IAF Chopper Crash: ಹೆಲಿಕಾಪ್ಟರ್‌ ಟೆಕ್‌ಆಫ್‌ ಮುಂಚಿನ ಪ್ರೋಟೊಕಾಲ್‌ಗಳೇನು? ವಾಯುಸೇನೆ ಚಾಪರ್‌ ಎಡವಿದ್ದೆಲ್ಲಿ?

Dec 8, 2021, 5:59 PM IST

ತಮಿಳುನಾಡು(ಡಿ. 08): ತಮಿಳುನಾಡಿನ ಕೂನೂರಿನಲ್ಲಿ ಸೇನೆಯ Mi-17V5 ಹೆಲಿಕಾಪ್ಟರ್ ಪತನಗೊಂಡಿದೆ. ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಜನರಲ್ ಬಿಪಿನ್ ರಾವತ್ (Bipin Rawat), ಅವರ ಪತ್ನಿ ಮಧುಲಿಕಾ ರಾವತ್ (Madhulika Rawat) ಸೇರಿದಂತೆ 14 ಮಂದಿ ವಿಮಾನದಲ್ಲಿದ್ದರು. ಸದ್ಯ ಬಂದ ಮಾಹಿತಿ ಅನ್ವಯ ವಿಮಾನದಲ್ಲಿದ್ದ 14 ಮಂದಿಯಲ್ಲಿ ಸಿಡಿಎಸ್‌ ಬಿಪಿನ್ ರಾವತ್ ಪತ್ನಿ ಮಧುಲಿಕಾ ಸೇರಿ ಒಟ್ಟು 13 ಮಂದಿ ಸಾವನ್ನಪ್ಪಿದ್ದಾರೆನ್ನಲಾಗಿದೆ. ಸೇನಾ ಮಹಾದಂಡನಾಯಕ ಬಿಪಿನ್ ರಾವತ್ ಚಿಂತಾಜನಕವಾಗಿದ್ದು, ಅವರಿಗೆ ಕೂನೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ.

IAF Mi-17V-5 Helicopter: ತಮಿಳುನಾಡಿನಲ್ಲಿ ಪತನಗೊಂಡ ರಷ್ಯಾ ನಿರ್ಮಿತ ಹೆಲಿಕಾಪ್ಟರ್‌ನ ಕಂಪ್ಲೀಟ್‌ ಡಿಟೇಲ್ಸ್!‌

ಈ ಬೆನ್ನಲ್ಲೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ಗೆ (Asianet Suvarna News) ಪ್ರತಿಕ್ರಿಯೆ ನೀಡಿರುವ ಡಿಆರ್‌ಡಿಓ (DRDO) ಸಾರ್ವಜನಿಕ ಸಂಪರ್ಕ ವಿಭಾಗದ ನಿವೃತ್ತ ಅಧಿಕಾರಿ (DRDO Retired Public Relations Officer) ಜಯಪ್ರಕಾಶ ರಾವ್‌ MI ಹೆಲಿಕಾಪ್ಟರ್‌ಗಳ ಅಭಿವೃದ್ಧಿ ಬಗ್ಗೆ ಮಾತನಾಡಿದ್ದು 1975ರಲ್ಲಿ ಇದರ ಪ್ರಥಮ ಹಾರಾಟ ಪ್ರಾರಂಭವಾಯಿತು ಎಂದು ತಿಳಿಸಿದ್ದಾರೆ. ಇದು ಬಹುಪಯೋಗಿ ಹೇಲಿಕಾಪ್ಟರ್‌ ಆಗಿದ್ದು ಸೇನೆಯ ಕಾರ್ಯಾಚರಣೆ ಸೇರಿದಂತೆ ಪ್ರಯಾಣಿಕರನ್ನು ಕೊಂಡೊಯ್ಯಲು ಕೂಡ ಬಳಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಜತೆಗೆ ಸೇನಾ ಮುಖ್ಯಸ್ಥರು ಸೇರಿದಂತೆ ಇತರ ಸೇನೆಯ ಹಿರಿಯ ಅಧಿಕಾರಿಗಳು ಚಾಪರ್‌ಗಳಲ್ಲಿ ಪ್ರಯಾಣಿಸುವಾಗ ಅನುಸರಿಸಲಾಗುವ  ಹಲವು ಪ್ರೋಟೊಕಾಲ್‌ಗಳ ಮಾಹಿತಿ ನೀಡಿದ್ದಾರೆ.