ಮಾದಕ ನಟಿ ಸಿಲ್ಕ್ ಸ್ಮಿತಾಗೆ ಮಗನಿದ್ದಾನಾ? ಆಕೆಯ ಸೂಸೈಡ್ ನೋಟ್‌ನಲ್ಲಿ ನನಗೆ ದ್ರೋಹ ಮಾಡಿದ್ದರು ಎಂದಿದ್ದು ಯಾರಿಗೆ?

First Published | Dec 2, 2024, 5:34 PM IST

ಬೋಲ್ಡ್ ಸ್ಟಾರ್ ಸಿಲ್ಕ್ ಸ್ಮಿತಾಳ ಸೂಸೈಡ್ ನೋಟ್‌ನಲ್ಲಿ ಬರೆದಿರುವ ವಿಷಯಗಳು ಚರ್ಚೆಗೆ ಗ್ರಾಸವಾಗಿವೆ. ಅದರಲ್ಲಿ ಏನಿದೆ? ಆಕೆಗೆ ಮಗನಿದ್ದಾನಾ? ನಾವಿಂದು ತಿಳಿಯೋಣ ಬನ್ನಿ

ಸಿಲ್ಕ್ ಸ್ಮಿತಾ

ಈಗಿನ ಪೀಳಿಗೆಗೆ ಸಿಲ್ಕ್ ಸ್ಮಿತಾ ಯಾರೆಂದು ಗೊತ್ತಿರಲಿಕ್ಕಿಲ್ಲ. ಆದರೆ 40 ದಾಟಿದವರಿಗೆಲ್ಲಾ ಆಕೆಯ ಬಗ್ಗೆ ತಿಳಿದೇ ಇದೆ. ಬೋಲ್ಡ್ ಪಾತ್ರಗಳಿಂದ ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ್ದ ಸಿಲ್ಕ್ ಸ್ಮಿತಾ ಚಿಕ್ಕ ವಯಸ್ಸಿಗೆ ಆತ್ಮಹತ್ಯೆ ಮಾಡಿಕೊಂಡರು. ಆಕೆಯ ಸಾವು ಇಂದಿಗೂ ನಿಗೂಢವಾಗಿಯೇ ಉಳಿದಿದೆ. 

ಸಿಲ್ಕ್ ಸ್ಮಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಸಾಯುವ ಮುನ್ನ ಆಕೆ ಬರೆದ ಸೂಸೈಡ್ ನೋಟ್‌ನಲ್ಲಿ ತನ್ನ ನೋವು, ವಂಚನೆಯ ಬಗ್ಗೆ ಬರೆದಿದ್ದಾರೆ. ಬಾಬು ಮಾತ್ರ ಸ್ವಾರ್ಥವಿಲ್ಲದೆ ನನ್ನ ಪ್ರೀತಿಸುತ್ತಿದ್ದ ಎಂದೂ ಬರೆದಿದ್ದಾರೆ. ಆ ಬಾಬು ಯಾರು? ಸೂಸೈಡ್ ನೋಟ್‌ನಲ್ಲಿ ಏನಿದೆ ಎಂದು ನೋಡೋಣ. 

Tap to resize

`ಓ ಅಭಾಗ್ಯುರಾಲು` ಎಂದು ಆರಂಭಿಸಿ, ಏಳನೇ ವರ್ಷದಿಂದ ಹೊಟ್ಟೆಪಾಡಿಗಾಗಿ ಕಷ್ಟಪಟ್ಟಿದ್ದೇನೆ. ನನ್ನವರು ಯಾರೂ ಇಲ್ಲ. ನಾನು ನಂಬಿದವರೆಲ್ಲಾ ವಂಚಿಸಿದ್ದಾರೆ. ಬಾಬು ಮಾತ್ರ ನನ್ನನ್ನು ಪ್ರೀತಿಸುತ್ತಿದ್ದ. ಎಲ್ಲರೂ ನನ್ನನ್ನು ಬಳಸಿಕೊಂಡು ವಂಚಿಸಿದ್ದಾರೆ. ಬಾಬು ಕುಟುಂಬಕ್ಕೆ ಮತ್ತು ನನ್ನ ಕುಟುಂಬಕ್ಕೆ ನನ್ನ ಆಸ್ತಿಯನ್ನು ಹಂಚಬೇಕು. ನನ್ನ ಆಸೆಗಳನ್ನೆಲ್ಲ ಒಬ್ಬ ವ್ಯಕ್ತಿಯ ಮೇಲೆ ಇಟ್ಟುಕೊಂಡಿದ್ದೆ, ಆದರೆ ಅವನು ನನ್ನನ್ನು ವಂಚಿಸಿದ. ದಿನಾ ಟಾರ್ಚರ್ ಸಹಿಸಲು ಆಗುತ್ತಿಲ್ಲ.
 

ರಾಮು. ರಾಧಾಕೃಷ್ಣನ್ ನನ್ನನ್ನು ತುಂಬಾ ಕೆಣಕಿದ್ದಾರೆ. ಅವರಿಗೆ ತುಂಬಾ ಒಳ್ಳೆಯದು ಮಾಡಿದ್ದೆ. ಆದರೆ ಅವರು ನನಗೆ ದ್ರೋಹ ಬಗೆದಿದ್ದಾರೆ. 5 ವರ್ಷಗಳ ಹಿಂದೆ ಒಬ್ಬ ವ್ಯಕ್ತಿ ನನಗೆ ಜೀವನ ಕೊಡ್ತೀನಿ ಅಂದಿದ್ದ. ಈಗ ಕೊಡ್ತಿಲ್ಲ. ಬಾಬು ಬಿಟ್ಟರೆ ನನ್ನ ಕಷ್ಟದ ಹಣ ತಿನ್ನದವರು ಯಾರೂ ಇಲ್ಲ. ಇದನ್ನು ಬರೆಯಲು ನಾನು ಪಟ್ಟ ನರಕ ವರ್ಣಿಸಲು ಸಾಧ್ಯವಿಲ್ಲ. ಜೀವನದಲ್ಲಿ ತುಂಬಾ ಕಿರುಕುಳಕ್ಕೆ ಸಾವು ಮಾತ್ರ ಶಾಶ್ವತ ಎನಿಸುತ್ತಿದೆ. ” ಎಂದು ಬರೆದಿದ್ದಾರೆ. ಸಿಲ್ಕ್ ಸ್ಮಿತಾ ಸತ್ತಾಗ ಚಿತ್ರರಂಗದಿಂದ ಯಾರೂ ಬರಲಿಲ್ಲ. ನಟ ಅರ್ಜುನ್ ಮಾತ್ರ ಬಂದಿದ್ದರಂತೆ. ಅನಾಥ ಶವದಂತೆ ಅಂತ್ಯಕ್ರಿಯೆ ಮಾಡಲಾಯಿತು.
 

ಸಿಲ್ಕ್ ಸ್ಮಿತಾ ಬಯೋಪಿಕ್

ಸೂಸೈಡ್ ನೋಟ್‌ನಲ್ಲಿ ಬಾಬು ಎಂದು ಬರೆದಿದ್ದಾರೆ. ಆ ಬಾಬು ಯಾರು ಎಂಬುದು ಕುತೂಹಲಕಾರಿ. ಆಕೆಗೆ ಮಗನಿದ್ದಾನಾ? ಯಾರನ್ನಾದರೂ ಸಾಕಿ ಸಲಹುತ್ತಿದ್ದಳಾ ಎಂಬುದು ತಿಳಿಯಬೇಕಿದೆ.

1994 ಸೆಪ್ಟೆಂಬರ್ 22 ರಂದು ಸೂಸೈಡ್ ನೋಟ್ ಬರೆದ ಸಿಲ್ಕ್ ಸ್ಮಿತಾ 23 ರಂದು ಮೃತಪಟ್ಟರು. ಆಕೆ ಜೀವನದಲ್ಲಿ ಎಷ್ಟು ನೋವು ಅನುಭವಿಸಿದ್ದಾರೆ ಎಂಬುದು ಈ ಪತ್ರದಿಂದ ತಿಳಿಯುತ್ತದೆ. ಅಂದಹಾಗೆ ಇಂದು ಆಕೆಯ 64 ನೇ ಜನ್ಮದಿನ.  

1960 ಡಿಸೆಂಬರ್ 2 ರಂದು ಸಿಲ್ಕ್ ಸ್ಮಿತಾ ಏಲೂರಿನ ಕೊವ್ವಲಿ ಗ್ರಾಮದಲ್ಲಿ ಬಡ ಕುಟುಂಬದಲ್ಲಿ ಹುಟ್ಟಿದರು. ಓದಲು ಆಗದೆ ಶಾಲೆ ಬಿಟ್ಟರು. ಹೊಟ್ಟೆಪಾಡಿಗಾಗಿ ಕೂಲಿ ಮಾಡಿದರು. ಮದುವೆಯಾಯಿತು. ಆದರೆ ಗಂಡ ಕಿರುಕುಳ ಕೊಡುತ್ತಿದ್ದ. ಚೆನ್ನೈಗೆ ಓಡಿ ಹೋದ ಸಿಲ್ಕ್ ಚಿತ್ರರಂಗದಲ್ಲಿ ಅವಕಾಶಗಳಿಗಾಗಿ ಪ್ರಯತ್ನಿಸಿದರು. ಕಷ್ಟಪಟ್ಟು ಅವಕಾಶ ಗಳಿಸಿ ನಟಿಯಾದರು. ಬೋಲ್ಡ್ ಪಾತ್ರಗಳಿಂದ ಪ್ರಸಿದ್ಧಿಯಾದರು.  

Latest Videos

click me!