8 ತಿಂಗಳಲ್ಲಿ 28 ಕೆಜಿ ತೂಕ ಕಳೆದುಕೊಂಡ ಶ್ರುತಿ ಹರಿಹರನ್; ನಿಂಬೆ ಜ್ಯೂಸ್ ಸಹಾಯ ಮಾಡಿದೆ!

By Vaishnavi Chandrashekar  |  First Published May 2, 2024, 8:08 AM IST

8 ತಿಂಗಳಲ್ಲಿ ತೂಕ ಇಳಿಸಿಕೊಂಡ ಶ್ರುತಿ ಹರಿಹರನ್. ಏನೆಲ್ಲಾ ಡಯಟ್ ಮಾಡಿದ್ರು ಅಂತ ರಿವೀಲ್....
 


ಸ್ಯಾಂಡಲ್‌ವುಡ್‌ ಸಿಂಪಲ್ ಹುಡುಗಿ ಶ್ರುತಿ ಹರಿಹರನ್ ಪೋಸ್ಟ್‌ ಪ್ರೆಗ್ನೆನ್ಸಿ ವೇಟ್ ಲಾಸ್ ಮಾಡಿದ್ದಾರೆ. ಸುಮಾರು 8 ತಿಂಗಳ ಅವಧಿಯಲ್ಲಿ 28 ಕೆಜಿ ಇಳಿಸಿದ್ದಾರೆ. ಎಷ್ಟೇ ಬ್ಯುಸಿ ಶೆಟ್ಯೂಲ್ ಇರಲಿ ಬೆಳಗ್ಗೆ 5 ಗಂಟೆಗೆ ತಪ್ಪದೆ ಜಿಮ್‌ನಲ್ಲಿ ಹಾಜರ್‌ ಆಗಿರುತ್ತಾರಂತೆ.

'ಇಷ್ಟು ಫಿಟ್ ಆಗಲು ಬಹಳ ಸಮಯ ತೆಗೆದುಕೊಂಡಿದೆ ಆದರೆ ಇದಕ್ಕೆ ಕಾರಣವೇ ನನ್ನ ಫ್ರೆಂಡ್ ಆಫರ್ ಮಾಡಿದ ಪಾತ್ರ. ಈ ಪಾತ್ರ ನನಗೆ ದೊಡ್ಡ ಮೋಟಿವೇಷನ್‌ ಫ್ಯಾಕ್ಟರ್‌ ಆಗಿತ್ತು. ಯಾರು ಎಷ್ಟೇ ಹೇಳಲಿ ಮನಸ್ಸಿನಲ್ಲಿ ಗಟ್ಟಿ ನಿರ್ಧಾರ ಮಾಡಿದ ಮಾತ್ರ ಸಣ್ಣಗಾಗಲು ಸಾಧ್ಯ' ಎಂದು ಟೈಮ್‌ ಆಫ್‌ ಇಂಡಿಯಾ ಸಂದರ್ಶನದಲ್ಲಿ ಶ್ರುತಿ ಹರಿಹರನ್ ಮಾತನಾಡಿದ್ದಾರೆ.

Tap to resize

Latest Videos

ಮದ್ವೆ ಆದ್ರೆ ಆಗ್ಲಿ ಬಿಟ್ರೆ ಬಿಡ್ಲಿ, ಮಗು ತಂದುಕೊಡುವ ಖುಷಿ ನನಗೆ ಗೊತ್ತಿಲ್ಲ: ಅನುಪಮಾ ಗೌಡ

'ಪೋಸ್ಟ್‌ ಪಾರ್ಟಮ್‌ ಜರ್ನಿಯಲ್ಲಿ ಫಿಟ್ನೆಸ್ ಮಾನಸಿಕ ಹಾಗೂ ದೈಹಿಕವಾಗಿ ಪರಿಣಾಮ ಬೀರುತ್ತದೆ. Postpartum Anxiety ಎದುರಿಸುತ್ತಿರುವಾಗ ಮಗುವಿನಿಂದ ಸ್ವಲ್ಪ ದೂರ ಉಳಿದು ನಮಗೆ ಅಂತ ಸಮಯ ಕೊಟ್ಟರೆ ಎಷ್ಟೋ ಖುಷಿ ಕೊಡುತ್ತದೆ. ಮಗುವನ್ನು ನೋಡಿಕೊಳ್ಳಲು ಸಹಾಯ ಇಲ್ಲದ ಕಾರಣ ಅನೇಕರಿಗೆ ಈ ಸೌಲಭ್ಯ ಸಿಗುವುದಿಲ್ಲ. ಆದರೆ ನನಗೆಂದು ಮೀಸಲಿಡುತ್ತಿದ್ದ ಒಂದು ಗಂಟೆ ಸಮಯ ತುಂಬಾ ಮುಖ್ಯವಾಗಿತ್ತು' ಎಂದು ಶ್ರುತಿ ಹರಿಹರನ್ ಹೇಳಿದ್ದಾರೆ.

10 ಲಕ್ಷ ಸಾಲಲ್ಲ 20 ಲಕ್ಷ ಆಗ್ಬೇಕು ಅನ್ನೋದು ನನ್ನ ಗುರಿ: 'ಬೃಂದಾವನ' ವರುಣ್ ಆರಾಧ್ಯ

'ಗುರಿ ಇದ್ದರೆ ಸರಿಯಾದ ಕ್ರಮದಲ್ಲಿ ನಡೆದುಕೊಂಡು ಹೋಗಬಹುದು ಅಲ್ಲದೆ ಈ ಜರ್ನಿಯಲ್ಲಿ ಡಯಟಿಷಿಯನ್‌ನಿಂದ ಪರ್ಸನಲ್ ಡಯಟ್‌ ಲಿಸ್ಟ್‌ ತೆಗೆದುಕೊಳ್ಳಬೇಕು. ಪಾರ್ಟಿಗಳಲ್ಲಿ ಸ್ನೇಹಿತರು ರುಚಿ ರುಚಿಯಾದ ಆಹಾರ ಸೇವಿಸುವಾಗ ನನಗೂ ಆಸೆ ಆಗುತ್ತದೆ ಆದರೆ ನಾನು ಕಂಟ್ರೋಲ್ ಕಳೆದುಕೊಳ್ಳುವುದಿಲ್ಲ. ನಿಂಬೆ ಹಣ್ಣಿನ ಜ್ಯೂಸ್ ಕುಡಿದುಕೊಂಡು ಆರಾಮ್‌ ಆಗಿರುವೆ. ಆರೋಗ್ಯಕರ ಆಹಾರ ಸೇವಿಸುವುದು ನನ್ನ ವಿಲ್‌ಪವರ್ ಟೆಸ್ಟ್‌ ಮಾಡಿದಂತೆ' ಎಂದಿದ್ದಾರೆ ಶ್ರುತಿ ಹರಿಹರನ್.

click me!