IMA ಬಗ್ಗೆ ಫತ್ವಾ ಕೊಟ್ಟಿಲ್ಲ, ಹಣ ಹೂಡಿ ಎಂದಿಲ್ಲ: ಮೌಲಾನ ಮಕ್ಸೂದ್ ಇಮ್ರಾನ್

Jun 15, 2019, 4:24 PM IST

ಬೆಂಗಳೂರು (ಜೂ.15): ಹಲಾಲ್ ಹೂಡಿಕೆ ಹೆಸರಿನಲ್ಲಿ ಲಕ್ಷಾಂತರ ಹೂಡಿಕೆದಾರರನ್ನು ವಂಚಿಸಿ IMA ಸಂಸ್ಥೆಯ ಮಾಲೀಕ ಮನ್ಸೂರ್ ಖಾನ್  ಭೂಗತನಾಗಿದ್ದಾನೆ. ಮನ್ಸೂರ್ ಪರ ಮಾತನಾಡಿದ್ದ ಧರ್ಮಗುರುಗಳ ವಿರುದ್ಧ ಮೋಸ ಹೋದವರು ಸಿಟ್ಟಾಗಿದ್ದಾರೆ.

ಹಲಾಲ್ ಹೂಡಿಕೆ ವ್ಯವಹಾರವಾಗಿರುವುದರಿಂದ ಮನ್ಸೂರ್ ಖಾನ್ ಗೆ ಮುಸ್ಲಿಮ್ ಜನಸಾಮಾನ್ಯರನ್ನು ಆಕರ್ಷಿಸಲು ಮೌಲ್ವಿಗಳ ವಿಶ್ವಾಸ ಗೆಲ್ಲೋದು ಅನಿವಾರ್ಯವಾಗಿತ್ತು. ಮನ್ಸೂರ್ ತೋಡಿದ ಖೆಡ್ಡಾಗೆ ಮುಸ್ಲಿಮ್ ಉಲೆಮಾಗಳು ಬಿದ್ದಿದ್ದಾರೆ, ಜೊತೆಗೆ ಲಕ್ಷಾಂತರ ಹೂಡಿಕೆದಾರರನ್ನೂ ಕೂಡಾ ಬೀಳಿಸಿದ್ದಾರೆ.

IMA ಕರ್ಮಕಾಂಡ ಹಾಗೂ ಅದರಲ್ಲಿ ಧರ್ಮಗುರುಗಳ ಪಾತ್ರದ ಬಗ್ಗೆ ಬೆಂಗಳೂರಿನ ಕೆ.ಆರ್. ಮಾರ್ಕೆಟ್ ಜಾಮಿಯಾ ಮಸೀದಿ ಧರ್ಮಗುರು ಮೌಲಾನ  ಮಕ್ಸೂದ್ ಇಮ್ರಾನ್ ಸುವರ್ಣನ್ಯೂಸ್ ಜೊತೆ ಮಾತನಾಡಿದ್ದಾರೆ.