IMA ವಂಚನೆ: ಶೀಘ್ರದಲ್ಲೇ ಕೈ ನಾಯಕನ ತಲೆದಂಡ?

Jun 18, 2019, 4:52 PM IST

ಬೆಂಗಳೂರು (ಜೂ. 18):  IMA ವಂಚನೆ ಪ್ರಕರಣವನ್ನು ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷ ಗಂಭೀರವಾಗಿ ಪರಿಗಣಿಸಿದೆ ಎಂದಿರುವ KPCC ಅಧ್ಯಕ್ಷ ದಿನೇಶ್ ಗುಂಡೂ ರಾವ್, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮವನ್ನು ಕೈಗೊಳ್ಳುವುದಾಗಿ ಹೇಳಿದರು.

IMA ಪ್ರಕರಣದಲ್ಲಿ ಶಿವಾಜಿನಗರ ಶಾಸಕ ರೋಷನ್ ಬೇಗ್ ಹೆಸರು ಕೇಳಿ ಬಂದಿದೆ. ಮನ್ಸೂರ್ ಖಾನ್ ಪರ ಪಕ್ಷದ ಹಿರಿಯ ನಾಯಕ, ಸಚಿವ ಆರ್.ವಿ. ದೇಶಪಂಡೆ ಬಳಿ ರೋಷನ್ ಬೇಗ್ ಲಾಬಿ ನಡೆಸಿದ್ದಾರೆ, ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಹೈಕಮಾಂಡ್‌ಗೆ ಮನವಿ ಮಾಡುತ್ತೇವೆ ಎಂದು, ಮಾಧ್ಯಮಗಳ ಜೊತೆ ಮಾತನಾಡಿದ ದಿನೇಶ್ ಹೇಳಿದರು.

IMA ಬಹುಕೋಟಿ ವಂಚನೆ ಪ್ರಕರಣದಲ್ಲಿ ಲಕ್ಷಾಂತರ ಮಂದಿ ಹಣ ಕಳೆದುಕೊಂಡಿದ್ದು, ಮಾಲೀಕ ಮನ್ಸೂರ್ ಖಾನ್ ತಲೆ ಮರೆಸಿಕೊಂಡಿದ್ದಾನೆ. ತಲೆಮರೆಸಿಕೊಳ್ಳುವ ಮುನ್ನ ಬಿಡುಗಡೆ ಮಾಡಿದ್ದ ಆಡಿಯೋ ಕ್ಲಿಪ್‌ನಲ್ಲಿ ಮನ್ಸೂರ್ ಖಾನ್ ರೋಷನ್ ಬೇಗ್ ಹೆಸರು ಪ್ರಸ್ತಾಪಿಸಿದ್ದಾನೆ. ಆದರೆ ಬೇಗ್ ತಮ್ಮ ವಿರುದ್ಧದ ಆರೋಪಗಳನ್ನು ಅಲ್ಲಗಳೆದಿದ್ದಾರೆ.