ಕಳವು ಕೇಸ್‌ನಲ್ಲಿ ಸಿಕ್ಕಿ ಬಿದ್ದ ಆರೋಪಿಗೂ ಕೊರೊನಾ ಪಾಸಿಟೀವ್; ಪೊಲೀಸರಿಗೆ ಢವಢವ

Jun 10, 2020, 10:27 AM IST

ಬೆಂಗಳೂರು (ಜೂ. 10): ಕಳವು ಕೇಸ್‌ನಲ್ಲಿ ಸಿಕ್ಕಿ ಬಿದ್ದ ಆರೋಪಿಗೂ ಕೊರೊನಾ ಪಾಸಿಟೀವ್ ಬಂದಿದೆ. ಬೆಂಗಳೂರಿನ ಜಯನಗರ ಪೊಲೀಸರಿಗೆ ಢವಢವ ಶುರುವಾಗಿದೆ. ಸೋಂಕಿತ ಆರೋಪಿಯನ್ನು ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಜಯನಗರ ಠಾಣೆಗೆ ಬಿಬಿಎಂಪಿ ಸಿಬ್ಬಂದಿ ದೌಡಾಯಿಸಿದ್ದಾರೆ. ಸ್ಯಾನಿಟೈಸಿಂಗ್ ಕೆಲಸ ಶುರುವಾಗಿದೆ. ಆರೋಪಿ ಸಂಪರ್ಕದಲ್ಲಿದ್ದ ಪೊಲೀಸ್ ಸಿಬ್ಬಂದಿ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಸಬ್‌ ಇನ್ಸ್‌ಪೆಕ್ಟರ್‌ ಸೇರಿ 10 ಕ್ಕೂ ಹೆಚ್ಚು ಸಿಬ್ಬಂದಿ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. 

ಬಾಗಲಕೋಟೆ: ಮಹಾರಾಷ್ಟ್ರದಿಂದ ರೈಲ್ವೆ ಮೂಲಕ ಬಂದ ಮಹಿಳೆಗೆ ಕೊರೋನಾ ಸೋಂಕು