ಲೋಕಸಭಾ ಚುನಾವಣೆ 2024; 2ನೇ ಹಂತದಲ್ಲಿ ಶೇ.61 ರಷ್ಟು ಮತದಾನ, ತ್ರಿಪುರದಲ್ಲಿ ಗರಿಷ್ಠ!

By Suvarna NewsFirst Published Apr 26, 2024, 9:47 PM IST
Highlights

ಲೋಕಸಭಾ ಚುನಾವಣೆ 2ನೇ ಹಂತದ ಮತದಾನ ಅಂತ್ಯಗೊಂಡಿದೆ. ಕರ್ನಾಟಕ ಸೇರಿದಂತೆ 13 ರಾಜ್ಯಗಳ 89 ಕ್ಷೇತ್ರಗಳಲ್ಲಿ ಶೇಕಡಾ 60.96 ರಷ್ಟು ಮತದಾನವಾಗಿದೆ. ತ್ರಿಪುರದಲ್ಲಿ ಗರಿಷ್ಠ ಮತದಾನ ದಾಖಲಾಗಿದೆ. 13 ರಾಜ್ಯದಲ್ಲಿನ ಮತದಾನ ವಿವರ ಇಲ್ಲಿದೆ.
 

ನವದೆಹಲಿ(ಏ.26) ಲೋಕಸಭಾ ಚುನಾವಣೆ 2024ರ 2ನೇ ಹಂತದ ಮತದಾನ ಅಂತ್ಯಗೊಂಡಿದೆ. ಕರ್ನಾಟಕದ 14 ಕ್ಷೇತ್ರ ಸೇರಿದಂತೆ ದೇಶದ 13 ರಾಜ್ಯಗಳಲ್ಲಿ ಎರಡನೇ ಹಂತದ ಮತದಾನ ನಡೆದಿದೆ. ಕೆಲ ಘಟನೆಗಳನ್ನು ಹೊರತುಪಡಿಸಿದರೆ ಯಾವುದೇ ಅಹಿತರ ಘಟನೆಗಳಿಗೆ ಅವಕಾಶ ನೀಡದ ಚುನಾವಣಾ ಆಯೋಗ ಯಶಸ್ವಿಯಾಗಿ 2ನೇ ಹಂತದ ಮತದಾನ ಮುಗಿಸಿದೆ. 2ನೇ ಹಂತದಲ್ಲಿ ಶೇಕಡಾ 60.96 ರಷ್ಟು ಮತದಾನವಾಗಿದೆ. ಮತದಾನ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ಹಲವು ಕಸರತ್ತು ನಡೆಸಿ ತಕ್ಕ ಮಟ್ಟಿಗೆ ಯಶಸ್ಸು ಕಂಡಿದೆ. ತ್ರಿಪುರಾದಲ್ಲಿ ಶೇಕಡಾ  77.93ರಷ್ಟು ಮತದಾನವಾಗುವ ಮೊದಲ 2ನೇ ಹಂತದಲ್ಲಿ ಗರಿಷ್ಠ ಮತದಾನ ದಾಖಲಿಸಿದ ರಾಜ್ಯ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

1,200 ಅಭ್ಯರ್ಥಿಗಳ ಭವಿಷ್ಯ ಇದೀಗ ಮತಯಂತ್ರದಲ್ಲಿ ಭದ್ರವಾಗಿದೆ. ಇನ್ನುಳಿದ 5 ಹಂತದ ಮತದಾನದ ಬಳಿಕ ಜೂನ್ 4 ರಂದು ಫಲಿತಾಂಶ ಘೋಷಣೆಯಾಗಲಿದೆ.ಬೆಳಗ್ಗೆ ಚುರುಕಿನ ಮತದಾನ ನಡೆದಿದ್ದರೆ, ಮಧ್ಯಾಹ್ನ ನೀರಸವಾಗಿತ್ತು. ಸುಡು ಬಿಸಿಲಿನ ಕಾರಣದಿಂದ ಜನರು ಬೆಳಗ್ಗೆ ಹಾಗೂ ಸಂಜೆ ವೇಳೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದಾರೆ.  

ಚತ್ತೀಸಘಡದಲ್ಲಿ ಶೇಕಡಾ 72.13ರಷ್ಟು ಮತದಾನ ದಾಖಲಾಗಿದ್ದರೆ, ಪಶ್ಚಿಮ ಬಂಗಾಳದಲ್ಲಿ 71.84 ಮತದಾನ ದಾಖಲಾಗಿದೆ. ಮಣಿಪುರದಲ್ಲಿ ಶೇಕಡಾ 76.06 ರಷ್ಟು ಮತದಾನ ದಾಖಲಾಗಿದೆ. ಅಸ್ಸಾಂನಲ್ಲಿ ಸಂಜೆ 5 ಗಂಟೆ ವೇಳೆಗೆ ಶೇಕಡಾ 70.66ರಷ್ಚು ಮತದಾನ ದಾಖಲಾಗಿತ್ತು. 

ಸಂಜೆ 5 ಗಂಟೆ ಹೊತ್ತಿಗೆ ದಾಖಲಾದ ಮತದಾನದ ಪ್ರಮಾಣ
ಅಸ್ಸಾಂ-  ಶೇ 70.66
ಬಿಹಾರ-  53.03
ಛತ್ತೀಸ್ಗಢ- 72.13
ಜಮ್ಮು ಮತ್ತು ಕಾಶ್ಮೀರ- 67.22
ಕರ್ನಾಟಕ- 63.97
ಮಧ್ಯಪ್ರದೇಶ - 54.83
ಮಹಾರಾಷ್ಟ್ರ- 53.51
ಮಣಿಪುರ - 76.06
ರಾಜಸ್ಥಾನ್-59.19
ತ್ರಿಪುರ- 77.53
ಉತ್ತರ ಪ್ರದೇಶ -52.74
ಪಶ್ಚಿಮ ಬಂಗಾಳ- 71.84
ಕೇರಳ-  63.97

ಕರ್ನಾಟಕ, ಕೇರಳ, ರಾಜಸ್ಥಾನ, ಉತ್ತರ ಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ಅಸ್ಸಾಂ, ಬಿಹಾರ್, ಚತ್ತೀಸಘಡ, ಪಶ್ಚಿಮ ಬಂಗಾಳ, ಮಣಿಪುರ, ತ್ರಿಪುರಾ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ 2ನೇ ಹಂತದ ಮತದಾನ ನಡೆದಿತ್ತು.  13 ರಾಜ್ಯಗಳ ಒಟ್ಟು 89 ಕ್ಷೇತ್ರಗಳಿಗೆ ಇಂದು ಮತದಾನ ನಡೆದಿದೆ. 
 

click me!