ಹಾಲಿ ಸಂಸದ ಜಿ.ಎಂ. ಸಿದ್ದೇಶ್ವರ ತಮ್ಮ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರನ್ನು ಕಣಕ್ಕಿಳಿಸಿದ್ದಾರೆ. ಇವರಿಗೆ ಪೈಪೋಟಿ ನೀಡಲು ಸಚಿವ ಎಸ್.ಎಸ್. ಮಲ್ಲಿಕಾರ್ಜುನ ತಮ್ಮ ಪತ್ನಿ ಪ್ರಭಾ ಮಲ್ಲಿಕಾರ್ಜುನ ಅವರನ್ನು ಸ್ಪರ್ಧೆಗಿಳಿಸಿದ್ದಾರೆ.
ಮತದಾನದ ಲೈವ್‌ಗಾಗಿ ಈ ಪೇಜ್ ನೋಡ್ತಿರಿ: ಸಂಜೆ 5 ಗಂಟೆಗೆ ಶೇ.70.90 ಮತದಾನ ಆಗಿದೆ..
ದಾವಣಗೆರೆ (ಮೇ 07): ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಹಳೆಯ ರಾಜಕೀಯ ನಾಯಕರು ಈಗ ತಮ್ಮ ಮನೆಯ ಮಹಿಳೆಯರನ್ನು ಲೋಕಸಭೆಗೆ ಕಳಿಸಲು ಮುಂದಾಗಿದ್ದಾರೆ. ಹಾಲಿ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರನ್ನು ಕಣಕ್ಕಿಳಿಸಿದ್ದಾರೆ. ಆದರೆ, ದಾವಣಗೆರೆಯಲ್ಲಿ ಹಿಡಿತ ಹೊಂದಿರುವ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಶಾಮನೂರು ಕುಟುಂಬದ ಸೊಸೆ ಪ್ರಭಾ ಮಲ್ಲಿಕಾರ್ಜುನ ಅವರನ್ನು ಸ್ಪರ್ಧೆಗಿಳಿಸಿದ್ದಾರೆ. ಇವರಿಬ್ಬರ ನಡುವೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಜಿ.ಬಿ. ವಿನಯ್‌ಕುಮಾರ್ ಕೂಡ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ದಾವಣಗೆರೆಯು ಕರ್ನಾಟಕ ರಾಜ್ಯದ ಒಂದು ಸಂಸದೀಯ ಕ್ಷೇತ್ರವಾಗಿದ್ದು, ಜಗಳೂರು, ಹರಪನಹಳ್ಳಿ, ಹರಿಹರ, ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ, ಮಾಯಕೊಂಡ, ಚನ್ನಗಿರಿ, ಹೊನ್ನಾಳಿ 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.
India General Elections 2024 Live: ಮೂರು ಗಂಟೆ ಹೊತ್ತಿಗೆ ದೇಶದೆಲ್ಲೆಡೆ ಶೇ.50 ಮತದಾನ...
ದಾವಣಗೆರೆ ಲೋಕಸಭಾ ಕ್ಷೇತ್ರದ ವಿವರ:
ಒಟ್ಟು ಅಭ್ಯರ್ಥಿಗಳು: 30
ಒಟ್ಟು ಮತದಾರರು: 17,09,244
ಪುರಷ ಮತದಾರರು - 851990
ಮಹಿಳಾ ಮತದಾರರು - 857117
ಇತರೆ -137
ಒಟ್ಟು ಮತಗಟ್ಟೆಗಳು 1,946
ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ.
ದಾವಣಗೆರೆ ನಗರದ ಐಎಂಎ ಹಾಲ್ ಮತಗಟ್ಟೆಗೆ ಬಂದು ಮತದಾನ ಮಾಡಿದ ಶಾಮನೂರು ಶಿವಶಂಕರಪ್ಪ. ಮತದಾನದ ನಂತರ ಶಾಮನೂರು ಪ್ರತಿಕ್ರಿಯೆ ನೀಡಿ, 2 ಲಕ್ಷದ ಅಂತರದಿಂದ ಗೆಲ್ಲುವ ವಿಶ್ವಾಸವಿದೆ. ಈ ಬಾರಿ ದಾವಣಗೆರೆ ಜನತೆ ಬದಲಾವಣೆ ಬಯಸಿದ್ದಾರೆ ಎಂದು ಹೇಳಿದರು.
ಶಿವಮೊಗ್ಗ ಗಂಡನ ಸಾವಿಗೆ ಮತದಾನ ಸಮರ್ಪಿಸಿದ ಹೆಂಡತಿ; ಶವ ಬಿಟ್ಟುಬಂದು ಮತ ಹಾಕಿದ ಮಹಿಳೆ
ಹೊರ ದೇಶದಿಂದ ಬಂದು ಮತದಾನ ಮಾಡಿದ ಸಹೋದರಿಯರು : ಭಾರತದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಮಾಡುವುದಕ್ಕಾಗಿ ಅಮೇರಿಕಾದಿಂದ ರೀತು ಭಾರತದ ದಾವಣಗೆರೆ ನಗರಕ್ಕೆ ಆಗಮಿಸಿದ್ದಾರೆ. ಇನ್ನು ಇವರ ಸಹೋದರಿ ರಕ್ಷಾ ಮಹಾರಾಷ್ಟ್ರದ ಪುಣೆಯಿಂದ ದಾವಣಗೆರೆಗೆ ಬಂದಿದ್ದಾರೆ. ದಾವಣಗೆರೆ ನಗರದ MCC ಎ ಬ್ಲಾಕ್ ನ ವಿಶ್ವಭಾರತಿ ಸ್ಕೂಲ್ ನಲ್ಲಿ ಹಕ್ಕು ಚಲಾಯಿಸಿದ ಸಹೋದರಿಯರು, ವಾಗೇಶ್ ಬಾಬು ಎಂಬುವರ ಪುತ್ರಿಯರಾಗಿದ್ದಾರೆ. ಇವರು ದೇಶದ ಜನತೆ ಮತಗಟ್ಟೆಗೆ ಬಂದು ಮತದಾನ ಮಾಡುವಂತೆ ಮನವಿ ಮಾಡಿದರು. ಈ ಮೂಲಕ ಒಳ್ಳೆ ಸರ್ಕಾರ, ನಾಯಕರು, ಆಡಳಿತವನ್ನು ನಾವು ನಿರೀಕ್ಷೆ ಮಾಡಲು ಪ್ರತಿಯೊಬ್ಬರೂ ಮತದಾನ ಮಾಡಬೇಕು ಎಂದು ಮನವಿ ಮಾಡಿದರು.