ ಹಲವು ಆ್ಯಪ್‌ಗಳು ಸೇರಿದಂತೆ 59 ವಿದೇಶಿ ಆ್ಯಪ್‌ಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ.

ಈ ಆ್ಯಪ್‌ಗಳಿಂದ ದೇಶದ ಸಾರ್ವಭೌಮತೆ ಹಾಗೂ ಸಮಗ್ರತೆಗೆ ಧಕ್ಕೆ ತರುವ ಆರೋಪ ಕೇಳಿಬಂದ ಕಾರಣ ನೀಡಿ ಈ ಮೊಬೈಲ್‌ ಆ್ಯಪ್‌ಗಳನ್ನು ನಿಷೇಧಿಸಲಾಗಿದೆ. ಈ ಆ್ಯಪ್‌ಗಳು ಎಂದಿನಿಂದ ಬಳಕೆಗೆ ಅಥವಾ ಡೌನ್‌ಲೋಡ್‌ಗೆ ನಿಷೇಧ ಆಗಲಿದೆ ಎಂಬುದರ ಕುರಿತು ಸರ್ಕಾರ ತನ್ನ ಆದೇಶದಲ್ಲಿ ಯಾವುದೇ ಮಾಹಿತಿ ನೀಡಿಲ್ಲ.

ಟಿಕ್‌ಟಾಕ್ ನಿಷೇಧದ ಬಳಿಕ ಮೇಡ್ ಇನ್ ಇಂಡಿಯಾ ರೊಪೋಸೋ ಆ್ಯಪ್ ಜನಪ್ರಿಯ!

ಸೋಮವಾರ ಸಂಜೆ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ ಈ ಕುರಿತಂತೆ ಆದೇಶ ಹೊರಡಿಸಿದೆ. ಭಾರತದ ಸಾರ್ವಭೌಮತೆ ಹಾಗೂ ಸಮಗ್ರತೆ ವಿಚಾರದಲ್ಲಿ ಇವು ಪೂರ್ವಾಗ್ರಹಪೀಡಿತವಾಗಿ ಕೆಲಸ ಮಾಡುತ್ತಿದ್ದವು. ಇವುಗಳಿಂದ 130 ಕೋಟಿ ಜನರ ‘ದತ್ತಾಂಶ ಭದ್ರತೆ’ ಹಾಗೂ ‘ಖಾಸಗಿತನ’ಕ್ಕೆ ಬೆದರಿಕೆ ಇತ್ತು ಎಂದು ಸಚಿವಾಲಯವು ತನ್ನ ಆದೇಶದಲ್ಲಿ ತಿಳಿಸಿದೆ. ಭಾರತ ಸರ್ಕಾರದ ಈ ಆರ್ಥಿಕ ಗದಾಪ್ರಹಾರ ಮುಂದಿನ ದಿನಗಳಲ್ಲಿ ಉಭಯ ದೇಶಗಳ ನಡುವೆ ಆರ್ಥಿಕ ಯುದ್ಧಕ್ಕೆ ಕಾರಣವಾದರೂ ಅಚ್ಚರಿ ಇಲ್ಲ ಎನ್ನಲಾಗಿದೆ.