ಶಿವಮೊಗ್ಗದಲ್ಲಿ ನಿರೀಕ್ಷೆಗೂ ಮೀರಿ ಜನ ಬೆಂಬಲ, 2 ಲಕ್ಷ ಮತಗಳ ಅಂತರದಿಂದ ಗೆಲ್ಲುವೆ: ಈಶ್ವರಪ್ಪ

Published : May 07, 2024, 09:09 AM IST
ಶಿವಮೊಗ್ಗದಲ್ಲಿ ನಿರೀಕ್ಷೆಗೂ ಮೀರಿ ಜನ ಬೆಂಬಲ, 2 ಲಕ್ಷ ಮತಗಳ ಅಂತರದಿಂದ ಗೆಲ್ಲುವೆ: ಈಶ್ವರಪ್ಪ

ಸಾರಾಂಶ

ರಾಘವೇಂದ್ರ ಹೊರ ಬರ್ತಾರೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರಾಜೀನಾಮೆ ನೀಡ್ತಾರೆ. ಗೀತಾ ಶಿವರಾಜ್ ಕುಮಾರ್ ಗೆಲ್ಲಲ್ಲ, ರಾಘವೇಂದ್ರಗೆ ಮತ ನೀಡಲು ಮನಸ್ಸಿಲ್ಲ ಎಂದು ಹೇಳುವ ಮೂಲಕ ಬಿ.ವೈ. ರಾಘವೇಂದ್ರ ವಿರುದ್ಧ ಹರಿಹಾಯ್ದ ಈಶ್ಬರಪ್ಪ 

ಶಿವಮೊಗ್ಗ(ಮೇ.07):  ಶಿವಮೊಗ್ಗ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಜನ ಬೆಂಬಲ ಸಿಕ್ಕಿದೆ. ಎರಡು ಲಕ್ಷಗಳ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ. ನನಗೆ ಕಾಂಪಿಟೇಟರ್ ಇಲ್ಲ, ಮೊದಲನೇ ಸ್ಥಾನದಲ್ಲಿ ನಾನಿದ್ದರೆ ಎರಡನೇ ಸ್ಥಾನಕ್ಕೆ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳು ಬಡಿದಾಡ್ತಾ ಇದ್ದಾರೆ. ಫಲಿತಾಂಶದ ಬಳಿಕ ಬಿಜೆಪಿಯಲ್ಲಿ ಭಾರೀ ಬದಲಾವಣೆ ಆಗಲಿದೆ. ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ತಿಲಾಂಜಲಿ ಬೀಳಲಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್‌. ಈಶ್ವರಪ್ಪ ತಿಳಿಸಿದ್ದಾರೆ. 

ಇಂದು(ಮಂಗಳವಾರ) ಶಿವಮೊಗ್ಗದ ತಮ್ಮ ನಿವಾಸದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಜತೆ ಮಾತನಾಡಿದ ಈಶ್ಬರಪ್ಪ ಅವರು, ರಾಘವೇಂದ್ರ ಹೊರ ಬರ್ತಾರೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರಾಜೀನಾಮೆ ನೀಡ್ತಾರೆ. ಗೀತಾ ಶಿವರಾಜ್ ಕುಮಾರ್ ಗೆಲ್ಲಲ್ಲ, ರಾಘವೇಂದ್ರಗೆ ಮತ ನೀಡಲು ಮನಸ್ಸಿಲ್ಲ ಎಂದು ಹೇಳುವ ಮೂಲಕ ಬಿ.ವೈ. ರಾಘವೇಂದ್ರ ವಿರುದ್ಧ ಹರಿಹಾಯ್ದಿದ್ದಾರೆ. 

LIVE: SHIVAMOGGA ELECTIONS 2024: ಬಿವೈ ರಾಘವೇಂದ್ರ VS ಗೀತಾ ಶಿವರಾಜ್ ಕುಮಾರ್‌ VS ಕೆಎಸ್‌ ಈಶ್ವರಪ್ಪ

ರಾಘವೇಂದ್ರ ನೀಚ ಕೆಲಸ ಮಾಡ್ತಿದ್ದಾರೆ. ಹಳೇ ಕ್ಯಾಸೆಟ್ ಇಟ್ಕೊಂಡು ಅಪಪ್ರಚಾರಕ್ಕೆ ಮುಂದಾಗಿದ್ದಾರೆ. ಸೋಲು ಗ್ಯಾರಂಟಿ ಆದ ಮೇಲೆ ಅಪಪ್ರಚಾರ ಮಾಡ್ತಿದ್ದಾರೆ. ನಾನು ಕಣದಿಂದ ಹಿಂದೆ ಹೋಗೋ ಮಾತೇ ಇಲ್ಲ, ಗೆದ್ದೆ ಗೆಲ್ತೀನಿ. ನನ್ನ ಸಂಖ್ಯೆ 8, ಕಬ್ಬನ್ನ ಹಿಡಿದಿರೋ ರೈತ ನನ್ನ ಗುರುತು, ನನ್ನನ್ನ ಗೆಲ್ಸಿ. ಮೋದಿಯನ್ನ ಪ್ರಧಾನಿ ಮಾಡಲು ನನಗೆ ಮತ ನೀಡಿ, ನನ್ನನ್ನ ಗೆಲ್ಲಿಸಿ. ರಾಘವೇಂದ್ರ ನನ್ನ ವಿರುದ್ಧ ಎಲ್ಲಾ ಮಾಡಿ ಆಯ್ತು ಎಂದು ಹೇಳಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ
ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ