
ನಟಿ ಸಿಲ್ಕ್ ಸ್ಮಿತಾ (Silk Smitha) ಯಾರಿಗೆ ಗೊತ್ತಿಲ್ಲ? ಬರೋಬ್ಬರಿ 5 ಭಾಷೆಗಳಲ್ಲಿ 450 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ನಟಿ ಸಿಲ್ಕ್ ಸ್ಮಿತಾ ಒಂಥರಾ ಜಗತ್ ಪ್ರಸಿದ್ಧಿ ಪಡೆದಿದ್ದ ನಟಿ. ಇಂದಿನ ಜನರೇಷನ್ ಆ ನಟಿಯ ಹೆಸರು ಕೇಳಿರಬಹುದು, ಅಲ್ಲೋ ಎಲ್ಲೋ ಒಂದರೆಡು ಪಿಕ್, ವಿಡಿಯೋ ನೋಡಿರಬಹುದು. ಆದರೆ ಆಕೆ ಜೀವಂತವಿದ್ದಾಗ ಆಕೆಯನ್ನು ನೋಡಿದವರು, ತೆರೆಯ ಮೇಕೆ ಆಕೆಯ ಸೌಂರ್ದೈ ಸವಿದವರು ನಟಿ ಸಿಲ್ಕ್ ಅವರನ್ನು ಮರೆಯಲು ಸಾಧ್ಯವೇ ಇಲ್ಲ.
ಸಿಲ್ಕ್ ಸ್ಮಿತಾ ಅವರು ಇಂದಿನ ಕಾಲದಲ್ಲಿ ಸನ್ನಿ ಲಿಯೋನ್ ಇದ್ದ ಹಾಗೆ ಎನ್ನಬಹುದು. ಆದರೆ, ಇವರೊಂದಿಗೆ ಅವರ ಹೋಲಿಕೆ ಮಾಡುವುದು ಸರಿಯಲ್ಲ. ಏಕೆಂದರೆ, ಹಾಲಿವುಡ್ ನೆರಳಿನ ವಯಸ್ಕರ ಚಿತ್ರದಲ್ಲಿ ನಟಿಸುತ್ತಿದ್ದ ಸನ್ನಿ ಲಿಯೋನ್ ಹಾಗೂ ಸಿಲ್ಕ್ ಸ್ಮಿತಾರನ್ನು ಒಂದೇ ತಕ್ಕಡಿಯಲ್ಲಿ ತೂಗುವುದು ತಪ್ಪಾಗುತ್ತದೆ. ಏಕೆಂದರೆ, ಸಿಲ್ಕ್ ಸ್ಮಿತಾ ಕ್ಲಾಸಿಕಲ್ ಡಾನ್ಸರ್ ಕೂಡ ಆಗಿದ್ದರವರು. ಅವರು ಬಹಳಷ್ಟು ರೀತಿಯ ಡಾನ್ಸ್ ಮಾಡುವ ಮೂಲಕ ಕಲಾವಿದೆ ಪಟ್ಟವನ್ನು ಸಹ ಗಳಿಸಿದ್ದರವರು.
ವೈರಲ್ ವಿಡಿಯೋದಲ್ಲಿ ಕಿಚ್ಚ ಸುದೀಪ್ ಮಾತು ಕೇಳಿ ಫ್ಯಾನ್ಸ್ ಏನ್ ಅಂತಿದಾರೆ?
ಹೀರೋ ಹಾಗೂ ಹೀರೋಯಿನ್ ಯಾರೇ ಆಗಿರಲಿ, ಎಲ್ಲಾ ಸಿನಿಮಾಗಳಲ್ಲಿ ನಟಿ ಸಿಲ್ಕ್ ಸ್ಮಿತಾಳದ್ದು ಒಂದು ಡಾನ್ಸ್ ಇರಲೇಬೇಕು ಎಂಬ ಅಲಿಖಿತ ನಿಯಮ ಇತ್ತು. ಸಿಲ್ಕ್ ಇದ್ರೆ ಮಾತ್ರ ಸಿನಿಪ್ರೇಕ್ಷಕರು ಥಿಯೇಟರ್‌ಗೆ ಬರೋದು ಎಂಬಂತಹ ವಾತಾವರಣ ಸೃಷ್ಟಿಯಾಗಿತ್ತು ಎಂದರೆ ತಪ್ಪಿಲ್ಲ. ಅಷ್ಟರಮಟ್ಟಿಗೆ ಚಿತ್ರರಸಿಕರು ಸಿಲ್ಕ್ ಸ್ಮಿತಾರ ಡಾನ್ಸ್‌ಗೆ ಅಡಿಕ್ಟ್ ಆಗಿದ್ದರು. ಆದರೆ, ಅಂಥ ಸಿಲ್ಕ್ ಸ್ಮಿತಾ ದುರಂತಮಯ ಸಾವು ಕಂಡರು. ಬರಬಾರದ ವಯಸ್ಸಿನಲ್ಲಿ ಸಾವು ಅವರನ್ನು ನುಂಗಿ ಹಾಕಿತು.
ಖ್ಯಾತ ನಟಿ ಸಿಲ್ಕ್ ಸ್ಮಿತಾ ಬಯೋಪಿಕ್ ಘೋಷಣೆಯಾಗಿದೆ. ಜಯರಾಮ್ ಸಂಕರನ್ ನಿರ್ದೇಶನದಲ್ಲಿ ಸಿಲ್ಕ್ ಸ್ಮಿತಾಳ ಜೀವನ ಚರಿತ್ರೆ ತೆರೆಯ ಮೇಲೆ ಮೂಡಿಬರಲಿದೆ. ಈ ಚಿತ್ರವನ್ನು ವಿಜಯ್ ಅಮೃತರಾಜ್ ಅವರು ಎಸ್‌ಟಿಆರ್‌ಐ (STRI Cinemas) ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಲು ಸಜ್ಜಾಗಿದ್ದಾರೆ. ನಟಿ ಸಿಲ್ಕ್ ಸ್ಮಿತಾ ಪಾತ್ರವನ್ನು ನಟಿ ಚಂದ್ರಿಕಾ ರವಿ ಅವರು ಪೋಷಿಸಲಿದ್ದಾರೆ. ಈ ಚಿತ್ರವು 2025ರ ಶೂರುವಿನಲ್ಲಿ ಶೂಟಿಂಗ್ ಶುರುಮಾಡಲಿದ್ದು ಭಾರೀ ನಿರೀಕ್ಷೆ ಮನೆಮಾಡಿದೆ.
ಜೀವನಕ್ಕೆ ಅಂತ್ಯ ಕೊಟ್ಟ ಶೋಭಿತಾ ಶಿವಣ್ಣ ಇನ್ನು ನೆನಪು ಮಾತ್ರ; ಇಲ್ಲಿವೆ ನಟಿಯ ಮುದ್ದಾದ ಫೋಟೋಸ್!
ಇದೀಗ, ಸಿಲ್ಕ್ ಸ್ಮಿತಾ ಅವರ ಜನ್ಮದಿನವಾದ ಡಿಸೆಂಬರ್ 02ರಂದು (02 December) ಈ ವಿಶೇಷ ಘೋಷಣೆ ಮಾಡುವ ಮೂಲಕ, ವಿಶೇಷ ವೀಡಿಯೊವನ್ನು ಅನಾವರಣಗೊಳಿಸಿದ್ದಾರೆ. ನಟಿ ಸಿಲ್ಕ್ ಸ್ಮಿತಾ ಬಯೋಪಿಕ್ ಘೋಷಣೆ ವಿಡಿಯೋ ಇದೀಗ ಅಸಂಖ್ಯಾತ ವೀಕ್ಷಣೆ ಪಡೆಯುವ ಮೂಲಕ ನಿರೀಕ್ಷೆಯನ್ನು ಹೆಚ್ಚಿಸುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.