ವೇಗವಾಗಿ ಸಾಗುತ್ತಿರುವ ಕಾಲಘಟ್ಟದಲ್ಲಿ ನಾವು ಎಐ ಯುಗದಲ್ಲಿ ಬದುಕುತ್ತಿದ್ದೇವೆ. ಎಐ ಶಕ್ತಿಯಿಂದ ಆಡಳಿತವನ್ನು ಮರು ಸೃಷ್ಟಿಸಬಹುದು. ಇದು ಮುಂಬರುವ ನಾವೀನ್ಯತೆಯ ಹೊಸತನದ ಚಲನಶೀಲ ಅಲೆಯಾಗಿದೆ. ಹೆಚ್ಚು ಗುರಿಯನ್ನು ಸಾಧಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಗರಿಷ್ಠ ಆಡಳಿತದ ದೃಷ್ಟಿಕೋನ ನಿಜವಾಗಿಸುತ್ತದೆ: ಬಿಜೆಪಿ ಮುಖಂಡ ರಾಜೀವ್ ಚಂದ್ರಶೇಖರ್
ನವದೆಹಲಿ(ನ.29): ಕಳೆದ 10 ವರ್ಷಗಳಲ್ಲಿ ಭಾರತ ಹಲವು ಬದಲಾವಣೆಗಳನ್ನು ಕಂಡಿದೆ. ವಿಶ್ವದಲ್ಲೇ 4ನೇ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿರುವ ದೇಶವಾಗಿ ಬೆಳೆದಿದೆ. ನಮ್ಮ ದೇಶದ ಆರ್ಥಿಕತೆಯು ಪ್ರಪಂಚದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ ಎಂದು ಬಿಜೆಪಿ ಮುಖಂಡ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.
ಒಂದು ದಶಕದಲ್ಲಿ ಸರ್ಕಾರದ ಬಜೆಟ್ ಅನ್ನು ಮೂರು ಪಟ್ಟು ಹೆಚ್ಚಿಸಲಾಗಿದೆ. 16 ಲಕ್ಷ ಕೋಟಿ ರು.ನಿಂದ 48 ಲಕ್ಷ ಕೋಟಿ ರು.ಗೆ ಏರಿಕೆ ಮಾಡಲಾಗಿದೆ. ಇನ್ನೂ ಅನೇಕ ಅನೇಕ ಮೈಲುಗಲ್ಲುಗಳನ್ನು ನಮ್ಮ ದೇಶ ದಾಟಿದೆ. ಆದರೆ ಭಾರತದ ಗುಣಾತ್ಮಕ ಬದಲಾವಣೆಯನ್ನು ವಿವರಿಸುವ ಮತ್ತೊಂದು ಅಂಶವಿದೆ. ಅದುವೇ ಸರ್ಕಾರ.
ಕೇರಳದ ಮಾರ್ಕ್ಸಿಸ್ಟ್ ಗೂಂಡಾ ದಿವ್ಯಾಗೆ ಕಠಿಣ ಶಿಕ್ಷೆಯಾಗಬೇಕು, ರಾಜೀವ್ ಚಂದ್ರಶೇಖರ್ ಆಗ್ರಹ!
ತಂತ್ರಜ್ಞಾನ ಬಳಸುವ ಮೂಲಕ, ಅದರಲ್ಲೂ ವಿಶೇಷವಾಗಿ ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ(ಡಿಪಿಐ)ದೃಷ್ಟಿ ಕೋನವನ್ನು ರೂಪಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಆಡಳಿತವನ್ನು ಸೋರಿಕೆ, ನಿಷ್ಕ್ರಿಯತೆಯಿಂದ ರೂಪಾಂತರ ಮಾಡಿದ್ದಾರೆ. ಅದನ್ನೀಗ ಅವರು ಕೇಂದ್ರ ಸರ್ಕಾರ ಹಾಗೂ ಆಡಳಿತವು ನೇರವಾಗಿ ಗ್ರಾಹಕರಿಗೆ ನೇರವಾಗಿ ಸೇವೆ ಸಲ್ಲಿಸುವಂತೆ ಮಾಡಿದ್ದಾರೆ. ವೇಗವಾಗಿ ಸಾಗುತ್ತಿರುವ ಕಾಲಘಟ್ಟದಲ್ಲಿ ನಾವು ಎಐ ಯುಗದಲ್ಲಿ ಬದುಕುತ್ತಿದ್ದೇವೆ. ಡಿಪಿಐ ಶಕ್ತಿಯ ಮೂಲಕ ಅವರು ತಂತ್ರಜ್ಞಾನದ ಶಕ್ತಿಯನ್ನು ಪ್ರಬಲ ಶಕ್ತಿಯನ್ನಾಗಿ ಹೇಗೆ ಬದಲಾಯಿಸಿಕೊಳ್ಳಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.
ಭಾರತದ ಡಿಪಿಐ ಮತ್ತು ಎಐನ ಹೊಸ ಅಲೆ GovAI
GovAI ಭಾರತದ ಡಿಪಿಐ ಮತ್ತು ಎಐನ ಹೊಸ ಅಲೆ. ಹೊಸ ತಂತ್ರಜ್ಞಾನ ಕ್ಷೇತ್ರದಲ್ಲಿ ಎಐನ ಸಾಧ್ಯತೆಯ ಬಗ್ಗೆ ಉತ್ಸಾಹಭರಿತ, ಉತ್ತೇಕ್ಷೆಯ ಚರ್ಚೆಗಳೇ ಹೆಚ್ಚಾಗಿ ನಡೆಯುತ್ತಿದೆ. ಈ ಉತ್ಸಾಹದ ಬಹುಪಾಲು ಚರ್ಚೆಯು ಸಮರ್ಥನೀಯವಾಗಿದೆ. ಇದರ ಜೊತೆಗೆ ಎಐ ಕಿಲ್ಲರ್‌ಆ್ಯಪ್ ಎನ್ನುವುದರ ಬಗ್ಗೆಯೂ ಹೆಚ್ಚಿನ ಚರ್ಚೆಗಳು ನಡೆಯುತ್ತಿವೆ. ಅನೇಕ ಸಂಭಾಷಣೆಗಳನ್ನು ಎಐ ಕಂಪ್ಯೂಟರಿಂಗ್‌ಗೆ ಪರಿವರ್ತಿಸುತ್ತದೆಯೇ,ಎಲ್‌ಎಲ್‌ಎಂಗಳುಮುಂದಿನ ಅಪರೇಟಿಂಗ್ ಸಿಸ್ಟಮ್ಗಳು ಆಗಿರುತ್ತವೆಯೇ, ಎಐ ಭಾಷಾ ಅನುವಾದವನ್ನು ಮಾಡಬಹುದೇ, ಔಷಧಿಗಳ ಅನ್ವೇಷಣೆ ಸೇರಿದಂತೆ ಇನ್ನು ಕೆಲ ಬದಲಾವಣೆಗಳನ್ನು ಮಾಡಬಲ್ಲದೆ. ಹೀಗೆ ಅನೇಕ ಚರ್ಚೆಗಳಿವೆ.
ಇದು ಇನ್ನೂ ಹಲವು ಕೆಲಸಗಳನ್ನು ಮಾಡಬಲ್ಲದು. ಕಡಿಮೆ ಪ್ರಮಾಣದ ಶಕ್ತಿಯನ್ನು ಬಳಸಿ ಹೆಚ್ಚಿನದನ್ನು ತಲುಪಿಸುವ ಶಕ್ತಿಯಿದೆ ಎಂಬುದು ಅದಕ್ಕಿರುವ ಭರವಸೆ. ಇದು ಮುಂಬರುವ ನಾವೀನ್ಯತೆಯ ಹೊಸತನದ ಚಲನಶೀಲ ಅಲೆಯಾಗಿದೆ. ಕೃತಕಬುದ್ಧಿಮತ್ತೆಯಲ್ಲಿ ನಾವು ಪೂರ್ಣತೆಯನ್ನು ಸಾಧಿಸಿದರೆ ಆರೋಗ್ಯ ಕ್ಷೇತ್ರದಿಂದ ಹಿಡಿದು ಭದ್ರತೆಯವರೆಗಿನ ಕೆಲಸವನ್ನು ನಿರ್ವಹಿಸಲಿದೆ. ಎಐ ಮಾನವರಂತೆ ಯಂತ್ರಗಳು ಮತ್ತು ಪ್ಲಾಟ್‌ಫಾರ್ಮ್‌ಗಳ ಅಭಿವೃದ್ಧಿಗೆ ವೇದಿಕೆಯಾಗಬಹುದು.
ನನ್ನ ಪ್ರಕಾರ ಎಐನ ಬಹುದೊಡ್ಡ ಉಪಯೋಗ ಎಂದರೆ ಅದು ಪ್ರತಿಯೊಬ್ಬನಾಗರಿಕನಿಂದಹಿಡಿದು ಆಡಳಿತದವರೆಗೆ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಎಐಗೆ ಕಿಲ್ಲರ್ ಆ್ಯಪ್ ಎಂದರೆ ಅದುವೇ ಆಡಳಿತ. ಅದನ್ನು ನಾನು GovAI ಎಂದು ಕರೆಯುತ್ತೇನೆ.
90 ಕೋಟಿ ಭಾರತೀಯರಿಗೆ ನೆಟ್ ಸಂಪರ್ಕಎಐ ವಿಚಾರದಲ್ಲಿ ಮೂರು ವಿಚಾರಗಳು ಮುಂಚೂಣಿಯಲ್ಲಿವೆ. ಮೊದಲನೆಯದಾಗಿ ಭಾರತದ ಡಿಜಿಟಲ್ ಮತ್ತು ಜಾಗತಿಕ ಆರ್ಥಿಕತೆಯು ಇನ್ನೂ ಹೆಚ್ಚು ವೇಗವನ್ನು ಪಡೆಯುತ್ತಿದೆ. ಪ್ರಸ್ತುತ 90 ಕೋಟಿ ಭಾರತೀಯರು ಇಂಟರ್ನೆಟ್‌ಗೆ ಸಂಪರ್ಕವನ್ನು ಹೊಂದಿದ್ದಾರೆ. 2026ರ ವೇಳೆಗೆ ಇದು 120 ಕೋಟಿ ಭಾರತೀಯರುನ್ನು ತಲುಪಲಿದೆ. ಈ ಮೂಲಕ ಭಾರತವನ್ನು ವಿಶ್ವದ ಅತಿದೊಡ್ಡ ಸಂಪರ್ಕಿತ ಜಾಲ ಹೊಂದಿರುವ ಡಿಜಿಟಲ್ ದೇಶವನ್ನಾಗಿ ಮಾಡಲಿದೆ.
ಸರ್ಕಾರದ ಡಿಜಿಟಲ್ ಬೆಳವಣಿಗೆಯಿಂದಾಗಿ ಭಾರತದ ಫಿನ್‌ಟೆಕ್ ಮತ್ತು ಸುಮಾರು 1 ಲಕ್ಷ ಸ್ಟಾರ್ಟ್ ಆಪ್‌ಗಳು ಉತ್ತೇಜನಗೊಂಡಿವೆ. ಡಿಪಿಐ ಮೂಲಕ ಡಿಜಿಟಲೀಕರಣವು ಭಾರತದ ಸ್ಟಾರ್ಟ್ ಅಪ್, ಅನ್ವೇಷಣೆಯ ಪರಿಸರವ್ಯವಸ್ಥೆ, ಎಟಡಿಅಐಗೆ ಉತ್ತೇಜನವನ್ನ ನೀಡಿದೆ. ಎಐ ಜೊತೆಗೆ ಸರ್ಕಾರದ ಡಿಜಿಟಲೀಕರಣದ ಪ್ರಭಾವವು ದೇಶದಲ್ಲಿ ವಿನೂತನ ಅವಕಾಶಗಳನ್ನು ಕಲ್ಪಿಸುತ್ತದೆ.
ಎರಡನೇಯದಾಗಿ ಡಿಜಿಟಲ್ ಕ್ಷೇತ್ರದಲ್ಲಿ ಹೆಚ್ಚಿನ ಭಾರತೀಯರು ಇಂಟರ್ನೆಟ್‌ಳ ಸಂಪರ್ಕವನ್ನು ೩ ಹೊಂದಿದ್ದಾರೆ ಮತ್ತು ಬಳಕೆ ಮಾಡುತ್ತಿದ್ದಾರೆ. ಪ್ರತಿಯೊಬ್ಬ ಭಾರತೀಯರು ಹೆಚ್ಚಿನ ಪ್ರಮಾಣದಲ್ಲಿ ಡೇಟಾವನ್ನು ಬಳಸಿಕೊಳ್ಳುವುದರಿಂದ ನಮ್ಮ ದೇಶವು ವಿಶ್ವದಲ್ಲೇ ಅತಿಹೆಚ್ಚು ಡೇಟಾ ಭಂಡಾರ ಹೊಂದಿರುವ ದೇಶವಾಗಿದೆ. ಜೊತೆಗೆ ಡಿಪಿಐ ಮತ್ತು ಡಿಜಿಲೀಕರಣದಿಂದಾಗಿ ಸರ್ಕಾರಗಳು ಅತಿ ಹೆಚ್ಚು ವೈಯಕ್ತಿಕಮತ್ತು ವೈಯಕ್ತಿಕವಲ್ಲದ ಡೇಟಾ ಸಂಗ್ರಹಣೆಗಳ ಕೆಲಸವನ್ನು ಮಾಡುತ್ತದೆ. ಡೇಟಾವು ಪ್ರತಿಯಾಗಿ ಎಐ ಮಾದರಿಗಳಿಗೆ ತರಬೇತಿ ನೀಡುವ ಇಂಧನವಾಗಿದೆ. ಇದು ಮಾದರಿಗಳ ಗುಣಮಟ್ಟ ಮತ್ತು ಸಾಮರ್ಥಗಳನ್ನು ನಿರ್ಧರಿಸುತ್ತದೆ. GovAI ಎಲ್‌ಎಲ್‌ಎಂ ಗಳೊಂದಿಗೆ ದೊಡ್ಡ ಭಾಷಾ ಮಾದರಿ) ಸಂವಹನ ನಡೆಸುವ ಸಣ್ಣ ಭಾಷೆಗಳ ಮಾದರಿಯೊಂದಿಗೆ ಸಾಧ್ಯವಿದೆ.
ದಕ್ಷ ಆಡಳಿತ ಹಲವು ದೇಶಗಳ ಗುರಿ
ಪ್ರಧಾನಿ ನರೇಂದ್ರ ಮೋದಿಯವರು ಭಾರತದಲ್ಲಿ ಹಮ್ಮಿಕೊಂಡಿರುವ ಎಐ ಕಾರ್ಯಕ್ರಮ ಈಗಾಗಲೇ ಸರ್ಕಾರಿ ಡೇಟಾಸೆಟ್ ನೇತೃತ್ವದ ಇಂಡಿಯಾ ಡಾಟಾಸೆಟ್ ಪ್ರೋಗ್ರಾಂ ಅನ್ನು ಕಲ್ಪಿಸಿದೆ. ಇದು ಡೇಟಾ ಸಂರಕ್ಷಣಾಶಾಸನದೊಂದಿಗೆ ವೈಯಕ್ತಿ ಕ ಡೇಟಾವನ್ನು ದುರುಪಯೋಗ ಮಾಡಿಕೊಳ್ಳುವುದರ ವಿರುದ್ಧ ರಕ್ಷಣೆಯನ್ನು ಕೂಡ ನೀಡುತ್ತದೆ.
ಮೂರನೇಯದಾಗಿ ಕೋವಿಡ್ ನಂತರ ಜಾಗತಿಕ ಆರ್ಥಿಕತೆಯ ಸವಾಲುಗಳಿಂದಾಗಿ ಭಾರತವು ಸೇರಿದಂತೆ ಇತರ ರಾಷ್ಟ್ರಗಳು ತಮ್ಮ ಸರ್ಕಾರ ದಕ್ಷವಾಗಲು ಸಂಪನ್ಮೂಲಗಳನ್ನು ಹೆಚ್ಚಿಸಿಕೊಳ್ಳಲು ಮಾರ್ಗಗಳನ್ನು ಹುಡುಕುತ್ತಿವೆ. ಅಮೆರಿಕ ಸೇರಿದಂತೆ ಬಹುತೇಕ ದೇಶಗಳಿಗೆ ಹೆಚ್ಚಿನ ದಕ್ಷತೆಯನ್ನು ಹೊಂದುವುದು ರಾಜಕೀಯ ಗುರಿಯಾಗಿದೆ. ಡಿಪಿಐ ಎಐನಿಂದಾಗಿ ಡಿಜಿಟಲ್ ಸರ್ಕಾರದ ಮೊದಲನೆ ಹಂತವು ಅಸಮರ್ಪಕತೆಯನ್ನು ಪರಿಹರಿಸಿತು. ಭಾರತವನ್ನು ಪರಿವರ್ತಿಸಿತು. ಸರ್ಕಾರ ಇನ್ನೂ ಹೆಚ್ಚು ಪರಿಣಾಮಕಾರಿಯಾಗಲಿದೆ ಮತ್ತು ಸಮಾಜದ ವಿಶಾಲ ವ್ಯಾಪ್ತಿಯಾದ್ಯಂತ ಪ್ರಭಾವ ಬೀರಲು ಅದೇ ಸಂಪನ್ಮೂಲ ಗಳನ್ನು ಬಳಸಬಹುದೆಂದು ಇದರಿಂದ ಖಚಿತಪಡಿಸಿಕೊಳ್ಳಬಹುದು ಭಾರತದಂತಹ ಆರ್ಥಿಕತೆಯಲ್ಲಿ 48 ಲಕ್ಷ ಕೋಟಿಗೂ ಅಧಿಕ ಹಣವನ್ನು ಇದಕ್ಕೆ ಖರ್ಚು ಮಾಡಲಾಗಿದೆ. ಇದು ಪ್ರತಿವರ್ಷ ಹೆಚ್ಚಾಗಲಿದೆ. ಎಐ ಸಾರ್ವಜನಿಕ ಖರ್ಚು ಮತ್ತು ಹೂಡಿಕೆಯ ಪರಿಣಾಮವನ್ನು ವಿಸ್ತರಿಸಲು ಸಹಾಯ ಮಾಡುತ್ತದೆ. ಪ್ರಧಾನಿ ನರೇಂದ್ರ ಮೋದಿಯವರ ಗರಿಷ್ಠ ಆಡಳಿತದ ಗುರಿಯನ್ನು ಎಐ ಮರು ರೂಪಿಸುವ ಮೂಲಕ ಸರ್ಕಾರವನ್ನು ತಲುಪಿಸಬಹುದು.
ಆಡಳಿತ ಮರು ಸೃಷ್ಟಿಗೆ ಎಐ
ನೆರವು ಕೃತಕ ಬುದ್ದಿಮತ್ತೆಯ ಪ್ರಭಾವದಿಂದ ಆಡಳಿತವನ್ನು ಮರು ಸೃಷ್ಟಿಸಬಹುದು. ಆದರೆ ಮರು ಪ್ರಾರಂಭಿಸಲು ಸಾಧ್ಯವಿಲ್ಲ. ಎಐ ಅನ್ನು ನಮ್ಮ ಆಡಳಿತವನ್ನು ಮರುರೂಪಿಸಲು ಮುಂದಿನ ಚಲನಶೀಲ ಅಲೆಯೆಂದೇ ವಿವರಿಸಬಹುದು. GovAl ಸರ್ಕಾರವನ್ನು ಹೆಚ್ಚು ತೀಕ್ಷ್ಯವನ್ನಾಗಿ ಮಾಡುತ್ತದೆ. ಹೆಚ್ಚು ಗುರಿಯನ್ನು ಸಾಧಿಸುತ್ತದೆ. ಗರಿಷ್ಠ ಆಡಳಿತದ ದೃಷ್ಟಿಕೋನವನ್ನು ನಿಜವಾಗಿಸುತ್ತದೆ. ಇಡೀ ಜಗತ್ತು ಎಐ ಅಪ್ಲಿಕೇಶನ್‌ಗಳ ಬಗ್ಗೆ ವಾದಿಸುತ್ತಿರುವಾಗಲೂ, ಚರ್ಚಿಸುತ್ತಿ ರುವಾಗಲೂ ಭಾರತವು ಆಡಳಿತದಲ್ಲಿ ಡಿಪಿಐ ತಂತ್ರಜ್ಞಾನದೊಂದಿಗೆ ಎಐನ ರೋಮಾಂಚನಕಾರಿ ಅಪ್ಲಿಕೇಶನ್‌ಗಳನ್ನು ಬಳಸಿಕೊಳ್ಳಲು ಅವಕಾಶವಿದೆ.
ವಕ್ಫ್ ಬೋರ್ಡ್ ಜಿಪಿಸಿ ಸಭೆ ಬಹಿಷ್ಕರಿಸಿದ ವಿಪಕ್ಷಗಳ ಅಜೆಂಡಾ ಬಯಲು ಮಾಡಿದ ರಾಜೀವ್ ಚಂದ್ರಶೇಖರ್!
ಇದಕ್ಕೆ ಸರ್ಕಾರ, ಉದ್ಯಮಿಗಳು, ಹೊಸತನದ ಸ್ಟಾರ್ಟ್ ಅಪ್‌ಗಳ ನಡುವಿನ ಆಳವಾದ ಬಾಳಿಕೆ ಬರುವ, ವಿಶ್ವಾಸಾರ್ಹ ಮತ್ತು ರಚನಾತ್ಮಕ ಪಾಲುದಾರಿಕೆಯ ಅಗತ್ಯವಿರುತ್ತದೆ. ಈ ರೀತಿಯ ಮಾದರಿಗಳು ಸರ್ಕಾರ, ಐಪಿ, ಪ್ಲಾಟ್‌ಫಾರ್ಮ್ ಗಳು, ಆ್ಯಪ್‌ಗಳ ಸುತ್ತ ನಿರ್ವಹಿಸುತ್ತವೆ. ಭಾರತವು ಸದ್ಯ ಎಐನ ಜಾಗತಿಕ ಪಾಲುದಾರಿಕೆ (ಜಿಪಿಎಐ)ನ ಅಧ್ಯಕ್ಷ ಸ್ಥಾನದಲ್ಲಿದೆ. ಟೆಕ್ ಮತ್ತು ಎಐನ ಭವಿಷ್ಯವನ್ನು ರೂಪಿಸುವಲ್ಲಿ ವಿಶ್ವಾಸಾರ್ಹ ಮತ್ತು ಪಾಲುದಾರಿಕೆಗಳ ಪ್ರಮುಖ ಪಾತ್ರವನ್ನು ಖಚಿತಪಡಿಸಿಕೊಳ್ಳಲು ಈ ಕ್ರಮ ಹೊಂದಿದೆ. ಭಾರತವು GovAl ಬಳಸಿಕೊಂಡು ಆಡಳಿತವನ್ನು ಮರುರೂಪಿಸುವಲ್ಲಿ ಯಶಸ್ವಿಯಾಗಿದೆ. ಎಐ ದೇಶದ ಕೆಲವು ಕಂಪನಿಗಳನ್ನು, ದೇಶವನ್ನು ಮಾತ್ರವೇಸಂರಕ್ಷಿಸುವುದಿಲ್ಲ. ಆದರೆ ಇದು ಹೆಚ್ಚು ಅಂತರ್ಗತವಾಗಿದೆ. ಮತ್ತು ಎಲ್ಲ ದೇಶಗಳಿಂದಲೂ ಪ್ರವೇಶಿಸಬಹುದಾಗಿದೆ.
ಭಾರತದ ಕಳೆದ 10 ವರ್ಷಗಳಲ್ಲಿ ರೋಮಾಂಚಕಾರಿ ರೀತಿಯಲ್ಲಿ ಬದಲಾಗಿದೆ. ಆಡಳಿತದಲ್ಲಿ ತಂತ್ರಜ್ಞಾನದ ಜಾಗತಿಕ ನಿರೂಪಣೆಯ ಧ್ರುವ ಸ್ಥಾನದಲ್ಲಿ ಭಾರತವಿದ್ದು, ಅನೇಕ ದೇಶಗಳು ಇದರಿಂದ ಕಲಿಯಲು ಪ್ರೇರೇಪಿತವಾಗಿದೆ. ಆಡಳಿತವನ್ನು ಕಿಲ್ಲರ್ ಆ್ಯಪ್ ಆಗಿ ಬದಲಾಯಿಸುವುದು, ಎಐಗಾಗಿಕಮಾನನ್ನು ಮತ್ತಷ್ಟು ವಿಸ್ತರಿಸುವುದು ನಿಜವಾಗಿಯೂ ಆಡಳಿತವನ್ನು ಮರು ನಿರೂಪಿಸುತ್ತದೆ. GovAI ಯುಗಕ್ಕೆ ಸ್ವಾಗತ.