Feb 5, 2022, 12:26 PM IST
ಭಾಗ್ಯಲಕ್ಷ್ಮಿ ಯೋಜನೆ(Bhagyalakshmi bond scheme) ಯಡಿಯೂರಪ್ಪ 2010ರಲ್ಲಿ ಸಿಎಂ ಆಗಿದ್ದಾಗ ಜಾರಿಗೆ ತಂದ ಯೋಜನೆ. ಹೆಣ್ಣು ಮಕ್ಕಳು ಹುಟ್ಟಿದ ಕೂಡಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡರೆ ಹೆಣ್ಣು ಮಗುವಿಗೆ 18 ವರ್ಷ ತುಂಬಿದಾಗ 2 ಲಕ್ಷ ರೂಪಾಯಿ ನೀಡುವ ಯೋಜನೆ ಇದು. ಇಂತಹ ಯೋಜನೆಯನ್ನು ಯಡಿಯೂರಪ್ಪ ಸಿಎಂ ಆಗಿದ್ದಾಗ ಜಾರಿಗೆ ತಂದಿದ್ದರು. ಆದರೆ ಯಡಿಯೂರಪ್ಪನವರ ಮಹತ್ವಾಕಾಂಕ್ಷೆಯ ಯೋಜನೆ ಕಾಫಿನಾಡು ಚಿಕ್ಕಮಗಳೂರು(Chikkamagaluru) ಜಿಲ್ಲೆಯಲ್ಲಿ ಹಳಿ ತಪ್ಪಿದೆ. 2010ರಿಂದ 2017ರ ತನಕವೂ ಭಾಗ್ಯಲಕ್ಷ್ಮಿ ಯೋಜನೆ ಅಡಿಯಲ್ಲಿ ಹೆಣ್ಣುಮಕ್ಕಳ ನೊಂದಣಿ ಪ್ರಕ್ರಿಯೆ ನಡೆದಿದೆ. ಅದಕ್ಕೆ ಸರಿಯಾದ ಅನುದಾನವನ್ನು ಕೂಡ ಸರಕಾರ ಬಿಡುಗಡೆ ಮಾಡಿದೆ. ಆದರೆ 2018ರಿಂದ ಇಲ್ಲಿಯ ತನಕ ನೋಂದಣಿಯಾಗುವ ಅರ್ಜಿಗಳು ಬಾಕಿ ಉಳಿದಿದೆ.
ಈಗಾಗಲೇ ಭಾಗ್ಯಲಕ್ಷ್ಮಿ ಯೋಜನೆಯನ್ನು ಸುಕನ್ಯಾ ಸಮೃದ್ಧಿ ಯೋಜನೆಗೆ ವಿಲೀನಗೊಳಿಸಲಾಗಿದೆ. ಜಿಲ್ಲೆಯಲ್ಲಿ 3250 ಫಲಾನುಭವಿಗಳಿಗೆ ಪಾಸ್ ಬುಕ್ /ಬಾಂಡ್ ವಿತರಣೆ ಬಾಕಿ ಇದೆ. ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬದ ಹೆಣ್ಣು ಮಗುವಿನ ಹೆಸರಿನಲ್ಲಿ ಹಣ ಠೇವಣಿ ಇಟ್ಟು ,18 ವರ್ಷ ತುಂಬಿದಾಗ ಮೊತ್ತ 2 ಲಕ್ಷ ನೀಡುವ ಯೋಜನೆ ಇದು. ಒಂದು ಕುಟುಂಬದಲ್ಲಿ ಇಬ್ಬರು ಹೆಣ್ಣಮಕ್ಕಳಿಗೆ ಮಾತ್ರ ಸವಲತ್ತು ಸಿಗುತ್ತದೆ. ಭಾಗ್ಯಲಕ್ಷ್ಮಿ ಯೋಜನೆಯನ್ನು ಸರ್ಕಾರವು ಸುಕನ್ಯಾ ಸಮೃದ್ದಿ ಮೂಲಕ ಮುಂದುವರಿಸಿದೆ. ಪ್ರತಿ ವರ್ಷವೂ ಒಂದು ಮಗುವಿನ ಈ ಯೋಜನೆ ಖಾತೆಗೆ 3 ಸಾವಿರ ಜಮೆ ಮಾಡಲಾಗುತ್ತದೆ. 18 ವರ್ಷ ತುಂಬಿದಾಗ ಅವರಿಗೆ ಬಡ್ಡಿ ಸಮೇತ ಮೊತ್ತ ಪಾವತಿಯಾಗುತ್ತೆ, ಆದ್ರೆ 2018ರಲ್ಲಿ ಭಾಗ್ಯಲಕ್ಷ್ಮಿ ಯೋಜನೆಗೆ ಹೆಸರು ನೋಂದಣಿ ಮಾಡಿದ್ದರೂ, ಫಲಾನುಭವಿಯ ಪಟ್ಟಿಯಲ್ಲಿ ಹೆಸರು ಇದೆ, ಆದ್ರೆ ಜಿಲ್ಲೆಯಲ್ಲಿ ಈವರೆಗೂ ಬಾಂಡ್ ಅಥವಾ ಪಾಸ್ ಬುಕ್ ನೀಡಿಲ್ಲ ಎನ್ನುವ ಅಳಲು ಪೋಷಕರದ್ದು.
Fitness Secret: ಸಮಂತಾ ಸ್ಲಿಮ್ ಆಗಿರೋ ಸೀಕ್ರೆಟ್ ಗೊತ್ತಾ ?
ಒಟ್ಟಾರೆ ಕಳೆದ ನಾಲ್ಕು ವರ್ಷಗಳಿಂದ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ /ಪಾಸ್ ಬುಕ್(passbook) ವಿತರಣೆಯಲ್ಲಿ ವಿಳಂಬವಾಗುತ್ತಿದೆ. ಸರ್ಕಾರ(government) ಅನುದಾನವನ್ನು ಕಾಲ ಕಾಲಕ್ಕೆ ಬಿಡುಗಡೆ ಮಾಡಿದೇ ನಿರ್ಲಕ್ಷ್ಯವನ್ನು ತೋರಿಸುತ್ತಿದೆ. ಇನ್ನಾದ್ರೂ ಯೋಜನೆಯನ್ನು ಜಾರಿಗೆ ತರುವ ಕಾಲದಲ್ಲಿ ಯಾವು ರೀತಿ ಹುಮ್ಮಸ್ಸು ಇರುತ್ತೋ ಅದೇ ರೀತಿ ಎಲ್ಲಾ ಕಾಲದಲ್ಲೂ ಅದು ಮುಂದುವರೆಯಬೇಕು, ಇಲ್ಲಾಂದ್ರೆ ಯೋಜನೆ ಇದ್ದರೂ ಇಲ್ಲದಂತೆ ಎನ್ನುವ ಸ್ಥಿತಿ ನಿರ್ಮಾಣವಾಗುತ್ತೆ.