ರೈಲು ಟಿಕೆಟ್ ಇರೋದು ಪ್ರಯಾಣಕ್ಕೆ ಮಾತ್ರವಲ್ಲ ನೀವು ಈ ಉಚಿತ ಸೇವೆಯನ್ನು ಸಹ ಪಡೀಬೋದು

First Published May 8, 2024, 2:39 PM IST

ದೂರ ಪ್ರಯಾಣಕ್ಕೆ ಹೆಚ್ಚಿನವರು ಆಯ್ಕೆ ಮಾಡಿಕೊಳ್ಳುವ ವಿಧಾನ ರೈಲು ಜರ್ನಿ.  ಪ್ರತಿದಿನ ಕೋಟಿಗಟ್ಟಲೆ ಜನರು ಭಾರತೀಯ ರೈಲ್ವೆ ಮೂಲಕ ಪ್ರಯಾಣಿಸುತ್ತಾರೆ. ಆದರೆ ರೈಲು ಟಿಕೆಟ್ ಕೇವಲ ಪ್ರಯಾಣ ಮಾಡೋದಕ್ಕೆ ಮಾತ್ರವಲ್ಲ ಇದರ ಮೂಲಕವೂ ಕೆಲವು ಉಚಿತ ಸೇವೆಗಳನ್ನು ಪಡೆಯಬಹುದು ಅನ್ನೋದು ನಿಮ್ಗೆ ಗೊತ್ತಿದ್ಯಾ?

ಭಾರತೀಯ ರೈಲ್ವೇ ದೇಶದ ಅತಿದೊಡ್ಡ ಸಾರಿಗೆ ವ್ಯವಸ್ಥೆಯಾಗಿದೆ. ಪ್ರತಿ ದಿನ ಕೋಟಿಗಟ್ಟಲೆ ಜನರು ಭಾರತೀಯ ರೈಲ್ವೆ ಮೂಲಕ ಪ್ರಯಾಣಿಸುತ್ತಾರೆ. ಈ ಮಧ್ಯೆ, ರೈಲು ಟಿಕೆಟ್ ಅನ್ನು ಕೇವಲ ಪ್ರಯಾಣಕ್ಕೆ ಬೇಕಾಗುವ ಚೀಟಿ ಎಂದು ಪರಿಗಣಿಸುವವರೂ ಇದ್ದಾರೆ.  ಆದರೆ ರೈಲು ಟಿಕೆಟ್‌ ಮೂಲಕವೂ ಕೆಲವು ಉಚಿತ ಸೇವೆಗಳನ್ನು ಪಡೆಯಬಹುದು ಅನ್ನೋದು ನಿಮ್ಗೆ ಗೊತ್ತಿದ್ಯಾ?
 

ರೈಲ್ವೇ, ಪ್ರಯಾಣಿಕರಿಗೆ ಉಚಿತ ಹೊದಿಕೆ, ದಿಂಬು, ಬೆಡ್ ಶೀಟ್ ಮತ್ತು ಹ್ಯಾಂಡ್ ಟವೆಲ್‌ನ್ನು ಒದಗಿಸುತ್ತದೆ. ಆದರೆ ಗರೀಬ್ ರಥ ಎಕ್ಸ್‌ಪ್ರೆಸ್‌ನಂತಹ ಕೆಲವು ರೈಲುಗಳಲ್ಲಿ ಹೆಚ್ಚುವರಿ ಪಾವತಿಸಬೇಕಾಗುತ್ತದೆ. ಅಲ್ಲದೆ ಟಿಕೆಟ್ ಇದ್ದರೆ ಪ್ರವಾಸದ ಸಮಯದಲ್ಲಿ ಅಥವಾ ಯಾವುದೇ ಪರಿಸ್ಥಿತಿಯ ಸಂದರ್ಭದಲ್ಲಿ ವೈದ್ಯಕೀಯ ನೆರವು ನೀಡಲಾಗುತ್ತದೆ.

ಭಾರತೀಯ ರೈಲ್ವೇ ತನ್ನ ಸಾಮಾನ್ಯ ಪ್ರಯಾಣಿಕರ ಸುರಕ್ಷತೆಗೆ ಎಲ್ಲಾ ರೀತಿಯ ಸೇವೆಯನ್ನು ಒದಗಿಸುತ್ತದೆ. ಅವರ ಸುರಕ್ಷತೆ ಮತ್ತು ಸೌಕರ್ಯಗಳಿಗೆ ಆದ್ಯತೆ ನೀಡುತ್ತದೆ.

ಮಾತ್ರವಲ್ಲ, ರೈಲ್ವೆ ಇಲಾಖೆ ಉಚಿತ ವೈದ್ಯಕೀಯ ನೆರವನ್ನು ಸಹ ನೀಡುತ್ತದೆ. ಇದಕ್ಕಾಗಿ ರೈಲ್ವೆ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ. 

ಪ್ರೀಮಿಯಂ ರೈಲುಗಳಲ್ಲಿ ಪ್ರಯಾಣಿಸುವಾಗ ನಿಮ್ಮ ರೈಲು 2 ಗಂಟೆಗಳಿಗಿಂತ ಹೆಚ್ಚು ವಿಳಂಬವಾದರೆ, ರೈಲ್ವೆ ಉಚಿತ ಆಹಾರವನ್ನು ನೀಡುತ್ತದೆ. ಇದಲ್ಲದೆ, ರೈಲು ವಿಳಂಬದ ಸಂದರ್ಭದಲ್ಲಿ, ರೈಲ್ವೆ ಇ-ಕೇಟರಿಂಗ್ ಸೇವೆಯ ಮೂಲಕ ಆಹಾರವನ್ನು ಸಹ ಆರ್ಡರ್ ಮಾಡಬಹುದು.

ಇದಲ್ಲದೆ, ದೇಶದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಡ್ರೆಸ್ಸಿಂಗ್ ರೂಮ್ ಮತ್ತು ಲಾಕರ್ ರೂಮ್ ಸೌಲಭ್ಯಗಳು ಸಹ ಲಭ್ಯವಿದೆ. ಇಲ್ಲಿ  ನಿಮ್ಮ ವಸ್ತುಗಳನನ್ಉ ಸುರಕ್ಷಿತವಾಗಿಡಲು ಇವುಗಳನ್ನು ಬಳಸಬಹುದು.

ಈ ಲಾಕರ್ ಕೊಠಡಿಗಳಲ್ಲಿ ನೀವು ಒಂದು ತಿಂಗಳ ಕಾಲ ನಿಮ್ಮ ವಸ್ತುಗಳನ್ನು ಸುರಕ್ಷಿತವಾಗಿ ಇರಿಸಬಹುದು. ಆದರೆ ಅದಕ್ಕೆ ಒಂದಿಷ್ಟು ಶುಲ್ಕ ಕಟ್ಟಬೇಕಾಗುತ್ತದೆ.

ಮಾತ್ರವಲ್ಲ ರೈಲ್ವೇ ಟಿಕೆಟ್ ಇದ್ದರೆ ನೀವು ನಿಲ್ದಾಣದಲ್ಲಿ ಸ್ವಲ್ಪ ಸಮಯ ಉಳಿಯಬೇಕಾದರೆ, ನಿಲ್ದಾಣದ ಎಸಿ ಅಥವಾ ನಾನ್ ಎಸಿ ವೇಟಿಂಗ್ ಹಾಲ್‌ನಲ್ಲಿ ಆರಾಮವಾಗಿ ಕಾಯಬಹುದು. ಅಲ್ಲಿ ನಿಮ್ಮ ರೈಲು ಟಿಕೆಟ್ ತೋರಿಸಬೇಕು. ನಂತರ ಅಲ್ಲಿ ಉಳಿಯಲು ನಿಮಗೆ ಅವಕಾಶ ನೀಡಲಾಗುವುದು.

click me!