'ಕೊರೋನಾ ನಿಯಂತ್ರಿಸಲು ಕ್ವಾರಂಟೈನ್ ಪರಿಹಾರವಲ್ಲ'

Jun 22, 2020, 6:03 PM IST

ಬೆಂಗಳೂರು(ಜೂ.22): ಕೊರೋನಾ ಅಬ್ಬರಕ್ಕೆ ಕರುನಾಡು ಕಂಗಾಲಾಗಿ ಹೋಗಿದೆ. ಲಾಕ್‌ಡೌನ್ ಹಾಗೂ ಕ್ವಾರಂಟೈನ್ ನಿಯಮ ಸಡಿಲಿಕೆ ಕರ್ನಾಟಕಕ್ಕೆ ಮುಳುವಾಯ್ತಾ ಎನ್ನುವ ಅನುಮಾನ ಶುರುವಾಗಿದೆ. ಇದರ ಬೆನ್ನಲ್ಲೇ ಹೊರರಾಜ್ಯಗಳಿಂದ ಬಂದವರಿಗೆ ಕ್ವಾರಂಟೈನ್ ನಿಯಮವನ್ನು ಇದೀಗ 14 ದಿನಗಳಿಗೆ ವಿಸ್ತರಿಸಲಾಗಿದೆ.

ಕೊರೋನಾ ಹೆಚ್ಚಳದ ಕುರಿತಂತೆ ರಾಜೀವ್ ಗಾಂಧಿ ಆಸ್ಪತ್ರೆಯ ಮಾಜಿ ನಿರ್ದೇಶಕರಾದ ಶಶಿಧರ್ ಬುಗ್ಗಿಯವರು ಸುವರ್ಣ ನ್ಯೂಸ್‌ನೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ಕೊರೋನಾ ಹೆಮ್ಮಾರಿಯಿಂದ ಬಚಾವಾಗಬಹುದು ಎಂದು ಹೇಳಿದ್ದಾರೆ.

ಮೆಡಿಕಪ್ ರೆಪ್‌ಗೂ ಅಂಟಿದ ಕೊರೋನಾ ಸೋಂಕು..!

ಹೆಚ್ಚು ಹೆಚ್ಚು ಪರೀಕ್ಷೆಗಳನ್ನು ಮಾಡುವುದರ ಮೂಲಕ ಕೊರೋನಾ ಪತ್ತೆಹಚ್ಚಬಹುದು. ಕ್ವಾರಂಟೈನ್ ಅವಧಿ ಹೆಚ್ಚಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಡಾ. ಶಶಿಧರ್ ಬುಗ್ಗಿ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.