ಕಾರು ಪಲ್ಟಿಯಾಗಿಲ್ಲ ಸಾಗುತ್ತಿದೆ, ರಸ್ತೆಯಲ್ಲಿ ಎಲ್ಲರನ್ನು ಅಚ್ಚರಿಗೊಳಿಸಿದ ವಿಶೇಷ ಕಾರು ವೈರಲ್!

By Suvarna News  |  First Published Apr 26, 2024, 10:39 PM IST

ಒಂದೇ ನೋಟಕ್ಕೆ ಅಯ್ಯೋ ನಡು ರಸ್ತೆಯಲ್ಲೇ ಕಾರು ಪಲ್ಟಿಯಾಗಿದೆ ಎಂದನಿಸುತ್ತಿದೆ. ಆದರೆ ನಿಜಕ್ಕೂ ಇದು ಪಲ್ಟಿಯಾದ ಕಾರಲ್ಲ. ಅಚ್ಚರಿಗೊಳಿಸುವ ವಿನ್ಯಾಸದ ಮೂಲಕ ಕಾರು ಎಲ್ಲರ ಗಮನಸೆಳೆಯುತ್ತಿದೆ. ಈ ಕಾರಿನ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.
 


ಅದು ಟ್ರಾಫಿಕ್ ತುಂಬಿದ ರಸ್ತೆ. ಕಾರೊಂದ ಪಲ್ಟಿಯಾದರೆ ಹೇಗೆ? ಕಿಲೋಮೀಟರ್ ದೂರ ವಾಹನಗಳು ನಿಂತಿರುತ್ತದೆ. ಆದರೆ ಇಲ್ಲಿ ಹಾಗಿಲ್ಲ, ಕಾರು ಪಲ್ಟಿಯಾದಂತಿದೆ. ಯಾರೂ ನೆರವಿಗೆ ಬಂದಿಲ್ಲ. ಹತ್ತಿರ ಹೋದಂತೆ ಪಲ್ಚಿಯಾದ ಕಾರಿನ ಮೇಲೆ ಇಬ್ಬರು ಕುಳಿತಿದ್ದಾರೆ. ಅರೇ ಇದೇನಿದು ಎಂದು ಮತ್ತಷ್ಟು ಹತ್ತಿರ ಹೋದರೆ ಇದು ಪಲ್ಟಿಯಾಗಿರುವ ಕಾರಲ್ಲ. ರಸ್ತೆಯಲ್ಲಿ ಸಂಚರಿಸುವ ಕಾರು ಅನ್ನೋದು ಸ್ಪಷ್ಟವಾಗಿದೆ. ಹೌದು, ಈ ಕಾರನ್ನು ನೋಡಿದರೆ ಪಲ್ಟಿಯಾಗಿದೆ ಎಂದನಿಸುತ್ತದೆ. ಆದರೆ ಇದು ಕಾರಿನ ಭಿನ್ನ ರೀತಿಯ ವಿನ್ಯಾಸ. ಇದನ್ನು ವಿನ್ಯಾಸ ಎಂದ ಕರೆಯುತ್ತೀರೋ, ವಿಚಿತ್ರ ಎನ್ನುತ್ತೀರೋ ನಿಮಗೆ ಬಿಟ್ಟಿದ್ದು. ಆದರೆ ಈ ಕಾರು ಮಾತ್ರ ಭಾರಿ ಸೆನ್ಸೇಷನ್ ಸೃಷ್ಟಿಸಿದೆ.

ಅಮೆರಿಕದ ರಸ್ತೆಯಲ್ಲಿ ಈ ಕಾರು ಪತ್ತೆಯಾಗಿದೆ. ಕಾರು ಪಲ್ಟಿಯಾದಾಗ ಕಾಣುವಂತೆ ಈ ಕಾರನ್ನು ವಿನ್ಯಾಸ ಮಾಡಲಾಗಿದೆ. ಕಾರಿನ ಚಕ್ರಗಳು, ಎಕ್ಸಲ್ ಸೇರಿದಂತೆ ಎಲ್ಲವನ್ನು ಅಷ್ಟು ಅಚ್ಚುಕಟ್ಟಾಗಿ ವಿನ್ಯಾಸ ಮಾಡಲಾಗಿದೆ. ಇಬ್ಬರು ಕುಳಿತುಕೊಂಡು ಪ್ರಯಾಣ ಮಾಡುವಂತೆ ಸೀಟ್ ಫಿಕ್ಸ್ ಮಾಡಿದ್ದಾರೆ. ಇನ್ನುಳಿದಂತೆ ಎಲ್ಲವೂ ಕಾರು ಪಲ್ಟಿಯಾದ ಯಾವ ದೃಶ್ಯ ಕಾಣಸಿಗುವುದೋ ಅದೇ ರೀತಿ, ಅಷ್ಟೆ ನಾಜೂಕಾಗಿ ವಿನ್ಯಾಸ ಮಾಡಲಾಗಿದೆ.

Tap to resize

Latest Videos

undefined

ಮುರಿದೋಯ್ತು ಕಾರಿನ ಮಿರರ್, ಮಾಲೀಕನ ಐಡಿಯಾಗೆ ದಂಗಾದ ಟಾಟಾ ಮೋಟಾರ್ಸ್!

ಮತ್ತೊಂದು ವಿಶೇಷ ಅಂದರೆ ಈ ಕಾರಿನ ಗ್ರೌಂಡ್ ಕ್ಲಿಯರೆನ್ಸ್ ತೀರಾ ಕಡಿಮೆ. ಕಾರಣ ನಿಜವಾದ ಚಕ್ರಗಳು ಕಾಣಿಸದಂತೆ ವಿನ್ಯಾಸ ಮಾಡಿದ್ದಾರೆ. ನಾಲ್ಕು ಚಕ್ರಗಳಿದ್ದರೂ ವಿನ್ಯಾಸದಿಂದ ಯಾವುದು ಕಾಣಸುತ್ತಿಲ್ಲ. ಹತ್ತಿರ ಹೋಗಿ ನೋಡಿದರೆ ಮಾತ್ರ ಇದು ಪಲ್ಟಿಯಾದ ಕಾರಲ್ಲ, ಚಲಿಸುವ ಕಾರು ಅನ್ನೋದು ಸ್ಪಷ್ಟವಾಗಲಿದೆ. 

ಈ ಕಾರಿನ ಇಂಡಿಕೇಟರ್, ಹೆಡ್‌ಲೈಡ್, ಟೈಲ್ ಲೈಟ್ಸ್ ಎಲ್ಲವನ್ನೂ ಉಲ್ಟಾ ಕಾಣುವ ರೀತಿ ಫಿಕ್ಸ್ ಮಾಡಲಾಗಿದೆ. ಈ ವಿಶೇಷ ಕಾರಿಗೆ ವಿವಿದ ಕಮೆಂಟ್‌ಗಳು ವ್ಯಕ್ತವಾಗಿದೆ. ನಮ್ಮನ್ನೆ ಕನ್ಫ್ಯೂಸ್ ಮಾಡಿ ಪ್ರಯೋಜನವೇನು ಎಂದು ಕೆಲವರು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ಕಾರನ್ನು ಈ ರೀತಿ ಮಾಡಿಫಿಕೇಶನ್ ಮಾಡಿ ರಸ್ತೆಗಳಿಸಿದ ಈ ಸಾಹಸಿಗೆ ಸಲಾಂ ಎಂದಿದ್ದಾರೆ. ಭಾರತದಲ್ಲಾಗಿದ್ದರೆ ಈತ 8 ಚಕ್ರಕ್ಕೆ ತೆರಿಗೆ ಕಟ್ಟಬೇಕಿತ್ತು ಎಂದು ಪ್ರತಿಕ್ರಿಯಿಸಿದ್ದಾರೆ. 

ಉದ್ಯಮಿ ಬಳಿ ಇದೆ ಅತೀ ದುಬಾರಿ ಪ್ಯೂರ್ ವೈಟ್ ಗೋಲ್ಡ್ ಬೆಂಜ್ ಕಾರು, ಇದರ ಬೆಲೆ 20.91 ಕೋಟಿ!

ಅಮೆರಿಕದಲ್ಲಿ ಕಾರು ಮಾಡಿಫಿಕೇಶನ್ ನಿಷಿದ್ಧವಾಗಿದೆ. ಭಾರತದಲ್ಲೂ ಕಾರು ಮಾಡಿಫಿಕೇಶನ್ ಮಾಡುವುದು ಮೋಟಾರು ವಾಹನ ಕಾಯ್ದೆ ಉಲ್ಲಂಘನೆಯಾಗಿದೆ. ಇದಕ್ಕೆ ದುಬಾರಿ ದಂಡದ ಜೊತೆಗೆ ವಾಹನ ವಶಪಡಿಸಲಾಗುತ್ತದೆ.
 

click me!