ಕಾಂಗ್ರೆಸ್‌ ಗ್ಯಾರಂಟಿಗಳೇ ಕೈ ಹಿಡಿಯುತ್ತವೆ: ಗೀತಾ ವಿಶ್ವಾಸ

By Kannadaprabha News  |  First Published May 8, 2024, 2:22 PM IST

ಲೋಕಸಭೆ ಚುನಾವಣೆಗೆ ಕಾಂಗ್ರೆಸ್‍ ಪ್ರಣಾಳಿಕೆಯಲ್ಲಿ ಪ್ರಕಟಿಸಿರುವ ಐದು ಗ್ಯಾರಂಟಿಗಳನ್ನು ಈಡೇರಿಸುತ್ತದೆ ಎಂಬ ನಂಬಿಕೆ, ವಿಶ್ವಾಸ ಕ್ಷೇತ್ರದ ಮತದಾರರಲ್ಲಿ ಇರುವುದರಿಂದ ನನಗೆ ಗೆಲುವು ಸಿಗುತ್ತದೆ ಎಂದು ಶಿವಮೊಗ್ಗ ಕೇತ್ರ ಲೋಕಸಭೆ ಅಭ್ಯರ್ಥಿ ಗೀತಾ ವಿಶ್ವಾಸ ವ್ಯಕ್ತಪಡಿಸಿದರು. 
 


ಆನವಟ್ಟಿ (ಮೇ.08): ಮುಖ್ಯಮಂತ್ರಿ ಸಿದ್ದರಾಮಯ್ಯ ಜಾರಿ ಮಾಡಿರುವ ಐದು ಗ್ಯಾರಂಟಿಗಳು, ಪ್ರತಿ ಕುಟುಂಬಕ್ಕೂ ತಲುಪಿದೆ. ಮತ್ತೆ ಲೋಕಸಭೆ ಚುನಾವಣೆಗೆ ಕಾಂಗ್ರೆಸ್‍ ಪ್ರಣಾಳಿಕೆಯಲ್ಲಿ ಪ್ರಕಟಿಸಿರುವ ಐದು ಗ್ಯಾರಂಟಿಗಳನ್ನು ಈಡೇರಿಸುತ್ತದೆ ಎಂಬ ನಂಬಿಕೆ, ವಿಶ್ವಾಸ ಕ್ಷೇತ್ರದ ಮತದಾರರಲ್ಲಿ ಇರುವುದರಿಂದ ನನಗೆ ಗೆಲುವು ಸಿಗುತ್ತದೆ ಎಂದು ಶಿವಮೊಗ್ಗ ಕೇತ್ರ ಲೋಕಸಭೆ ಅಭ್ಯರ್ಥಿ ಗೀತಾ ವಿಶ್ವಾಸ ವ್ಯಕ್ತಪಡಿಸಿದರು. ನನ್ನ ತಮ್ಮ ಸೋತಾಗಲೂ, ಗೆದ್ದಾಗಲೂ ಜಿಲ್ಲೆಯ ಜನರ ಜೊತೆಗೆ ಇದ್ದಾನೆ. ನೀರಾವರಿ, ಬಗರ್‌ಹುಕುಂ ಸಾಗುವಳಿದಾರರ ಪರವಾಗಿ ಪಾದಯಾತ್ರೆ ಮಾಡಿದ್ದಾರೆ. 

ತಂದೆ ಬಂಗಾರಪ್ಪ ಬಡವರ ಪರವಾಗಿ ಅನೇಕ ಯೋಜನೆಗಳನ್ನು ಜಾರಿ ತಂದಿದ್ದರು. ಕಳೆದ ಚುನಾವಣೆಗಳಲ್ಲಿ ಬಿಜೆಪಿಯ ಭವನಾತ್ಮಕ ಹೇಳಿಕೆಗಳಿಂದ ನಮಗೆ ಸೋಲಾಗಿರಬಹುದು. ಆದರೆ ಈಗ ಜನರಿಗೆ ಅರ್ಥವಾಗಿದೆ ನಮ್ಮ ಕುಟುಂಬ ಹಾಗೂ ಕಾಂಗ್ರೆಸ್‍ ಪಕ್ಷ ಸರ್ವ ಜನಾಂಗದ ಹಾಗೂ ಸರ್ವಧರ್ಮಗಳ ಪರವಾಗಿದೆ ಹಾಗಾಗಿ ಕ್ಷೇತ್ರದ ಜನ ನನ್ನ ಕೈ ಹಿಡಿಯುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು. ಈ ವೇಳೆ ಕಾಂಗ್ರೆಸ್‍ ಪಕ್ಷದ ಮುಖಂಡರಾದ ಜರ್ಮಲೆ ಚಂದ್ರಶೆಖರ್‍, ಮಧುಕೇಶ್ವರ ಪಾಟೀಲ್, ಸುರೇಶ್‍ ಹಾವಣ್ಣನವರ್‌, ಸಂಜೀವ ತರಕಾರಿ, ಪಿ.ಹನುಮಂತಪ್ಪ ಹೊಸಳ್ಳಿ, ಅನೀಶ್‌ಗೌಡ, ದರ್ಶನ್‍ ದಚ್ಚು ಇದ್ದರು.

Tap to resize

Latest Videos

undefined

ಈಶ್ವರಪ್ಪ ಬಂಡಾಯದಿಂದ ನಮಗೇನು ನಷ್ಟ ಉಂಟಾಗಲಾರದು: ಬಿ.ವೈ.ರಾಘವೇಂದ್ರ

ಮತ ಹಾಕಿದರೆ ಫ್ರೀ ಉಪಾಹಾರ: ಶಿವಮೊಗ್ಗ ಲೋಕಸಭಾ ಚುನಾವಣೆ ಮತದಾನ ಪ್ರಮಾಣ ಹೆಚ್ಚಳಕ್ಕೆ ಹೋಟೆಲ್‌ವೊಂದು ಮಂಗಳವಾರ ಉಚಿತ ಉಪಾಹಾರ ಘೋಷಿಸಿದರೆ, ಇನ್ನು ಬಟ್ಟೆ ಅಂಗಡಿಯೊಂದು ಗ್ರಾಹಕರಿಗೆ ಶೇ.15 ಡಿಸ್ಕೌಂಟ್‌ ಘೋಷಣೆ ಮಾಡಿದೆ. ನಗರದ ಹೋಟೆಲ್ ಶುಭಂ ಬೆಳಗ್ಗೆ 7ರಿಂದ ಮಧ್ಯಾಹ್ನ 12ರವರೆಗೆ ಮತದಾನ ಮಾಡಿದವರಿಗೆ ಉಚಿತ ಉಪಾಹಾರ ನೀಡಲಿದೆ. ಮಧ್ಯಾಹ್ನ 2ರೊಳಗೆ ಶ್ರೀನಿಧಿ ಸಿಲ್ಕ್ಸ್‌ ಆ್ಯಂಡ್‌ ಟೆಕ್ಸ್‌ಟೈಲ್‌ನಲ್ಲಿ ಬಟ್ಟೆ ಖರೀದಿಸಿದರೆ ಶೇ.15ರಷ್ಟು ರಿಯಾಯಿತಿ ಪಡೆಯಬಹುದು.

ಶಿವಮೊಗ್ಗ ನಗರದಲ್ಲಿ ಅತಿ ಹೆಚ್ಚು ಮತದಾನ ಆಗಬೇಕು ಮತ್ತು ಇಡೀ ರಾಜ್ಯಕ್ಕೆ ಮಾದರಿ ಜಿಲ್ಲೆ ನಮ್ಮದಾಗಬೇಕು ಎಂಬ ಉದ್ದೇಶದಿಂದ ಮತದಾನ ಮಾಡಿದ ನಾಗರಿಕರಿಗೆ ಉಚಿತ ಉಪಹಾರ ನೀಡಲು ನಗರದ ಹೋಟೆಲ್ ಶುಭಂ ಬೆಳಗ್ಗೆ 7ರಿಂದ ಮಧ್ಯಾಹ್ನ 12ರವರೆಗೆ ಮತದಾನ ಮಾಡಿದವರಿಗೆ ಉಚಿತ ಉಪಾಹಾರ ವ್ಯವಸ್ಥೆ ಇದೆ. ಈ ವೇಳೆ ಮತ ಚಲಾಯಿಸಿದ ಬೆರಳಿನ ಗುರುತು ತೋರಿಸುವುದು ಕಡ್ಡಾಯ. ಇನ್ನು ಮತದಾನ ಮಾಡಿದವರು ಚುನಾವಣಾ ಪ್ರಚಾರದ ಟೀ ಶರ್ಟ್, ಕ್ಯಾಪ್, ಬಂಟಿಂಗ್ಸ್ , ಪಕ್ಷದ ಶಾಲು, ಇನ್ನಿತರ ಯಾವುದೇ ಪ್ರಚಾರದ ಸಾಮಗ್ರಿ ತರುವಂತಿಲ್ಲ. ಯಾವುದೇ ರಾಜಕೀಯ ಸಂಬಂಧಿಸಿದ ವಿಷಯ ಮಾತನಾಡುವಂತಿಲ್ಲ ಎಂದು ಹೋಟೆಲ್ ಮಾಲೀಕರು ಸೂಚಿಸಿದ್ದಾರೆ.

3 ಲಕ್ಷ ಮತಗಳ ಅಂತರದಲ್ಲಿ ರಾಘವೇಂದ್ರ ಗೆಲುವು ನಿಶ್ಚಿತ: ಬಿ.ವೈ.ವಿಜಯೇಂದ್ರ ವಿಶ್ವಾಸ

ಶೇ.15ರಷ್ಟು ಕಡಿತ: ಇನ್ನು ನಗರದ ಶ್ರೀನಿಧಿ ಸಿಲ್ಕ್ಸ್‌ ಆ್ಯಂಡ್‌ ಟೆಕ್ಸ್‌ಟೈಲ್‌ ಸಂಸ್ಥೆ ಕೂಡ ದರ ಕಡಿತದ ಕೊಡುಗೆ ಘೋಷಣೆ ಮಾಡಿದೆ. ಮತದಾನ ಮಾಡಿದವರು ಮಧ್ಯಾಹ್ನ 2ರೊಳಗೆ ಶ್ರೀನಿಧಿ ಸಿಲ್ಕ್ಸ್‌ ಆ್ಯಂಡ್‌ ಟೆಕ್ಸ್‌ಟೈಲ್‌ನಲ್ಲಿ ಬಟ್ಟೆ ಖರೀದಿಸಿದರೆ ಶೇ.15ರಷ್ಟು ರಿಯಾಯಿತಿ ಪಡೆಯಬಹುದು. ಈ ಡಿಸ್ಕೌಂಟ್‌ ಶಿವಮೊಗ್ಗ ಲೋಕಸಭಾ ವ್ಯಾಪ್ತಿಯ ಮತದಾರರಿಗೆ ಮಾತ್ರ ಅನ್ವಯವಾಗಲಿದೆ ಎಂದು ಟೆಕ್ಸ್‌ಟೈಲ್‌ ಮಾಲೀಕರು ತಿಳಿಸಿದ್ದಾರೆ.

click me!