ಕಾಯುವ ಅಗತ್ಯವಿಲ್ಲ, 10 ನಿಮಿಷದಲ್ಲೇ ಕೊರೋನಾ ರಿಪೋರ್ಟ್ ಕೈಯಲ್ಲಿ..!

Jul 12, 2020, 5:16 PM IST

ಬೆಂಗಳೂರು (ಜು. 12): ಯಲಹಂಕ ಜನರಲ್ ಆಸ್ಪತ್ರೆಯಲ್ಲಿ ಆ್ಯಂಟಿಜೆನ್ ಟೆಸ್ಟ್‌ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಚಾಲನೆ ನೀಡಿದ್ದಾರೆ. ಕೇವಲ 10 ನಿಮಿಷದಲ್ಲಿ ಕೋವಿಡ್ ರಿಪೋರ್ಟ್ ಪಡೆಯಬಹುದು. ಇದಕ್ಕೆ ಯಾವುದೇ ಆಧುನಿಕ ಪ್ರಯೋಗಾಲಯದ ಅವಶ್ಯಕತೆ ಇಲ್ಲ. ಇದು ನಿಜಕ್ಕೂ ಉಪಯೋಗಕಾರಿಯಾಗಿದೆ.  

ರಾಜ್ಯದಲ್ಲಿ ಒಟ್ಟು 3 ಲಕ್ಷ ಆ್ಯಂಟಿಜೆನ್ ಟೆಸ್ಟ್‌ಗೆ ಚಾಲನೆ ನೀಡಲು ಚಿಂತನೆ ನಡೆಸಲಾಗಿದೆ. ಬೆಂಗಳೂರಿನಲ್ಲಿ ಪ್ರಾಥಮಿಕವಾಗಿ 1 ಲಕ್ಷ ಕಿಟ್‌ ಖರೀದಿಸಲಾಗಿದೆ ಈಗಾಗಲೇ 5 ಸಾವಿರ ಕಿಟ್‌ನ್ನು ಫಿವರ್ ಕ್ಲಿನಿಕ್‌ಗೆ ರವಾನಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಕೊರೋನಾದಿಂದ ಗುಣಮುಖರಾದವರ ಪ್ಲಾಸ್ಮಾಕ್ಕೆ ಭರ್ಜರಿ ಬೇಡಿಕೆ..!