Jul 23, 2022, 11:16 AM IST
ಬೆಂಗಳೂರು (ಜು. 23): ಸಾರಿಗೆ ನಿಗಮಗಳ ಪುನಶ್ಚೇತನಕ್ಕೆ ರಚನೆಯಾಗಿದ್ದ ಶ್ರೀನಿವಾಸಮೂರ್ತಿ ಕಮಿಟಿ, ತನ್ನ ವರದಿಯಲ್ಲಿ ಸಂಸ್ಥೆಗಳ ಖಾಸಗೀಕರಣಕ್ಕೆ ಪುಷ್ಟಿ ನೀಡುತ್ತಿದೆ. ಈ ಕಮಿಟಿ ವಿರುದ್ಧ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶ್ರೀನಿವಾಸಮೂರ್ತಿ ಕಮಿಟಿ ವರದಿಯಲ್ಲಿ ಖಾಸಗೀಕರಣಕ್ಕೆ ಪೂರಕವಾದ ಅಂಶಗಳಿವೆ. ನಿಗಮದ ಇತಿಹಾಸದಲ್ಲಿ ಗುತ್ತಿಗೆ ನೇಮಕಾತಿ ಇರಲಿಲ್ಲ, ಆದರೆ ಮೊದಲ ಬಾರಿ ಗುತ್ತಿಗೆ ನೌಕರರ ನೇಮಕಾತಿಗೆ ಶಿಫಾರಸ್ಸು ಮಾಡಲಾಗಿದೆ. ಕಾರ್ಯಾಗಾರಗಳನ್ನು ಖಾಸಗೀಕರಣ ಮಾಡಲು ಶಿಫಾರಸ್ಸು ಮಾಡಲಾಗಿದೆ. ಹೀಗಾಗಿ ವರದಿ ಅನುಷ್ಠಾನ ಕೆಎಸ್‌ಆರ್‌ಟಿಸಿ ನೌಕರರ ಸಂಘದ ಅಧ್ಯಕ್ಷ ಅನಂತ ಸುಬ್ಬರಾವ್ ಸರ್ಕಾರಕ್ಕೆ ಪ್ರತ ಬರೆದಿದ್ದಾರೆ.
ರಾಜಕೀಯ ನಿವೃತ್ತಿ ಘೋಷಿಸಿದ್ರಾ ಬಿಎಸ್ ಯಡಿಯೂರಪ್ಪ, ಬಿಜೆಪಿಯಲ್ಲಿ ತಳಮಳ!
ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಿಗೆ ಇನ್ನು ಮುಂದೆ ಬಸ್ ಖರೀದಿಗೆ ಸರ್ಕಾರ ಹಣ ನೀಡದೆ ಮಧ್ಯವರ್ತಿ ಸಂಸ್ಥೆಯಿಂದ ಹಣಕಾಸು ಸೌಲಭ್ಯ ಒದಗಿಸಬೇಕು, ಈಗಿರುವ 24 ಸಾವಿರ ಬಸ್‌ಗಳನ್ನು 2030ರ ವೇಳೆಗೆ 40 ಸಾವಿರಕ್ಕೆ ಹೆಚ್ಚಿಸಬೇಕು, ನಿಗಮಗಳು ತಮ್ಮ ಆದಾಯದಲ್ಲೇ ಮುಂದುವರೆಯಲು ಕ್ರಮ ಕೈಗೊಳ್ಳಬೇಕು. ಪ್ರತಿ ಬಸ್‌ಗೆ ಚಾಲಕ ಕಂ ನಿರ್ವಾಹಕರು ಮಾತ್ರ ಸೇವೆ ಸಲ್ಲಿಸಬೇಕು ಎಂಬುದು ಸೇರಿದಂತೆ ಹಲವಾರು ಶಿಫಾರಸುಗಳನ್ನು ನಿಗಮಗಳ ಪುನಶ್ಚೇತನ ಸಂಬಂಧ ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್.ಶ್ರೀನಿವಾಸಮೂರ್ತಿ ಅವರ ಸಮಿತಿ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಲಾಗಿದೆ.