ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಮಿಥುನ ರಾಶಿ (Mithuna Rashi) ಧಾರಾವಾಹಿಯಲ್ಲಿ ರಾಶಿಯ ಅಕ್ಕನ ಪಾತ್ರದಲ್ಲಿ ಆರಂಭದಲ್ಲಿ ನಟಿಸಿದ್ದು, ಸಂಪಾದ. ಸ್ವಲ್ಪ ಸಮಯದಲ್ಲಿ ಆ ಸೀರಿಯಲ್ ನಿಂದ ಹೊರ ಬಂದಿದ್ದರು. ಈ ನಟಿ ಸದ್ಯಕ್ಕೆ ಸಿನಿಮಾಗಳಲ್ಲಿ ಸಖತ್ ಬ್ಯುಸಿ.
ಹೌದು, ಮುದು ಮುಖದ ಸುಂದರಿ ಸಂಪಾದ ಹುಲಿವನ (Sampaada Hulivana)ಈಗಾಗಲೇ ಒಂದಿಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ಇದೀಗ ಇಬ್ಬರು ಜನಪ್ರಿಯ ನಾಯಕರಿಗೆ ಸಂಪದಾ ನಾಯಕಿಗಾಗಿ ನಟಿಸುತ್ತಿದ್ದಾರೆ. ಅದು ಪ್ರಜ್ವಲ್ ದೇವರಾಜ್ ಹಾಗೂ ಯುವ ರಾಜ್’ಕುಮಾರ್ ಅವರಿಗೆ.
ಹೌದು, ಸಂಪಾದ ಹುಲಿವನ ಈಗಾಗಲೇ ಪ್ರಜ್ವಲ್ ದೇವರಾಜ್ (Prajwal Devaraj) ಅಭಿನಯಿಸುತ್ತಿರುವ ಬಹು ನಿರೀಕ್ಷಿತ ಕರಾವಳಿ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈಗಾಗಲೇ ಸಿನಿಮಾದ ಭರ್ಜರಿ ಶೂಟಿಂಗ್ ನಡೆಯುತ್ತಿದೆ. ಇದೀಗ ಸಂಪದಾ ಇನ್ನೊಂದ್ ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ.
ಯುವ ಸಿನಿಮಾದ ಮೂಲಕ ಸದ್ದು ಮಾಡಿದ ದೊಡ್ಮನೆ ಹುಡುಗ ಯುವರಾಜ್ (Yuva Rajkumar) ಇದೀಗ ಎಕ್ಕ ಎನ್ನುವ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಆಕ್ಷನ್ ಥ್ರಿಲ್ಲರ್ ಚಿತ್ರಕ್ಕೆ ರೋಹಿತ್ ಪದಕಿ ಆಕ್ಷನ್ ಕಟ್ ಹೇಳಲಿದ್ದಾರೆ. ಪಿಆರ್‌ಕೆ ಪ್ರೊಡಕ್ಷನ್ಸ್, ಕೆಆರ್‌ಜಿ ಸ್ಟುಡಿಯೋಸ್ ಹಾಗೂ ಜಯಣ್ಣ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣ ಆಗಲಿದೆ.
ಈ ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದು, ಒಬ್ಬ ನಾಯಕಿಯಾಗಿ ಸಂಪಾದ ಆಯ್ಕೆಯಾಗಿದ್ದಾರೆ. ಸಂಪಾದಗೆ ಇದು ನಾಲ್ಕನೇ ಸಿನಿಮಾ, ಈಗಾಗಲೇ ಕನ್ನಡ ಮತ್ತು ತೆಲುಗಿ ಸಿನಿಮಾಗಳಲ್ಲಿ ಈ ಜೋಡಿ ನಟಿಸಿದ್ದಾರೆ. ಇವರು ಈ ಮೊದಲು ನಿಖಿಲ್ ಕುಮಾರಸ್ವಾಮಿ ನಟನೆಯ ರೈಡರ್ ಸಿನಿಮಾಗೂ ನಾಯಕಿಯಾಗಿದ್ದರು.
ಕನ್ನಡ ಸಿನಿಮಾ ಮಾತ್ರವಲ್ಲ ತೆಲುಗಿನಲ್ಲೂ 'ಮಾಸ್ ಮಹಾರಾಜು ಎನ್ನುವ ಸಿನಿಮಾದಲ್ಲಿ ಸಂಪಾದ ನಟಿಸಿದ್ದಾರೆ. ಅಷ್ಟೇ ಅಲ್ಲ ವಿಶ್ವಕ್ ಸೇನ್ ಜೊತೆ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಇನ್ನು ಇಂಟಿರಿಯರ್ ಡಿಸೈನಿಂಗ್ ನಲ್ಲಿ ಡಿಗ್ರಿ ಪಡೆದಿರುವ ಸಂಪಾದ, ಮಿಥುನ ರಾಶಿ ಸೀರಿಯಲ್ ಮೂಲಕ ನಟನೆಗೆ ಎಂಟ್ರಿ ಕೊಟ್ಟರು, ಇದಾದ ಬಳಿಕ, ಬೆಂಕಿ, ರೈಡರ್ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದು, ಈ ವರ್ಷ ಕರಾವಳಿ ಮತ್ತು ಎಕ್ಕ ಸಿನಿಮಾದಲ್ಲಿ ಚಾನ್ಸ್ ಪಡೆದುಕೊಂಡಿದ್ದಾರೆ.