ಅಳಿಯನ ಮದ್ವೆಯಲ್ಲಿ ಡಾನ್ಸ್ ಮಾಡುತ್ತಿದ್ದಾಗಲೇ ಹೃದಯಾಘಾತ: ಕುಸಿದು ಬಿದ್ದು ಮಾವ ಸಾವು

By Anusha Kb  |  First Published Apr 26, 2024, 9:24 PM IST

ಅಳಿಯನ ಮದ್ವೆಯಲ್ಲಿ ಡಾನ್ಸ್‌ ಮಾಡುತ್ತಿದ್ದಾಗಲೇ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ರಾಜಸ್ಥಾನದ ಝುಂಝುಂನ್ ಜಿಲ್ಲೆಯಲ್ಲಿ ನಡೆದಿದೆ. ಈ ಅವಘಡ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  
 


ರಾಜಸ್ಥಾನ: ಅಳಿಯನ ಮದ್ವೆಯಲ್ಲಿ ಡಾನ್ಸ್‌ ಮಾಡುತ್ತಿದ್ದಾಗಲೇ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ರಾಜಸ್ಥಾನದ ಝುಂಝುಂನ್ ಜಿಲ್ಲೆಯಲ್ಲಿ ನಡೆದಿದೆ. ಈ ಅವಘಡ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  

ರಾಜಸ್ಥಾನದ ಝುಂಝುಂನ್ ಜಿಲ್ಲೆಯ ನವಲ್‌ಗರ್‌ ತೆಹ್ಸಿಲ್‌ನ  ಲೊಚ್ವಾ ಪ್ರದೇಶದ ಧನಿ ಎಂಬಲ್ಲಿ ಈ ಘಟನೆ ನಡೆದಿದೆ.  ಮೃತರನ್ನು ಕಮಲೇಶ್ ಧಾಕ ಎಂದು ಗುರುತಿಸಲಾಗಿದೆ. ಇವರು ವರನಿಗೆ ಸಂಬಂಧದಲ್ಲಿ ಮಾವನಾಗಿದ್ದು, ಅಳಿಯನ ಮದುವೆಯ ಖುಷಿಯಲ್ಲಿದ್ದ ಅವರು ಮದ್ವೆ ಮೆರವಣಿಗೆಯಲ್ಲಿ ತಲೆ ಮೇಲೆ ಮಡಿಕೆ ಇಟ್ಟುಕೊಂಡು ಮಟ್ಕಾ ಡಾನ್ಸ್ ಮಾಡುತ್ತಿದ್ದರು. 

Latest Videos

undefined

ತಲೆಯ ಮೇಲೆ ನೀರು ಪೂರ್ತಿ ತುಂಬಿದ ಮಣ್ಣಿನ ಮಡಕೆ ಇಟ್ಟುಕೊಂಡು ಖುಷಿಯಿಂದ ಅವರು ನರ್ತಿಸುತ್ತಿದ್ದರು. ಆದರೆ ಒಮ್ಮಿಂದೊಮ್ಮೆಲೆ ಕಮಲೇಶ್‌ ಕುಸಿದು ಬಿದ್ದಿದ್ದಾರೆ. ಇದರಿಂದ ಅವರ ತಲೆಯಲ್ಲಿದ್ದ ಮಣ್ಣಿನ ಮಡಕೆ ಒಡೆದು ಹೋಗಿದೆ. ಕೂಡಲೇ ಅಲ್ಲಿದ್ದವರೆಲ್ಲಾ ಸೇರಿ ಕಮಲೇಶ್ ಅವರನ್ನು ಸಮೀಪದ ಆಸ್ಪತ್ರಗೆ ಕರೆದೊಯ್ದಿದ್ದಾರೆ. ಆದರೆ ಅಲ್ಲಿ ವೈದ್ಯರು, ಕಮಲೇಶ್ ಈಗಾಗಲೇ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೇ ಅವರಿಗೆ ಡಾನ್ಸ್ ಮಾಡುತ್ತಿದ್ದಾಗಲೇ ಹೃದಯಾಘಾತವಾಗಿದ್ದು, ಇದರಿಂದ ಅವರು ಕುಸಿದು ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಮದ್ವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಶೋಕ ಮಡುಗಟ್ಟಿತ್ತು.

Breaking: ಮತದಾನ ಮಾಡಿ ಬಂದ ವ್ಯಕ್ತಿ ಹೃದಯಾಘಾತದಿಂದ ಸಾವು: ಬೆಂಗಳೂರು ಮಹಿಳೆಗೆ ಹೃದಯ ಸ್ತಂಭನ

ಮೃತ ಕಮಲೇಶ್ ಅವರು  ಶ್ರಮಜೀವಿಯಾಗಿದ್ದು, ನವಲ್‌ಗರ್‌ ಚೌಖನಿಯ ಗ್ಯಾಸ್ ಏಜೆನ್ಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಹಾಗೂ ಗ್ರಾಹಕರಿಗೆ ಮನೆ ಮನೆಗೆ ಗ್ಯಾಸ್‌ ಸಿಲಿಂಡರ್ ಹೊತ್ತುಕೊಂಡು ಬಂದು ಪೂರೈಕೆ ಮಾಡುತ್ತಿದ್ದರು. ಆದರೆ ಇವರ ದಿಢೀರ್ ಸಾವು ಗ್ರಾಮದಲ್ಲಿ ಬೇಸರದ ವಾತಾವರಣ ಸೃಷ್ಟಿ ಮಾಡಿದೆ. ನಂತರ ಅವರ ಅಂತ್ಯಕ್ರಿಯೆಯನ್ನು ಗ್ರಾಮಸ್ಥರೆಲ್ಲ ಸೇರಿ ನಡೆಸಿದ್ದು, ಬಳಿಕ ಮದ್ವೆ ಕಾರ್ಯ ಮುಗಿಸಲಾಗಿದೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಜನ ಕೋವಿಡ್‌ ನಂತರ ಇಂತಹ ಘಟನೆಗಳು ಹೆಚ್ಚಾಗಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.  

ಶ್ರೀಲಂಕಾದಿಂದ ರಾಮೇಶ್ವರಂಗೆ ಈಜುತ್ತಿದ್ದ ಬೆಂಗಳೂರಿನ ಸಾಹಸಿ ಹೃದಯಾಘಾತದಿಂದ ನಿಧನ!

शादी में मटका डांस करते समय हुई व्यक्त की मौत। यह घटना राजस्‍थान के झुंझुनू जिले की नवलगढ़ तहसील की है। pic.twitter.com/mtaHXEbFYV

— Priya singh (@priyarajputlive)

 

click me!