Feb 23, 2023, 8:04 PM IST
ಬೆಂಗಳೂರು(ಫೆ.23): ಕೋವಿಡ್ನಿಂದ ಆರ್ಥಿಕತೆಗೆ ಹೊಡೆತ ಬಿದ್ದಿತ್ತು, ಇದೀಗ ಕೊರೋನಾ ನಂತರ ಆರ್ಥಿಕತೆಯಲ್ಲಿ ಚೇತರಿಕೆ ಕಂಡಿದೆ. ರಾಜ್ಯದ ಅರ್ಥಿಕತೆ ಶೇ. 14 ರಷ್ಟು ಹೆಚ್ಚಳವಾಗಿದೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದ ಆದಾಯ ಹೆಚ್ಚಾಗಿದೆ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ. ಇಂದು(ಗುರುವಾರ) ಬಜೆಟ್ ಮೇಲಿನ ಪ್ರಶ್ನೆಗಳಿಗೆ ಉತ್ತರಿಸಿದ ಸಿಎಂ ಬೊಮ್ಮಾಯಿ, ಸರಿಯಾಗಿ ಸಮನಾಗಿ ಓಡಿಸಿದರೆ ರಾಜ್ಯ ಕಲ್ಯಾಣ ಆಗಲಿದೆ. ಇಲ್ಲದಿದ್ರೆ ರಾಜ್ಯದ ವ್ಯವಸ್ಥೆ ಕುಸಿತ ಆಗಲಿದೆ ಅಂತ ಹೇಳಿದ್ದಾರೆ. ಕೆ.ಸಿ.ವ್ಯಾಲಿ 3 ನೇ ಹಂತದ ಯೋಜನೆಯನ್ನು ನಾವು ಜಾರಿ ತರುತ್ತೇವೆ ಅಂತ ಇದೇ ಸಂದರ್ಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದ್ದಾರೆ.
4 ಜಿಲ್ಲೆ ಪ್ರಮುಖರ ಜೊತೆ ಅಮಿತ್ ಶಾ ಮೀಟಿಂಗ್; ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್