ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರಾಮಮಂದಿರ ತೀರ್ಪು ರದ್ದತಿಗೆ ರಾಹುಲ್‌ ಚಿಂತನೆ: ಮಾಜಿ ಕಾಂಗ್ರೆಸ್ಸಿಗ ಆಚಾರ್ಯ

By Kannadaprabha NewsFirst Published May 7, 2024, 9:10 AM IST
Highlights

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರಾಮಮಂದಿರ ಕುರಿತ ಸುಪ್ರೀಂ ಕೋರ್ಟ್‌ ತೀರ್ಪು ರದ್ದುಗೊಳಿಸುವ ಯೋಚನೆಯನ್ನು ಪಕ್ಷದ ನಾಯಕ ರಾಹುಲ್‌ ಗಾಂಧಿ ಹೊಂದಿದ್ದಾರೆ ಎಂದು ಪಕ್ಷದ ಮಾಜಿ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ ಬಾಂಬ್‌ ಸಿಡಿಸಿದ್ದಾರೆ.

ಸಂಬಲ್ (ಉ.ಪ್ರ.): ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರಾಮಮಂದಿರ ಕುರಿತ ಸುಪ್ರೀಂ ಕೋರ್ಟ್‌ ತೀರ್ಪು ರದ್ದುಗೊಳಿಸುವ ಯೋಚನೆಯನ್ನು ಪಕ್ಷದ ನಾಯಕ ರಾಹುಲ್‌ ಗಾಂಧಿ ಹೊಂದಿದ್ದಾರೆ ಎಂದು ಪಕ್ಷದ ಮಾಜಿ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ ಬಾಂಬ್‌ ಸಿಡಿಸಿದ್ದಾರೆ.

ಇತ್ತೀಚೆಗೆ ಕಾಂಗ್ರೆಸ್‌ ನಾಯಕರು ರಾಮಮಂದಿರ ಉದ್ಘಾಟನೆಗೆ ಬಹಿಷ್ಕಾರ ಹಾಕಿದ್ದನ್ನು ಖಂಡಿಸಿ ಪಕ್ಷ ತೊರೆದಿದ್ದ ಆಚಾರ್ಯರು ಸುದ್ದಿಗಾರರ ಜತೆ ಸೋಮವಾರ ಮಾತನಾಡಿ, ‘ನಾನು ಕಾಂಗ್ರೆಸ್‌ನಲ್ಲಿ 32 ವರ್ಷಗಳಿಗಿಂತ ಹೆಚ್ಚು ಕಾಲ ಕಳೆದಿದ್ದೇನೆ ಮತ್ತು ರಾಮಮಂದಿರ ಸುಪ್ರೀಂ ಕೋರ್ಟ್‌ ತೀರ್ಪು ಬಂದಾಗ ರಾಹುಲ್‌ ಗಾಂಧಿ ತಮ್ಮ ಆಪ್ತರ ಜತೆ ಸಭೆ ನಡೆಸಿದ್ದರು. ಈ ವೇಳೆ ರಾಹುಲ್‌ ಅವರು ‘ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರ ಒಂದು ಉನ್ನತ ಆಯೋಗ ರಚಿಸೋಣ. ರಾಜೀವ್ ಗಾಂಧಿ ಶಾ ಬಾನೋ ನಿರ್ಧಾರವನ್ನು ರದ್ದುಗೊಳಿಸಿದಂತೆಯೇ, ಆಯೋಗದ ಶಿಫಾರಸು ಅನುಸರಿಸಿ ನಾವು ರಾಮಮಂದಿರ ಕುರಿತ ಸುಪ್ರೀಂ ಕೋರ್ಟ್‌ ತೀರ್ಪನ್ನು ರದ್ದುಗೊಳಿಸೋಣ’ ಎಂದು ಹೇಳಿದ್ದರು’ ಎಂದು ಆರೋಪಿಸಿದರು.

ಅಹ್ಮದಾಬಾದ್‌ನಲ್ಲಿ ಬೆಳ್ಳಂಬೆಳಗ್ಗೆಯೇ ಹಕ್ಕು ಚಲಾಯಿಸಿದ ಮೋದಿ: ಪ್ರಧಾನಿ ನೋಡಲು ದಾರಿಯುದ್ಧಕ್ಕೂ ಜನ

ಏನಿದು ಶಾ ಬಾನೋ ಕೇಸು?:

1985ರಲ್ಲಿನ ಪ್ರಕರಣವಿದು. ಶಾ ಬಾನೋ ಎಂಬ ಮುಸ್ಲಿಂ ಮಹಿಳೆ ತನ್ನ ಗಂಡನಿಂದ ವಿಚ್ಛೇದನ ಪಡೆದು ಜೀವನಾಂಶಕ್ಕೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಆಕೆಗೆ ಜೀವನಾಂಶ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಗಂಡನಿಗೆ ಆದೇಶಿಸಿತ್ತು. ಈ ಆದೇಶ ಮುಸ್ಲಿಮರಲ್ಲಿ ಆಕ್ಷೇಪಕ್ಕೆ ಕಾರಣವಾಗಿತ್ತು. ಹೀಗಾಗಿ 1986ರಲ್ಲಿ ಮುಸ್ಲಿಂ ಮಹಿಳಾ (ವಿಚ್ಛೇದನ) ಕಾಯ್ದೆ ಜಾರಿಗೆ ತಂದಿದ್ದ ಕಾಂಗ್ರೆಸ್‌ ಸರ್ಕಾರ, ವಿಚ್ಛೇದಿತ ಪತ್ನಿಗೆ ಪತಿ ಜೀವನಾಂಶ ಕೊಡಬೇಕು ಎಂಬ ಆದೇಶಕ್ಕೆ ಅಂಕುಶ ಹಾಕಿತ್ತು.

ಜಾರ್ಖಂಡ್‌ನ ಮನೆ ಕೆಲಸದ ಆಳಿನ ಬಳಿ 30 ಕೋಟಿ ರು.ನಗದು ಪತ್ತೆ..!

click me!