Weight Loss Tips: ಒಂದೇ ವಾರದಲ್ಲಿ ತೂಕ ಇಳಿಸಿಕೊಳ್ಳೋಕೆ ಈ ಮಸಾಲೆ ತಿನ್ನಿ

By Vinutha Perla  |  First Published May 7, 2024, 9:14 AM IST

ಲವಂಗವು ಭಾರತದ ಅಡುಗೆಮನೆಯಲ್ಲಿ ಹೆಚ್ಚಾಗಿ ಬಳಸಲ್ಪಡುವ ಮಸಾಲೆಯಾಗಿದೆ. ಹಲವು ಆಹಾರ ಪದಾರ್ಥಗಳನ್ನು ತಯಾರಿಸುವಾಗ ಲವಂಗವನ್ನು ಬಳಸುತ್ತಾರೆ. ಆದರೆ ಲವಂಗ ತಿನ್ನೋದ್ರಿಂದ ತೂಕ ಇಳಿಸಿಕೊಳ್ಬೋದು ಅನ್ನೋದು ನಿಮ್ಗೆ ಗೊತ್ತಿದ್ಯಾ?


ಲವಂಗವು ಭಾರತದ ಅಡುಗೆಮನೆಯಲ್ಲಿ ಹೆಚ್ಚಾಗಿ ಬಳಸಲ್ಪಡುವ ಮಸಾಲೆಯಾಗಿದೆ. ಹಲವು ಆಹಾರ ಪದಾರ್ಥಗಳನ್ನು ತಯಾರಿಸುವಾಗ ಲವಂಗವನ್ನು ಬಳಸುತ್ತಾರೆ. ಲವಂಗವು ತುಂಬಾ ಆರೋಗ್ಯಕರ ಮಸಾಲೆಯಾಗಿದೆ. ಅನೇಕ ಕಾಯಿಲೆಗಳನ್ನು ಗುಣಪಡಿಸಲು ಇದನ್ನು ಹಲವು ವರ್ಷಗಳಿಂದ ಬಳಸಲಾಗುತ್ತಿದೆ. ವಿಶಿಷ್ಟ ಸುವಾಸನೆ ಮತ್ತು ಪರಿಮಳದಿಂದಾಗಿ, ಲವಂಗವನ್ನು ಅನೇಕ ಪಾಕವಿಧಾನಗಳಲ್ಲಿ ಬಳಸಲಾಗುತ್ತದೆ.

ನ್ಯಾಷನಲ್ ನ್ಯೂಟ್ರಿಯೆಂಟ್ ಡೇಟಾಬೇಸ್ ಪ್ರಕಾರ, ಲವಂಗವು ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್ ಮತ್ತು ಡಯೆಟರಿ ಫೈಬರ್ ಸೇರಿದಂತೆ ಅನೇಕ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಲವಂಗ ತಿನ್ನುವುದರಿಂದ ದೇದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದಲ್ಲದೆ, ಇದು ಹಲ್ಲು ಮತ್ತು ವಸಡು ಸಮಸ್ಯೆಗಳನ್ನು ನಿವಾರಿಸುತ್ತದೆ. ಮಾತ್ರವಲ್ಲ ಲವಂಗ, ಉತ್ಕರ್ಷಣ ನಿರೋಧಕಗಳು ಮತ್ತು ಬ್ಯಾಕ್ಟೀರಿಯಾ ವಿರೋಧಿ ಅಂಶಗಳನ್ನು ಒಳಗೊಂಡಿದೆ. ಇದು ದೇಹವನ್ನು ಅನೇಕ ರೋಗಗಳಿಂದ ಮತ್ತು ಸ್ವತಂತ್ರ ರಾಡಿಕಲ್‌ಗಳಿಂದ ರಕ್ಷಿಸುತ್ತದೆ. ಕ್ಯಾನ್ಸರ್, ಹೃದ್ರೋಗ, ಮಧುಮೇಹ ಇತ್ಯಾದಿಗಳ ಅಪಾಯವನ್ನು ಕಡಿಮೆ ಮಾಡುತ್ತದೆ. 

Tap to resize

Latest Videos

undefined

ವೈಟ್ ಲಾಸ್ ಮಾಡ್ಕೊಳ್ಳೋಕೆ ದಿನಾ ಈ ಒಂದು ವ್ಯಾಯಾಮ ಮಾಡಿದ್ರೆ ಸಾಕು!

ಲವಂಗದಲ್ಲಿರುವ ಪೋಷಕಾಂಶಗಳು:
ಲವಂಗದಲ್ಲಿ ಕಬ್ಬಿಣ, ರಂಜಕ, ಮೆಗ್ನೀಸಿಯಮ್, ಕ್ಯಾಲ್ಸಿಯಂ, ಫೋಲೇಟ್, ಫೈಬರ್, ಜೀವಸತ್ವಗಳು, ಸತು, ತಾಮ್ರ, ಸೆಲೆನಿಯಮ್, ಥಯಾಮಿನ್, ಸೋಡಿಯಂ, ಮ್ಯಾಂಗನೀಸ್, ಪೊಟ್ಯಾಸಿಯಮ್ ಮುಂತಾದ ಪೋಷಕಾಂಶಗಳು ಸಮೃದ್ಧವಾಗಿವೆ. ಇದಲ್ಲದೆ, ಇದು ಆಂಟಿಮೈಕ್ರೊಬಿಯಲ್ ಮತ್ತು ಆಂಟಿವೈರಲ್ ಗುಣಲಕ್ಷಣಗಳನ್ನು ಹೊಂದಿದೆ. ಇದು ದೇಹಕ್ಕೆ ಹಲವಾರು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಇದಲ್ಲದೆ, ಲವಂಗವನ್ನು ತಿನ್ನುವುದರಿಂದ ತೂಕವನ್ನು ಕಳೆದುಕೊಳ್ಳಬಹುದು ಅನ್ನೋದು ನಿಮ್ಗೆ ಗೊತ್ತಿದ್ಯಾ?

ತೂಕವನ್ನು ಇಳಿಸಿಕೊಳ್ಳಲು ಲವಂಗವನ್ನು ಹೇಗೆ ತಿನ್ನಬೇಕು?
ತೂಕ ಇಳಿಸಿಕೊಳ್ಳಲು ಬಯಸುವವರು ಲವಂಗವನ್ನು ಹಲವು ರೀತಿಯಲ್ಲಿ ಬಳಸಬಹುದು. ಇದಕ್ಕಾಗಿ ಮೊದಲು 3 ಅಥವಾ 4 ಲವಂಗವನ್ನು ರಾತ್ರಿಯಿಡೀ ಒಂದು ಲೋಟ ನೀರಿನಲ್ಲಿ ನೆನೆಸಿ ಮತ್ತು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಆ ನೀರನ್ನು ಕುಡಿಯಿರಿ. ಇದನ್ನು ಪ್ರತಿನಿತ್ಯ ಕುಡಿದರೆ ಇದರಲ್ಲಿರುವ ಪೋಷಕಾಂಶಗಳು ದೇಹದ ಚಯಾಪಚಯವನ್ನು ಹೆಚ್ಚಿಸಿ ದೇಹದಲ್ಲಿ ಸಂಗ್ರಹವಾಗಿರುವ ಅನಗತ್ಯ ಕೆಟ್ಟ ಕೊಬ್ಬನ್ನು ಕರಗಿಸುತ್ತದೆ.

ವೈಟ್‌ ಲಾಸ್ ಮಾಡ್ಕೊಳ್ಳೋಕೆ ದಿನಕ್ಕೆ ಎಷ್ಟು ಲೋಟ ನೀರು ಕುಡೀಬೇಕು?

ಹಾಗೆಯೇ ಲವಂಗವನ್ನು ನಿಮ್ಮ ಆಹಾರದಲ್ಲಿ ಪುಡಿ ರೂಪದಲ್ಲಿ ಸೇರಿಸಬಹುದು. ಇದರಿಂದ ದೇಹ ಆರೋಗ್ಯವಾಗುವುದಲ್ಲದೆ ದೇಹದ ತೂಕ ಕೂಡ ಸ್ವಲ್ಪ ಸ್ವಲ್ಪ ಕಡಿಮೆಯಾಗಲು ಶುರುವಾಗುತ್ತದೆ. ಬೆಳಗ್ಗೆ ಎದ್ದಾಗ ಸಾಮಾನ್ಯವಾಗಿ ಟೀ, ಕಾಫಿ ಕುಡಿಯುವ ಬದಲು ಲವಂಗವನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ, ಆ ನೀರನ್ನು ಸೋಸಿ ಪ್ರತಿದಿನ ಕುಡಿದರೆ ದೇಹದ ತೂಕ ನಿಯಂತ್ರಣದಲ್ಲಿರುತ್ತದೆ.

ಹಾಗಂತ ಬೇಗ ತೂಕ ಇಳಿಸಿಕೊಳ್ಳುವ ಭರದಲ್ಲಿ ಹೆಚ್ಚು ಲವಂಗ ತಿನ್ನಬೇಡಿ. ಇದನ್ನು ಅತಿಯಾಗಿ ತಿನ್ನುವುದು ಕರುಳಿನ ಆರೋಗ್ಯಕ್ಕೆ ತುಂಬಾ ಕೆಟ್ಟದು. ಮತ್ತು ಇದರಲ್ಲಿರುವ ರಾಸಾಯನಿಕಗಳು ಕರುಳಿನ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಬಹುದು. ಜಠರಗರುಳಿನ ಸಮಸ್ಯೆಗಳನ್ನು ಉಂಟುಮಾಡಬಹುದು. ಇದಲ್ಲದೆ, ಲವಂಗ ಹೆಚ್ಚು ಸೇವಿಸುವುದರಿಂದ ಸ್ನಾಯು ನೋವು ಮತ್ತು ಆಯಾಸ ಉಂಟಾಗುತ್ತದೆ.

click me!